ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಾರು ಖರೀದಿಸ ಬಯಸುವ 85% ನಷ್ಟು ಗ್ರಾಹಕರು ಇತರ ಸಂಗತಿಗಳಂತೆ ಬಣ್ಣಗಳಿಗೂ ಆದ್ಯತೆ ನೀಡುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅನೇಕ ಜನರು ಕಾರುಗಳನ್ನು ಕಾರನ್ನು ಕೇವಲ ಸಾರಿಗೆ ಸಾಧನವಾಗಿ ಮಾತ್ರ ನೋಡುವುದಿಲ್ಲ ಬದಲಿಗೆ ತಮ್ಮ ವ್ಯಕ್ತಿತ್ವದ ಪ್ರತಿಬಿಂಬವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕೆ ಅವರು ಕಾರಿನ ಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಾರಿನ ಬಣ್ಣದಿಂದ ಕಾರು ಮಾಲೀಕರ ಗುಣ ಲಕ್ಷಣಗಳನ್ನು ನಿರ್ಧರಿಸಬಹುದು ಎಂದು ಹೇಳಲಾಗಿದೆ. ಹಲವು ಕಾರು ಮಾಲೀಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶವು ಕಂಡು ಬಂದಿದೆ. ಯಾವ ಯಾವ ಬಣ್ಣಗಳು ಕಾರು ಮಾಲೀಕರ ಗುಣ ಲಕ್ಷಣಗಳನ್ನು ತಿಳಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಪ್ಪು

ಕಪ್ಪು ಬಣ್ಣವು ಐಷಾರಾಮಿಗೆ ಸಂಬಂಧಿಸಿದೆ. ಕಪ್ಪು ಬಣ್ಣವನ್ನು ಶಕ್ತಿಯೊಂದಿಗೂ ಹೋಲಿಸಬಹುದು. ಕಪ್ಪು ಬಣ್ಣದ ಕಾರು ಮಾಲೀಕರು ಹೆಚ್ಚು ಆತ್ಮ ವಿಶ್ವಾಸ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಕಪ್ಪು ಬಣ್ಣದ ಕಾರು ಮಾಲೀಕರನ್ನು ಶಕ್ತಿ ಶಾಲಿಗಳು ಹಾಗೂ ಯಶಸ್ವಿಗಳು ಎಂದು ಪರಿಗಣಿಸಲಾಗುತ್ತದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಪ್ಪು ಬಣ್ಣದ ಕಾರು ಮಾಲೀಕರ ಚಾಲನಾ ಶೈಲಿ ವಿಭಿನ್ನವಾಗಿರುತ್ತದೆ. ಅವರು ರಸ್ತೆಯಲ್ಲಿ ಸೊಕ್ಕಿನ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಕಪ್ಪು ಬಣ್ಣದ ಕಾರು ಮಾಲೀಕರು ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಬೂದು (ಗ್ರೇ)

ಬೂದು ಬಣ್ಣವು ಮಾನಸಿಕ ತಟಸ್ಥತೆಗೆ ಸಂಬಂಧಿಸಿದೆ. ಇದು ಸ್ಥಿರತೆ, ಘನ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಬೂದು ಬಣ್ಣದ ಕಾರು ಮಾಲೀಕರು ಪ್ರಬುದ್ಧವಾಗಿ ಹಾಗೂ ಉದಾರವಾಗಿರುತ್ತಾರೆ ಎಂದು ಹೇಳಲಾಗಿದೆ. ಬೂದು ಬಣ್ಣದ ಕಾರು ಮಾಲೀಕರ ಚಾಲನಾ ಶೈಲಿಯೂ ಉತ್ತಮವಾಗಿರುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಬೂದು ಬಣ್ಣದ ಕಾರು ಮಾಲೀಕರು ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡುವುದರ ಜೊತೆಗೆ ಜವಾಬ್ದಾರಿಯುತವಾಗಿಯೂ ಕಾರ್ಯನಿರ್ವಹಿಸುತ್ತಾರೆ. ರಸ್ತೆಯಲ್ಲಿ ಇತರರ ಗಮನವನ್ನು ಸೆಳೆಯಲು ಅವರು ಇತರರ ಜೊತೆಗೆ ವಾದಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಲಾಗಿದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ನೀಲಿ

ನೀಲಿ ಬಣ್ಣವು ಶಾಂತತೆಗೆ ಸಂಬಂಧಿಸಿದೆ. ಈ ಬಣ್ಣವನ್ನು ಕೂಲ್ ಎಂದು ಹೇಳ ಬಹುದು. ನೀಲಿ ಬಣ್ಣದ ಕಾರ್ ಅನ್ನು ಹೊಂದಿರುವವರು ಗಡಿಬಿಡಿಯನ್ನು ದ್ವೇಷಿಸಬಹುದು. ಇದೇ ವೇಳೆ ಅವರು ಬುದ್ಧಿವಂತರು ಹಾಗೂ ಸೃಜನ ಶೀಲರು ಆಗಿರುತ್ತಾರೆ ಎಂದು ಹೇಳಲಾಗಿದೆ. ಅವರ ಚಾಲನಾ ಶೈಲಿ ಆತ್ಮವಿಶ್ವಾಸದಿಂದ ಇರುತ್ತದೆ. ಅವರು ರಸ್ತೆಯಲ್ಲಿ ಇತರರೊಂದಿಗೆ ಸಂಘರ್ಷವನ್ನು ಇಷ್ಟಪಡುವುದಿಲ್ಲ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕೆಂಪು

ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೆಚ್ಚು ಕೆಂಪು ಆದಷ್ಟು ಸಂಬಂಧವು ಮತ್ತಷ್ಟು ಬಲಿಷ್ಟವಾಗುತ್ತದೆ. ಕೆಂಪು ಅತಿ ಹೆಚ್ಚು ಬೇಡಿಕೆಯಿರುವ ಬಣ್ಣಗಳಲ್ಲಿ ಒಂದಾಗಿದೆ. ಕೆಂಪು ಬಣ್ಣದ ಕಾರು ಹೊಂದಿರುವವರು ಇತರರ ಗಮನ ತನ್ನ ಮೇಲೆ ಬೀಳಬೇಕೆಂದು ಬಯಸುತ್ತಾರೆ ಎಂದು ಹೇಳಲಾಗಿದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಅವರು ತಮ್ಮನ್ನು ಇತರರಿಗಿಂತ ಹೆಚ್ಚು ಶಕ್ತಿಯುತ ವ್ಯಕ್ತಿತ್ವವೆಂದು ತೋರಿಸಲು ಬಯಸುತ್ತಾರೆ. ಇನ್ನು ಡ್ರೈವಿಂಗ್ ಬಗ್ಗೆ ಹೇಳುವುದಾದರೆ ಕೆಂಪು ಬಣ್ಣದ ಕಾರು ಮಾಲೀಕರು ರಸ್ತೆಯಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಅವರು ಆಕ್ರಮಣಕಾರಿ ಸ್ವಭಾವ ಹೊಂದಿರುತ್ತಾರೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಬಿಳಿ

ಬಿಳಿ ಬಣ್ಣವು ಪ್ರಪಂಚದಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹೆಚ್ಚು ಜನರ ನೆಚ್ಚಿನ ಕಾರಿನ ಬಣ್ಣವಾಗಿದೆ. ಬಿಳಿ ಬಣ್ಣವು ಶುದ್ಧತೆ ಹಾಗೂ ಸೊಬಗಿನೊಂದಿಗೆ ಸಂಬಂಧ ಹೊಂದಿರುವುದು ಇದಕ್ಕೆ ಪ್ರಮುಖ ಕಾರಣ. ಬಿಳಿ ಬಣ್ಣದ ಕಾರು ಮಾಲೀಕರು ನೇರ ನಡೆ ನುಡಿಯ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳಂತಹ ಸಾಧನಗಳಲ್ಲಿಯೂ ಬಿಳಿ ಬಣ್ಣವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಬಿಳಿ ಬಣ್ಣದ ಕಾರು ಮಾಲೀಕರು ತಮ್ಮನ್ನು ಯುವಕರು ಹಾಗೂ ಆಧುನಿಕರು ಎಂದು ಇತರರಿಗೆ ತೋರಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ. ಬಿಳಿ ಬಣ್ಣದ ಕಾರು ಮಾಲೀಕರ ಚಾಲನಾ ಶೈಲಿಯು ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಬಿಳಿ ಬಣ್ಣದ ಕಾರುಗಳ ಮಾಲೀಕರು ಸಂಚಾರ ನಿಯಮಗಳನ್ನು ಅನುಸರಿಸಲು ಬಯಸುತ್ತಾರೆ. ಸಂಚಾರಿ ನಿಯಮಗಳನ್ನು ಅನುಸರಿಸದ ವಾಹನ ಸವಾರರಿಂದ ಬಿಳಿ ಬಣ್ಣದ ಕಾರು ಮಾಲೀಕರು ಕಿರಿ ಕಿರಿಗೊಳ್ಳುತ್ತಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಾರನ್ನು ಹೇಗೆ ಚಾಲನೆ ಮಾಡಲಾಗುತ್ತದೆ ಎಂಬುದರ ಆಧಾರದ ಮೇಲೆ ಕಾರುಗಳು ಬಾಳಿಕೆ ಬರುತ್ತವೆ. ಸಾಮಾನ್ಯವಾಗಿ ಕಾರುಗಳು ಸುಮಾರು 12-15 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಕೆಲವು ಕಾರುಗಳು ಇದಕ್ಕಿಂತ ಹೆಚ್ಚು ಸಮಯ ಬಾಳಿಕೆ ಬರುತ್ತವೆ. ಕೆಲವು ಕಾರುಗಳು ಅಸಮರ್ಪಕ ನಿರ್ವಹಣೆಯ ಕಾರಣಕ್ಕೆ ಮುಂಚಿತವಾಗಿಯೇ ಹಾಳಾಗುತ್ತವೆ. ಸಾಕಷ್ಟು ಜನ ಕಾರು ಮಾಲೀಕರಿಗೆ ಕಾರುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ತಿಳಿದಿಲ್ಲ. ಇದರಿಂದಾಗಿ ಕಾರುಗಳು ತ್ವರಿತವಾಗಿ ಹದಗೆಡುತ್ತವೆ. ಕೆಲವು ಸುಲಭ ವಿಧಾನಗಳ ಮೂಲಕ ಕಾರುಗಳನ್ನು ದೀರ್ಘ ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಬಹುದು.

ಕಾರು ಮಾಲೀಕರ ಗುಣಗಳ ಬಗ್ಗೆ ತಿಳಿಸುತ್ತವೆ ಕಾರಿನ ಬಣ್ಣಗಳು..!

ಕಾರು ನಿರ್ವಹಣೆಯ ಸುಲಭ ವಿಧಾನಗಳ ಬಗ್ಗೆ ಹೇಳುವುದಾದರೆ ಕಾರು ತ್ವರಿತವಾಗಿ ಹದಗೆಡಲು ಮೊದಲ ಕಾರಣವೆಂದರೆ ಅಸಮರ್ಪಕ ನಿರ್ವಹಣೆ. ಅನೇಕ ಕಾರು ಚಾಲಕರು ನಿರ್ವಹಣೆಯನ್ನು ಮುಂದೂಡುವ ಅಭ್ಯಾಸವನ್ನು ಹೊಂದಿದ್ದಾರೆ. ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡದಿದ್ದರೆ ಎಂಜಿನ್, ಬ್ರೇಕ್, ಬ್ಯಾಟರಿಗಳು ಹದಗೆಡುತ್ತವೆ. ಕಾರು ಯಾವ ಕಂಪನಿಗೆ ಸೇರಿದೆ ಎಂಬುದಕ್ಕಿಂತ ಎಲ್ಲಾ ಕಂಪನಿಯ ಕಾರುಗಳಲ್ಲಿ ತುಕ್ಕು ಬಳಸಲಾಗುತ್ತದೆ. ಕಾರು ಹಳೆಯದಾದಂತೆ ಕಾರಿನಲ್ಲಿರುವ ಕಬ್ಬಿಣವು ತುಕ್ಕು ಹಿಡಿಯಲು ಆರಂಭಿಸುತ್ತದೆ. ಇದನ್ನು ತಪ್ಪಿಸುವ ಸುಲಭ ಮಾರ್ಗವೆಂದರೆ ಕಾಲಕಾಲಕ್ಕೆ ಕಾರನ್ನು ಸ್ವಚ್ವಗೊಳಿಸುವುದು. ಕಾರಿನಲ್ಲಿ ಧೂಳು ಇದ್ದರೆ ತಕ್ಷಣವೇ ಅದನ್ನು ಸ್ವಚ್ವಗೊಳಿಸಿ. ಕಾರಿನ ಮೇಲ್ಭಾಗ ಮತ್ತು ಕೆಳಭಾಗವನ್ನು ನೀರಿನಿಂದ ಅಥವಾ ಡ್ರೈ ವಾಶ್‌ನಿಂದ ಚೆನ್ನಾಗಿ ಸ್ವಚ್ವಗೊಳಿಸುವುದು ಒಳ್ಳೆಯದು. ಕಾರಿನ ಭಾಗಗಳು ಚೆನ್ನಾಗಿ ಕೆಲಸ ಮಾಡಲು ಲೂಬ್ರಿಕಂಟ್ ಬಳಸುವುದು ಉತ್ತಮ.

Most Read Articles

Kannada
English summary
Car colors say about car owners personality details
Story first published: Monday, September 27, 2021, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X