ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಸ್ಕಾರ್ಪಿಯೋ, ಮಹೀಂದ್ರಾ ಕಂಪನಿಯ ಜನಪ್ರಿಯ ಕಾರು. ಈ ಎಸ್‌ಯುವಿ ಅನೇಕ ಭಾರತೀಯರ ನೆಚ್ಚಿನ ವಾಹನವಾಗಿದೆ. ಈ ಎಸ್‌ಯುವಿಯ ಮೇಲಿನ ಪ್ರೀತಿಯನ್ನು ವ್ಯಕ್ತಿಯೊಬ್ಬ ವಿಭಿನ್ನವಾಗಿ ವ್ಯಕ್ತಪಡಿಸಿದ್ದಾನೆ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಹೆಚ್ಚಿನ ಮನೆಗಳಲ್ಲಿ ವಾಟರ್ ಟ್ಯಾಂಕ್ ಗಳನ್ನು ಪ್ಲಾಸ್ಟಿಕ್ ನಿಂದ ಅಥವಾ ಕಾಂಕ್ರೀಟ್‌ನಿಂದ ತಯಾರಿಸಲಾಗಿರುತ್ತದೆ. ಆದರೆ ವ್ಯಕ್ತಿಯೊಬ್ಬರು ತಮ್ಮ ಮನೆಯ ಮೇಲ್ಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಆಕಾರದ ವಾಟರ್ ಟ್ಯಾಂಕ್ ಅನ್ನು ನಿರ್ಮಿಸಿದ್ದಾರೆ. ಇದರ ಫೋಟೋಗಳು ಸದ್ಯಕ್ಕೆ ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಈ ಮನೆ ಬಿಹಾರದ ಪಹಗಲ್ಪುರದಲ್ಲಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿರುವವರನ್ನು ಈ ವಾಟರ್ ಟ್ಯಾಂಕ್ ಆಕರ್ಷಿಸಿದೆ. ಈ ಕಾರಣಕ್ಕೆ ಇದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಈ ಮನೆಯ ಮಾಲೀಕರ ಹೆಸರು ಇಂದಾಸರ್ ಆಲಂ ಎಂದು ಹೇಳಲಾಗಿದೆ. ವಾಹನ ಪ್ರೇಮಿಯಾದ ಅವರು ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಮೇಲಿರುವ ಅಭಿಮಾನದಿಂದಾಗಿ ಸ್ಕಾರ್ಪಿಯೋ ಕಾರಿನ ಆಕಾರದಲ್ಲಿಯೇ ತಮ್ಮ ಮನೆಯ ವಾಟರ್ ಟ್ಯಾಂಕ್ ನಿರ್ಮಿಸಿದ್ದಾರೆ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ತಕ್ಷಣಕ್ಕೆ ನೋಡಿದರೆ ಈ ಕಾರು ಟೆರೇಸ್‌ನಲ್ಲಿ ನಿಂತಿರುವ ನಿಜವಾದ ಮಹೀಂದ್ರಾ ಸ್ಕಾರ್ಪಿಯೋ ಕಾರಿನಂತೆ ಕಾಣುತ್ತದೆ. ನಿಜವಾದ ಕಾರಿನಂತೆ ಕಾಣಲಿ ಎಂಬ ಕಾರಣಕ್ಕೆ ಈ ಟ್ಯಾಂಕಿನಲ್ಲಿ ನಂಬರ್ ಪ್ಲೇಟ್, ಸೈಡ್ ಮಿರರ್, ಇಂಡಿಕೇಟರ್, ವ್ಹೀಲ್, ಟಯರ್ ಗಳನ್ನು ಸಹ ನಿರ್ಮಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಈ ಮನೆ ಮುಂದೆ ಸಾಗುವ ಬಹುತೇಕ ಜನರು ಒಂದು ಕ್ಷಣ ನಿಂತು ಈ ವಾಟರ್ ಟ್ಯಾಂಕ್ ಅನ್ನು ಕಣ್ತುಂಬಿಕೊಳ್ಳುತ್ತಾರೆ. ಭಾರತದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್‌ ನಿರ್ಮಿಸಿದವರಲ್ಲಿ ಇಂದಾಸರ್ ಆಲಂ ಮೊದಲಿಗರಲ್ಲ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಅವರು ಆಗ್ರಾಗೆ ಹೋದಾಗ ಅಲ್ಲಿನ ನಿವಾಸಿಯೊಬ್ಬರು ತಮ್ಮ ಮನೆಯ ರೂಫ್ ಮೇಲೆ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಆಕಾರದ ವಾಟರ್ ಟ್ಯಾಂಕ್ ನಿರ್ಮಿಸಿದ್ದರು. ಇದನ್ನು ನೋಡಿದ ನಂತರ ಇಂದಾಸರ್ ಆಲಂ ತಮ್ಮ ಮನೆ ಟೆರೇಸ್‌ ಮೇಲೂ ಇದೇ ರೀತಿಯ ವಾಟರ್ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಮಹೀಂದ್ರಾ ಸ್ಕಾರ್ಪಿಯೋ ಆಕಾರದ ವಾಟರ್ ಟ್ಯಾಂಕ್ ನಿರ್ಮಿಸಲು ಅವರು ಸುಮಾರು ರೂ.2.5 ಲಕ್ಷ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ. ಕೆಲವರು ವೈರಲ್ ಆಗಿರುವ ಈ ವಾಟರ್ ಟ್ಯಾಂಕ್ ಫೋಟೋಗೆ ಆನಂದ್ ಮಹೀಂದ್ರಾ ಹಾಗೂ ಶಶಿ ತರೂರ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಕೆಲವು ಭಾರತೀಯರು ವಿಮಾನ, ಫುಟ್ಬಾಲ್, ಕುಕ್ಕರ್ ಹಾಗೂ ಬಂಡಿಗಳ ಆಕಾರದಲ್ಲಿ ವಾಟರ್ ಟ್ಯಾಂಕ್ ಗಳನ್ನು ನಿರ್ಮಿಸಿದ್ದಾರೆ. ಈ ರೀತಿಯ ವಾಟರ್ ಟ್ಯಾಂಕ್ ಗಳು ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಇದಕ್ಕೆ ಮಹೀಂದ್ರಾ ಸ್ಕಾರ್ಪಿಯೋ ಹೊಸ ಸೇರ್ಪಡೆಯಾಗಿದೆ. ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರನ್ನು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ನೆಚ್ಚಿನ ಕಾರಿನ ಆಕಾರದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿದ ಕಾರು ಪ್ರೇಮಿ

ಇತ್ತೀಚೆಗೆ ಈ ಕಾರಿನ ಹೈ ಎಂಡ್ ಮಾದರಿಯಲ್ಲಿ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಯಂತಹ ಫೀಚರ್ ಗಳನ್ನು ಸೇರಿಸಲಾಗಿದೆ. ಹೊಸ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬಿಡುಗಡೆಗೆ ಇನ್ನೂ ಕೆಲವು ತಿಂಗಳುಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.

Most Read Articles

Kannada
English summary
Car enthusiast builds water tank in Mahindra Scorpio shape. Read in Kannada.
Story first published: Friday, October 30, 2020, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X