ದೇವೇಗೌಡರ ಕನಸಿನ ಯೋಜನೆಯನ್ನು ಸಹಕಾರಗೊಳಿಸಿದ ಪ್ರಧಾನಿ ಮೋದಿ..!

ನಮ್ಮ ದೇಶದಲ್ಲಿ ಅದೆಷ್ಟೋ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಹಾಕಿರುವುದನ್ನು ಬಿಟ್ಟರೆ ಅವುಗಳ ಅನುಷ್ಠಾನಕ್ಕೆ ತಂದಿರುವುದು ಮಾತ್ರ ಬೆರಳಣಿಕೆಯಷ್ಟು ಮಾತ್ರ. ಇಂತಹ ಯೋಜನೆಗಳಲ್ಲಿ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ಯೋಜನೆ ಕೂಡಾ ಒಂದು.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಹೌದು, ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸಲು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ದೇಶದ ಅತೀ ಉದ್ದದ ರೈಲು ಸೇತುವೆಯ ಮುಂದಿನ ಕೆಲವೇ ದಿನಗಳಲ್ಲಿ ಸೇವೆಗಾಗಿ ಸಿದ್ದವಾಗುತ್ತಿದೆ. ಬರೋಬ್ಬರಿ 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಬೃಹತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದೇ ತಿಂಗಳು ಸೇವೆಗೆ ಮುಕ್ತಗೊಳಿಸುತ್ತಿದ್ದಾರೆ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ಕರ್ನಾಟಕದ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡ್ರು. ಆದ್ರೆ ಕಾರಣಾಂತರಗಳಿಂದ ದೇವೇಗೌಡ್ರ ಕನಸಿನ ಯೋಜನೆಯು ಕನಸಾಗಿಯೇ ಉಳಿದಿತ್ತು.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

1996-97ರ ಅವಧಿಯಲ್ಲಿ ದೇಶದ 11ನೇ ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡ್ರು ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದರು. ಆದ್ರೆ ಅವರ ಅದೃಷ್ಟ ಚೆನ್ನಾಗಿರಲಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಖರ್ಚಿ ಕಾಲಿ ಮಾಡುವ ಪ್ರಸಂಗಗಳು ಎದುರಾದವು.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಜೂನ್ 1, 1996ರಿಂದ ಎಪ್ರಿಲ್ 21, 1997ರ ತನಕ ಪ್ರಧಾನಿ ಹುದ್ದೆಯಲ್ಲಿದ್ದ ದೇವೇಗೌಡ್ರು ಅಧಿಕಾರದಲ್ಲಿ ಇದಷ್ಟು ದಿನಗಳ ಕಾಲ ಹಲವು ಬೃಹತ್ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅದರಲ್ಲಿ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ನಿರ್ಮಾಣ ಯೋಜನೆ ಕೂಡಾ ಒಂದು ಎಂದು ಮರೆಯಲು ಸಾಧ್ಯವಿಲ್ಲ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ದೇವೇಗೌಡರ ಅಧಿಕಾರ ಕಳೆದುಕೊಂಡ ಮೇಲೆ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ಯೋಜನೆ ಅಲ್ಲಿಗೆ ತಟಸ್ಥವಾಗಿತ್ತು. ತದನಂತರ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿಯವರು ಸಹ ಇದೇ ಯೋಜನೆಗೆ 2002ರಲ್ಲಿ ಮತ್ತೊಮ್ಮೆ ಅಡಿಗಲ್ಲು ಹಾಕಿದರೂ ಸಹ ಈ ಯೋಜನೆ ಮಾತ್ರ ಸಹಕಾರಗೊಳ್ಳಲೇ ಇಲ್ಲ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಹೀಗೇ ದಿನದೂಡುತ್ತಲೇ ಬಂದಿಲ್ಲ ಈ ಯೋಜನೆಗೆ ಮಾಜಿ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು ಚಾಲನೆ ನೀಡುತ್ತಾರೆ ಎಂದುಕೊಂಡಿದ್ದ ಅಸ್ಸಾಂ ಜನತೆಗೆ ಆಗಲೂ ನಿರಾಶೆ ಉಂಟು ಮಾಡಿತು. ಸುಮಾರು 10 ವರ್ಷಗಳ ಕಾಲ ಆಡಳಿತದಲ್ಲಿದ್ದ ಮನಮೋಹನ್ ಸಿಂಗ್ ಅವರು ಈ ಯೋಜನೆಯ ಕುರಿತಾಗಿ ಒಂದೇ ಒಂದು ಚರ್ಚೆಯನ್ನು ಕೂಡಾ ಮಾಡಲಿಲ್ಲ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಆದ್ರೆ ಅಸ್ಸಾಂ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಹಣಕಾಸಿನ ನೆರವು ನೀಡಿ 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಮಾಡಿದ್ದಾರೆ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಬರೋಬ್ಬರಿ 4.94 ಕಿ.ಮೀ ಉದ್ದ ಹೊಂದಿರುವ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕಾಗಿ ಬರೋಬ್ಬರಿ 5,920 ಕೋಟಿ ಖರ್ಚು ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಡಿಸೆಂಬರ್​ 25ರಂದು ಈ ಬ್ರಿಡ್ಜ್ ಅನ್ನು ಉದ್ಘಾಟಿಸಲಿದ್ದಾರೆ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಬ್ರಹ್ಮಪುತ್ರ ನದಿ ಮೇಲೆ ಈ ರೈಲು ಸೇತುವೆಯನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅಷ್ಟೆ ಅಲ್ಲದೇ ಭಾರತ- ಚೀನಾ ಗಡಿಯಲ್ಲಿ ರಕ್ಷಣಾ ಸಾಮಗ್ರಿಗಳ ಪೂರೈಕೆಗೂ ಅನುಕೂಲವಾಗಲಿದೆಯಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಈ ಅಸ್ಸಾಂನ ದರ್ಬಾಂಗ್ ಹಾಗೂ ಅರುಣಾಚಲ ಪ್ರದೇಶದ ಪಸೀಘಾಟ್ ನಗರವನ್ನು ಇದು ಸಂಪರ್ಕಿಸಲಿದ್ದು, ಬ್ರಹ್ಮಪುತ್ರ ನದಿ ಜಲಮಟ್ಟದಿಂದ 32 ಮೀಟರ್ ಎತ್ತರದಲ್ಲಿರುವ ಬ್ರಿಡ್ಜ್ ಅನ್ನು ಸ್ವೀಡನ್ ಹಾಗೂ ಡೆನ್ಮಾರ್ಕ್ ದೇಶಗಳನ್ನು ಸಂಪರ್ಕಿಸುವ ಸೇತುವೆಯ ಶೈಲಿಯಲ್ಲಿ ನಿರ್ಮಿಸಲಾಗಿದೆ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಸದ್ಯದ ಪರಿಸ್ಥಿತಿಯಲ್ಲಿ ಅರುಣಾಚಲಪ್ರದೇಶವನ್ನು ತಲುಪಬೇಕೇಂದರೆ ಅಸ್ಸಾಂನ ಗುವಾಹಟಿಯಿಂದ 186 ಕಿ.ಮೀ. ದೂರದಲ್ಲಿರುವ ತೇಜ್‌ಪುರ ಮೂಲಕ ಹಾದು ಹೋಗಬೇಕಾಗುವ ಅನಿವಾರ್ಯತೆಗಳಿದ್ದು, ತೇಜ್‌ಪುರದಿಂದ ಅರುಣಾಚಲ ಗಡಿ ತಲುಪಲು ಕನಿಷ್ಠ 2 ದಿನ ತೆಗೆದುಕೊಳ್ಳುತ್ತದೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ಈ ರೈತ ಕೊನೆಗೆ ಮಾಡಿದ್ದೇನು ಗೊತ್ತಾ?

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಅಷ್ಟೇ ಅಲ್ಲದೇ ಈ ಭಾಗದಲ್ಲಿ ಯಾವುದೇ ಬ್ರಿಡ್ಜ್ ಇಲ್ಲದಿರುವ ಕಾರಣಕ್ಕೆ ಬಹುತೇಕರು ದೋಣಿ ಸಂಚಾರವನ್ನೇ ನೆಚ್ಚಿಕೊಂಡಿದ್ದು, ಪ್ರವಾಹದ ಸಂದರ್ಭಗಳಲ್ಲಿ ಆಗಾಗ ದೋಣಿ ದುರಂತ ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಈ ಹೊಸ ಯೋಜನೆಯಿಂದ ಈ ಭಾಗದ ಜನತೆಗೆ ಹೆಚ್ಚು ಅನುಕೂಲವಾಗಲಿದೆ.

23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಇಲ್ಲಿ ವಿಶೇಷ ಅಂದ್ರೆ ಡಿಸೆಂಬರ್ 25ರಂದು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿರುವ ಗುಡ್ ಗರ್ವನನ್ಸ್ ಡೇ ದಿನದಂದೇ ಹೊಸ ಬ್ರಿಡ್ಜ್‌ಗೆ ಚಾಲನೆ ನೀಡಲಾಗುತ್ತಿದ್ದು, 23 ವರ್ಷಗಳ ಬಳಿಕ ದೇವೇಗೌಡ್ರು ಕಂಡಿದ ಕನಸೊಂದು ಇದೀಗ ಮೋದಿಯವರ ಮೂಲಕ ಸಹಕಾರಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

Most Read Articles

Kannada
English summary
PM to inaugurate Bogibeel Bridge, India’s longest railroad bridge, on December 25. Read in kannda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X