ನಮ್ಮ ಬೆಂಗಳೂರಿಗೆ ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಟ್ರಾಫಿಕ್ ದಟ್ಟಣೆಗೆ ಮಕ್ತಿ ನೀಡಲು ವಿಶ್ವಾದ್ಯಂತ ಹೊಸ ಸಾರಿಗೆ ಸೌಲಭ್ಯವೊಂದು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರುತ್ತಿದ್ದು, ನಮ್ಮ ಬೆಂಗಳೂರಿನಲ್ಲೂ ಮೊದಲ ಬಾರಿಗೆ ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸೌಲಭ್ಯವನ್ನು ಪರಿಚಯಿಸುವ ಬೃಹತ್ ಯೋಜನೆಗೆ ಮೊದಲ ಹಂತದ ಚಾಲನೆ ಸಿಕ್ಕಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌‌ಲೂಪ್ ಸಾರಿಗೆ ತಂತ್ರಜ್ಞಾನವು ಭಾರತದಲ್ಲೂ ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆಯು ಜಾರಿಗೆ ಬರಲಿದೆ. ಹೈಪರ್‌ಲೂಪ್ ಸಾರಿಗೆ ಸೌಲಭ್ಯವನ್ನು ಆರಂಭಿಸಲು ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಕಾರ್ಯಸಾಧ್ಯತಾ ಅಧ್ಯಯನಗಳು ಪ್ರಗತಿಯಲ್ಲಿದ್ದು, ಇದೀಗ ನಮ್ಮ ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗವಾಗಿರುವ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ರೈಲು ವ್ಯವಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗುವ ಹೈಪರ್‌ಲೂಪ್ ರೈಲು ಯೋಜನೆಯು ಈಗಾಗಲೇ ಅಮೆರಿಕ, ಜರ್ಮನಿ, ಇಂಗ್ಲೆಂಡ್, ಇಟಲಿ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಹಂತ-ಹಂತವಾಗಿ ಕಾರ್ಯಸಾಧ್ಯತೆಯ ಗುರಿ ಸಾಧಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹಲವು ರಾಷ್ಟ್ರಗಳಲ್ಲಿ ಹೈಪರ್ ಲೂಪ್ ಸಾರಿಗೆ ಸಂಚಾರವು ಅಧಿಕೃತವಾಗಿ ಆರಂಭವಾಗಲಿವೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಇದೀಗ ನಮ್ಮ ಬೆಂಗಳೂರಿನ ಇಂಟರ್​ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಸಂಸ್ಥೆಯು ಕೂಡಾ ಹೈಪರ್​ಲೂಪ್ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಹೊಸ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನಕ್ಕಾಗಿ ಹೈಪರ್‌ಲೂಪ್‌ ಮಾತೃಸಂಸ್ಥೆ ವರ್ಜಿನ್ ಗ್ರೂಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಹೈಪರ್‌ಲೂಪ್ ಸಾರಿಗೆ ಸೌಲಭ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವ ಅಮೆರಿಕದ ವರ್ಜಿನ್ ಕಂಪನಿಯು ಹೊಸ ಸಾರಿಗೆ ವ್ಯವಸ್ಥೆಯ ಮೂಲಕ ಅತಿ ವೇಗದ, ಸುರಕ್ಷಿತ ಮತ್ತು ಅಗ್ಗದ ಪ್ರಯಾಣವನ್ನು ನೀಡುವ ಭರವಸೆ ನೀಡಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೊಸ ಸಾರಿಗೆ ಸೌಲಭ್ಯವನ್ನು ಜೋಡಣೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಭಾರತದಲ್ಲೂ ಕೂಡಾ ಈಗಾಗಲೇ ಪ್ರಮುಖ ನಗರಗಳನ್ನು ಸಂಪರ್ಕಿಸುವುದಕ್ಕಾಗಿ ಹೈಪರ್‌ಲೂಪ್ ಸಾರಿಗೆ ಸೌಲಭ್ಯವನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆ ಅಧ್ಯಯನಗಳು ಪ್ರಗತಿಯಲ್ಲಿದ್ದು, ಟ್ರಾಫಿಕ್ ದಟ್ಟಣೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ಬೆಂಗಳೂರಿನಲ್ಲೂ ಇದೀಗ ಹೈಪರ್‌ಲೂಪ್ ಕನಸು ನನಸಾಗುವ ಕಾಲ ಸನ್ನಿಹತವಾಗಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಹೊಸ ಯೋಜನೆ ಜಾರಿಗೂ ಮುನ್ನ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಿರುವ ವರ್ಜಿನ್ ಗ್ರೂಪ್ ಕಂಪನಿಯು ಯೋಜನೆಯ ವೆಚ್ಚ, ಕಾರ್ಯಯೋಜನೆಗೆ ಇರುವ ಅಡ್ಡಿ ಆತಂಕ ಮತ್ತು ಪರಿಹಾರಗಳ ಕುರಿತು ಎರಡು ಹಂತದಲ್ಲಿ ಅಧ್ಯಯನದ ವರದಿ ಸಲ್ಲಿಸಲಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ತದನಂತರವಷ್ಟೇ ಹೊಸ ಯೋಜನೆ ಜಾರಿಗೆ ಕುರಿತಂತೆ ಅಂತಿಮ ಹಂತದ ನಿರ್ಧಾರ ಪ್ರಕಟವಾಗಿದ್ದು, ಹೊಸ ಹೈಪರ್​ಲೂಪ್​ ಸಾರಿಗೆ ಸೌಲಭ್ಯವು ಜಾರಿಗೆ ಬಂದಲ್ಲಿ ಕೇವಲ 10 ನಿಮಿಷದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್ ತಲುಪಬಹುದಾಗಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಮೆಜೆಸ್ಟಿಕ್‌ನಿಂದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಿಷ್ಠ ಒಂದೂವರೆ ಗಂಟೆ ಪ್ರಯಾಣ ಮಾಡಬೇಕಿದ್ದು, ಟ್ರಾಫಿಕ್ ಹೆಚ್ಚಾದಲ್ಲಿ ಇದು ಇನ್ನು ಕೂಡಾ ಹೆಚ್ಚಳವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೈಲೂಪ್ ಸಾರಿಗೆ ಸೌಲಭ್ಯವು ಒಂದು ಗಂಟೆಯಲ್ಲಿ ಸಾವಿರಾರು ಪ್ರಯಾಣಿಕರನ್ನು ಒಂದು ಕಡೆ ಮತ್ತೊಂದು ಕಡೆಗೆ ಅತಿ ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಸಹಕಾರಿಯಾಗುತ್ತದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ ಕ್ಯಾಪ್ಸುಲ್ ಮುಖಾಂತರ ಹೈಪರ್‌ಲೂಪ್ ಸಂಚರಿಸಲಿದ್ದು, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸ ಬಲ್ಲ ಆತ್ಯಾಧುನಿಕ ತಂತ್ರಜ್ಞಾನ ಅಂಶಗಳನ್ನು ಅಳವಡಿಸಿಕೊಂಡಿದೆ.

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಪ್ರತಿ ಪೊಡ್ ನಡುವೆ 8 ಕಿಲೋ ಮೀಟರ್ ಅಂತರವಿರಲಿದ್ದು, ಒಂದು ಪೊಡ್‌ನಿಂದ ಇನ್ನೊಂದು ಪೊಡ್‌ಗೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಜೊತೆಗೆ ಸೋಲಾರ್‌ನಿಂದಲೇ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ಸಾರಿಗೆ ಸೌಲಭ್ಯವು ಪ್ರತಿ ಗಂಟೆಗೆ 1,080 ಕಿ.ಮೀ ವೇಗದಲ್ಲಿ ಚಲಿಸಲಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಹೈಪರ್‌ಲೂಪ್- ಮೆಜೆಸ್ಟಿಕ್ ಟು ಏರ್​ಪೋರ್ಟ್​ ಪ್ರಯಾಣ ಕೇವಲ 10 ನಿಮಿಷ

ಮತ್ತೊಂದು ಪ್ರಮುಖ ವಿಚಾರವೆಂದರೆ ಹೈಪರ್‌ಲೂಪ್ ಯೋಜನೆಯು ಅತ್ಯಂತ ಕಡಿಮೆ ವೆಚ್ಚದಾಯಕ ಯೋಜನೆಯಾಗಿದ್ದು, ಹೈ ಸ್ಪೀಡ್ ರೈಲು ಯೋಜನೆಗಿಂತಲೂ 10 ಪಟ್ಟು ಕಡಿಮೆ ಖರ್ಚಿನಲ್ಲಿ ಜಾರಿಗೆ ತರಬಹುದಾದ ಲಾಭದಾಯಕ ಯೋಜನೆ ಎಂದರೆ ನೀವು ನಂಬಲೇಬೇಕು.

Most Read Articles

Kannada
English summary
BIAL signs MoU for Virgin Hyperloop project in Bengaluru details. Read in Kannada.
Story first published: Monday, September 28, 2020, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X