ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕೈಗಾರಿಕೆಗಳಿಗಾಗಿ ಹಾಗೂ ಬೃಹತ್ ಗ್ರಾಹಕರಿಗಾಗಿ ಅವರಿರುವ ಜಾಗಕ್ಕೆ ಡೀಸೆಲ್ ಅನ್ನು ತಲುಪಿಸುವ ಯೋಜನೆಯನ್ನು ಆರಂಭಿಸಿದೆ. ಕಂಪನಿಯು ನೋಯ್ಡಾದ ಸೆಕ್ಟರ್ 95ರಲ್ಲಿರುವ ಶಹೀದ್ ರಮೇಂದ್ರ ಪ್ರತಾಪ್ ಸಿಂಗ್ ಪೆಟ್ರೋಲ್ ಪಂಪ್‌ನಿಂದ ಡೀಸೆಲ್ ಅನ್ನು ವಿತರಿಸಲು ಆರಂಭಿಸಿದೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಭಾರತ್ ಪೆಟ್ರೋಲಿಯಂ ಪ್ರಕಾರ, ಈ ಸೇವೆಯಿಂದಾಗಿ ಹೌಸಿಂಗ್ ಸೊಸೈಟಿಗಳಿಗೆ, ಮಾಲ್‍‍ಗಳಿಗೆ, ಆಸ್ಪತ್ರೆಗಳಿಗೆ, ಬ್ಯಾಂಕ್‍‍ಗಳಿಗೆ, ದೊಡ್ಡ ಸಾರಿಗೆ ಸಂಸ್ಥೆಗಳಿಗೆ, ನಿರ್ಮಾಣ ಸ್ಥಳಗಳಿಗೆ, ಇದರ ಜೊತೆಗೆ ಸಣ್ಣ ಪುಟ್ಟ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಗ್ರಾಹಕರು, ನೋಯ್ಡಾ ಮೂಲದ ಸಿನರ್ಜಿ ಟೆಲಿಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಭಿವೃದ್ಧಿಪಡಿಸಿರುವ ಫಿಲ್‌ನೌ ಆ್ಯಪ್ ಮೂಲಕ ಡೀಸೆಲ್ ಅನ್ನು ಬುಕ್ ಮಾಡಬಹುದು. ಬುಕ್ಕಿಂಗ್ ಮಾಡಿದ ನಂತರ ಗ್ರಾಹಕರು ಹೇಳಿರುವ ಸ್ಥಳಕ್ಕೆ ಡೀಸೆಲ್ ಅನ್ನು ತಲುಪಿಸಲಾಗುತ್ತದೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಡೀಸೆಲ್ ವಿತರಣಾ ವಾಹನದಲ್ಲಿ ಮೊಬೈಲ್ ಡಿಸ್ಪೆನ್ಸರ್ ಇರಲಿದೆ. ಈ ವಾಹನದಲ್ಲಿ 4,000 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅಳವಡಿಸಲಾಗಿದೆ. ಈ ಸೇವೆಯು ಗ್ರಾಹಕರಿಗೆ ನೇರವಾಗಿ ಯಾವುದೇ ತೊಂದರೆಯಿಲ್ಲದಂತೆ ಇಂಧನವನ್ನು ಸರಬರಾಜು ಮಾಡುತ್ತದೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಅನಗತ್ಯ ಇಂಧನ ಸೋರಿಕೆಯಾಗಲಿ, ಅಸುರಕ್ಷಿತ ನಿರ್ವಹಣೆಯಾಗಲಿ ಹಾಗೂ ಕಳ್ಳತನವಾಗಲಿ ಇರುವುದಿಲ್ಲ. ಭಾರತ್ ಪೆಟ್ರೋಲಿಯಂನ ನೋಯ್ಡಾದ ಮಾರಾಟ ಅಧಿಕಾರಿ ಕೀರ್ತಿ ಕುಮಾರ್‍‍ರವರು ಮಾತನಾಡಿ, ಸದ್ಯಕ್ಕೆ ಈ ಸೇವೆಯನ್ನು ಮಾಲ್‌, ಸಣ್ಣ ಪುಟ್ಟ ಉತ್ಪಾದನಾ ಕೈಗಾರಿಕೆಗಳಿಗೆ ನೀಡುತ್ತಿದ್ದೇವೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಸ್ವಂತ ಕಾರು ಹೊಂದಿರುವವರಿಗೂ ನೀಡಲಾಗುವುದು. ಮನೆ ಬಾಗಿಲಿಗೆ ಡೀಸೆಲ್ ವಿತರಿಸುವ ವಾಹನವಾದ ಬೌಸರ್‍‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಇದರ ಜೊತೆಗೆ ನಮ್ಮಲ್ಲಿ ಇಂಧನ ಇರುವುದರಿಂದ ಗುಣಮಟ್ಟ ಹಾಗೂ ಪ್ರಮಾಣವನ್ನು ಸಹ ಸರಿಯಾಗಿ ನೀಡಲಾಗುವುದು.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಇಂಧನವನ್ನು ನೇರವಾಗಿ ಭಾರತ್ ಪೆಟ್ರೋಲಿಯಂ ಪಂಪ್‌ನಿಂದ ನೀಡಲಾಗುವುದು. ಬೌಸರ್ ವಾಹನದಲ್ಲಿ ಜಿಯೋಫೆನ್ಸಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಬುಕ್ಕಿಂಗ್ ಮಾಡಿರುವ ಸ್ಥಳಕ್ಕೆ ಇಂಧನವನ್ನು ನೀಡಲಾಗಿದೆ ಎಂಬುದು ಖಚಿತವಾಗಲಿದೆ. ಮಧ್ಯದಲ್ಲಿ ಬೇರೆ ಯಾವುದೇ ಇಂಧನವನ್ನು ಸೇರಿಸಲು ಸಾಧ್ಯವಾಗುವುದಿಲ್ಲವೆಂದು ಹೇಳಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಭಾರತ ಪೆಟ್ರೋಲಿಯಂ ಪ್ರಕಾರ, ಗ್ರಾಹಕರು ಫಿಲ್‍‍ನೌ ಆ್ಯಪ್ ಅನ್ನು ಡೌನ್‍‍ಲೌಡ್ ಮಾಡಿಕೊಂಡ ನಂತರ ಅವರು ಯಾವ ಜಾಗಕ್ಕೆ ಇಂಧನವನ್ನು ತಲುಪಿಸಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಗ್ರಾಹಕರ ಸ್ಥಳವನ್ನು ಕಂಪನಿಯ ಸರ್ವರ್‍‍ಗೆ ಕನೆಕ್ಟ್ ಮಾಡಲಾಗುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಬುಕ್ಕಿಂಗ್ ಮಾಡಿದ ನಂತರ ಗ್ರಾಹಕರ ಹೆಸರು, ಮೊಬೈಲ್ ನಂ, ಎಷ್ಟು ಲೀಟರ್ ಅಗತ್ಯವಿದೆ, ವಿಳಾಸ ಹಾಗೂ ಯಾವ ಸಮಯಕ್ಕೆ ವಿತರಿಸಬೇಕೆಂಬ ಮಾಹಿತಿಗಳನ್ನು ಸಂಬಂಧಪಟ್ಟ ಭಾರತ್ ಪೆಟ್ರೋಲಿಯಂ ಡೀಲರ್‍‍ಗೆ ಕಳುಹಿಸಲಾಗುತ್ತದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಈ ಬುಕ್ಕಿಂಗ್‍‍ನ ರಸೀದಿಯನ್ನು ಪಡೆದ ನಂತರ ವಾಹನವು ಡೀಸೆಲ್ ವಿತರಿಸಬೇಕಾದ ಸ್ಥಳಕ್ಕೆ ಬರಲಿದೆ. ಇಂಧನದ ವಿತರಣೆಯು ಆಟೋಮ್ಯಾಟಿಕ್ ಆಗಿ ನಡೆಯಲಿದೆ. ಈ ಫ್ಯೂಯಲ್ ಡಿಸ್ಪೆನ್ಸರ್‍‍ನಲ್ಲಿ ಫೈರ್ ಎಕ್ಸ್ ಟಿಂಗ್‍‍ವಿಷರ್‍ ಸೇರಿದಂತೆ ಹಲವಾರು ಸುರಕ್ಷತಾ ಸಾಧನಗಳಿರಲಿವೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಗ್ರಾಹಕರಿಗೆ ಇಂಧನವನ್ನು ವಿತರಿಸುವ ಮುನ್ನ ಎಸ್‍ಎಂ‍ಎಸ್ ಕಳುಹಿಸಲಾಗುತ್ತದೆ. ಗ್ರಾಹಕರು ನಗದು ಮೂಲಕ ಹಾಗೂ ನಗದು ರಹಿತವಾಗಿ ಪಾವತಿಸಬಹುದು. ಪಾವತಿಸಿದ ನಂತರ ಗ್ರಾಹಕರು ರಸೀದಿಯನ್ನು ಪಡೆಯಲಿದ್ದಾರೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಫಿಲ್‌ನೌ ಭಾರತದ ಮೊದಲ ಬೇಡಿಕೆಯ, ಪೂರ್ಣ ಪ್ರಮಾಣದ ಆಟೋಮ್ಯಾಟಿಕ್ ಇಂಧನ ವಿತರಿಸುವ ಸೇವೆಯಾಗಿದೆ. ನೋಯ್ಡಾ ಮೂಲದ ಸಿನರ್ಜಿ ಟೆಲಿಟೆಕ್ ಪ್ರೈವೇಟ್ ಲಿಮಿಟೆಡ್‌, ಫಿಲ್‍‍ನೌ ಸೇವೆಯನ್ನು ನೀಡುತ್ತಿದೆ. ಫಿಲ್‌ನೌ ಐದು ವರ್ಷಗಳಿಂದ ಸೇವೆಯನ್ನು ನೀಡುತ್ತಿದೆ.

ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!

ಐದು ವರ್ಷಗಳಿಂದ ಫಿಲ್‍‍ನೌ ಮೊಬೈಲ್ ಟವರ್‌ಗಳಿಗೆ, ಕೃಷಿ, ಉತ್ಪಾದನಾ ಘಟಕಗಳಿಗೆ ಹಾಗೂ ಬುದ್ಧ ಇಂಟರ್‍‍ನ್ಯಾಷನಲ್ ಸರ್ಕ್ಯೂಟ್‌ಗೆ ಇಂಧನ ವಿತರಣೆಯನ್ನು ಒದಗಿಸುತ್ತಿದೆ. ಫಿಲ್‍‍ನೌ, ಸಿನರ್ಜಿ ಗ್ರೀನ್ ಡೀಸೆಲ್‍‍ನಂತಹ ಪರ್ಯಾಯ ಪರಿಸರ ಸ್ನೇಹಿ ಇಂಧನದ ಬಳಕೆಯನ್ನು ಪ್ರಚಾರ ಮಾಡುತ್ತಿದೆ. ಈ ಇಂಧನವನ್ನು ಕಂಪನಿಯು ಅಭಿವೃದ್ಧಿಪಡಿಸಿದೆ. ಈ ಇಂಧನವು ಡಿಸ್ಟಿಲ್ಡ್ ಗ್ರೇಡ್‍‍ನ ಜೈವಿಕ ಇಂಧನವಾಗಿದೆ.

Most Read Articles

Kannada
English summary
Bharat petroleum starts home delivery of diesel - Read in Kannada
Story first published: Saturday, December 7, 2019, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X