ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಐಟಿ ಸಿಟಿ ಬೆಂಗಳೂರು ಟು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಪ್ರಮಾಣದ ಅವಧಿಯನ್ನು ತಗ್ಗಿಸಲು ಎಕ್ಸ್‌ಪ್ರೆಸ್ ವೇ ಯೋಜನೆಯು ಭರದಿಂದ ಸಾಗುತ್ತಿದ್ದು, ಮುಂಬರುವ ದಸರಾ ವೇಳೆಗೆ ಯೋಜನೆಯ ಮೊದಲ ಹಂತವು ಪೂರ್ಣಗೊಳ್ಳಲಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಬೆಂಗಳೂರು ಟು ಮೈಸೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರ ಪರಿಷ್ಕೃತ ವಿಸ್ತರಣೆಯು ಪ್ರಯಾಣದ ಸಮಯವನ್ನು ಈಗಿನ 3 ಗಂಟೆಗಳಿಂದ ಕನಿಷ್ಠ 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದ್ದು, ಹೊಸ ಯೋಜನೆಯು ಮುಂಬರುವ ದಸರಾ(ಅಕ್ಟೋಬರ್) ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಬೆಂಗಳೂರು ದಕ್ಷಿಣ ವಲಯದ ಪಂಚಮುಖಿ ದೇವಸ್ಥಾನದ ಬಳಿಯ ಜಂಕ್ಷನ್‌ನಿಂದ ಪ್ರಾರಂಭಗೊಂಡು ನಿಡಘಟ್ಟವರೆಗೆ ಮೊದಲ ಹಂತದ ಎಕ್ಸ್‌ಪ್ರೆಸ್ ವೇ ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಭರವಸೆ ನೀಡಿರುವ ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ನಿಡಘಟ್ಟದಿಂದ ಮೈಸೂರು ತಲುಪುವ ಕೆಳಗಿನ ಮಾರ್ಗವನ್ನು ದಸರಾ ವೇಳೆಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೆ ಪ್ರಧಾನಿ ಮೋದಿ ಅವರೇ ಆಗಮಿಸಲಿದ್ದಾರೆ ಎಂದಿರುವ ಸಂಸದ ಪ್ರತಾಪ್‌ ಸಿಂಹ ಅವರು ದಶಪಥಗಳ ಹೆದ್ದಾರಿ ಕಾಮಗಾರಿಯು ಭರದಿಂದ ಸಾಗಿದೆ ಎಂದಿದ್ದಾರೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಒಟ್ಟು 118 ಕಿ.ಮೀ ಉದ್ದದ ಹತ್ತು ಪಥಗಳ ರಸ್ತೆ ನಿರ್ಮಾಣ ಯೋಜನೆಗಾಗಿ ಒಟ್ಟು ರೂ. 8,350 ಕೋಟಿ ವ್ಯಯಿಸುತ್ತಿದ್ದು, 2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿದೆ. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಪ್ರಸ್ತುತ ವಿವಿಧ ಹಂತಗಳಲ್ಲಿ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ತಿರುವುಗಳು, ಒರಟು ರಸ್ತೆಗಳು ಮತ್ತು ಇತರ ಅಂಶಗಳಿಂದಾಗಿ ಪ್ರಯಾಣಿಕರು ಅನೇಕ ಕಡೆಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದು, ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಸಾಕಷ್ಟು ಸವಾಲುಗಳಿಂದ ಕೂಡಿದ್ದ ಬೆಂಗಳೂರಿನಿಂದ ನಿಡಘಟ್ಟವರೆಗಿನ ರಸ್ತೆ ಕಾಮಗಾರಿಗಳು ಬಹುತೇಕ ಕಡೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದ್ದು, ನಿಡಘಟ್ಟದಿಂದ ಮೈಸೂರಿನ ರಸ್ತೆ ಕಾಮಗಾರಿಯು ಯಾವುದೇ ಅಡೆತಡೆಗಳಿಲ್ಲದೆ ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಬೆಂಗಳೂರಿನಿಂದ ನಿಡಘಟ್ಟವರೆಗಿನ ರಸ್ತೆ ಕಾಮಗಾರಿಗಳ ಮಾರ್ಗದಲ್ಲಿನ ಕೆಲವು ಕಡೆಗಳಲ್ಲಿ ಭೂಸ್ವಾಧಿನ ಸಮಸ್ಯೆ ಉಂಟಾಗಿದ್ದರಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಸಹ ಪೂರ್ಣಗೊಳಿಸಲಾಗುತ್ತಿದ್ದು, ರಸ್ತೆ ಉದ್ದಕ್ಕೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಒಟ್ಟಾರೆ ಮಾರ್ಗದಲ್ಲಿ ಒಟ್ಟು 8 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ರಸ್ತೆ ನಿರ್ಮಾಣವಾಗಲಿದ್ದರೆ, 6 ಕಡೆಗಳಲ್ಲಿ ಬೈಪಾಸ್‌ಗಳು, 44 ಕಿರು ಸೇತುವೆಗಳು ಮತ್ತು 4 ಪಥದ ಸರ್ವಿಸ್‌ ರಸ್ತೆ ನಿರ್ಮಾಣ ಮತ್ತು 9 ದೊಡ್ಡ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸರ್ವೀಸ್‌ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಟೋಲ್‌ನಿಂದಲೂ ಮುಕ್ತಿ ಸಿಗಲಿದೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಟ್ರಾಫಿಕ್ ದಟ್ಟಣೆ ತಪ್ಪಿಸಲು ಮಾರ್ಗದ ಪ್ರತಿ ಟೋಲ್ ಪ್ಲಾಜಾದಲ್ಲಿ 11 ಪ್ರವೇಶ ಕೇಂದ್ರಗಳನ್ನು ತೆರೆಯಲಾಗಿದ್ದು, ಬೆಂಗಳೂರಿಗೆ ಬರುವ ಮತ್ತು ಹೋಗುವ ವಾಹನಗಳಿಗೆ ವಿವಿಧ ಸ್ಥಳಗಳಲ್ಲಿ ಟೋಲ್ ಕೇಂದ್ರ ಸಹ ನಿರ್ಮಾಣಗೊಳ್ಳುತ್ತಿವೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಇತ್ತೀಚಿಗೆ ಕಾಮಗಾರಿ ಪೂರ್ಣಗೊಳ್ಳುತ್ತಿರುವ ಹೊಸ ಮಾಹಿತಿಗಳನ್ನು ಹಂಚಿಕೊಂಡಿದ್ದು, ನಿಗದಿತ ಅವಧಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಇದ್ದ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಪ್ರಯಾಣದ ಸಮಯವು 90 ನಿಮಿಷಗಳಿಗೆ ಇಳಿಯುವುದರಿಂದ ಇದು ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿ ಎಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೊಸ ಮಾರ್ಗವು ಮೈಸೂರು, ಊಟಿ, ಕೇರಳ ಮತ್ತು ಕೂರ್ಗ್ ಸಂಪರ್ಕಿಸಲು ಸುಲಭವಾಗಲಿದೆ ಎಂದಿದ್ದಾರೆ.

ದಸರಾ ವೇಳೆಗೆ ಸೇವೆಗೆ ಮುಕ್ತವಾಗಲಿದೆ ಬಹುನೀರಿಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ

ಹೊಸ ಹೆದ್ದಾರಿ ಯೋಜನೆಯೊಂದಿಗೆ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ನಿರ್ಣಾಯಕ ವಿಸ್ತರಣೆಯಾಗುವ ಭರವಸೆ ನೀಡಲಾಗಿದ್ದು, ಹೊಸ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕಾಗಿ ಮೈಸೂರು ಭಾಗದಲ್ಲಿ ಶ್ರೀರಂಗಪಟ್ಟಣದ ನಂತರ ಕೆ.ಶೆಟ್ಟಿಹಳ್ಳಿ ಸಮೀಪ ಗಣಂಗೂರು ಮತ್ತು ಕೋಡಿ ಶೆಟ್ಟಿಪುರ ನಡುವೆ ಒಂದು ಟೋಲ್ ಮತ್ತು ಬೆಂಗಳೂರು ಕಡೆಯಿಂದ ಹೋಗುವ ವಾಹನಗಳಿಗೆ ಬಿಡದಿ ಸಮೀಪ ಕೆಣಮಿಣಕಿ ಗ್ರಾಮದ ಬಳಿ ಮತ್ತೊಂದು ಟೋಲ್ ಕೌಂಟರ್ ನಿರ್ಮಾಣ ಮಾಡಲಾಗಿದೆ.

Most Read Articles

Kannada
English summary
Bengaluru mysuru expressway to cut travel time to 90 mins nitin gadkari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X