ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಯಾರ ಬಳಿಯೂ ಇಲ್ಲದಂಥ ಐಷಾರಾಮಿ ಕಾರು ಅಥವಾ ಅತಿ ದುಬಾರಿ ಕಾರನ್ನು ಹೊಂದಬೇಕೆಂಬ ಕನಸು ಹಲವು ಸೆಲೆಬ್ರಿಟಿ ಮತ್ತು ಉದ್ಯಮಿಗಳಿಗಿರುತ್ತದೆ. ಇದಕ್ಕಾಗಿ ಅವರು ವಿಶ್ವದ ಅತಿ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಇದೇ ರೀತಿ ದಕ್ಷಿಣ ಭಾರತದ ಪ್ರಸಿದ್ಧ ಉದ್ಯಮಿಯಾಗಿರುವ ಬಾಬಿ ಚೆಮ್ಮನೂರ್ ಅವರಿಗೆ ಕಾರುಗಳ ಕ್ರೇಜ್ ಹೆಚ್ಚಿದೆ. ಬಾಬಿ ಚೆಮ್ಮನೂರ್ ಅವರು ಕೇರಳ ಮೂಲದ ಚೆಮ್ಮನೂರ್ ಜ್ಯುವೆಲ್ಲರ್ಸ್' ಗ್ರೂಪ್ ಮಾಲೀಕರಾಗಿದ್ದಾರೆ. ಇವರ ಬಳಿ ವಿಶ್ವದ ಅತಿ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಈ ಹಿಂದೆ ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿದ್ದರು. ಅವರು ಇತ್ತೀಚೆಗೆ ಭಾರತದ ಮೊದಲ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ಎಸ್‌ಯುವಿ ಇಕ್ಯೂಸಿಯನ್ನು ಖರೀದಿಸಿ ಸುದ್ದಿಯಾಗಿದ್ದರು. ಇದೀಗ ರೇಂಜ್ ರೋವರ್ ವೆಲಾರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಬಾಬಿ ಚೆಮ್ಮನೂರ್ ಅವರು ಚೆಮ್ಮನೂರ್ ಜ್ಯುವೆಲ್ಲರ್ಸ್, ರಿಯಲ್ ಎಸ್ಟೇಟ್, ಹೋಟೆಲ್‌ಗಳು ಮತ್ತು ಇನ್ನೂ ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ರೋಲ್ಸ್‌ ರಾಯ್ಸ್‌ ಅತಿ ದುಬಾರಿ ಕಾರು ಬ್ರ್ಯಾಂಡ್. ಆದರೆ ಬಾಬಿ ಅವರ ಬಳಿ ಇರುವ ರೋಲ್ಸ್‌ ರಾಯ್ಸ್‌ ಚಿನ್ನದ ಲೇಪನದಿಂದ ಮತ್ತಷ್ಟು ಐಷಾರಾಮಿಯಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಇದೇ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಎಲ್‍‍ಡಬ್ಲ್ಯು ಕಾರ್ ಅನ್ನು ಟ್ಯಾಕ್ಸಿಯಾಗಿ ಬದಲಿಸಲಾಗಿದೆ. ಬಾಬಿರವರು ಈ ರೋಲ್ಸ್ ರಾಯ್ಸ್ ಕಾರ್ ಅನ್ನು ಟ್ಯಾಕ್ಸಿ ಮಾಡಲು ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ. ಬಾಬಿರವರು ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರ್ ಅನ್ನು ಕಳೆದ ವರ್ಷ ಖರೀದಿಸಿದ್ದರು. ಸಾಮಾನ್ಯ ಜನರಿಗೆ ರೂ.25 ಸಾವಿರಕ್ಕೆ ಬಾಡಿಗೆಗೆ ನೀಡುತ್ತಾರೆ, ಇದರಲ್ಲಿ ಅವರ ರೆಸಾರ್ಟ್‌ಗಳಲ್ಲಿ 3 ದಿನಗಳ ಕಾಲ ತಂಗಲು ಅವಕಾಶ ಇದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಇನ್ನು ಅವರ ಬಳಿ ಮರ್ಸಿಡಿಸ್ ಬೆಂಝ್ ಇಕ್ಯೂಸಿ, ಡಿಸಿ ಅವಾಂಟಿ, ರೇಂಜ್ ರೋವರ್ ಸ್ಪೋರ್ಟ್ ಸೇರಿದಂತೆ ಇತರ ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ. ಇದರ ಸಾಲಿಗೆ ಇದೀಗ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ಕೂಡ ಸೇರಿದೆ. ಬಾಬಿ ಬಾಬಿ ಚೆಮ್ಮನೂರ್ ಅವರಿಗೆ ಕಾರು ಡ್ರೈವ್ ಮಾಡುವ ಕ್ರೇಜ್ ಕೂಡ ಹೆಚ್ಚಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಇನ್ನು ಉದ್ಯಮಿ ಬಾಬಿ ಚೆಮ್ಮನೂರ್ ಅವರು ಹೊಸ‌ದಾಗಿ ಖರೀದಿಸಿದ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ಇದೇ ವರ್ಷ ಈ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ನವೀಕರಿಸಿದ ಮಾದರಿಯು ಈಗ ಸುಧಾರಿತ ಸ್ಟೈಲಿಂಗ್, ಹೆಚ್ಚು ತಂತ್ರಜ್ಞಾನ ಮತ್ತು ಹೊಸ ಮತ್ತು ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಭಾರತದಲ್ಲಿ 2017ರಿಂದ ಮಾರಾಟಗೊಳ್ಳುತ್ತಿರುವ ಹೊಸ ಕಾರು ಈಗಾಗಲೇ ಹಲವಾರು ಬಾರಿ ನವೀಕರಣವನ್ನು ಪಡೆದುಕೊಂಡಿದೆ. ಈ ಎಸ್‍ಯುವಿಯು 2019ರಿಂದ ಭಾರತದಲ್ಲೇ ನಿರ್ಮಾಣಗೊಳ್ಳುತ್ತಿದೆ. 2021ರ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ಡೀಸೆಲ್ ಆಯ್ಕೆಯನ್ನು ಸಹ ಪಡೆಯುತ್ತದೆ. ಹೊಸ ವೆಲಾರ್ ಹಿಂದಿನ ಮಾದರಿಗೆ ಹೋಲಿಸಿದರೆ ಹಲವಾರು ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಹೊಸ ವೆಲಾರ್ ಮಾದರಿಯು ರೇಂಜ್ ರೋವರ್ ಸರಣಿಯಲ್ಲಿ ತಾಂತ್ರಿಕವಾಗಿ ಸುಧಾರಿತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಈ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಮುಂಭಾಗದಲ್ಲಿ ಹನಿ ಕಾಬ್ ಗ್ರಿಲ್ ಅನ್ನು ಹೊಂದಿದೆ. ಹಿಂಭಾಗವು ಸ್ಲೋಪಿಂಗ್ ರೂಫ್ ರೈಲ್ ಮತ್ತು ಟೈಲ್ ಲ್ಯಾಂಪ್ ಗಳ ಸುತ್ತಲೂ ಮತ್ತು ಸಿಲ್ವರ್ ಅಸ್ಸೆಂಟ್ ಗಳನ್ನು ಹೊಂದಿವೆ, ಈ ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಫ್ಯೂಜಿ ವೈಟ್, ಪೋರ್ಟೊಫಿನೊ ಬ್ಲೂ, ಸಾರ್ಟೋರಿನಿ ಬ್ಲ್ಯಾಕ್ ಮತ್ತು ಸಿಲಿಕಾನ್ ಸಿಲ್ವರ್ ಬಣ್ಣಗಳಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಈ ರೇಂಜ್ ರೋವರ್ ವೆಲಾರ್ ಎಸ್‍ಯುವಿಯಲ್ಲಿ ಹೊಸದಾಗಿ ಡೀಸೆಲ್ ಆಯ್ಕೆಯನ್ನು ಸಹ ಪಡೆದುಕೊಂಡಿದೆ, ಇದು ಇಂಜಿನಿಯಮ್ 2.0-ಲೀಟರ್ ಆಯಿಲ್ ಬರ್ನರ್ ಎಂಜಿನ್ ಆಗಿದೆ. ಈ ಎಂಜಿನ್ 177 ಬಿಹೆಚ್‌ಪಿ ಮತ್ತು 430 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಇದರೊಂದಿಗೆ 2.0-ಲೀಟರ್ ಇಂಜಿನಿಯಮ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಈ ಹೊಸ ಎಸ್‍ಯುವಿಯು ಐಷಾರಾಮಿ ಇಂಟಿರಿಯರ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸ್ಟ್ಯಾಂಡರ್ಡ್ 10-ಇಂಚಿನ ಟಚ್‌ಸ್ಕ್ರೀನ್, 10-ಇಂಚಿನ ಕಡಿಮೆ ಟಚ್‌ಸ್ಕ್ರೀನ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಇಂಟರ್ಫೇಸ್ ಅನ್ನು ಹೊಂದಿದೆ. ಸಿಸ್ಟಮ್ ಅನ್ನು ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರುವ ಈ ವೆಲಾರ್ ಎಸ್‍ಯುವಿ ಮಾದರಿಯು ಎಲ್ಲಾ ಮಾದರಿ ಭೂಪ್ರದೇಶಗಳಲ್ಲೂ ಸರಾಗವಾಗಿ ಸಾಗುತ್ತದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉತ್ತಮ ಆಫ್ ರೋಡ್ ಸಾಮರ್ಥ್ಯವವನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಉದ್ಯಮಿ ಬಾಬಿ ಚೆಮ್ಮನೂರ್

ಹೊಸ ರೇಂಜ್ ರೋವರ್ ವೆಲಾರ್ 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್, ಪಿಬಿ 2.5 ಫಿಲ್ಟರ್‌ನೊಂದಿಗೆ ಕ್ಯಾಬಿನ್ ಏರ್ ಮುಂತಾದ ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಎಸ್‌ಯುವಿ ಸ್ಯಾಟಿನ್ ಕ್ರೋಮ್ ಪ್ಯಾಡಲ್ ಶಿಫ್ಟರ್‌ಗಳು, ಲೆದರ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಸ್ಥಿರ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ. ಈ ರೇಂಜ್ ರೋವರ್ ವೆಲಾರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾಗ್ವಾರ್ ಎಫ್-ಪೇಸ್ ಮತ್ತು ಮರ್ಸಿಡಿಸ್ ಜಿಎಲ್‌ಇ ಕೂಪೆ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ..

Most Read Articles

Kannada
English summary
Businessman boby chemmanur bought new range rover velar luxury suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X