ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

By Praveen Sannamani

ಹೊಸ ವಾಹನಗಳನ್ನು ಖರೀದಿ ಮಾಡಿದಾಗ ಬಹುತೇಕ ವಾಹನ ಮಾಲೀಕರು ಪೂಜೆ ಮಾಡಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಪೂಜಾ ವಿಧಿವಿಧಾನಗಳನ್ನು ಕೈಗೊಳ್ಳುವಾಗ ಆಗುವ ಸಣ್ಣಪುಟ್ಟ ತಪ್ಪುಗಳು ಕೆಲವು ಬಾರಿ ಅನಾಹುತಕ್ಕೆ ಎಡೆಮಾಡಿಕೊಡಬಲ್ಲವು. ಇದೇ ಕಾರಣಕ್ಕೆ ಪೂಜೆ ವೇಳೆ ಆದ ಒಂದು ಸಣ್ಣ ತಪ್ಪಿನಿಂದಾಗಿ ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರೊಂದು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಪೂರ್ವ ಚೀನಾದ ಯಾಂಗ್ಝ್ ನಗರದಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ, ಹೊಸ ಜಿ30 ಬಿಎಂಡಬ್ಲ್ಯು 5 ಸರಣಿಯ ಕಾರು ಬೆಂಕಿಗಾಹುತಿಯಾಗಿದ್ದು, ಪೂಜಾ ಕಾರ್ಯವನ್ನು ಕೈಗೊಳ್ಳುತ್ತಿರುವಾಗಲೇ ಈ ದುರಂತ ನಡೆದಿದೆ. ಇದರ ಪರಿಣಾಮ ಹೊಸ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಹೊಸ ಕಾರು ಖರೀದಿಸಿದ ನಂತರ ಧಾರ್ಮಿಕ ಆಚರಣೆಗಳನ್ನು ಮಾಡುವ ಸಂಬಂಧ ಚೀನೀ ದಂಪತಿಯು ತಮ್ಮ ಅರ್ಪಾಟ್‌ಮೆಂಟ್ ಮುಂಭಾಗದಲ್ಲಿ ಪೂಜಾ ಕಾರ್ಯವನ್ನು ನೆರವೆರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪೂಜಾ ಸಂದರ್ಭದಲ್ಲಿ ಮಾಡಿದ ಒಂದು ಸಣ್ಣ ತಪ್ಪು ಇಷ್ಟೆಲ್ಲಾ ರದ್ದಾಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಪೂಜೆ ವೇಳೆ ಕಾರಿನ ಬ್ಯಾನೆಟ್ ಮೇಲೆ ಧೂಪವನ್ನು ಹಚ್ಚಿ ಇಡಲಾಗಿತ್ತು ಎಂಬ ಮಾಹಿತಿ ದೊರೆತಿದ್ದು, ಇದೇ ಕಾರಣಕ್ಕೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಮತ್ತೊಂದು ಅಂಶವೆಂದರೆ, ಈ ಚೀನೀ ದಂಪತಿಗೆ ಧಾರ್ಮಿಕ ಆಚರಣೆಯ ಬಗೆಗೆ ಅಷ್ಟಾಗಿ ಮಾಹಿತಿ ಇಲ್ಲದಿದ್ದರೂ ಬೇರೊಬ್ಬರನ್ನು ನೋಡಿ ಇವರು ಕೂಡಾ ಪೂಜಾ ಕಾರ್ಯಗಳನ್ನು ಮಾಡಿಸುತ್ತಿದ್ದರು.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಆಗಾ ಬೆಂಕಿಯ ಕಿಡಿಯು ಬ್ಯಾನೆಟ್ ವಿಭಾಗದಲ್ಲಿ ಸೇರಿಕೊಂಡಿಲ್ಲದೇ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿರುವ ದಂಪತಿಯು ಘಟನಾ ಸ್ಥಳಕ್ಕೆ ಯಾರು ಹತ್ತಿರ ಹೋಗದಂತೆ ಎಚ್ಚರ ವಹಿಸಿದ್ದಾರೆ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಆದರೂ, ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಷ್ಟರಲ್ಲೇ ಕಾರು ಬಹುತೇಕ ಸುಟ್ಟು ಕರಕಲಾಗಿದ್ದು, ಘಟನೆ ಕುರಿತು ಚೀನೀ ದಂಪತಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ಏನು ಅನ್ನುವ ಬಗ್ಗೆ ನಮಗೆ ಇದುವರೆಗೂ ಗೊತ್ತಾಗುತ್ತಿಲ್ಲ ಎಂದಿದ್ದು, ಈ ಕುರಿತು ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಪ್ರಾಥಮಿಕ ತನಿಖೆ ವೇಳೆ ಧೂಪವನ್ನು ಕಾರಿನ ಬ್ಯಾನೆಟ್ ಮೇಲೆ ಇಟ್ಟಿದ್ದೆ ಘಟನೆಗೆ ಮೂಲ ಕಾರಣ ಇರಬಹುದೆಂದು ಶಂಕಿಸಲಾಗಿದ್ದು, ಒಟ್ಟಿನಲ್ಲಿ ಪೂಜೆ ಮಾಡಿಸುವ ಭರಾಟೆಯಲ್ಲಿ ಹೊಸ ಕಾರು ಸಂಪೂರ್ಣ ಸುಟ್ಟು ಹೊಗಿದ್ದು ಮಾತ್ರ ದುರಂತವೇ ಸರಿ.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಹೊಸ ಕಾರು ಖರೀದಿ ಮಾಡಿದ ನಂತರ ಧಾರ್ಮಿಕ ಆಚರಣೆ ಮಾಡುವುದು ತಪ್ಪಲ್ಲ. ಆದ್ರೆ ಎಚ್ಚರಿಕೆ ಇಲ್ಲದೆ ಮಾಡುವ ಕೆಲವು ವಿಧಿವಿಧಾನಗಳು ಇಂತಹ ಅವಘಡಗಳಿಗೆ ಕಾರಣವಾಗಬಹುದು. ಹೀಗಾಗಿ ಪ್ರತಿಯೊಬ್ಬ ಇಂತಹ ವಿಚಾರಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಒಳಿತು.

ಹೊಸ ಕಾರಿನ ಪೂಜೆ ವೇಳೆ ದುರಂತ- ಬೆಂಕಿಗಾಹುತಿಯಾದ 60 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್

ಇನ್ನು ಚೀನೀ ದಂಪತಿ ಖರೀದಿಸಿದ್ದ ಕಾರು ಬಿಎಂಡಬ್ಲ್ಯು 5 ಸರಣಿಯ 520ಡಿ ಆವೃತ್ತಿ ಎಂದು ತಿಳಿದು ಬಂದಿದ್ದು, ಇದು ಚೀನೀ ಮಾರುಕಟ್ಟೆಯಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಬೆಲೆ ಹೊಂದಿದೆ. ಇದೇ ಕಾರುಗಳು ಭಾರತದಲ್ಲೂ ಸಹ ಮಾರಾಟವಾಗುತ್ತಿದ್ದು, ಎಕ್ಸ್‌ಶೋರಂ ಪ್ರಕಾರ 53 ಲಕ್ಷ ಬೆಲೆ ಪಡೆದುಕೊಂಡಿದೆ.

ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಘಟನೆಯ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
Read more on fire bmw off beat
English summary
The Gods Were Not Pleased — BMW 5 Series Catches Fire Amidst Sacred Rituals.
Story first published: Saturday, June 16, 2018, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X