ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

By Nagaraja

ವಿಶ್ವಶ್ರೇಷ್ಠ ಐಷಾರಾಮಿ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿರುವ ಬ್ರಿಟನ್‌ನ ಐಕಾನಿಕ್ ಬೆಂಟ್ಲಿ, ಇತ್ತೀಚೆಗಷ್ಟೇ ತನ್ನ ಚೊಚ್ಚಲ ಬೆನ್ ಟೈಗಾ ಲಗ್ಷುರಿ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆಗೊಳಿಸಿತ್ತು.

ವಾಹನ ಕ್ಷೇತ್ರದಲ್ಲಿ ಸದಾ ಹೊಸತನನ್ನುಂಟು ಮಾಡುತ್ತಿರುವ ಬೆಂಟ್ಲಿ ಈಗ ವಿಶ್ವ ಪ್ರಸಿದ್ಧ ಸೇತುವೆಯೊಂದರ ಹೈ ಡೆಫಿನಿಷನ್ ಚಿತ್ರವೊಂದನ್ನು ಕ್ಲಿಕ್ಕಿಸಿದೆ. ಇದರ ವಿಶೇಷತೆ ಏನೆಂದರೆ ಈ ಸೇತುವೆಚಿತ್ರದಲ್ಲೊಂದು ಕಾರಿದೆ. ಇದನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ? ಒಮ್ಮೆ ಪ್ರಯತ್ನಿಸಿ ನೋಡಿ...

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ವಿಶ್ವ ಪ್ರಸಿದ್ಧ ಗೋಲ್ಡನ್ ಗೇಟ್ ಸೇತುವೆ ಮೇಲೆ ಐಷಾರಾಮಿ ಬೆಂಟ್ಲಿ ಮುಲ್ಸಾನ್ ಹಾದು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಮೊದಲ ನೋಟದಲ್ಲಿ ಬರಿ ಸೇತುವೆ ಮಾತ್ರ ದರ್ಶನವಾಗುತ್ತಿದ್ದರೂ ಝೂಮ್ ಮಾಡಿ ನೋಡಿದಾಗ ಮಾತ್ರ ವಿಸ್ಮಯಕಾರಿ ಅಂಶಗಳು ಬಯಲಿಗೆ ಬರುತ್ತದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಈ ಹೈ ಡೆಫಿನಿಷನ್ ಪ್ಯಾನರಾಮಿಕ್ ಚಿತ್ರವನ್ನು ಝೂಮ್ ಮಾಡುತ್ತಲೇ ಇದ್ದಾಗ ಕಾರೊಂದರ ದರ್ಶನವಾಗುತ್ತದೆ. ಅದುವೇ ಬೆಂಟ್ಲಿ ಮುಲ್ಸಾನ್.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಮತ್ತಷ್ಟು ಸೂಕ್ಷ್ಮವಾಗಿ ಝೂಮ್ ಮಾಡಿದಾಗ ಕಾರಿನೊಳಗಿನ ಸೀಟಿನ ಮೇಲೆ ಅಂಟಿಸಲಾಗಿರುವ ಬೆಂಟ್ಲಿ ಲಾಂಛನವನ್ನು ಕಾಣಬಹುದಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಅಷ್ಟಕ್ಕೂ ಈ ಚಿತ್ರದ ವಿಶೇಷತೆ ಏನು ಗೊತ್ತೇ? ಛಾಯಾಗ್ರಹಣ ಬಗ್ಗೆ ಬಲ್ಲವರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವರು. ಇದನ್ನು 53 ಬಿಲಿಯನ್ ಪಿಕ್ಸೆಲ್ ಅಥವಾ 53,000 ಮೆಗಾಪಿಕ್ಸಲ್ ನಿಂದ ತಯಾರಿಸಲಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಸಾಮಾನ್ಯ ಸ್ಮಾರ್ಟ್ ಫೋನ್ ಚಿತ್ರಕ್ಕೆ ಹೋಲಿಸಿದಾಗ ಪ್ರಸ್ತುತ ಪಟವು 4,425 ಪಟ್ಟು ಹೆಚ್ಚು ದೊಡ್ಡದಾಗಿದೆ. ಚಿತ್ರದ ಯಥಾದೃಶ್ಯವನ್ನು ಕಾಪಾಡಿಕೊಳ್ಳಲಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಇನ್ನು ಸ್ಟ್ಯಾಂಡರ್ಡ್ ಪ್ರಿಂಟ್ ಮಾದರಿಯಲ್ಲಿ ಚಿತ್ರವನ್ನು ಮರಳಿ ಉತ್ಪಾದಿಸಿದರೆ ಒಂದು ಫುಟ್ಬಾಲ್ ಮೈದಾನದ ಆಕಾರಕ್ಕೆ ಸಮವಾಗಿರಲಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಹೈ ಡೆಫಿನಿಷನ್ ಕ್ಯಾಮೆರಾದಲ್ಲಿ ಒಂದೇ ಸ್ಥಳ ಕೇಂದ್ರಿಕರಿಸಿ 700 ವೈಯಕ್ತಿಕ ಶಾಟ್ ಗಳನ್ನು ತೆಗೆಯಲಾಗಿದೆ. ಬಳಿಕ ಇದನ್ನು ಡಿಜಿಟಲ್ ಸಹಾಯದಿಂದ ಜೋಡಿಸಲಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಕೆಂಪು ಗ್ರಹ ಮಾರ್ಸ್ ರೋವರ್ಸ್ ಗಾಗಿ ನಾಸಾ ಅಭಿವೃದ್ಧಿಪಡಿಸಿರುವ ಅದೇ ತಂತ್ರಜ್ಞಾನವನ್ನು ಇಲ್ಲಿ ಫೋಟೊ ಸೆರೆ ಹಿಡಿಯಲು ಬಳಕೆ ಮಾಡಲಾಗಿದೆ.

ಈ ವಿಸ್ಮಯಕಾರಿ ಸೇತುವೆಯಲ್ಲೊಂದು ಕಾರಿದೆ; ಕಂಡುಹಿಡಿದವನೇ ಜಾಣ!

ಅಷ್ಟಕ್ಕೂ ಬೆಂಟ್ಲಿ ಕಾರನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ? ಒಮ್ಮೆ ನೋಡಿಯೇ ಬಿಡೋಣವೇ ಬನ್ನಿ ಇಲ್ಲಿ ಕ್ಲಿಕ್ಕಿಸಿ

Most Read Articles

Kannada
English summary
Bentley's extraordinary Gigapixel image
Story first published: Saturday, June 25, 2016, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X