ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ವಾಹನಗಳ ಮಾರಾಟವು ಏರಿಕೆಯಾಗುತ್ತಲಿದೆ. ಕಳೆದ ಕೆಲ ತಿಂಗಳಿನಲ್ಲಿ ಎಸ್‍‍ಯುವಿಗಳ ಮಾರಾಟದಲ್ಲಿ ಏರಿಕೆಯಾಗಿತ್ತು. ಇದರ ಜೊತೆಗೆ ಎಸ್‍‍ಯುವಿಗಳ ಕಳ್ಳತನವು ಹೆಚ್ಚಾಗುತ್ತಿದೆ. ಇದು ಸಹಜವಾಗಿ ವಿಮಾ ಕಂಪನಿಗಳ ನಿದ್ದೆಗೆಡಿಸಿದೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಕಾರುಗಳನ್ನು ಹಾಗೂ ಹ್ಯಾಚ್‍‍ಬ್ಯಾಕ್ ಕಾರುಗಳನ್ನು ಕದಿಯುತ್ತಿದ್ದ ಕಳ್ಳರು ಈಗ ಎಸ್‍‍ಯುವಿಗಳನ್ನು ಕದಿಯಲು ಶುರು ಮಾಡಿದ್ದಾರೆ. ಎಸ್‍‍ಯುವಿಗಳಾದ ಹ್ಯುಂಡೈ ಕ್ರೆಟಾ, ಮಾರುತಿ ವಿಟಾರಾ ಬ್ರಿಝಾ, ಮಹೀಂದ್ರಾ ಸ್ಕಾರ್ಪಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕದಿಯುತ್ತಿದ್ದಾರೆ. ಸದ್ಯಕ್ಕೆ ಎಸ್‍‍‍ಯುವಿಗಳು ಕಾರು ಪ್ರಿಯರ ನೆಚ್ಚಿನ ಆಯ್ಕೆಗಳಾಗಿವೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಒಂದೆಡೆ ಹೆಚ್ಚಿನ ಸಂಖ್ಯೆಯ ಎಸ್‍‍ಯುವಿಗಳ ಮಾರಾಟದಿಂದಾಗಿ ಕಾರು ತಯಾರಕ ಕಂಪನಿಗಳು ಲಾಭಗಳಿಸುತ್ತಿದ್ದರೆ, ಮತ್ತೊಂದೆಡೆ ಈ ಎಸ್‍‍ಯುವಿಗಳ ಕಳ್ಳತನದಿಂದಾಗಿ ವಿಮಾ ಕಂಪನಿಗಳು ಚಿಂತೆಗೀಡಾಗಿವೆ. ಕೆಲವು ವರದಿಗಳ ಪ್ರಕಾರ, 2019ರ ಹಣಕಾಸು ವರ್ಷದಲ್ಲಿ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಕಾರುಗಳ್ಳತನದ ಕ್ಲೇಮುಗಳ ಸಂಖ್ಯೆಯಲ್ಲಿ 15 - 20%ವರೆಗೆ ಏರಿಕೆಯಾಗಿದೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಸಾಮಾನ್ಯವಾಗಿ 100 ವಾಹನಗಳಿಗೆ ವಿಮೆ ಮಾಡಿಸಿದರೆ, ಅದರಲ್ಲಿ ಕೇವಲ 2% ವಾಹನಗಳ ಕಳ್ಳತನವಾಗುತ್ತದೆ. ವಿಮಾ ಕಂಪನಿಗಳು ವಾಹನಗಳ್ಳತನಕ್ಕಾಗಿಯೇ ಸುಮಾರು ರೂ.1 ಕೋಟಿಯನ್ನು ವಾಹನ ಕಳ್ಳತನದ ಕ್ಲೇಮುಗಳಿಗಾಗಿಯೇ ನೀಡುತ್ತಿವೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಎಸ್‍‍ಯುವಿಗಳಲ್ಲಿ ಹೊಸ ಟೆಕ್ನಾಲಜಿಯನ್ನು ಅಳವಡಿಸಲಾಗುತ್ತಿದೆ. ಎಷ್ಟೇ ಹೊಸ ಟೆಕ್ನಾಲಜಿಯನ್ನು ಅಳವಡಿಸಿದರೂ ಕಳ್ಳರು ಅವುಗಳನ್ನು ಭೇದಿಸಿ ಕಾರುಗಳ್ಳನ್ನು ಕದಿಯುತ್ತಿದ್ದಾರೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಕಾರುಗಳ್ಳರು ಹೊಸ ಕಾರುಗಳನ್ನು ಹುಡುಕಿ, ಅದರಲ್ಲಿರುವ ನ್ಯೂನತೆಗಳನ್ನು ಶೋಧಿಸಿ, ಕಾರುಗಳ ಒಳಗೆ ಪ್ರವೇಶಿಸುತ್ತಾರೆ. ಕಂಪನಿಗಳು ಎಷ್ಟೇ ಉತ್ತಮವಾದ ಭದ್ರತಾ ಸಾಧನಗಳನ್ನು ಅಳವಡಿಸಿ ಅವುಗಳನ್ನು ಮುರಿದು ಕಳುವು ಮಾಡುತ್ತಿದ್ದಾರೆ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಕಳ್ಳತನವಾಗುತ್ತಿರುವ ಕಾರುಗಳ ಪೈಕಿ ಕೀ ಲೆಸ್ ಕಾರುಗಳ ಸಂಖ್ಯೆಯೇ ಹೆಚ್ಚಾಗಿದೆ. ವರದಿಗಳ ಪ್ರಕಾರ, ಕೀ ಲೆಸ್ ಕಾರುಗಳ ಕಳ್ಳತನದ ಪ್ರಕರಣವು 20%ನಷ್ಟು ಹೆಚ್ಚಾಗಿದೆ. ಹೆಚ್ಚು ಮರು ಮಾರಾಟ ಹೊಂದಿರುವ ಎಸ್‍‍ಯುವಿಗಳು ಅಧಿಕ ಸಂಖ್ಯೆಯಲ್ಲಿ ಕಳ್ಳತನವಾಗುತ್ತಿವೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಡೀಸೆಲ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯನ್ನು ಹೊಂದಿವೆ. ಇದರ ಜೊತೆಗೆ ಆಟೋಮ್ಯಾಟಿಕ್ ಕಾರುಗಳಿಗೂ ಸಹ ಅಧಿಕ ಬೇಡಿಕೆಯಿದೆ. ಈ ಕಾರಣಕ್ಕಾಗಿ ಡೀಸೆಲ್ ಕಾರುಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ದೆಹಲಿ - ಎನ್‍‍‍ಸಿ‍ಆರ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಎಸ್‍‍ಯುವಿಗಳ ಹೆಚ್ಚು ಕಳುವು ಮಾಡಲಾಗುತ್ತಿದೆ. ಹೀಗೆ ಕಳುವು ಮಾಡಲಾದ ಎಸ್‍‍ಯುವಿಗಳನ್ನು ಉತ್ತರ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಸುಲಭವಾಗಿ ಮಾರಾಟ ಮಾಡಬಹುದೆಂಬ ಕಾರಣಕ್ಕೆ, ಕಾರುಗಳ್ಳರು ಜನಪ್ರಿಯವಾಗಿರುವ ಹೊಸ ಎಸ್‍‍ಯುವಿಗಳನ್ನು ಕದಿಯುತ್ತಿದ್ದಾರೆ. ಕದ್ದ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೊಸ ಕಾರುಗಳಾದ ಕಾರಣ ಇವುಗಳ ಮೇಲೆ ಯಾವುದೇ ಅನುಮಾನ ಉಂಟಾಗುವುದಿಲ್ಲ.

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಕಡಿಮೆ ಬೆಲೆಗೆ ಹೊಸ ಕಾರುಗಳನ್ನು ಯಾರಾದರೂ ಮಾಡುತ್ತಿದ್ದರೆ, ಅವುಗಳನ್ನು ಖರೀದಿಸುವ ಮುನ್ನ ಸರಿಯಾಗಿ ಪರೀಕ್ಷಿಸುವುದು ಒಳಿತು. ತಮ್ಮ ವಾಹನಗಳನ್ನು ನಿಲ್ಲಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕಾರುಗಳ್ಳತನದ ಬಹುತೇಕ ಪ್ರಕರಣಗಳು ನಡೆಯುವುದು ಹೈವೇಗಳಲ್ಲಿ ಅಥವಾ ಜನ ಸಂಚಾರವಿಲ್ಲದಂತಹ ಪ್ರದೇಶಗಳಲ್ಲಿ. ಆದ್ದರಿಂದ ಈ ಪ್ರದೇಶಗಳಲ್ಲಿ ಓಡಾಡುವಾಗ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲೂ ನಿಮ್ಮ ಬಳಿ ಹೊಸ ಕಾರು ಇದ್ದರೆ ಮತ್ತಷ್ಟು ಜಾಗರೂಕರಾಗಿರಿ.

Most Read Articles

Kannada
English summary
Suvs becoming popular choice for thieves - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X