ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಚಾರ್ಜಿಂಗ್ ಆಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡಿದ್ದರಿಂದ, ಕುಟುಂಬವೊಂದು ಭಾರೀ ಪ್ರಮಾದದಿಂದ ತಪ್ಪಿಸಿಕೊಂಡಿದೆ.

By Manoj B.k

ಚಾರ್ಜಿಂಗ್ ಆಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡಿದ್ದರಿಂದ, ಕುಟುಂಬವೊಂದು ಭಾರೀ ಪ್ರಮಾದದಿಂದ ತಪ್ಪಿಸಿಕೊಂಡಿದೆ. ಏಳು ಗಂಟೆಗಳ ಕಾಲ ಚಾರ್ಜಿಂಗ್ ಇರಿಸಿದ ಕಾರಣ ಸ್ಕೂಟರ್ ಚಾರ್ಜಿಂಗ್ ಸಿಸ್ಟಮ್‍ನಲ್ಲಿ ಬೆಂಕಿಯು ಕಾಣಿಸಿಕೊಂಡು ಭಾರೀ ಸ್ಪೋಟಕ್ಕೆ ಕಾರಣವಾಗಿದೆ. ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ ಸಿಸಿಟಿವಿಯಲ್ಲಿ ಈ ದೃಶ್ಯವು ರೆಕಾರ್ಡ್ ಆಗಿದೆ.

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಬೆಂಕಿ ಹೊತ್ತಿಕೊಳ್ಳಲು ಶುರುವಾಗುವ ಮುನ್ನ ಎಲೆಕ್ಟ್ರಿಕ್ ಸ್ಕೂಟರ್‍‍ನಿಂದ ಸಣ್ಣ ಶಬ್ದ ಮತ್ತು ಹೊಗೆ ಬರುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಚಿಟ್‍‍ಚಿಟ್ ಎಂದು ಶಬ್ದ ಕೇಳಿಸಿದ ತಕ್ಷಣವೇ ಮನೆಯಲಿದ್ದ ವ್ಯಕ್ತಿ, ತನ್ನ ಮಗಳು ಮತ್ತು ನಾಯಿಯು ಒಂದು ಕ್ಷಣ ಬೆದರಿದರು.

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಬೆಂಕಿ ಉರಿಯುವುದನ್ನು ಮೊದಲೇ ಗುರುತಿಸಿದ ಆ ವ್ಯಕ್ತಿಯು ತಕ್ಷಣವೇ ಚಾರ್ಜಿಂಗ್ ಪ್ಲಗ್ ಅನ್ನು ತೆಗೆದುಬಿಟ್ಟರು. ಆದರೆ, ಆಗಲೇ ಸ್ಕೂಟರ್‍‍ನ ಎಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ಬೆಂಕಿಯ ಉರಿ ಮತ್ತು ಹೊಗೆಯು ಶುರುವಾದ ಕಾರಣ ಭಾರೀ ಸ್ಪೋಟವು ಸಂಭವಿಸಿದೆ.

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಆದರೇ, ಚಾರ್ಜಿಂಗ್ ಪ್ಲಗ್ ತೆಗೆದುಹಾಕಿದ ನಂತರ, ಮನೆಯಲ್ಲಿದ್ದ ಮೂವರು ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ದೇವರ ದಯೆಯಿಂದ ಈ ಪ್ರಮಾದದಲ್ಲಿ ಯಾರಿಗೂ ಯಾವ ಹಾನಿಯು ನಡೆಯಲಿಲ್ಲ. ಅಗ್ನಿಮಾಪಕ ಸಿಬ್ಬಂದಿಯು ತಕ್ಷಣವೇ ಸ್ಥಳಕ್ಕೆ ಬಂದು ಬೆಂಕಿಯನ್ನು ಆರಿಸಿದ್ದಾರೆ.

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಈ ಸಂಘಟನೆಯು ಚೆನ್ನೈ‍‍ನಲ್ಲಿ ಸಂಭವಿಸಿದೆ. ಸ್ಕೂಟರ್‍‍ನ ಯಜಮಾನ ಜಾವೊ ಎಂದು ಗುರುತಿಸಲಾಗಿದೆ. ಈ ಘಟನೆಯ ಬಗ್ಗೆ ಕಾನೂನುಬದ್ಧವಾದ ವಿಚಾರಣೆಯು ನಡೆಯಬೇಕೆಂದು ಆದೇಶಿಸಲಾಗಿದೆ.

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಈ ಸ್ಕೂಟರ್ ಅನ್ನು ಖರೀದಿ ಮಾಡಿದಾಗ ಇದಕ್ಕೆ ಸುಮಾರು 6 ರಿಂದ 12 ಗಂಟೆಯ ಸಮಯದ ವರೆಗು ಚಾರ್ಜಿಂಗ್ ಮಾಡಬೇಕೆಂದು ಹೇಳಿದ್ದರು. ಆದರೇ 7 ಗಂಟೆಯ ಅವಧಿಯಲ್ಲೆ ಸ್ಕೂಟರ್ ಹೀಗೆ ಸ್ಪೋಟಗೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಚಾರ್ಜಿಂಗ್ ಸಮಯದಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ನ ವೀಡಿಯೊ ಇಲ್ಲಿದೆ ನೋಡಿ..

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ನೂರರಲ್ಲಿ ಶೇ.90ರಷ್ಟು ವಾಹನ ಮಾಲೀಕರಲ್ಲಿ ಈ ಅನುಮಾನ ಇದ್ದೆ ಇರುತ್ತದೆ. ಆದ್ರೆ ಅದು ವಾಹನ ಎಂಜಿನ್ ಸಮಸ್ಯೆಯಾಗಲಿ ಅಥವಾ ನಿಮ್ಮ ಚಾಲನಾ ಶೈಲಿಯ ಪರಿಣಾಮ ಅಲ್ಲವೇ ಅಲ್ಲ. ಸಮಸ್ಯೆ ಇರುವುದು ಪೆಟ್ರೋಲ್ ಬಂಕ್‌ಗಳಲ್ಲಿ ಅಂದ್ರೆ ನೀವು ನಂಬಲೇಬೇಕು.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಹಾಗಾದ್ರೆ, ನೀವು ಪೆಟ್ರೋಲ್ ಬಂಕ್‌ಗೆ ಹೋಗುವ ಮುನ್ನ ಸ್ಟೋರಿಯನ್ನು ಒಮ್ಮೆ ಪೂರ್ತಿಯಾಗಿ ಓದಲೇಬೇಕು. ಯಾಕೇಂದ್ರೆ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ಹೇಗೆಲ್ಲಾ ಯಾಮಾರಿಸುತ್ತಾರೆ ಅದನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಆಗ ನಿಮಗೆ ನಿಮ್ಮ ವಾಹನ ಯಾಕೆ ಇಷ್ಟು ಕಡಿಮೆ ಮೈಲೇಜ್ ನೀಡುತ್ತೆ ಎನ್ನುವುದು ಸಂಪೂರ್ಣವಾಗಿ ಅರ್ಥವಾಗಲಿದೆ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಪೆಟ್ರೋಲ್ ಬಂಕ್‌ಗಳಲ್ಲಿ ನಾವು ಎಷ್ಟೇ ಎಚ್ಚರ ವಹಿಸಿದ್ರು ಒಂದಲ್ಲಾ ಒಂದು ರೀತಿಯ ತಂತ್ರಜ್ಞಾನವನ್ನು ಉಪಯೋಗಿ ಪೆಟ್ರೋಲ್‌ ಪ್ರಮಾಣದಲ್ಲಿ ಗ್ರಾಹಕರಿಗೆ ಯಾಮಾರಿಸುವ ಬಂಕ್ ಮಾಲೀಕರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹೇಗಿರುತ್ತೆ ಹೇಳಿ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಹೌದು, ಹೈದ್ರಾಬಾದ್‌ನಲ್ಲಿ ಲೀಗಲ್ ಮೆಟ್ರೊಲಜಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಅಂಕಿಅಂಶಗಳಲ್ಲಿ ತೊರಿಸುವ ಪ್ರಮಾಣಕ್ಕಿಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಪೆಟ್ರೋಲ್ ಬಂಕ್‌ಗಳ ಔಟ್‌ಲೆಟ್‌ಗಳಲ್ಲಿ ಇಂಧನ ತುಂಬಿಸಿದ ಲೀಗಲ್ ಮೆಟ್ರೊಲಜಿ ಅಧಿಕಾರಿಗಳು 7ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಕನಿಷ್ಠ 40ಎಂಎಲ್ ನಿಂದ 100 ಎಂಎಲ್ ವರೆಗೆ ಇಂಧನ ಪ್ರಮಾಣವನ್ನು ತಪ್ಪಾಗಿ ತೊರಿಸಿ ದೋಖಾ ಮಾಡಲಾಗುತ್ತಿದೆ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಇದು ಕೇವಲ ಹೈದ್ರಾಬಾದ್‌ನಲ್ಲಿರುವ ಸಮಸ್ಯೆಯಲ್ಲ. ನಮ್ಮ ಬೆಂಗಳೂರಿನಲ್ಲೂ ಬಹುತೇಕ ಪೆಟ್ರೋಲ್ ಬಂಕ್‌ಗಳು ಇದೇ ರೀತಿಯಾಗಿ ಗ್ರಾಹಕರನ್ನು ಮೋಸಗೊಳಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದ್ರೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹಿಡಿತದಲ್ಲಿರುವ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ಹಗಲು ದರೋಡೆಯನ್ನು ತಡೆಯುವವರು ಬರಬೇಕಿದೆ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಕಳೆದ ತಿಂಗಳ ಹಿಂದಷ್ಟೇ ಈ ಬಗ್ಗೆ ನಾವು ಒಂದು ವರದಿ ಮಾಡಿದ್ದು ನಿಮಗೆ ನೆನಪಿರಬಹುದು. ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಒಂದರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರೊಬ್ಬರು ಪೆಟ್ರೋಲ್ ಪ್ರಮಾಣದಲ್ಲಿ ಮೋಸಗೊಳಿಸುತ್ತಿರುವ ಡೀಲರ್ಸ್ ಬಗ್ಗೆ ಸಾಕ್ಷಿ ಸಮೇತ ಪೆಟ್ರೋಲ್ ಕಳ್ಳಾಟವನ್ನು ಬಯಲು ಮಾಡಿದ್ದರು.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಇದು ಹೊಸ ಸಮಸ್ಯೆ ಏನು ಅಲ್ಲಾ. ಆದ್ರೆ ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ಗೊತ್ತಿದ್ರು ಸಹ ಕಣ್ಮುಚ್ಚಿ ಕುಳಿತಿರುವುದು ಮಾತ್ರ ದುರಷ್ಟಕರ. ಯಾಕೆಂದ್ರೆ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನ ಸವಾರರಿಗೆ ಆಗುತ್ತಿರುವ ಮೋಸ ಮಾತ್ರ ಅಷ್ಟಿಷ್ಟಲ್ಲ.

ವಾಹನಗಳ ಮೈಲೇಜ್ ಕಡಿತವಾಗಲು ಅಸಲಿ ಕಾರಣ ಏನು?

ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಪೆಟ್ರೋಲ್ ಬಂಕ್‌ಗಳ ಔಟ್‌ಲೆಟ್‌ಗಳಲ್ಲಿ ಇಂಧನ ತುಂಬಿಸಿದ ಲೀಗಲ್ ಮೆಟ್ರೊಲಜಿ ಅಧಿಕಾರಿಗಳು 7ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಕನಿಷ್ಠ 40ಎಂಎಲ್ ನಿಂದ 100 ಎಂಎಲ್ ವರೆಗೆ ಇಂಧನ ಪ್ರಮಾಣವನ್ನು ತಪ್ಪಾಗಿ ತೊರಿಸಿ ದೋಖಾ ಮಾಡಲಾಗುತ್ತಿದೆ.

ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು?

ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತೆ ಕಳ್ಳ ದಂಧೆ

ಹೌದು.. ಇದು ನಿಮಗೆ ನಂಬಲು ಸಾಧ್ಯವಾಗದಿದ್ದರು ನಿಜ. ಕಳೆದ ತಿಂಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಎಸ್‌ಐಟಿ ಅಧಿಕಾರಿಗಳು ಗ್ರಾಹಕರ ದೂರಿನ ಮೇಲೆ ನಡೆಸಿದ ದಾಳಿ ವೇಳೆ ಪೆಟ್ರೋಲ್ ಬಂಕ್‌ಗಳಲ್ಲಿ ನೂರಾರು ರಿಮೋಟ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು?

ರಿಮೋಟ್ ಮೂಲಕ ಪೆಟ್ರೋಲ್ ಬಂಕ್‌ನ ಫ್ಯೂಲ್ ಯೂನಿಟ್‌ಗಳನ್ನು ನಿಯಂತ್ರಿಸುವ ಮಾಲೀಕರು ಬೈಕ್ ಸವಾರರಗಿಂತ 1 ಸಾವಿರ, 2 ಸಾವಿರ ರೂಪಾಯಿ ಲೆಕ್ಕದಲ್ಲಿ ಡೀಸೆಲ್, ಪೆಟ್ರೋಲ್ ತುಂಬಿಸುವ ಕಾರು ಮಾಲೀಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಾರೆ.

Most Read Articles

Kannada
English summary
Brand new electric scooter bursts in flames after it was charged for seven hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X