ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಇಂದು ಇಡೀ ಪ್ರಪಂಚವು ಹವಾಮಾನ ಬದಲಾವಣೆ ಹಾಗೂ ವಾಯು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ವಾಯು ಮಾಲಿನ್ಯಕ್ಕೆ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳೂ ಸಹ ಕಾರಣವಾಗಿವೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾದ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚು ಅಭಿವೃದ್ಧಿಪಡಿಸಲಾಗುತ್ತಿದೆ. ಬಿಹಾರದ ಕಟಿಯಾರ್ ಜಿಲ್ಲೆಯ ರಿಬಂ ಎಂಬ ಯುವ ವಿಜ್ಞಾನಿಯೊಬ್ಬರು ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಎಂಜಿನ್‍‍ನಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಈ ಎಂಜಿನ್, ಎನರ್ಜಿ ಪಡೆಯಲು ಕೇವಲ ನೀರನ್ನು ಮಾತ್ರ ಬಳಸುತ್ತದೆ. ಯಾವುದೇ ರೀತಿಯ ಮಾಲಿನ್ಯವನ್ನುಂಟು ಮಾಡದ ಈ ಎಂಜಿನ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಿಗಿಂತ ಹೆಚ್ಚು ಬಲಶಾಲಿಯಾಗಿದೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಡಿಡಿ ನ್ಯೂಸ್ ಚಾನೆಲ್‍‍ನೊಂದಿಗೆ ಮಾತನಾಡುತ್ತಾ ರಿಬಂರವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ರಿಬಂರವರ ಈ ಸಂಶೋಧನೆಗೆ ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾದಲ್ಲಿಯೂ ಸಹ ಮೆಚ್ಚುಗೆ ವ್ಯಕ್ತವಾಗಿದೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಅಮೆರಿಕಾ ಸರ್ಕಾರವು ರಿಬಂರವರ ಉನ್ನತ ಅಧ್ಯಯನದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ರಿಬಂರವರು ಉನ್ನತ ಅಧ್ಯಯನಕ್ಕಾಗಿ ಅಮೆರಿಕಾದಲ್ಲಿರುವ ಕ್ಯಾಲಿಫೋರ್ನಿಯಾಗೆ ತೆರಳುವುದಾಗಿ ತಿಳಿಸಿದ್ದಾರೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ರಿಬಂರವರು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಸ್ವಚ್ಛವಾದ ಎನರ್ಜಿ ಕ್ಷೇತ್ರದಲ್ಲಿ ಹುಡುಕಾಟ ನಡೆಸುತ್ತಿದ್ದುದಾಗಿ ತಿಳಿಸಿದ್ದಾರೆ. ಈ ಎಂಜಿನ್ ಬಗ್ಗೆ ಮಾತನಾಡಿದ ಅವರು ಈ ಎಂಜಿನ್ ಹೈಡ್ರೊ ಕೆಮಿಕಲ್ ಎಂಜಿನ್ ಆಗಿದ್ದು, ನೀರಿನಿಂದ ಚಾಲನೆಯಾಗುತ್ತದೆ ಎಂದು ಹೇಳಿದ್ದಾರೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ಈ ಎಂಜಿನ್‍‍ನಲ್ಲಿರುವ ಪ್ರಮುಖವಾದ ಸಂಗತಿಯೆಂದರೆ, ಈ ಎಂಜಿನ್‍ ಅನ್ನು ಒಂದು ಬಾರಿ ನೀರಿನಿಂದ ತುಂಬಿಸಬೇಕು. ನಂತರ ಈ ಎಂಜಿನ್ ಅದರ ಎನರ್ಜಿಯನ್ನು ಸ್ವತಃ ಉತ್ಪಾದಿಸಿಕೊಳ್ಳುತ್ತದೆ. ಈ ಎಂಜಿನ್ ಯಾವುದೇ ರೀತಿಯ ಮಾಲಿನ್ಯವನ್ನುಂಟು ಮಾಡುವುದಿಲ್ಲ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ನೀರಿನಿಂದ ಚಾಲನೆಗೊಳ್ಳುವ ಈ ಎಂಜಿನ್ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‍‍ಗಳಿಗಿಂತ ಹೆಚ್ಚಿನ ಪ್ರಮಾಣದ ಪವರ್ ಅನ್ನು ಉತ್ಪಾದಿಸುತ್ತದೆ ಎಂದು ರಿಬಂರವರು ಹೇಳಿದ್ದಾರೆ. ಈ ಎಂಜಿನ್ ಅನ್ನು ಅಭಿವೃದ್ಧಿಪಡಿಸಿರುವುದಕ್ಕೆ ರಿಬಂರವರನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಅಭಿನಂದಿಸಿದೆ.

ನೀರಿನಿಂದ ಚಾಲನೆಗೊಳ್ಳುವ ಎಂಜಿನ್ ಸಂಶೋಧಿಸಿದ ಯುವ ವಿಜ್ಞಾನಿ..!

ರಿಬಂರವರ ಈ ಸಂಶೋಧನೆಯು ಪ್ರಪಂಚದ್ಯಂತವಿರುವ ವಿಜ್ಞಾನಿಗಳನ್ನು ತನ್ನತ್ತ ಆಕರ್ಷಿಸಿದೆ. ರಿಬಂರವರ ಈ ಸಂಶೋಧನೆಯು ಯಶಸ್ವಿಯಾದರೆ ವಾಹನಗಳ ಎಂಜಿನ್‍‍ಗಳಲ್ಲಿ ದೊಡ್ಡ ಕ್ರಾಂತಿಯುಂಟಾಗಲಿದೆ. ರಿಬಂರವರ ಈ ಸಂಶೋಧನೆಗೆ ಅಭಿನಂದನೆಗಳು.

Most Read Articles

Kannada
English summary
Young scientist from Bihar invents water fuel engine. Read in Kannada.
Story first published: Friday, February 28, 2020, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X