ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಇಂಗ್ಲೆಂಡ್ ಮೂಲದ ಕಾರು ಹಂಚಿಕೆ ಕಂಪನಿಯಾದ ಹಿಯಾಕಾರ್ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 36 ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಈ ಅಂಕಿ ಅಂಶಗಳು ವಾಹನ ಸವಾರರಿಗೆ ನಿಜಕ್ಕೂ ಸವಾಲಾಗಿವೆ. ಈ ಅಂಕಿ ಅಂಶಗಳಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿ ಸಹ ಸ್ಥಾನ ಪಡೆದಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಈ ಪಟ್ಟಿಯು ವಾಹನ ಸವಾರರಿಗೆ ಅತಿ ಹೆಚ್ಚು ಒತ್ತಡ ನೀಡುವ ನಗರಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ದೆಹಲಿ ಮಾತ್ರವಲ್ಲದೆ ಮಹಾರಾಷ್ಟ್ರದ ರಾಜಧಾನಿ ಮುಂಬೈ ಹಾಗೂ ನಮ್ಮ ಬೆಂಗಳೂರು ನಗರಗಳು ಸಹ ಸ್ಥಾನ ಪಡೆದಿವೆ. ಸಮೀಕ್ಷೆಯಲ್ಲಿ ನಡೆಸಿದ ಹಲವಾರು ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಈ ಅಂಶಗಳಲ್ಲಿ ಸಂಚಾರ ದಟ್ಟಣೆಯ ತೀವ್ರತೆ, ವೈಯಕ್ತಿಕ ಕಾರುಗಳ ಸಂಖ್ಯೆ, ಸಾರಿಗೆಯನ್ನು ಆಯ್ಕೆ ಮಾಡುವ ಜನರ ಸಂಖ್ಯೆ, ನಗರದ ಒಟ್ಟು ವಾಹನಗಳ ಸಂಖ್ಯೆ, ರಸ್ತೆಗಳ ಗುಣಮಟ್ಟ, ನಗರದ ಸಾಂದ್ರತೆ ಹಾಗೂ ಪ್ರತಿ ವರ್ಷ ಸಂಭವಿಸುವ ಸರಾಸರಿ ರಸ್ತೆ ಅಪಘಾತಗಳ ಸಂಖ್ಯೆಗಳು ಸೇರಿವೆ. ಪ್ರಪಂಚದಾದ್ಯಂತದ ಪ್ರತಿಯೊಂದು ಪ್ರಮುಖ ನಗರಗಳಿಗೆ ಈ ಅಂಶಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಈ ಸಮೀಕ್ಷೆಗೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಮುಂಬೈ 10 ಅಂಕಗಳಿಗೆ 7.4 ಅಂಕಗಳನ್ನು ಪಡೆದರೆ, ದೆಹಲಿ 5.9 ಹಾಗೂ ಬೆಂಗಳೂರು 4.7 ಅಂಕಗಳನ್ನು ಪಡೆದಿವೆ. ದಕ್ಷಿಣ ಅಮೆರಿಕಾದ ಪೆರು ದೇಶದ ರಾಜಧಾನಿ ಲಿಮಾ, ಹಿಯಾಕಾರ್ ಪ್ರಕಟಿಸಿರುವ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಈ ನಗರವು 2.1 ಅಂಕಗಳನ್ನು ಪಡೆದಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಅಂದರೆ ಲಿಮಾ ನಗರವು ವಾಹನ ಸವಾರರಿಗೆ ವಿಶ್ವದ ಅತ್ಯಂತ ಕಡಿಮೆ ಒತ್ತಡದ ನಗರವಾಗಿದೆ. ಮುಂಬೈ ಈ ಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದೆ. ಮುಂಬೈನ ಪ್ರಮುಖ ಪ್ರದೇಶಗಳಾದ ಬಾಲ್ಕಾರ್ಕ್ ಹಾಗೂ ಥಾಣೆಗಳಲ್ಲಿ ಅಲ್ಲಿನ ನಿವಾಸಿಗಳು ಮಳೆ ಬಂದರೆ ರಸ್ತೆಯಲ್ಲಿ ಚಲಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಮುಂಬೈನ ಕೆಲವು ಭಾಗಗಳಲ್ಲಿ ಕಳೆದ 24 ಗಂಟೆಗಳಿಂದ ಮಳೆಯಾಗುತ್ತಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಭಾರೀ ಮಳೆ ಮುಂಬೈ ನಗರದಲ್ಲಿ ಅವಾಂತರವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಹಲವು ಬಸ್ ಮಾರ್ಗಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಈಗ ಕಾಮಗಾರಿ ಹಂತದಲ್ಲಿರುವ ಮುಂಬೈ - ದೆಹಲಿ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಮುಂಬೈನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಗಳಿವೆ. ಈ ಎಕ್ಸ್ ಪ್ರೆಸ್ ವೇ ಕಾಮಗಾರಿ ಮುಕ್ತಾಯವಾಗಲು ಇನ್ನೂ ಹಲವಾರು ತಿಂಗಳುಗಳು ಬೇಕಾಗುತ್ತವೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

2019 ರ ಮಾರ್ಚ್ 9 ರಿಂದ ಆರಂಭವಾಗಿರುವ ಈ ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾಮಗಾರಿಯು 2023 ರ ಜನವರಿ ಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಇತ್ತೀಚೆಗೆ ಈ ಎಕ್ಸ್ ಪ್ರೆಸ್ ವೇಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಈ ಎಕ್ಸ್ ಪ್ರೆಸ್ ವೇ ದೆಹಲಿ - ಮುಂಬೈ ನಗರಗಳ ನಡುವಿನ ಅಂತರವನ್ನು ಸುಮಾರು 280 ಕಿ.ಮೀಗಳಷ್ಟು ಕಡಿಮೆ ಮಾಡುತ್ತದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಈ ಕಾಮಗಾರಿ ಪ್ರಗತಿ ಪರಿಶೀಲನೆ ವೇಳೆ ನಿತಿನ್ ಗಡ್ಕರಿರವರು ತಮ್ಮ ಕಿಯಾ ಕಾರ್ನಿವಲ್ ಎಂಪಿವಿ ಕಾರಿನಲ್ಲಿ ಗಂಟೆಗೆ 170 ಕಿ.ಮೀ ವೇಗದಲ್ಲಿ ಸಂಚರಿಸಿದ್ದರು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೆಹಲಿ - ಮುಂಬೈ ನಗರಗಳ ನಡುವೆ ಹಾದು ಹೋಗುವ ಈ ಹೊಸ ಎಕ್ಸ್‌ಪ್ರೆಸ್‌ವೇ ಹರಿಯಾಣ, ಪಂಜಾಬ್, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳನ್ನು ಸಂಪರ್ಕಿಸುತ್ತದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಉತ್ತಮ ಹೆದ್ದಾರಿ ಹಾಗೂ ಗುಣಮಟ್ಟದ ರಸ್ತೆಗಳಿಗಾಗಿ ಜನರು ಹಣ ಪಾವತಿಸಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ಮೂಲಕ ಪ್ರತಿ ತಿಂಗಳು ಟೋಲ್‌ಗೇಟ್‌ಗಳ ಮೂಲಕ ಕನಿಷ್ಠ ರೂ. 1,000 ಗಳಿಂದ ರೂ. 1,500 ಕೋಟಿ ಟೋಲ್ ಶುಲ್ಕ ಲಭ್ಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಪ್ರಯಾಣದ ಅಂತರ 280 ಕಿ.ಮೀಗಳಷ್ಟು ಕಡಿಮೆಯಾದಂತೆ ಪ್ರಯಾಣದ ಅವಧಿಯೂ ಸಹ ಕಡಿಮೆಯಾಗಲಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ನಿತಿನ್ ಗಡ್ಕರಿರವರ ಪ್ರಕಾರ, ಈ ಎಕ್ಸ್ ಪ್ರೆಸ್ ವೇನಲ್ಲಿ ಚಂಡೀಗಢದಿಂದ ದೆಹಲಿಗೆ ಹಾಗೂ ದೆಹಲಿಯಿಂದ ಡೆಹ್ರಾಡೂನ್ ಗೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು.ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ರೂ. 98,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸುಮಾರು 1,200 ಕಿ.ಮೀ ಉದ್ದದ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಈ ಎಕ್ಸ್‌ಪ್ರೆಸ್‌ವೇಯನ್ನು ಒಟ್ಟು 8 ಲೇನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಇವುಗಳಲ್ಲಿ ಪ್ರತಿಯೊಂದೂ ಸರಾಸರಿ 21 ಮೀಟರ್ ಅಗಲವನ್ನು ಹೊಂದಿದೆ ಎಂದು ಹೇಳಲಾಗಿದೆ. ಭವಿಷ್ಯದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಅಗಲವಾದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಎಕ್ಸ್‌ಪ್ರೆಸ್‌ವೇಯನ್ನು 8 ಪಥಗಳಿಂದ 12 ಪಥಗಳಿಗೆ ವಿಸ್ತರಿಸಲಾಗುವುದು.

ವಾಹನ ಸವಾರರಿಗೆ ಹೆಚ್ಚು ಒತ್ತಡವನ್ನುಂಟು ಮಾಡುವ ಭಾರತದ ನಗರಗಳಿವು

ಸದ್ಯಕ್ಕೆ ಈ ಎಕ್ಸ್ ಪ್ರೆಸ್ ವೇಯಲ್ಲಿನ ದೆಹಲಿ - ಮೀರತ್ ವಿಭಾಗವು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ಮುಂದಿನ ಅಕ್ಟೋಬರ್‌ನಲ್ಲಿ ಸಂಪೂರ್ಣ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Bengaluru gets place in world s most stressful cities list details
Story first published: Tuesday, September 21, 2021, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X