ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಆಫ್ ರೋಡ್ ಕೌಶಲ್ಯ ಪ್ರದರ್ಶನ ಪ್ರದರ್ಶನದಲ್ಲಿ ಯಮಹಾ ಆರ್15 ಬೈಕ್ ಮಾದರಿಯು ಬಲಿಷ್ಠ ಎಂಜಿನ್ ಸಾಮರ್ಥ್ಯದ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದಿದ್ದು, ಕಾರನ್ನು ಎಳೆಯುತ್ತಿರುವ ಬೈಕಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಹೌದು, ಪರ್ಫಾಮೆನ್ಸ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಯಮಹಾ ಯಶಸ್ವಿ ಬೈಕ್ ಮಾದರಿಯಾದ ಆರ್15 ಕೇವಲ ಪರ್ಫಾಮೆನ್ಸ್‌ನಲ್ಲಿ ಮಾತ್ರವಲ್ಲ ಬಲಿಷ್ಠ ಎಂಜಿನ್ ಮತ್ತು ಗುಣಮಟ್ಟದ ಬಾಡಿ ಕಿಟ್ ಸೌಲಭ್ಯದಿಂದಾಗಿ ಹೊಸ ಮೈಲಿಗಲ್ಲಿನತ್ತ ಹೆಜ್ಜೆಯಿಡುತ್ತಿದೆ. ಇದಕ್ಕೆ ಕಾರಣ ಮೊನ್ನೆಯಷ್ಟೇ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲಿ 2,500 ಕೆಜಿ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಲಾಗಿ ಎಳೆಯುವ ಮೂಲಕ ಬೈಕ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿಯೇ ಬೈಕ್ ಮೂಲಕ ಕಾರು ಎಳೆಯುವ ಸ್ಪರ್ಧೆ ಎರ್ಪಡಿಸಿದ್ದ ಯಮಹಾ ಪ್ರಿಯರು ಇದಕ್ಕಾಗಿ ಅಧಿಕ ಎಂಜಿನ್ ಸಾಮರ್ಥ್ಯದ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಆಯ್ಕೆ ಮಾಡಿದ್ದರು.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಸುರಕ್ಷಿತ ಪ್ರದೇಶದಲ್ಲೇ ಶಕ್ತಿ ಪ್ರದರ್ಶನ ನಡೆಸಿದ ಯಮಹಾ ಆರ್15 ಬೈಕ್ ಮಾದರಿಯು ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಹಿಂಭಾಗಕ್ಕೆ ಕಟ್ಟಿಕೊಂಡು ಹೆಚ್ಚುಶ್ರಮವಿಲ್ಲದೆ ಎಳೆದಿದ್ದು ವಿಶೇಷವಾಗಿತ್ತು. ಯಾಕೆಂದ್ರೆ ಕೇವಲ 150 ಸಿಸಿ ಎಂಜಿನ್ ಬೈಕ್ 2,500 ಕೆಜಿ ಕಾರನ್ನು ಎಳೆಯುವುದು ಸಾಮಾನ್ಯವಲ್ಲ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಮತ್ತೊಂದು ಇಂಟ್ರಸ್ಟಿಂಗ್ ಅಂದ್ರೆ ಶಕ್ತಿ ಪ್ರದರ್ಶನಕ್ಕಾಗಿ 2016ರ ಆರ್15 ಮಾದರಿಯನ್ನು ಬಳಕೆ ಮಾಡಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಆರ್15 ವಿ3.0 ವರ್ಷನ್ ಮಾದರಿಯು ಈ ಹಿಂದಿನ ಮಾದರಿಗಿಂತ ಅತಿ ಬಲಿಷ್ಠ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದರಲ್ಲಿ ಆರ್15 ಬೈಕ್ ಮಾದರಿಯು ಕೇವಲ ಒಂದೇ ಕಡೆ ಮುಖವಾಗಿ ಕಾರು ಎಳೆಯುವುದು ಅಷ್ಟೇ ಅಲ್ಲದೇ ವಿರುದ್ಧ ದಿಕ್ಕಿನಲ್ಲೂ ಸ್ಕಾರ್ಪಿಯೋ ಕಾರಿಗೆ ಪೈಪೋಟಿ ನೀಡಿದ್ದಲ್ಲದೇ ಬಲಿಷ್ಠ ಬೈಕ್ ಮಾದರಿ ಎಂಬುವುದನ್ನು ಮತ್ತೊಮ್ಮೆ ನಿರೂಪಿಸಿದೆ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಇನ್ನು ಜಪಾನ್ ಬ್ರಾಂಡ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ಸಂಸ್ಥೆಯು ಕಳೆದ ವರ್ಷ 2018ರ ಆಟೋ ಮೇಳ ವೈಜೆಡ್‍ಎಫ್ ಆರ್15 ವಿ3.0 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿ ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.1.39 ಲಕ್ಷ ಬೆಲೆ ಪಡೆದುಕೊಂಡಿದೆ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಮೂರನೇ ತಲೆಮಾರಿನ ಯಮಹಾ ವೈಝಡ್‌ಎಫ್-ಆರ್15 ವಿ3.0 ಮಾದರಿಯಲ್ಲಿ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದ್ದು, ಈ ಹಿಂದಿನ ವೈಝೆಡ್ಎಫ್-ಆರ್1 ಮತ್ತು ವೈಝೆಡ್ಎಫ್-ಆರ್ 6ನ ಶೈಲಿಯನ್ನೇ ಹೊಂದಿಕೊಂಡಿವೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಶಕ್ತಿಶಾಲಿ ಟ್ಯಾಂಕ್, ರೇಸಿಂಗ್ ಮೆಶಿನ್, ಏರೋಡೈನಾಮಿಕ್ ಫೇರಿಂಗ್ ಜತೆಗೆ YZF-R1 ಸೂಪರ್ ಬೈಕ್‌ನಿಂದಲೂ ಕೆಲವೊಂದು ವಿನ್ಯಾಸವನ್ನು ಎರವಲು ಪಡೆಯಲಾಗಿದ್ದು, ಬೈಕಿನ ಮುಂಭಾಗದ ಕೊನೆಯಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ ಲೈಟ್ ಅನ್ನು ಹೊಂದಿದೆ.

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಈ ಹೊಸ ಮಫ್ಲರ್ ಡಿಸೈನ್ ಈ ಬೈಕಿಗೆ ಆಕರ್ಷಕವಾದ ಲುಕ್ ನೀಡಿದ್ದು, ಬೈಕಿನ ಸುರಕ್ಷತೆಗಾಗಿ ಮುಂಭಾಗದ ಫೋರ್ಕ್ ತಲೆಕೆಳಗಾಗಿ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಸುರಕ್ಷತೆಯ ಫೀಚರ್ ಅನ್ನು ಪಡೆದಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಎಂಜಿನ್ ಸಾಮರ್ಥ್ಯ

ಹೊಸದಾಗಿ ಬಿಡುಗಡೆಗೊಂಡ ವೈಝೆಡ್ಎಫ್-ಆರ್15 ವಿ3.0 ಬೈಕ್‌ಗಳು 155-ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಮತ್ತು ಆಯ್ಕೆ ರೂಪದಲ್ಲಿ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದೆ. ಇದರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, 19.03-ಬಿಹೆಚ್ ಪಿ, 15-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
Read more on ಯಮಹಾ yamaha
English summary
Can a 150cc Yamaha R15 V2 Pull a 2.5 Tonnes Mahindra Scorpio SUV?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X