ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಹೋಂಡಾ ಗೋಲ್ಡ್ ವಿಂಗ್ ಟ್ರೈಕ್ ಬೈಕು ಭಾರತದಲ್ಲಿರುವ ಅಪರೂಪದ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ಅನ್ನು ವ್ಯಕ್ತಿಯೊಬ್ಬರು ಕಳೆದ ವರ್ಷ ಭಾರತಕ್ಕೆ ಆಮದು ಮಾಡಿಕೊಂಡಿದ್ದರು. ಈಗ ಈ ಬೈಕ್ ಸಾರ್ವಜನಿಕ ರಸ್ತೆಯಲ್ಲಿ ಕಂಡು ಬಂದಿದೆ.

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಈ ಬೈಕಿನಲ್ಲಿ ಬಂದ ವ್ಯಕ್ತಿ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ, ಅಂಗಡಿಗೆ ಹೋಗಿ ತರಕಾರಿ ಹಾಗೂ ದಿನಸಿಗಳನ್ನು ಖರೀದಿಸಿದ್ದಾರೆ. ಈ ಹೋಂಡಾ ಗೋಲ್ಡ್ ವಿಂಗ್ ಟ್ರೈಕ್ ಬೈಕ್ ಸುಂದರವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ರಸ್ತೆಯಲ್ಲಿ ಬಂದಾಗ ಅಲ್ಲಿ ನೆರೆದಿದ್ದವರು ಆಶ್ಚರ್ಯದಿಂದ ನೋಡಿದ್ದಾರೆ. ಅಲ್ಲಿದ್ದವರು ತಮ್ಮ ಮೊಬೈಲ್ ಗಳಲ್ಲಿ ಈ ಬೈಕಿನ ಫೋಟೋ ಹಾಗೂ ವೀಡಿಯೊಗಳನ್ನು ತೆಗೆದಿದ್ದಾರೆ.

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಆ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವೀಡಿಯೊದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿರುವ ಹೋಂಡಾ ಗೋಲ್ಡ್ ವಿಂಗ್ ಡೈಕ್ ಬೈಕ್ ಅನ್ನು ಕಾಣಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಬ್ಯಾಗ್ ನಲ್ಲಿ ತರಕಾರಿ ಹಾಗೂ ದಿನಸಿಗಳನ್ನು ತರುವ ವ್ಯಕ್ತಿ ಹೋಂಡಾ ಗೋಲ್ಡ್ ವಿಂಗ್ ಟ್ರಕ್ ಬೈಕ್‌ನ ಲಗೇಜ್ ಬಾಕ್ಸ್ ತೆರೆದು ತಮ್ಮ ಜೊತೆಯಲ್ಲಿ ತಂದಿದ್ದ ಸಾಮಾನುಗಳನ್ನು ಅದರೊಳಗೆ ಇಡುತ್ತಾರೆ. ಇದನ್ನು ಅಲ್ಲಿ ನೆರೆದಿದ್ದವರು ಆಶ್ಚರ್ಯದಿಂದ ನೋಡುವುದನ್ನು ವೀಡಿಯೊದಲ್ಲಿ ಕಾಣಬಹುದು.

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಹೋಂಡಾ ಗೋಲ್ಡ್ ವಿಂಗ್ ಟ್ರೈಕ್‌ನಂತಹ ಅಪರೂಪದ ದುಬಾರಿ ಬೆಲೆಯ ಬೈಕ್‌ಗಳಲ್ಲಿ ಬಂದು ತರಕಾರಿ ಹಾಗೂ ದಿನಸಿಯನ್ನು ಖರೀದಿಸುವುದು ಭಾರತದಲ್ಲಿ ಅಪರೂಪ. ಆದರೆ ಮುಂದುವರೆದ ಹೊಂದಿದ ದೇಶಗಳಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಈ ರೀತಿಯ ಹಲವಾರು ಬೈಕ್‌ಗಳು ಆ ದೇಶಗಳಲ್ಲಿ ಇರುವುದೇ ಅದಕ್ಕೆ ಮುಖ್ಯ ಕಾರಣ. ಆದರೆ ಭಾರತದಲ್ಲಿ ಕೆಲವೇ ಕೆಲವು ಜನರು ಈ ರೀತಿಯ ಬೈಕುಗಳನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಆಕಸ್ಮಿಕವಾಗಿ ತರಕಾರಿ ಹಾಗೂ ದಿನಸಿ ಖರೀದಿಸಲು ದುಬಾರಿ ಬೆಲೆಯ ಬೈಕುಗಳಲ್ಲಿ ಬಂದರೆ ಜನರು ಆಶ್ಚರ್ಯ ಚಕಿತರಾಗಿ ನೋಡುತ್ತಾರೆ.

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಈ ವೀಡಿಯೊದಲ್ಲಿರುವ ಹೋಂಡಾ ಗೋಲ್ಡ್ ವಿಂಗ್ ಟ್ರೈಕ್ ಬೈಕ್ 1,832 ಸಿಸಿಯ 6-ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 118 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಬೈಕ್ ಭಾರವಾಗಿರುವುದರಿಂದ, ರಿವರ್ಸ್ ಗೇರ್ ಸಹ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಇದರಿಂದ ಬೈಕ್‌ ಅನ್ನು ಸುಲಭವಾಗಿ ನಿರ್ವಹಿಸಲು ಸವಾರನಿಗೆ ಸಾಧ್ಯವಾಗಲಿದೆ. ಈ ಬೈಕಿನಲ್ಲಿ 55 ಲೀಟರ್ ಫ್ಯೂಯಲ್ ಟ್ಯಾಂಕ್ ಅಳವಡಿಸಲಾಗಿದೆ. ಕೆಲವು ಕಾರುಗಳಲ್ಲಿ ಇದಕ್ಕಿಂತ ಚಿಕ್ಕ ಗಾತ್ರದ ಟ್ಯಾಂಕ್ ಅಳವಡಿಸಲಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ಬಾಬು ಜಾನ್ ಎಂಬುವವರೇ ಈ ದುಬಾರಿ ಬೈಕಿನ ಮಾಲೀಕರು. ಕಳೆದ ವರ್ಷ ಈ ಬೈಕು ರಸ್ತೆಗಿಳಿದಾಗ ಅವರು ಅಂತರ್ಜಾಲದಲ್ಲಿ ಜನಪ್ರಿಯರಾದರು. ಅವರು ಈ ಬೈಕನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಆಮದು ಮಾಡಿಕೊಂಡರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತರಕಾರಿ ಖರೀದಿಸಲು ಬಳಕೆಯಾದ ರೂ.72 ಲಕ್ಷ ಮೌಲ್ಯದ ಬೈಕ್

ಸರಿಯಾಗಿ ತೆರಿಗೆ ಪಾವತಿಸದ ಕಾರಣಕ್ಕೆ ಕಸ್ಟಮ್ಸ್ ಅಧಿಕಾರಿಗಳು ಈ ಬೈಕನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಕೊನೆಗೆ ರೂ.24 ಲಕ್ಷ ಪಾವತಿಸಿ ಈ ಬೈಕ್ ಅನ್ನು ಬಿಡಿಸಿ ಕೊಂಡರು. ಈ ಬೈಕ್‌ನ ಬೆಲೆ ರೂ.38 ಲಕ್ಷಗಳಾಗಿದೆ. ರೂ.24 ಲಕ್ಷ ತೆರಿಗೆ ಪಾವತಿಸಿದ ಕಾರಣಕ್ಕೆ ಈ ಬೈಕಿನ ಒಟ್ಟು ಮೌಲ್ಯ ರೂ.72 ಲಕ್ಷಗಳಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ತರಕಾರಿ ಖರೀದಿಸಲು ದುಬಾರಿ ಬೈಕ್ ಬಳಸಿರುವುದು ನಿಜಕ್ಕೂ ಆಶ್ಚರ್ಯವೇ ಸರಿ.

Most Read Articles

Kannada
English summary
Bike with worth Rs.72 lakhs used for vegetable purchase. Read in Kannada.
Story first published: Thursday, October 29, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X