ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಕಾಲೇಜಿಗೆ ಹೋಗುವ ಮಕ್ಕಳಿಗೆ ತಂದೆ ತಾಯಂದಿರು ಬೈಕುಗಳನ್ನು ಕೊಡಿಸುವುದೇ ತಪ್ಪು ಎನ್ನುವಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸರಿಯಾದ ರೀತಿಯಲ್ಲಿ ಬೈಕುಗಳನ್ನು ಚಾಲನೆ ಮಾಡುವ ಬದಲು ವ್ಹೀಲಿಂಗ್ ಮಾಡುತ್ತಲೇ ಇರುತ್ತಾರೆ.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಬೇರೆಯವರ ಮುಂದೆ ಹೀರೊ ಎನಿಸಿಕೊಳ್ಳುವ ಉದ್ದೇಶಕ್ಕೋ ಅಥವಾ ಹದಿಹರೆಯದ ಹುಚ್ಚೋ? ಒಟ್ಟಿನಲ್ಲಿ ಬೈಕ್ ಕೈಗೆ ಸಿಕ್ಕಿದ ಕೂಡಲೇ ವ್ಹೀಲಿಂಗ್ ಮಾಡಿ ಬೇರೆಯವರ ಪ್ರಾಣ ತೆಗೆಯುತ್ತಾರೆ, ಇಲ್ಲವೇ ತಾವೇ ಪ್ರಾಣ ಕಳೆದುಕೊಳ್ಳುತ್ತಾರೆ.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಇಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೈಕ್ ಅನ್ನು ಮೇಲಕ್ಕೆತ್ತಿ ಹಿಂಬದಿಯ ಚಕ್ರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ಬೈಕಿಗೆ ಕಾರ್ ಒಂದು ಗುದ್ದಿದೆ. ಕಾರು ಗುದ್ದಿದ ವೇಗಕ್ಕೆ ಬೈಕಿನ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಈ ಘಟನೆಯನ್ನು ವೀಡಿಯೊ ಮಾಡಲಾಗಿದ್ದು, ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿದೆ. ಈ ಘಟನೆಯು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫ್ಲೈ ಓವರ್ ಮೇಲೆ ನಡೆದಿದೆ. ಆದರೆ ಈ ಘಟನೆಯು ನಡೆದ ಬಗ್ಗೆ ಯಾವುದೇ ಕುರುಹುಗಳಾಗಲೀ, ದೂರಾಗಲಿ ಕಂಡು ಬಂದಿಲ್ಲ.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಆದರೆ ಯುಟ್ಯೂಬ್, ಫೇಸ್‍‍ಬುಕ್‍ ಹಾಗೂ ವಾಟ್ಸ್ ಅಪ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಯುವಕನೊಬ್ಬ ತನ್ನ ಬೈಕಿನಲ್ಲಿ ವ್ಹೀಲಿಂಗ್ ಮಾಡುತ್ತಾ ಸಾಗುತ್ತಿರುವುದನ್ನು ಕಾಣಬಹುದು.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಇದೇ ವೇಳೆ ಆ ಬೈಕಿನ ಹಿಂದೆ ವೇಗವಾಗಿ ಬಂದ ಕಾರೊಂದು ಆ ಬೈಕಿಗೆ ಗುದ್ದಿದೆ. ಈ ವೀಡಿಯೊದಲ್ಲಿ ಬೈಕ್ ಎಲ್ಲಿ ಹೋಯಿತು ಎಂದು ಕಾಣುವುದಿಲ್ಲವಾದರೂ, ಬೈಕಿನ ಭಾಗಗಳು ಹಾರುತ್ತಾ ಈ ವೀಡಿಯೊ ಮಾಡುತ್ತಿದ್ದ ಕಾರಿನ ಹಿಂದೆ ಮುಂದೆ ಬೀಳುವುದನ್ನು ಕಾಣಬಹುದು.

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಈ ವೀಡಿಯೊದಲ್ಲಿ ಫ್ಲೈ ಓವರ್ ಮೇಲೆ ಫೆನ್ಸಿಂಗ್ ಇರುವುದನ್ನು ಕಾಣಬಹುದು. ಈ ಎಲ್ಲಾ ಘಟನೆಗಳು ಕ್ಷಣ ಮಾತ್ರದಲ್ಲಿ ನಡೆದಿವೆ. ಬೈಕ್ ಚಾಲನೆ ಮಾಡುತ್ತಿದ್ದ ಯುವಕನಿಗೆ ಹಾಗೂ ಕಾರಿನಲ್ಲಿದ್ದವರಿಗೆ ಏನಾಯಿತು ಎಂಬುದರ ಬಗೆಗಿನ ಮಾಹಿತಿಗಳು ಲಭ್ಯವಾಗಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ಈ ಘಟನೆಗೆ ಮುಖ್ಯ ಕಾರಣವಾಗಿರುವುದು ಬೈಕ್ ಸವಾರನ ಅಜಾಗರೂಕ ಚಾಲನೆ ಹಾಗೂ ಕಾರಿನ ಅತಿ ವೇಗ. ಇದರ ಜೊತೆಗೆ ರಸ್ತೆಯ ತುಂಬಾ ಕತ್ತಲು ಆವರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ರಸ್ತೆಯಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದ್ದು ಬೈಕ್ ಸವಾರನ ತಪ್ಪಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇಂತಹ ದುಸ್ಸಾಹಸಕ್ಕೆ ಕೈಹಾಕುವ ಯುವ ಜನರಿಗೆ ಈ ಘಟನೆಯು ಒಂದು ಪಾಠವಾಗಲಿದೆ. ಕೆಲ ದಿನಗಳ ಹಿಂದಷ್ಟೇ ವ್ಹೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ರೀತಿಯಾಗಿ ವ್ಹೀಲಿಂಗ್ ಮಾಡುವುದು ಭಾರತೀಯ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಜೀವಕ್ಕೆ ಕುತ್ತು ತಂದ ಬೈಕ್ ವ್ಹೀಲಿಂಗ್

ವಾಹನ ಸವಾರರಲ್ಲಿ ಶಿಸ್ತನ್ನು ತರುವ ಉದ್ದೇಶದಿಂದ ಹೊಸ ಮೋಟಾರು ವಾಹನ ಕಾಯ್ದೆ 2019ರ ಅಡಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

Most Read Articles

Kannada
English summary
Car crashes into biker doing wheelie in Bangalore - Read in Kannada
Story first published: Saturday, October 19, 2019, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X