ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ವಾಹನ ಚಾಲಕರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಭಾರತದಲ್ಲಿ ಪ್ರತಿದಿನ ಹಲವಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಅಪಘಾತಗಳಲ್ಲಿ ಹಲವರು ದುರ್ಮರಣವನ್ನಪ್ಪಿದರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಳ್ಳುತ್ತಾರೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಆದರೆ ಕೆಲವೊಮ್ಮೆ ವಾಹನ ಚಾಲಕರ ಚಾಣಾಕ್ಷತನದಿಂದ ದೊಡ್ಡ ಅಪಘಾತಗಳಾಗುವುದು ತಪ್ಪುತ್ತದೆ. ಇತ್ತೀಚೆಗೆ ಮಧುರೈ ಬಳಿಯ ಚೋಲವಂದನ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಘಟನೆ ನಡೆದಾಗ ಒಬ್ಬ ಪುರುಷ ಹಾಗೂ ಮಹಿಳೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಮೂರು ದಾರಿಗಳ ಜಂಕ್ಷನ್ ಬಳಿ ಬಂದಾಗ ಈ ಘಟನೆ ಸಂಭವಿಸಿದೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಬೈಕ್ ಸವಾರ ರಸ್ತೆಯ ಎಡಭಾಗದಿಂದ ಬಸ್ ಬರುತ್ತಿರುವುದನ್ನು ಗಮನಿಸದೇ ರಸ್ತೆಯ ಮಧ್ಯಕ್ಕೆ ಬಂದಿದ್ದಾನೆ. ಇನ್ನೇನು ಬಸ್ ಬೈಕಿಗೆ ಗುದಿಯುವುದರಲ್ಲಿತ್ತು. ಗಾಬರಿಯಾದ ಬೈಕ್ ಸವಾರನಿಗೆ ಏನು ಮಾಡಬೇಕೆಂದು ತೋಚಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಹೀಗಾಗಿ ರಸ್ತೆಯ ಮಧ್ಯದಲ್ಲಿಯೇ ಬೈಕ್ ನಿಲ್ಲಿಸಿದ್ದಾನೆ. ಬಸ್ ಚಾಲಕನು ಸಕಾಲಕ್ಕೆ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾನೆ. ಇದರಿಂದಾಗಿ ಭೀಕರ ಅಪಘಾತ ಸಂಭವಿಸುವುದು ತಪ್ಪಿದೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಬಸ್ ಹಾಗೂ ಬೈಕ್ ನಡುವೆ ಬಹಳ ಕಡಿಮೆ ಅಂತರವಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಬಸ್ ಚಾಲಕನು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕದಿದ್ದರೆ ದೊಡ್ಡ ಅಪಘಾತ ಸಂಭವಿಸುತ್ತಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಗಮನಿಸಬೇಕಾದ ಸಂಗತಿಯೆಂದರೆ ವೇಗವಾಗಿ ಬರುತ್ತಿರುವ ವಾಹನವನ್ನು ಇದ್ದಕ್ಕಿದ್ದಂತೆ ಬ್ರೇಕ್ ಹಾಕುವುದರಿಂದಲೂ ಅಪಾಯಗಳು ಸಂಭವಿಸುತ್ತವೆ. ವಾಹನವು ಚಾಲಕನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಈ ರೀತಿಯ ಘಟನೆಗಳು ಸಂಭವಿಸಿಲ್ಲ. ಭಾರತದ ರಸ್ತೆಗಳಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಪಾದಚಾರಿಗಳು, ಇತರ ವಾಹನ ಚಾಲಕರು ಅಥವಾ ಜಾನುವಾರುಗಳು ಇದ್ದಕ್ಕಿದ್ದಂತೆ ಅಡ್ಡ ಬರಬಹುದು. ವಾಹನವು ಹೆಚ್ಚಿನ ವೇಗದಲ್ಲಿದ್ದರೆ, ವಾಹನವನ್ನು ನಿಯಂತ್ರಿಸಲು, ನಿಲ್ಲಿಸಲು ಕಷ್ಟವಾಗುತ್ತದೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಮಧ್ಯಮ ವೇಗದಲ್ಲಿ ವಾಹನ ಚಾಲನೆ ಮಾಡುವುದರ ಜೊತೆಗೆ ರಸ್ತೆಯ ಬಗ್ಗೆಯೂ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಈ ಘಟನೆಯಲ್ಲಿ ಬೈಕ್ ಸವಾರ ಬಸ್ ಬರುತ್ತಿರುವುದನ್ನು ಗಮನಿಸಿಲ್ಲ. ಅವನು ಬಸ್ ಬರುವುದನ್ನು ಗಮನಿಸಿದ್ದರೆ ಬಸ್ ಬರುವ ಮೊದಲು ಹಾಗೂ ಬಸ್ ಹೋದ ನಂತರ ರಸ್ತೆ ದಾಟಬಹುದಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇದರ ಜೊತೆಗೆ ಬೈಕ್ ಸವಾರ ಬೈಕ್ ಚಾಲನೆ ವೇಳೆ ಗೊಂದಲದಲ್ಲಿದ್ದ. ವಾಹನ ಚಾಲನೆ ಮಾಡುವಾಗ ಯಾವುದೇ ಗೊಂದಲ, ಗಾಬರಿ ಇಲ್ಲದೇ ವಾಹನ ಮಾಡಬೇಕು ಎಂಬುದನ್ನು ಈ ಘಟನೆ ತೋರಿಸುತ್ತದೆ.

ಸಮಯಪ್ರಜ್ಞೆಯಿಂದ ಬೈಕ್ ಸವಾರರ ಪ್ರಾಣ ಉಳಿಸಿದ ಬಸ್ ಚಾಲಕ

ಬೈಕ್ ಸವಾರ ಹಾಗೂ ಹಿಂಬದಿಯ ಸವಾರರು ಹೆಲ್ಮೆಟ್ ಧರಿಸಿಲ್ಲ ಎಂಬುದನ್ನು ಗಮನಿಸಬೇಕು. ಹೆಲ್ಮೆಟ್‌ ಧರಿಸುವುದರಿಂದ ತಲೆಗೆ ಪೆಟ್ಟಾಗುವುದನ್ನು ತಪ್ಪಿಸಬಹುದು. ಹೆಲ್ಮೆಟ್ ನ ಪ್ರಾಮುಖ್ಯತೆ ಬಗ್ಗೆ ಇನ್ನೂ ಅನೇಕ ಜನರಿಗೆ ಅರ್ಥವಾಗಿಲ್ಲ. ಮಧುರೈ ಬಳಿ ನಡೆದ ಈ ಘಟನೆಯ ಬಗ್ಗೆ ಪುಥಿಯಾತಲೈಮುರೈ ವರದಿ ಮಾಡಿದೆ.

Most Read Articles

Kannada
English summary
Bus driver saves life of bike rider and pillion rider. Read in Kannada.
Story first published: Saturday, September 26, 2020, 9:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X