ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಲ್ಯಾಂಡ್ ರೋವರ್ ಕಂಪನಿಯು ಐಕಾನಿಕ್ ಡಿಫೆಂಡರ್ ಆಪ್-ರೋಡ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಿದ ಬಳಿಕ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಮೆಚ್ಚಿನ ಆಯ್ಕೆಯಾಗಿದೆ. ಇತ್ತೀಚೆಗೆ ಬಾಲಿವುಡ್ ನಟ ಹಾಗೂ ರಾಜಕಾರಣಿ ಸನ್ನಿ ಡಿಯೋಲ್​ ಅವರು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‍ಯುವಿಯನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ನಟ ಸನ್ನಿ ಡಿಯೋಲ್​ ಅವರು ಖರೀದಿಸಿದ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‍ಯುವಿಯು ಬಿಳಿ ಬಣ್ಣವನ್ನು ಹೊಂದಿದೆ. ಕುತೂಹಲಕಾರಿಯಾಗಿ, ಡಿಯೋಲ್ ಕುಟುಂಬವು ಲ್ಯಾಂಡ್ ರೋವರ್ ರೇಂಜ್ ರೋವರ್‌ಗಳ ಅಭಿಮಾನಿಗಳಾಗಿದ್ದಾರೆ. ಡಿಯೋಲ್ ಕುಟುಂಬವು ವಿವಿಧ ತಲೆಮಾರುಗಳಿಂದ ಹಲವಾರು ಮಾದರಿಗಳನ್ನು ಹೊಂದಿದೆ. ನಟ ಖರೀದಿಸಿದ ಮಾದರಿ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿಯ ಟಾಪ್-ಎಂಡ್ ಆವೃತ್ತಿಯಾಗಿದೆ. ಇದರ ಬೆಲೆ ರೂ.1 ಕೋಟಿಗೂ ಹೆಚ್ಚು ಆಗಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿಯು ತನ್ನ ಗಾತ್ರದಿಂದ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ 110 ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ.ಬಾನೆಟ್‌ನಲ್ಲಿರುವ ಲೈನ್ ಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಬಾನೆಟ್‌ನ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ದಪ್ಪವಾಗಿರುವ ಡಿಫೆಂಡರ್ ಬ್ಯಾಡ್ಜ್ ಅಳವಡಿಸಲಾಗಿದೆ. ಈ ಎಸ್‌ಯುವಿಯಲ್ಲಿ 20 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದೆ. ಲೋ ಎಂಡ್ ಮಾದರಿಯಲ್ಲಿ 19 ಇಂಚಿನ ವ್ಹೀಲ್'ಗಳನ್ನು ನೀಡಲಾಗುತ್ತದೆ. ಡಿಫೆಂಡರ್‌ ಎಸ್‌ಯುವಿಯ ಹೊರಭಾಗದಲ್ಲಿ ಒಟ್ಟು ಆರು ಕ್ಯಾಮೆರಾ ಹಾಗೂ ಸುತ್ತಲೂ ಸೆನ್ಸಾರ್'ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟವನ್ನು ಹೊಂದಿದ್ದು, ಆಫ್ ರೋಡಿಂಗ್ ನಲ್ಲಿ ನೆರವಾಗುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಎಸ್‍ಯುವಿಯ ಬೂಟ್‌ನಲ್ಲಿ ಹೆಚ್ಚುವರಿ ಲಗೇಜ್ ಇದ್ದರೆ ಮಿರರ್ ಮೂಲಕ ಹಿಂದೆ ನೋಡಲು ಸಾಧ್ಯವಾಗದಿದ್ದರೆ ಈ ಫೀಚರ್ ನೆರವಿಗೆ ಬರುತ್ತದೆ. ಈ ಎಸ್‌ಯುವಿಯು ಸುಮಾರು 218 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಡಿಫೆಂಡರ್ ಎಸ್‌ಯುವಿಯು ಏರ್ ಸಸ್ಪೆಂಷನ್ ಹೊಂದಿರುವುದರಿಂದ ಆಫ್-ರೋಡ್ ಮೋಡ್‌ನಲ್ಲಿ ಎತ್ತರವನ್ನು 291 ಎಂಎಂಗಳವರೆಗೆ ಹೆಚ್ಚಿಸಬಹುದು. ಈ ಎಸ್‌ಯುವಿಯ ಹಿಂಭಾಗದಲ್ಲಿ ಟೇಲ್‌ಲೈಟ್‌ಗಳಿಗಾಗಿ ಹೊಸ ವಿನ್ಯಾಸವನ್ನು ನೀಡಲಾಗಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಡಿಫೆಂಡರ್ 110 ಎಸ್‌ಯುವಿಯಲ್ಲಿ ಒಟ್ಟು 14 ಯುಎಸ್‌ಬಿ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೂಟ್‌ನಲ್ಲಿರುವ 230 ವೋಲ್ಟ್ ಚಾರ್ಜರ್ ಸಹ ಸೇರಿದೆ. ಈ ಚಾರ್ಜರ್ ಮೂಲಕ ಲ್ಯಾಪ್‌ಟಾಪ್, ಸ್ಪೀಕರ್ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳನ್ನು ಚಾರ್ಜ್ ಮಾಡಬಹುದು. ಟಾಪ್ ಎಂಡ್ ಮಾದರಿಯು ವೆಂಟಿಲೇಟೆಡ್ ಆಗಿದ್ದು, ಡ್ರೈವರ್ ಹಾಗೂ ಪ್ರಯಾಣಿಕರ ಸೀಟುಗಳಲ್ಲಿ ಮೆಮೊರಿ ಫಂಕ್ಷನ್ ಹೊಂದಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಟಚ್ ರೆಸ್ಪಾನ್ಸ್ ಉತ್ತಮವಾಗಿದ್ದು, ಯಾವುದೇ ವಿಳಂಬವಾಗುವುದಿಲ್ಲ. ಈ ಎಸ್‌ಯುವಿಯಲ್ಲಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಸ್‌ಯುವಿಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಈ ಎಸ್‌ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಂ, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್ ಸೆನ್ಸಿಂಗ್, ಡ್ರೈವರ್ ಕಂಡಿಷನ್ ಮಾನಿಟರಿಂಗ್, ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿ‌ಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್'ಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್'ನೊಂದಿಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ. ಡಿಫೆಂಡರ್ 90 ಎಸ್‌ಯುವಿಯ ಡೀಸೆಲ್ ಆವೃತ್ತಿಯು6.7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಇನ್ನು ಡಿಫೆಂಡರ್ 110 ಎಸ್‌ಯುವಿಯ ಡೀಸೆಲ್ ಆವೃತ್ತಿಯು 7 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಡೀಸೆಲ್ ಎಂಜಿನ್ ಹೊಂದಿರುವ 90 ಹಾಗೂ 110 ಎರಡೂ ಮಾದರಿಗಳ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 191 ಕಿ.ಮೀಗಳಿಗೆ ಎಲೆಕ್ಟ್ರಾನಿಕ್ ಆಗಿ ಸೀಮಿತಗೊಳಿಸಲಾಗಿದೆ. ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯು ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಹೊಂದಿದೆ.

ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿ ಖರೀದಿಸಿದ ನಟ ಸನ್ನಿ ಡಿಯೋಲ್​

ಈ ಫೀಚರ್ ಗ್ರಾಹಕರಿಗೆ ಜನರಲ್ ಡ್ರೈವಿಂಗ್, ಗ್ರಾಸ್, ಗ್ರಾವೆಲ್, ಗ್ರಾಸ್, ಸ್ನೋ, ಮಡ್ ಅಂಡ್ ರಟ್ಸ್, ಸ್ಯಾಂಡ್, ರಾಕ್ ಕ್ರಾಲ್ ಹಾಗೂ ವೇಡ್ ಎಂಬ ವಿವಿಧ ಡ್ರೈವಿಂಗ್ ಮೋಡ್'ಗಳನ್ನು ನೀಡುತ್ತದೆ. ಡಿಫೆಂಡರ್ ಎಸ್‌ಯುವಿಯು 900 ಎಂಎಂವರೆಗಿನ ನೀರಿನಲ್ಲಿ ಸಾಗುತ್ತದೆ. ಆಫ್-ರೋಡ್ ಮೋಡ್‌ನಲ್ಲಿ ಚಾಲನೆ ಮಾಡುವಾಗ ಏರ್ ಸಸ್ಪೆಂಷನ್'ನಿಂದಾಗಿ ಎಸ್‌ಯುವಿ ಎತ್ತರದಲ್ಲಿರುವ ಕಾರಣಕ್ಕೆ ಸ್ವಲ್ಪ ಪ್ರಮಾಣದ ಬಾಡಿ ರೋಲ್ ಇರುತ್ತದೆ.

Most Read Articles

Kannada
English summary
Bollywood actor sunny deol buys new land rover defender 110 suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X