XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

Mahindra and Mahindra ಭಾರತೀಯ ಮೂಲದ ಖ್ಯಾತ ಕಾರು ತಯಾರಕ ಕಂಪನಿಯಾಗಿದೆ. Mahindra ಕಂಪನಿಯು ದೈನಂದಿನ ಬಳಕೆಯ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಪಡಿಸುತ್ತದೆ. ಇದರ ಜೊತೆಗೆ ಕಂಪನಿಯು ಆಫ್ ರೋಡ್ ವಾಹನಗಳನ್ನು ಸಹ ಮಾರಾಟ ಮಾಡುತ್ತದೆ. Mahindra ಕಂಪನಿಯ ಕಾರುಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ದೇಶಿಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯು‌ವಿಗಳಿಗೆ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಭಾರತದಲ್ಲಿರುವ ಬಹುತೇಕ ಎಲ್ಲಾ ಪ್ರಮುಖ ಕಾರು ತಯಾರಕ ಕಂಪನಿಗಳು ಕನಿಷ್ಠ ಒಂದು ಸಬ್ 4 ಮೀಟರ್ ಎಸ್‌ಯು‌ವಿಯನ್ನು ಮಾರಾಟ ಮಾಡುತ್ತಿವೆ. ಈ ಸೆಗ್ ಮೆಂಟಿನಲ್ಲಿ Mahindra ಕಂಪನಿಯ XUV 300 ಎಸ್‌ಯು‌ವಿಯನ್ನು ಸಹ ಮಾರಾಟ ಮಾಡಲಾಗುತ್ತದೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

Mahindra XUV 300 ಈ ಸೆಗ್ ಮೆಂಟಿನಲ್ಲಿ Tata Nexon, Kia Sonet, Hyundai Venue ಹಾಗೂ Maruti Vitara Brezza ಎಸ್‌ಯು‌ವಿಗಳಿಗೆ ಪೈಪೋಟಿ ನೀಡುತ್ತದೆ. ವ್ಯಕ್ತಿಯೊಬ್ಬರು Tata Nexon ಕಾರಿನ ಬದಲು Mahindra XUV 300 ಖರೀದಿಸಿದ್ದಾರೆ. ಅವರು ಯಾವ ಕಾರಣಕ್ಕೆ Tata Nexon ಕಾರ್ ಅನ್ನು ಖರೀದಿಸಲಿಲ್ಲ ಎಂಬ ಪ್ರಶ್ನೆಗೆ ವೀಡಿಯೊ ಮೂಲಕ ಉತ್ತರಿಸಿದ್ದಾರೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಫ್ಯೂಯಲ್ ಇಂಜೆಕ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೀಡಿಯೊವನ್ನು ಪೋಸ್ಟ್ ಮಾಡಿರುವ ವ್ಯಕ್ತಿಯು ಈ XUV 300 ಕಾರಿನ ಮಾಲೀಕರನ್ನು ಪರಿಚಯಿಸುವ ಮೂಲಕ ವೀಡಿಯೊವನ್ನು ಆರಂಭಿಸುತ್ತಾನೆ. ಅದರ ನಂತರ ಮಾಲೀಕರು Tata Nexon ಕಾರಿನ ಬದಲು Mahindra XUV 300 ಕಾರ್ ಅನ್ನು ಖರೀದಿಸಿದರು ಎಂಬುದನ್ನು ವಿವರಿಸುತ್ತಾರೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಅವರು ಈಗಾಗಲೇ 137 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ Tata Harrier ಕಾರ್ ಅನ್ನು ಬಳಸುತ್ತಿದ್ದರು. ಅವರು ಹಲವಾರು ವರ್ಷಗಳಿಂದ Tata Motors ಕಂಪನಿಯ ಸೇವೆಯನ್ನು ಪಡೆದಿರುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ವಿಭಿನ್ನತೆಯನ್ನು ಬಯಸಿ Mahindra ಕಂಪನಿಯ ಕಾರು ಖರೀದಿಸಿರುವುದಾಗಿ ತಿಳಿಸಿದರು.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಈ ಹಿಂದೆ ಅವರು Hyundai i 20 ಕಾರ್ ಅನ್ನು ಬಳಸುತ್ತಿದ್ದ ಕಾರಣ ತಮ್ಮ ಎರಡನೇ ಕಾರು ಎಸ್‌ಯುವಿಯಾಗಿರಲಿ ಎಂದು ಬಯಸಿದ್ದರು. ಆಗ Tata Nexon ಎಸ್‌ಯುವಿ ಅವರ ಮನಸ್ಸಿಗೆ ಬಂದಿದೆ. ಆದರೆ ಅವರು ಈಗಾಗಲೇ Tata Harrier ಬಳಸಿದ್ದರಿಂದ ಮತ್ತೊಮ್ಮೆ Tata Motors ಕಂಪನಿಯ ಕಾರ್ ಅನ್ನು ಖರೀದಿಸಲು ಮುಂದಾಗಿಲ್ಲ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಆ ಸಮಯದಲ್ಲಿ ಹಲವಾರು ಕಾರು ಮಾದರಿಗಳು ಅವರ ಮನಸ್ಸಿಗೆ ಬಂದಿವೆ. Mahindra XUV 300 ಎಸ್‌ಯುವಿಯನ್ನು ಟೆಸ್ಟ್ ಡ್ರೈವ್ ಮಾಡಿದ ನಂತರ ಅವರು ಅದೇ ಕಾರ್ ಅನ್ನು ಖರೀದಿಸಲು ತೀರ್ಮಾನಿಸಿದ್ದಾರೆ. ಪೆಟ್ರೋಲ್ ಇಂಜಿನ್ ಹೊಂದಿರುವ ಎಸ್‌ಯುವಿ ಖರೀದಿಸುವುದು ಅವರ ಆಯ್ಕೆಯಾಗಿತ್ತು. Tata Nexon ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯುತ್ತಮ ಕಾರು ಎಂಬುದರಲ್ಲಿ ಸಂದೇಹವಿಲ್ಲ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಆದರೆ ಆ ಕಾರಿನ ಪೆಟ್ರೋಲ್ ಇಂಜಿನ್ ಕಾರ್ಯಕ್ಷಮತೆ ಹೆಚ್ಚು ಗ್ರಾಹಕರನ್ನು ಆಕರ್ಷಿಸಲಿಲ್ಲ. ಇದೇ ವೇಳೆ Mahindra XUV 300 ಕಾರಿನ ಕಾರ್ಯಕ್ಷಮತೆ ಜನರನ್ನು ಆಕರ್ಷಿಸಿದೆ. XUV 300 ಎಸ್‌ಯುವಿಯು ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚು ವಿಶಾಲವಾದ ಕ್ಯಾಬಿನ್ ಹೊಂದಿದೆ ಎಂದು ಅವರು ಹೇಳಿದ್ದಾರೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಎಲ್ಲಕ್ಕಿಂತ ಹೆಚ್ಚಾಗಿ, ಅವರ ತಂದೆ Mahindra XUV 300 ಎಸ್‌ಯುವಿ ಖರೀದಿಸ ಬೇಕೆಂದು ಆಸೆ ಪಟ್ಟಿದ್ದರು. XUV 300 ಎಸ್‌ಯುವಿಯು ಹೆಚ್ಚಿನ ಜನರು ನಿರೀಕ್ಷಿಸುವ ಫೀಚರ್ ಗಳನ್ನು ಹೊಂದಿದೆ. Tata Motors ಕಂಪನಿಯ ಕಾರುಗಳಿಗಿಂತ XUV 300 ಎಸ್‌ಯುವಿಯಲ್ಲಿರುವ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಉತ್ತಮವಾಗಿದೆ.

ಈ ವೀಡಿಯೊದಲ್ಲಿರುವವರು XUV 300 W8 (O) ಮಾದರಿಯನ್ನು ಖರೀದಿಸಿದ್ದಾರೆ. ಈ ಮಾದರಿಯು ಲೆದರೇಟ್ ಅಪ್ ಹೊಲೆಸ್ಟರಿ, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7 ಏರ್‌ಬ್ಯಾಗ್‌ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ. Mahindra XUV 300 ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ.

XUV 300 ಎಸ್‌ಯುವಿ ಖರೀದಿಸಲು ಕಾರಣ ತಿಳಿಸಿದ ಕಾರು ಮಾಲೀಕ

ಮಕ್ಕಳ ಸುರಕ್ಷತೆಯಲ್ಲಿಯೂ XUV 300 ಎಸ್‌ಯುವಿಯು Tata Nexon ಎಸ್‌ಯುವಿಗಿಂತ ಉತ್ತಮವಾಗಿದೆ. XUV 300 ಎಸ್‌ಯುವಿಯಲ್ಲಿ ಅಳವಡಿಸಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 107 ಬಿ‌ಹೆಚ್‌ಪಿ ಪವರ್ ಹಾಗೂ 220 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು Mahindra and Mahindra ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ರವರು ತಮ್ಮ ಸಮಾಜ ಮುಖಿ ಕಾರ್ಯಗಳಿಂದ ಜನಪ್ರಿಯರಾಗಿದ್ದಾರೆ. ಆನಂದ್ ಮಹೀಂದ್ರಾ ರವರು ಕ್ರೀಡಾ ಪಟುಗಳಿಗೆ ಸದಾ ಬೆಂಬಲ ನೀಡುತ್ತಾರೆ. ಈ ವರ್ಷದ ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದ ಐವರು ಕ್ರಿಕೆಟಿಗರಿಗೆ ಅವರು Mahindra Tharಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು. ಕಳೆದ ತಿಂಗಳು ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದವರಿಗೆ XUV 700 ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

Most Read Articles

Kannada
English summary
Car owner explains why did he chose mahindra xuv300 video details
Story first published: Wednesday, September 22, 2021, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X