ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಬೈಕ್ ಸವಾರರನ್ನು ಭೇಟಿ ಮಾಡಿ ಮಾತನಾಡಿಸಿದರೆ, ಅವರು ಹೇಳುವ ಮಾತು ಬೈಕ್‌ ಸವಾರಿ ಮಾಡುವುದರಲ್ಲಿರುವ ಖುಷಿ ಕಾರು ಚಾಲನೆಯಿಲ್ಲ ಎಂದು. ಇದು ಬಹುತೇಕ ಬೈಕ್ ಪ್ರಿಯರ ಮಾತು.

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಕಾರು ಚಾಲನೆ ಮಾಡುವುದು ಖುಷಿ ನೀಡುತ್ತದೆ ಎಂದು ಕಾರು ಚಾಲಕರು ಹೇಳಿದರೆ, ಇನ್ನೂ ಕೆಲವರು ಬೈಕ್ ಸವಾರಿ ಮಾಡುವುದೇ ಖುಷಿ ಎಂದು ಹೇಳುತ್ತಾರೆ. ಆದರೆ ಅಧ್ಯಯನಗಳು ಈ ಬಗ್ಗೆ ಏನು ಹೇಳುತ್ತವೆ ಎಂಬುದು ಮುಖ್ಯ ವಿಷಯ. ಕಾರು ಚಾಲಕರಿಗಿಂತ ಬೈಕ್ ಸವಾರರು ಸಂತೋಷವಾಗಿರುತ್ತಾರೆ. ಅವರ ಮೇಲೆ ಉಂಟಾಗುವ ಒತ್ತಡವೂ ಕಡಿಮೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಬಹಿರಂಗವಾಗಿದೆ.

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಆಸ್ಟ್ರೇಲಿಯಾದ ಐಎನ್‌ಜಿ ಸಂಸ್ಥೆ ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ ಕಾರು ಚಾಲಕರಿಗಿಂತ ಬೈಕ್ ಸವಾರರು ಹೆಚ್ಚು ಖುಷಿಯಾಗಿರುತ್ತಾರೆ ಎಂದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ ಬೈಕ್ ಸವಾರಿ ಮಾಡುವುದು ಮನಸ್ಸಿಗೆ ನೀಡುವ ಚಿಕಿತ್ಸೆ ಎಂದು ಹೇಳಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಸಮೀಕ್ಷೆ ನಡೆಸಿದವರ ಪೈಕಿ 82% ಜನರು ಬೈಕ್ ಸವಾರಿಯನ್ನು ಇಷ್ಟಪಡುತ್ತಾರೆ. ಸುಮಾರು 55%ನಷ್ಟು ಜನರು ವಾಹನ ಚಾಲನೆ ಮಾಡುವುದೇ ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ. ಬೈಕ್ ಸವಾರಿಯಿಂದ ಮನಸ್ಸಿಗೆ ಹೇಗೆ ಖುಷಿ ಸಿಗುತ್ತದೆ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದರ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಒತ್ತಡವನ್ನು ಕಡಿಮೆ ಮಾಡುತ್ತದೆ

ಯಾವುದೇ ವಾಹನ ಸವಾರರಿರಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು ಸಹಜ. ಆದರೆ ಬೈಕ್ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೂ ಸಣ್ಣ ಜಾಗ ಸಿಕ್ಕರೂ ನುಗ್ಗಿಕೊಂಡು ಹೋಗುತ್ತಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಆದರೆ ಕಾರು ಚಾಲಕರಿಗೆ ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಂಚಾರ ದಟ್ಟಣೆಯು ಬೈಕ್ ಸವಾರರ ಮೇಲೆ ಹೆಚ್ಚು ಒತ್ತಡ ಉಂಟು ಮಾಡುವ ಸಾಧ್ಯತೆಗಳು ಕಡಿಮೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಬೈಕ್ ಸವಾರರು ಸಂಚಾರ ದಟ್ಟಣೆ ವೇಳೆಯಲ್ಲಿ ಹೆಚ್ಚು ದೂರ ಚಲಿಸಿದರೆ, ಕಾರು ಚಾಲಕರು ಸ್ವಲ್ಪವೇ ದೂರ ಮಾತ್ರ ಸಾಗಲು ಸಾಧ್ಯವಾಗುತ್ತದೆ. ಟ್ರಾಫಿಕ್ ಜಾಮ್ ಉಂಟಾದಾಗ ಬೈಕ್ ಸವಾರರು ಹೇಗೆ ಬೇಕೊ ಹಾಗೆ ಬೈಕ್ ಚಾಲನೆ ಮಾಡಬಹುದು. ಕಾರು ಚಾಲಕರಿಂದ ಇದು ಸಾಧ್ಯವಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಬೈಕ್ ಸವಾರಿ ಗುಂಪುಗಳ ಭಾಗವಾಗಬಹುದು

ಬೈಕ್ ಸವಾರರು ಯಾವುದಾದರೂ ಬೈಕ್ ಸವಾರಿ ಗುಂಪುಗಳ ಭಾಗವಾಗಬಹುದು. ಪ್ರತಿ ವಾರ ಇಲ್ಲವೇ ಪ್ರತಿ ತಿಂಗಳು ಬೈಕ್ ಮೂಲಕ ಸವಾರಿ ಕೈಗೊಳ್ಳುವ ಅನೇಕ ಬೈಕ್ ಸವಾರಿ ಗುಂಪುಗಳು ದೇಶದೆಲ್ಲೆಡೆ ಇವೆ.

ಕಾರು ಚಾಲನೆಗಿಂತ ಬೈಕ್ ಚಾಲನೆಯಲ್ಲಿಯೇ ಹೆಚ್ಚು ಖುಷಿ ಪಡುವ ವಾಹನ ಸವಾರರು

ಬಹುತೇಕ ಬೈಕ್ ಉತ್ಸಾಹಿಗಳು ಖಂಡಿತವಾಗಿಯೂ ಯಾವುದಾದರೂ ಬೈಕ್ ಸವಾರಿ ಗುಂಪುಗಳ ಸದಸ್ಯರಾಗಿರುತ್ತಾರೆ. ಇದು ಅವರ ಸಂತೋಷವನ್ನು ಹೆಚ್ಚಿಸುತ್ತದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

Most Read Articles

Kannada
English summary
Bike riders are more happier than car drivers says study. Read in Kannada.
Story first published: Wednesday, September 23, 2020, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X