ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕುಟುಂಬದ ಒಬ್ಬ ಸದಸ್ಯನಿಗೆ ಕರೋನಾ ಸೋಂಕು ಬಂದರೆ ಇಡೀ ಕುಟುಂಬದವರಿಗೆ ಸೋಂಕು ಹರಡುವ ಪ್ರಕರಣಗಳು ವರದಿಯಾಗುತ್ತಿವೆ.

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಕರೋನಾ ವೈರಸ್‌ ಕಾರಣಕ್ಕೆ ಕುಟುಂಬ ಸದಸ್ಯರೊಬ್ಬರು ಮೃತಪಟ್ಟರೆ ಕುಟುಂಬದ ಇತರ ಸದಸ್ಯರು ಆಸ್ಪತ್ರೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವಂತಹ ಘಟನೆಗಳು ವರದಿಯಾಗುತ್ತಿವೆ.

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ರಾಜಕಾರಣಿಯೊಬ್ಬರು ಆಸ್ಪತ್ರೆಯನ್ನು ಧ್ವಂಸ ಮಾಡಲು ಮುಂದಾಗಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಬಿಜೆಪಿ ಮುಖಂಡರೊಬ್ಬರು ತಮ್ಮ ಕಾರನ್ನು ನುಗ್ಗಿಸಿ ಆಸ್ಪತ್ರೆಯ ಗಾಜು ಒಡೆದು ಹಾಕಿದ್ದಾರೆ. ಶನಿವಾರ ಈ ಘಟನೆ ಸಂಭವಿಸಿದೆ. ಘಟನೆಯ ಸಂಬಂಧ ಬೈಟೆಕೊ ಆಸ್ಪತ್ರೆ ಸಿಬ್ಬಂದಿ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲಿಸಿದ್ದಾರೆ.

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಈ ಇಡೀ ಘಟನೆ ಆಸ್ಪತ್ರೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ಪತ್ರೆಯಲ್ಲಿ ಧ್ವಂಸ ಮಾಡಲು ಯತ್ನಿಸಿದ ಬಿಜೆಪಿ ನಾಯಕನನ್ನು ರಾಜೇಂದ್ರ ಟ್ಜಾನೆ ಎಂದು ಗುರುತಿಸಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಆತ ಬಿಜೆಪಿ ಪಕ್ಷದ ಕೌನ್ಸಿಲರ್ ಸೀಮಾ ಟ್ಜಾನೆರವರ ಪತಿ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ರಾಜೇಂದ್ರ ಟ್ಜಾನೆ ಅವರ ತಂದೆ ಇತ್ತೀಚೆಗೆ ಕೋವಿಡ್ 19ನಿಂದ ನಿಧನರಾದರು. ಅವರು ಬೈಟೆಕೊ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಹೇಳಲಾಗಿದೆ.

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಬೈಟೆಕೊ ಆಸ್ಪತ್ರೆಯಲ್ಲಿ ಕೋವಿಡ್ 19ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಜೇಂದ್ರ ಟ್ಜಾನೆ ತಮ್ಮ ಟೊಯೊಟಾ ಇನೋವಾ ಎಂಪಿವಿಯಿಂದ ಆಸ್ಪತ್ರೆಯ ಗಾಜಿನ ಬಾಗಿಲನ್ನು ಹೊಡೆದು ಹಾಕಿದ್ದಾನೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಕೆಲವು ವರದಿಗಳ ಪ್ರಕಾರ ಈ ಘಟನೆ ನಡೆದಾಗ ರಾಜೇಂದ್ರ ಟ್ಜಾನೆ ಪಾನ ಮತ್ತನಾಗಿದ್ದ ಎಂದು ಹೇಳಲಾಗಿದೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಘಟನೆ ಬಳಿಕ ರಾಜೇಂದ್ರ ಟ್ಜಾನೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರು ಟ್ಜಾನೆಯನ್ನು ಪತ್ತೆ ಹಚ್ಚಿ ಆತನನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕರೋನಾ ವೈರಸ್ ಎರಡನೇ ಅಲೆ ಆರಂಭವಾದಾಗಿನಿಂದಲೂ ಭಾರತದಾದ್ಯಂತ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಹಲವು ಘಟನೆಗಳು ವರದಿಯಾಗಿವೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕೋವಿಡ್ 19ನಿಂದ ತಂದೆ ಸಾವನ್ನಪ್ಪಿದ ಕಾರಣಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಬಿಜೆಪಿ ಮುಖಂಡ

ಬಹುತೇಕ ಆಸ್ಪತ್ರೆಗಳು ಈ ರೀತಿಯ ಹಲ್ಲೆ ಪ್ರಕರಣಗಳನ್ನು ತಡೆಯಲು ಸಾಕಷ್ಟು ಭದ್ರತೆಯನ್ನು ಹೊಂದಿಲ್ಲ ಎಂಬುದು ವಿಪರ್ಯಾಸ. ವೈದ್ಯರು ತಮ್ಮ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Most Read Articles

Kannada
English summary
BJP leader smashes hospital glass door with Innova car. Read in Kannada.
Story first published: Monday, May 17, 2021, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X