ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಭಾರತದ ರಸ್ತೆಗಳು ತುಂಬಾ ಅಪಾಯಕಾರಿಯಾಗಿವೆ. ಇಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ದನಗಳು ಅಥವಾ ಪಾದಚಾರಿಗಳು ಇದ್ದಕ್ಕಿದ್ದಂತೆ ಬಂದು ಅಪಘಾತಕ್ಕೆ ಕಾರಣವಾಗಬಹುದು. ಈ ಕಾರಣಕ್ಕೆ ವಾಹನಗಳು ಮಧ್ಯಮ ವೇಗದಲ್ಲಿ ಸಂಚರಿಸುವುದು ಒಳ್ಳೆಯದು.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಇದರ ಜೊತೆಗೆ ಪೋಷಕರ ನಿರ್ಲಕ್ಷ್ಯದಿಂದಾಗಿ ಕೆಲವೊಮ್ಮೆ ಮಕ್ಕಳು ಸಹ ಅಪಘಾತಕ್ಕೀಡಾಗುತ್ತಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ರಸ್ತೆಗಳಲ್ಲಿ ಬಿಡುತ್ತಾರೆ. ಪೋಷಕರು ಗಮನ ಹರಿಸದ ಕಾರಣ ಮಕ್ಕಳು ಅಪಘಾತಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಇತ್ತೀಚಿಗೆ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಆದರೆ ಬೈಕ್ ಸವಾರನೊಬ್ಬನ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಚಲನಚಿತ್ರ ನಿರ್ಮಾಪಕ ನಿಲಾ ಮಾತಾಬ್ ಪಾಂಡಾ ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ನಿಜವಾದ ನಾಯಕರು ಈ ರೀತಿ ಇರುತ್ತಾರೆ ಎಂದು ಅವರು ಹೇಳಿದ್ದಾರೆ. ಈ ವೀಡಿಯೊದಲ್ಲಿ ಸ್ಟ್ರೋಲರ್ ನಲ್ಲಿದ್ದ ಮಗುವೊಂದು ಏಕಾಏಕಿ ರಸ್ತೆಯ ಮಧ್ಯಭಾಗಕ್ಕೆ ಬರುತ್ತದೆ.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಸ್ಟ್ರೋಲರ್ ರಸ್ತೆಯ ಬದಿಗೆ ಹೋಗಿ ಇದ್ದಕ್ಕಿದ್ದಂತೆ ಕಂದಕಕ್ಕೆ ಇಳಿಯಲು ಆರಂಭಿಸುತ್ತದೆ. ಇದೇ ವೇಳೆ ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದಿದ್ದಾನೆ. ತಕ್ಷಣವೇ ಬೈಕ್ ಬಿಟ್ಟು ಮಗುವನ್ನು ರಕ್ಷಿಸಲು ಮುಂದಾಗಿದ್ದಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಬೈಕ್ ಸವಾರ ಓಡಿ ಬಂದು ಮಗುವನ್ನು ರಕ್ಷಿಸಿದ್ದಾನೆ. ಈ ಘಟನೆಯ ನಂತರ ಮಹಿಳೆಯೊಬ್ಬರು ಸ್ಥಳಕ್ಕೆ ಧಾವಿಸಿದ್ದಾರೆ. ಬೈಕ್ ಸವಾರ ತಾನು ರಕ್ಷಿಸಿದ ಮಗುವನ್ನು ಆಕೆಗೆ ನೀಡಿದ್ದಾನೆ.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಯಾವುದೇ ಕಾರಣಕ್ಕೂ ಮಕ್ಕಳನ್ನು ಒಂಟಿಯಾಗಿ ಬಿಡಬಾರದು ಎಂಬುದನ್ನು ಈ ಘಟನೆಯಿಂದ ಕಲಿಯಬಹುದು. ಮಗು ಏಕಾಏಕಿ ರಸ್ತೆಗೆ ಬಂದಾಗ ಅದೃಷ್ಟವಶಾತ್ ಯಾವುದೇ ವಾಹನಗಳು ಅಲ್ಲಿಗೆ ಬಂದಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಸಾಮಾನ್ಯವಾಗಿ ಭಾರತದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಹೆಚ್ಚಿನ ವೇಗದಲ್ಲಿರುತ್ತವೆ. ಒಂದು ವೇಳೆ ಯಾವುದೇ ವಾಹನವು ವೇಗದಲ್ಲಿ ಬಂದಿದ್ದರೆ, ಈ ಘಟನೆಯ ಪರಿಣಾಮ ಬೇರೆಯೇ ಆಗಿರುತ್ತಿತ್ತು. ಈ ಘಟನೆ ಎಲ್ಲಿ ನಡೆಯಿತು, ಯಾವಾಗ ಸಂಭವಿಸಿತು ಎಂಬುದು ನಿಖರವಾಗಿ ತಿಳಿದಿಲ್ಲ.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ಮತ್ತೊಂದು ಅಂಶವೆಂದರೆ ಮಗುವನ್ನು ರಕ್ಷಿಸಿದ ಯುವಕ ನಿಧಾನವಾಗಿ ಬೈಕ್ ಚಾಲನೆ ಮಾಡಿಕೊಂಡು ಸಾಗುತ್ತಿದ್ದ. ಈ ಕಾರಣಕ್ಕೆ ಹಠಾತ್ತನೇ ಬ್ರೇಕ್ ಹಾಕಿ ಬೈಕ್ ನಿಲ್ಲಿಸಿದ್ದಾನೆ. ಒಂದು ವೇಳೆ ಯುವಕ ಬೈಕ್ ಅನ್ನು ವೇಗವಾಗಿ ಚಾಲನೆ ಮಾಡುತ್ತಿದ್ದರೆ, ಮಗುವಿಗೆ ಅಪಾಯವಾಗುವ ಸಾಧ್ಯತೆಗಳಿದ್ದವು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೈಕ್ ವೇಗದಲ್ಲಿದ್ದಾಗ ಬ್ರೇಕ್ ಹಾಕಿದರೆ ಎಡವಿ ಬೀಳುವ ಸಾಧ್ಯತೆಗಳಿರುತ್ತವೆ. ಭಾರತದ ರಸ್ತೆಗಳಲ್ಲಿ ಏನು ಬೇಕಾದರೂ ಆಗುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಕುರಿ, ಹಸು, ನಾಯಿ, ಅಥವಾ ರಸ್ತೆ ದಾಟಲು ಪ್ರಯತ್ನಿಸುತ್ತಿರುವ ಪಾದಚಾರಿಗಳು ನಿಮ್ಮ ವಾಹನಕ್ಕೆ ಇದ್ದಕ್ಕಿದ್ದಂತೆ ಅಡ್ಡ ಬರಬಹುದು.

ಕಂದಕಕ್ಕಿಳಿಯುತ್ತಿದ್ದ ಕಂದನನ್ನು ರಕ್ಷಿಸಿದ ಬೈಕ್ ಸವಾರ

ತುಂಬಾ ವೇಗವಾಗಿ ಚಲಿಸುತ್ತಿದ್ದರೆ ವಾಹನವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮಧ್ಯಮ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದು ಒಳ್ಳೆಯದು.

Most Read Articles

Kannada
English summary
Bike rider saves baby from an accident. Read in Kannada.
Story first published: Tuesday, September 22, 2020, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X