ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ಬುಗಾಟ್ಟಿ ಚಿರೋನ್ ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಬುಗಾಟ್ಟಿ ಚಿರೋನ್ ಕಾರ್ ಅನ್ನು ಹೈಪರ್ ಕಾರ್ ಆವೃತ್ತಿಯಲ್ಲಿ ನಿರ್ಮಿಸಿರುವ ಕಾರಣಕ್ಕೆ ವಿಶ್ವಾದ್ಯಂತ ಸೀಮಿತ ಸಂಖ್ಯೆಯ ಕಾರುಗಳನ್ನು ಮಾತ್ರ ಕಾಣಬಹುದು. ಆಧುನಿಕ ಬುಗಾಟ್ಟಿ ಕಾರುಗಳು ಭಾರತದಲ್ಲಿ ಕಂಡು ಬರುವುದಿಲ್ಲ. ಆದರೆ ಯುಎಇಯ ರಸ್ತೆಗಳಲ್ಲಿ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ದುಬೈನಲ್ಲಿ ದುಬಾರಿ ಕಾರುಗಳನ್ನು ಮಾತ್ರವಲ್ಲದೇ ವಿಶ್ವದ ದುಬಾರಿ ಬೆಲೆಯ ನಂಬರ್ ಪ್ಲೇಟ್ ಗಳನ್ನು ಸಹ ಕಾಣಬಹುದು. ಮೊ ವ್ಲಾಗ್ಸ್‌ ಎಂಬ ಯೂಟ್ಯೂಬ್ ಚಾನೆಲ್ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿರುವ ಬುಗಾಟ್ಟಿ ಚಿರೋನ್ ದುಬಾರಿ ಬೆಲೆಯ ನಂಬರ್ ಪ್ಲೇಟ್ ಅನ್ನು ಹೊಂದಿದೆ. ವೀಡಿಯೊದಲ್ಲಿರುವ ಚಿರೋನ್ ಸ್ಪೋರ್ಟ್ ಕಾರಿನ ಬೆಲೆ ದುಬೈನಲ್ಲಿ ಕಸ್ಟಮೈಸ್ ಮಾಡಿದ ನಂತರ ರೂ. 25 ಕೋಟಿಗಳಾಗುತ್ತದೆ.

ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ಬುಗಾಟ್ಟಿ ಚಿರೋನ್‌ ಕಾರುಗಳ ಬೆಲೆ ಕಸ್ಟಮೈಸ್ ಮೇಲೆ ಆಧಾರಿತವಾಗಿರುತ್ತದೆ. ಆದರೆ ವೀಡಿಯೊದಲ್ಲಿರುವ ಈ ಕಾರಿನಲ್ಲಿರುವ ಅತ್ಯಂತ ದುಬಾರಿ ವಸ್ತುವೆಂದರೆ ಅದರ ನಂಬರ್ ಪ್ಲೇಟ್. ಈ ನಂಬರ್ ಪ್ಲೇಟಿನ ಬೆಲೆ 7,000,000 ಡಾಲರ್ ಅಂದರೆ ರೂ.52 ಕೋಟಿಗಳಾಗಿದೆ. ಕಾರಿಗಿಂತ ಈ ಕಾರಿನ ನಂಬರ್ ಪ್ಲೇಟಿಗೆ ಎರಡು ಪಟ್ಟು ಹೆಚ್ಚು ಹಣ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ನೋಂದಣಿ ಸಂಖ್ಯೆಯ ಬೆಲೆ ಅದರ ಗಾತ್ರವನ್ನು ಅವಲಂಬಿಸಿರುತ್ತದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ನೋಂದಣಿ ಸಂಖ್ಯೆಯ ಗಾತ್ರ ಚಿಕ್ಕದಾದಷ್ಟು ಅದರ ಬೆಲೆ ಹೆಚ್ಚಾಗುತ್ತದೆ. ಈ ಕಾರು ಕೇವಲ ಒಂದು ಸಂಖ್ಯೆಯನ್ನು ಹೊಂದಿರುವುದರಿಂದ ಅದರ ಬೆಲೆ ದುಬಾರಿಯಾಗಿದೆ. ಈ ಕಾರಿನ ರಿಜಿಸ್ಟ್ರೇಷನ್ ನಂಬರ್ 9 ಆಗಿದೆ.

ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ಈ ರೀತಿಯ ವಿಶಿಷ್ಟ ರೀತಿಯ ರಿಜಿಸ್ಟ್ರೇಷನ್ ನಂಬರ್ ಗಳ ಬೆಲೆ ಹೆಚ್ಚುತ್ತಲೇ ಇದೆ. ಅನೇಕ ಜನರು ಈ ರೀತಿಯ ವಿಶಿಷ್ಟ ನಂಬರ್ ಗಳನ್ನು ಮೊದಲೇ ರಿಜಿಸ್ಟರ್ ಮಾಡಿಸಿ ನಂತರ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಅಂತಹ ನಂಬರ್ ಗಳ ಬಿಡ್‌ಗಳನ್ನು ಸಹ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸ್ಥಳದಲ್ಲಿ ಆಯೋಜಿಸಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ದುಬೈನಲ್ಲಿ ಈ ನಂಬರ್ ಪ್ಲೇಟಿನ ಬೆಲೆ ರೂ.52 ಕೋಟಿಗಳಾಗಿದ್ದರೂ, ಪ್ರಪಂಚದಲ್ಲಿ ಅದಕ್ಕಿಂತಲೂ ಹೆಚ್ಚು ದುಬಾರಿ ಬೆಲೆಯ ನಂಬರ್ ಪ್ಲೇಟ್ ಗಳಿವೆ. ಬ್ರಿಟನ್ನಿನಲ್ಲಿ ಎಫ್ 1 ಎಂಬ ನಂಬರ್ ಪ್ಲೇಟ್ ಪಡೆಯಲು ಸುಮಾರು ರೂ.132 ಕೋಟಿ ನೀಡಲಾಗಿತ್ತು. ಈ ನಂಬರ್ ಪ್ಲೇಟ್ ಅನ್ನು ಬುಗಾಟ್ಟಿ ಕಾರಿನ ಮೇಲೆ ಅಳವಡಿಸಲಾಗಿದೆ.

ಕಾರಿನ ಬೆಲೆಗಿಂತ ಈ ಕಾರಿನ ನಂಬರ್ ಪ್ಲೇಟ್ ಬೆಲೆಯೇ ಹೆಚ್ಚು

ಕಳೆದ ವರ್ಷ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದವರೊಬ್ಬರು ತಮ್ಮ ನೆಚ್ಚಿನ ನಂಬರ್‌ ಪ್ಲೇಟ್‌ಗಾಗಿ ಸುಮಾರು ರೂ.60 ಕೋಟಿ ನೀಡಿದ್ದರು. ಹರಾಜಿನಲ್ಲಿ ಬಲ್ವಿಂದರ್ ಸಿಂಗ್ ಎಂಬ ಉದ್ಯಮಿ ತಮ್ಮ ಹೊಸ ರೋಲ್ಸ್ ರಾಯ್ಸ್‌ ಕಾರಿಗಾಗಿ ಈ ನಂಬರ್ ಪ್ಲೇಟ್ ಖರೀದಿಸಿದ್ದರು.

Most Read Articles

Kannada
English summary
Bugatti Chiron number plate costlier than the car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X