ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಭಾರತೀಯರು ಪ್ರತಿಯೊಂದು ಕೆಲಸವನ್ನೂ ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾರೆ. ಕೆಲವೊಮ್ಮೆ ಇವು ಸುಲಭವಾಗಿ ಕಂಡರೂ ಅವುಗಳಲ್ಲಿ ಸಾಕಷ್ಟು ಅಪಾಯವಿರುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಮುಂಬಯಿ ನಗರದ ಬೀದಿಗಳಲ್ಲಿ ಕಾರುಗಳನ್ನು ಟೋಯಿಂಗ್ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಮುಂಬಯಿ ನಗರದ ಹಲವು ನಗರಗಳಲ್ಲಿ ಲಾಕ್‌ಡೌನ್ ಇನ್ನೂ ಜಾರಿಯಲ್ಲಿದೆ. ಈ ಕಾರಣಕ್ಕೆ ಕಾರು ರಿಪೇರಿ ಹಾಗೂ ಕಾರು ಟೋಯಿಂಗ್‌ನಂತಹ ಸೌಲಭ್ಯಗಳು ಎಲ್ಲಾ ಪ್ರದೇಶದಲ್ಲೂ ಲಭ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಕಾರು ಕೆಟ್ಟು ನಿಂತರೆ ದಾರಿ ದೋಚದಂತಾಗುತ್ತದೆ. ಆದರೆ ಮುಂಬೈನ ವ್ಯಕ್ತಿಯೊಬ್ಬರು ತಮ್ಮದೇ ಆದ ದಾರಿ ಕಂಡು ಕೊಂಡಿದ್ದಾರೆ.

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ದಿವಾಕರ್ ಶರ್ಮಾ ಎಂಬುವವರು ಟ್ವಿಟರ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಬೈಕ್‌ ಸವಾರರಿಬ್ಬರು ಮಾರುತಿ ವ್ಯಾಗನ್ಆರ್ ಕಾರ್ ಅನ್ನು ಹಿಂದೆಯಿಂದ ಕಾಲುಗಳಲ್ಲಿ ತಳ್ಳಿ, ಕಾರನ್ನು ಗ್ಯಾರೇಜ್‌ಗೆ ಕೊಂಡೊಯ್ದಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಯಾವುದೇ ವಾಹನವನ್ನು ಈ ರೀತಿ ತಳ್ಳುವುದು ಅಪಾಯಕಾರಿ. ವಾಹನಗಳನ್ನು ತಳ್ಳುವವರು ಸಹ ಗಾಯಗೊಳ್ಳಬಹುದು. ಮುಂಬೈನಂತಹ ಹೆಚ್ಚು ವಾಹನ ದಟ್ಟಣೆಯಿರುವ ನಗರದಲ್ಲಿ ಈ ರೀತಿ ಮಾಡುವುದು ಇನ್ನೂ ಅಪಾಯಕಾರಿ.

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಈ ವೀಡಿಯೊದಲ್ಲಿ ಕಾರ್ ಅನ್ನು ತಳ್ಳುತ್ತಿರುವ ಕೆಟಿಎಂ ಬೈಕ್ ಹಾಗೂ ಸ್ಕೂಟರ್ ಸವಾರರಿಬ್ಬರು ಹೆಲ್ಮೆಟ್ ಧರಿಸಿಲ್ಲ. ಈ ವೇಳೆ ರಸ್ತೆಯಲ್ಲಿ ಅನೇಕ ಕಾರುಗಳು ಸಂಚರಿಸುತ್ತಿವೆ. ಇದರಿಂದ ಇತರ ವಾಹನಗಳ ಸಂಚಾರಕ್ಕೂ ತೊಂದರೆಯಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಈ ವೀಡಿಯೊ ಬಗ್ಗೆ ಕಾಮೆಂಟ್ ಮಾಡಿರುವ ಕೆಲವರು ಇದನ್ನು ಅದ್ಭುತ ಸಾಹಸವೆಂದು, ಅತ್ಯುತ್ತಮ ಪ್ರತಿಭೆಗಳೆಂದು ಕರೆದಿದ್ದಾರೆ. ಇನ್ನೂ ಕೆಲವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಸ್ಪದ ನೀಡಿ, ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಟ್ರಾಫಿಕ್ ಪೊಲೀಸರು ಇಂತಹ ಜನರಿಗೆ ಯಾವುದೇ ರೀತಿಯ ದಂಡವನ್ನು ವಿಧಿಸದ ಕಾರಣಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿವೆ.

MOST

READ: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿರವರು ಈ ವರ್ಷ ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು 25%ನಷ್ಟು ಕಡಿಮೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಆದರೆ ಈ ರೀತಿಯ ಸನ್ನಿವೇಶಗಳು ಹಾಗೂ ಸಂಚಾರ ಪೊಲೀಸರ ವೈಫಲ್ಯವು ಸಚಿವರ ಗುರಿಯನ್ನು ಅಣಕಿಸುವಂತಿವೆ.

ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಭಾರತದಲ್ಲಿ ಪ್ರತಿವರ್ಷ ಸುಮಾರು 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸರಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 2021ರ ಮಾರ್ಚ್ 31ರ ವೇಳೆಗೆ ಈ ಅಂಕಿಅಂಶಗಳನ್ನು 20-25%ನಷ್ಟು ಕಡಿಮೆಗೊಳಿಸುವುದು ಸರ್ಕಾರದ ಗುರಿಯಾಗಿದೆ.

Most Read Articles

Kannada
English summary
Bikers in Mumbai pushing car from behind. Read in Kannada.
Story first published: Saturday, June 20, 2020, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X