ಮರ್ಸಿಡಿಸ್ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಐಷಾರಾಮಿ ವಾಹನ ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕೂಡಾ ತನ್ನ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಹೊಚ್ಚ ಹೊಸ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿಗೆ ಈಗಾಗಲೇ 100ಕ್ಕೂ ಹೆಚ್ಚು ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ಬಿಡುಗಡೆಯ ಬಳಿಕ ನಿನ್ನೆಯಷ್ಟೇ ಹೊಸ ಕಾರಿನ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಭಾರತದಲ್ಲಿ ಇಕ್ಯೂಸಿ 400 ಕಾರಿನ ಮೊದಲ ಯುನಿಟ್ ಅನ್ನು ಉದ್ಯಮಿ ಬಾಬಿ ಚೆಮ್ಮನೂರ್ ಖರೀದಿಸಿದ್ದು, ಹೈದ್ರಾಬಾದ್‌ನಲ್ಲಿ ನಡೆದ ಮೊದಲ ವಿತರಣಾ ಕಾರ್ಯಕ್ರಮದಲ್ಲಿ ಹೊಸ ಕಾರನ್ನು ಹಸ್ತಾಂತರ ಮಾಡಲಾಗಿದೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಕೇರಳ ಮೂಲದ ಖ್ಯಾತ ಉದ್ಯಮಿಯಾಗಿರುವ ಬಾಬಿ ಚೆಮ್ಮನೂರ್‌ 'ಚೆಮ್ಮನೂರ್ ಜ್ಯುವೆಲ್ಲರ್ಸ್' ಗ್ರೂಪ್ ಮಾಲೀಕರಾಗಿದ್ದು, ಮರ್ಸಿಡಿಸ್ ನಿರ್ಮಾಣದ ಹಲವು ಐಷಾರಾಮಿ ಕಾರುಗಳ ಜೊತೆಗೆ ಬಹುಕೋಟಿ ಮೌಲ್ಯದ ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಫ್ಯಾಂಟಮ್7 ಕಾರಿನ ಮಾಲೀಕತ್ವ ಹೊಂದಿದ್ದಾರೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಸುಮಾರು 10 ಕೋಟಿ ಮೌಲ್ಯದ ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಕಾರನ್ನು ಬಾಡಿಗೆಗೆ ಬಿಟ್ಟಿರುವ ಉದ್ಯಮಿ ಬಾಬಿ ಚೆಮ್ಮನೂರ್ ಅವರು ಹಲವಾರು ಐಷಾರಾಮಿ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಇದೀಗ ಹೊಚ್ಚ ಹೊಸ ಇಕ್ಯೂಸಿ 400 ಎಲೆಕ್ಟಿಕ್ ಕಾರು ಖರೀದಿಸಿದ್ದಾರೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಇನ್ನು ಉದ್ಯಮಿ ಬಾಬಿ ಚೆಮ್ಮನೂರ್ ಖರೀದಿಸಿರುವ ಮರ್ಸಿಡಿಸ್ ಬೆಂಝ್ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿರುವ ಇಕ್ಯೂಸಿ 400 ಆವೃತ್ತಿಯ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯು ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಗರಿಷ್ಠ 470 ಕಿ.ಮೀ ಮೈಲೇಜ್ ಹಿಂದಿರುಗಿಸುವ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಇಕ್ಯೂಸಿಯಲ್ಲಿನ ಫುಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಮಾದರಿಯು 405-ಬಿಹೆಚ್‌ಪಿ ಪವರ್ ಮತ್ತು 765-ಎನ್ಎ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 5.1 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗದಲ್ಲಿ ಕ್ರಮಿಸುತ್ತದೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಜೊತೆಗೆ 4x4 ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರು ಮಾದರಿಯು ಇಕೋ, ಕಂಫರ್ಟ್, ಡೈನಾಮಿಕ್ ಮತ್ತು ಇಂಡಿವಿಚ್ಯೂಲ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದ್ದು, ಚಾರ್ಜಿಂಗ್ ಸೌಲಭ್ಯಕ್ಕಾಗಿ ಇಕ್ಯೂಸಿ 400 ಮಲ್ಟಿಪಲ್ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ವಾಲ್ ಸಾಕೆಟ್ ಚಾರ್ಜರ್ ಮಾಡಬಹುದಾದರೆ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಲ್ಲಿ ಕನಿಷ್ಠ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಹೈ ಸ್ಪೀಡ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಕನಿಷ್ಠ 90 ನಿಮಿಷ ತೆಗೆದುಕೊಳ್ಳಲಿದ್ದು, ಹೈಸ್ಪೀಡ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಹೆವಿ ಡ್ಯೂಟಿ ಲೈನ್ಸ್ ಪಡೆಯಬೇಕಾಗುತ್ತದೆ.

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಈ ಮೂಲಕ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳಲ್ಲೇ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 99.30 ಲಕ್ಷ ಬೆಲೆ ಹೊಂದಿದ್ದು, ಈ ಇವಿ ಎಸ್‍ಯುವಿಗೆ ಭಾರತದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಮರ್ಸಿಡಿಸ್ ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಬಾಬಿ ಚೆಮ್ಮನೂರ್

ಆದರೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ದವಾಗಿರುವ ಆಡಿ ಇ-ಟ್ರಾನ್ ಎಸ್‌ಯುವಿ ಕಾರು ಮರ್ಸಿಡಿಸ್ ಇಕ್ಯೂಸಿ ಜೊತೆ ಪ್ರತಿಸ್ಪರ್ಧಿಯಾಗಲಿದ್ದು, ಮಾಲಿನ್ಯ ತಡೆ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ನಿರ್ಬಂಧ ಹೇರುತ್ತಿರುವುದೇ ಎಲೆಕ್ಟ್ರಿಕ್ ವಾಹನ ಮಾರಾಟವು ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ.

Most Read Articles

Kannada
English summary
Boby Chemmanur Owned India's First Mercedes Benz EQC electric SUV. Read in Kannada.
Story first published: Saturday, November 7, 2020, 10:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X