ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಇತ್ತೀಚೆಗೆ ಬಾಲಿವುಡ್ ನಟ ಇಮ್ರಾನ್ ಹಶ್ಮಿರವರು ಕವಾಸಕಿ ಬೈಕ್ ಚಾಲನೆ ಮಾಡಿದ್ದಾರೆ. ಇಮ್ರಾನ್ ಹಶ್ಮಿ, ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡುತ್ತಿರುವ ಫೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ. ಕವಾಸಕಿ ಝಡ್ 900 ಬೈಕ್‌ ಅನ್ನು 2019ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಇಕ್ಮಾ ಬೈಕ್‌ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಈ ಬೈಕ್ ಯಮಹಾ ಝಡ್ 90ನಂತಿದೆ ಎಂದು ಹೇಳಲಾಗುತ್ತಿದೆ. ಈ ಬಿಎಸ್ 6 ಬೈಕ್ ಅನ್ನು ಭಾರತದಲ್ಲಿ ಇನ್ನೂ ಬಿಡುಗಡೆಗೊಳಿಸಿಲ್ಲ. ಭಾರತದಲ್ಲಿ ಕವಾಸಕಿ ಝಡ್ 900 ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.8 ಲಕ್ಷಗಳಾಗಿದೆ. ಈ ಬೈಕ್ ಅನ್ನು ನೇಕೆಡ್ ಸ್ಪೋರ್ಟ್ಸ್ ಬೈಕ್ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು. ಕವಾಸಕಿ ಝಡ್ 900 ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲ್ಯಾಂಪ್, ಟಿಎಫ್ ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿಗಳನ್ನು ಹೊಂದಿದೆ.

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಈ ಬೈಕಿನಲ್ಲಿರುವ ಮೂರು ರೈಡಿಂಗ್ ಮೋಡ್‌ಗಳು ಬೈಕಿಗೆ ಅಗತ್ಯವಿರುವ ಪವರ್ ನೀಡುತ್ತವೆ. ಈ ಬೈಕ್ ಕಾರುಗಳಲ್ಲಿರುವಂತಹ ಟ್ರಾಕ್ಷನ್ ಕಂಟ್ರೋಲ್ ನಂತಹ ಫೀಚರ್ ಗಳನ್ನು ಹೊಂದಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಈ ಕವಾಸಕಿ ಬೈಕ್ ಅನ್ನು ಗ್ರೇ ಬ್ಲಾಕ್, ಲೈಮ್ ಗ್ರೀನ್ ಬ್ಲಾಕ್, ವೈಟ್ ಬ್ಲಾಕ್ ಹಾಗೂ ಗ್ಲಾಸ್ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುರೋ 5 ಎಂಜಿನ್ ನೊಂದಿಗೆ ಮಾರಾಟ ಮಾಡಲಾಗುವುದು.

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಕವಾಸಕಿ ಝಡ್ 900 ಬೈಕಿನಲ್ಲಿ ಅಳವಡಿಸಲಾಗಿರುವ 948 ಸಿಸಿಯ ಎಂಜಿನ್ 123 ಬಿಹೆಚ್‌ಪಿ ಪವರ್ ಹಾಗೂ 98.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಅನ್ನು ಭಾರತದಲ್ಲಿ ಇನ್ನೂ ಬಿಡುಗಡೆಗೊಳಿಸಿಲ್ಲ. ಈ ಬೈಕ್ ಮುಂದಿನ ವರ್ಷ ಭಾರತದಲ್ಲಿ ಬಿಎಸ್ 6 ಎಂಜಿನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಪ್ರತಿ ಗಂಟೆಗೆ 240 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡ್ ಮೊನೊಶಾಕ್ ಸಸ್ಪೆಂಷನ್ ಗಳನ್ನು ಅಳವಡಿಸಲಾಗಿದೆ.

ಕವಾಸಕಿ ಝಡ್ 900 ಬೈಕ್ ಚಾಲನೆ ಮಾಡಿದ ಇಮ್ರಾನ್ ಹಶ್ಮಿ

ಈ ಬೈಕ್ 17 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿದ್ದು, ಲಾಂಗ್ ರೈಡ್ ಗಳಿಗೆ ಸಾಕಷ್ಟು ಇಂಧನವನ್ನು ಒದಗಿಸುತ್ತದೆ. ಕವಾಸಕಿ ಕಂಪನಿಯು ಈ ಬೈಕ್ ಅನ್ನು 2017ರಿಂದ ಉತ್ಪಾದಿಸುತ್ತಿದೆ. ಝಡ್ 900, ಕವಾಸಕಿ ಕಂಪನಿಯ ಅತ್ಯಂತ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

Most Read Articles

Kannada
English summary
Bollywood actor Emran Hashmi seen while riding Kawasaki Z900 bike. Read in Kannada.
Story first published: Tuesday, August 11, 2020, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X