ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಸುಮಾರು 7 ವರ್ಷಗಳ ಕಾಯುವಿಕೆಯ ನಂತರ ಕೇರಳದ ಪಶುವೈದ್ಯ ಜಾನ್ ಅಬ್ರಹಾಂ ಕೋಳಿ ತ್ಯಾಜ್ಯದಿಂದ ಜೈವಿಕ ಡೀಸೆಲ್‌ ತಯಾರಿಸಲು ಪೇಟೆಂಟ್ ಪಡೆದಿದ್ದಾರೆ. ಈ ಬಯೋ ಡೀಸೆಲ್ ಪ್ರತಿ ಲೀಟರ್‌ಗೆ 38 ಕಿ.ಮೀಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಬಯೋ ಡೀಸೆಲ್ ಸಾಮಾನ್ಯ ಡೀಸೆಲ್'ಗಿಂತ 40% ನಷ್ಟು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತದೆ. ಜೊತೆಗೆ ಈ ಬಯೋ ಡೀಸೆಲ್ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಸುಮಾರು 7 ವರ್ಷಗಳ ಪರಿಶ್ರಮದ ಬಳಿಕ ಕೋಳಿ ತ್ಯಾಜ್ಯದಿಂದ ಬಯೋ ಡೀಸೆಲ್‌ ತಯಾರಿಸಲು ಭಾರತೀಯ ಪೇಟೆಂಟ್ ಕಚೇರಿ ಪೇಟೆಂಟ್ ನೀಡಿದೆ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಈ ತಿಂಗಳ ಜುಲೈ 7 ರಂದು ಪೇಟೆಂಟ್ ನೀಡಲಾಗಿದೆ. ಈ ಬಯೋ ಡೀಸೆಲ್ ಅನ್ನು ಕೇರಳ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಯನಾಡ್ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಾನ್ ಅಬ್ರಹಾಂ ಕಂಡುಹಿಡಿದಿದ್ದಾರೆ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಗಮನಿಸಬೇಕಾದ ಸಂಗತಿಯೆಂದರೆ ಈ ಆವಿಷ್ಕಾರವು ತಮಿಳುನಾಡು ಪಶುವೈದ್ಯಕೀಯ ವಿಶ್ವವಿದ್ಯಾಲಯದ ನಾಮಕ್ಕಲ್‌ನ ಪಶುವೈದ್ಯಕೀಯ ಕಾಲೇಜಿನ ಜೊತೆ ಸಂಪರ್ಕ ಹೊಂದಿದೆ. 2009-12 ರಿಂದ ಜಾನ್ ಅಬ್ರಹಾಂ ಅವರು ನಾಮಕ್ಕಲ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಈ ಬಯೋ ಡೀಸೆಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದರು ಎಂಬುದು ಗಮನಾರ್ಹ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಈ ಸಂಶೋಧನಾ ಕೋರ್ಸ್ ನಂತರ ಅವರು ಕೇರಳದ ವಯನಾಡದ ಪಶುವೈದ್ಯಕೀಯ ಕಾಲೇಜಿಗೆ ಸೇರಿದರು. ಇದರ ಆಧಾರದ ಮೇಲೆ ಭಾರತ್ ಪೆಟ್ರೋಲಿಯಂನ ಕೊಚ್ಚಿ ವಿಭಾಗವು ಈ ಬಯೋ ಡೀಸೆಲ್'ಗೆ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿತು.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಆಗ ಕಾಲೇಜು ವಾಹನವೊಂದನ್ನು ಈ ಬಯೋ ಡೀಸೆಲ್ ಮೂಲಕ ಚಾಲನೆ ಮಾಡಲಾಗಿತ್ತು. ಜಾನ್ ಅಬ್ರಹಾಂ ಹಾಗೂ ಅವರ ಮೂವರು ವಿದ್ಯಾರ್ಥಿಗಳು ಈಗ ಹಂದಿ ತ್ಯಾಜ್ಯದಿಂದ ಬಯೋ ಡೀಸೆಲ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಬಯೋ ಡೀಸೆಲ್ ಎಂಜಿನ್‌ನ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂಬುದು ಗಮನಾರ್ಹ. ಬಯೋ ಡೀಸೆಲ್ ಸಸ್ಯಾಹಾರಿ ಎಣ್ಣೆಯ ವಾಸನೆ ಹೊಂದಿದ್ದು, ಈಗ ಮಾರಾಟವಾಗುತ್ತಿರುವ ಡೀಸೆಲ್‌ನಂತೆ ಕಾಣುತ್ತದೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ. ಈ ಬೆಳವಣಿಗೆ ವಾಹನ ಸವಾರರಲ್ಲಿ ಸಂತಸವನ್ನುಂಟು ಮಾಡಿರುವುದು ಸುಳ್ಳಲ್ಲ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಭಾರತದಲ್ಲಿ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಹುತೇಕ ರಾಜ್ಯಗಳಲ್ಲಿ ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.100 ರ ಅಂಚಿನಲ್ಲಿದೆ. ಈ ಸಂದರ್ಭದಲ್ಲಿ ಡೀಸೆಲ್ ಕಡಿಮೆ ಬೆಲೆಗೆ ಲಭ್ಯವಾದರೆ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್

ಭಾರತದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಬಯೋ ಡೀಸೆಲ್ ನೆರವಾಗಲಿದೆ. ಭಾರತದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾಗೂ ಸಿಎನ್‌ಜಿ ವಾಹನಗಳ ಬಳಕೆಗೂ ಉತ್ತೇಜನ ನೀಡಲಾಗುತ್ತಿದೆ.

Most Read Articles

Kannada
English summary
Bio diesel from chicken waste gets patent. Read in Kannada.
Story first published: Wednesday, July 28, 2021, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X