ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ವಾಹನಗಳ ಮೇಲೆ ಇಷ್ಟದ ದೇವರು ಅಥವಾ ಪ್ರೀತಿ ಪಾತ್ರರ ಹೆಸರು ಅಥವಾ ಚಿತ್ರಗಳನ್ನು ಹಾಕಿಕೊಳ್ಳುವುದು ಕಾಮನ್. ಆದ್ರೆ ಇಲ್ಲೊಬ್ಬ ಕಾರು ಮಾಲೀಕ ಮಾತ್ರ ಉಗ್ರ ಒಸಮಾ ಬಿನ್ ಲಾಡೆನ್ ಸ್ಟಿಕರ್ ಹಾಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹೌದು, ಹೋಂಡಾ ಅಕಾರ್ಡ್ ಸೆಡಾನ್ ಕಾರಿನ ಹಿಂಭಾದಲ್ಲಿ ಉಗ್ರ ಬಿನ್ ಲಾಡೆನ್ ಸ್ಟಿಕರ್ ಹಾಕಿಕೊಳ್ಳುವ ಮೂಲಕ ಉಗ್ರರ ಮೇಲಿನ ಒಲವನ್ನು ತೋರ್ಪಡಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕಾಲೇಜ್ ವಿದ್ಯಾರ್ಥಿಯೊಬ್ಬನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಕೊಲ್ಲಂ ಜಿಲ್ಲೆಯ ಮುಂಡಕಲ್‌ನಲ್ಲಿರುವ ಎಂಎಸ್ಎನ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಹನೀಫ್(22) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಬಿನ್ ಲಾಡೆನ್ ಸ್ಟಿಕರ್ ಇದ್ದ ಕಾರನ್ನು ಸೀಜ್ ಮಾಡಿದ್ದಾರೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಬಿನ್ ಲಾಡೆನ್ ಸ್ಟಿಕರ್ ಹೊಂದಿರುವ ಹೋಂಡಾ ಅಕಾರ್ಡ್ ಸೆಡಾನ್ ಕಾರು ಪಶ್ಚಿಮ ಬಂಗಾಳದ ನೋಂದಣಿ ಹೊಂದಿದ್ದು, ಕಳೆದ 1 ವರ್ಷದಿಂದ ಈ ಕಾರು ಕೇರಳದಲ್ಲಿ ಅಕ್ರಮವಾಗಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಮೂಲಗಳ ಪ್ರಕಾರ, ಹೋಂಡಾ ಅಕಾರ್ಡ್ ಕಾರಿಗೆ ಸೆಕೆಂಡ್ ಹ್ಯಾಂಡ್ ಮಾಲೀಕನಾಗಿರುವ ಮಹಮ್ಮದ್ ಹನೀಫ್ ಎನ್‌ಒಸಿ ಪ್ರಮಾಣ ಪತ್ರವಿಲ್ಲದೆ ಅಕ್ರಮವಾಗಿ ಕೇರಳದಲ್ಲಿ ಓಡಾಡುತ್ತಿದ್ದು, ಇದರ ಜೊತೆಗೆ ಉಗ್ರರ ಮೇಲಿನ ಪ್ರೀತಿ ತೋರ್ಪಡಿಸಲು ಬಿನ್ ಲಾಡೆನ್ ಸ್ಟಿಕರ್ಸ್ ಬೇರೆ ಅಂಟಿಕೊಂಡಿದ್ದ. ಆದ್ರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಿಕ್ಕಿಬಿದ್ದಿರುವ ಹನೀಫ್ ಇದೀಗ ಕಂಬಿ ಎಣಿಸುತ್ತಿದ್ದಾನೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಹನೀಫ್, ಮೋಜಿಗಾಗಿ ಈ ರೀತಿ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. ಜೊತೆಗೆ ಈ ಕಾರನ್ನು ತನ್ನ ಸ್ನೇಹಿತನ ಬಳಿ ಸೇಕೆಂಡ್ ಹ್ಯಾಂಡ್ ರೂಪದಲ್ಲಿ ರೂ. 4.5 ಲಕ್ಷಕ್ಕೆ ಖರೀದಿಸಿದ್ದಾಗಿ ಹೇಳಿರುವುದಲ್ಲದೇ ಕಾರಿನ ದಾಖಲೆಗಳನ್ನು ವರ್ಗಾವಣೆ ಮಾಡಿಕೊಳ್ಳದೆ ಕೇರಳದಲ್ಲಿ ಕಳೆದ 1 ವರ್ಷದಿಂದ ಓಡಾಡುತ್ತಿರುವುದಾಗಿ ತಿಳಿಸಿದ್ದಾನೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹೀಗಾಗಿ ಹೋಂಡಾ ಅಕಾರ್ಡ್ ಕಾರಿನ ಮೂಲ ಮಾಲೀಕನಿಗೂ ಬಲೆ ಬಿಸಿರುವ ಪೊಲೀಸರು ದಾಖಲೆ ವರ್ಗಾವಣೆ ಮಾಡದೇ ಕಾರು ಮಾರಾಟ ಮಾಡಿರುವ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಇಂತಹ ಅಸಾಮಿಗಳಿಗೆ ಮಾರಾಟ ಮಾಡುವಾಗ ಸಂಪೂರ್ಣವಾಗಿ ದಾಖಲೆಗಳನ್ನು ವರ್ಗಾವಣೆ ಮಾಡುವುದನ್ನು ಮರೆಯಬೇಡಿ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹಾಗೆಯೇ ಕಾರುಗಳ ಮೇಲೆ ಕಾನೂನಿಗೆ ವಿರುದ್ಧವಾಗಿ ಪದ ಬಳಕೆ ಮತ್ತು ವ್ಯಕ್ತಿಗಳ ಚಿತ್ರಗಳನ್ನು ಅಂಟಿಸುವಾಗ ಎಚ್ಚರವಹಿಸಬೇಕಾದ ಅವಶ್ಯಕತೆಯಿದೆ. ಅದರಲ್ಲೂ ಪ್ರಮುಖವಾಗಿ ಹೇಳುವುದಾದರೇ ನಿಮ್ಮ ವಾಹನವನ್ನು ಮರುಮಾರಾಟ ಮಾಡುವಾಗ ಮತ್ತು ಸೇಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಆ ವಾಹನದ ಹಿನ್ನೆಲೆಯನ್ನು ಅರಿತು ವ್ಯವಹಾರ ಮುಂದುವರಿಸಿ. ಇಲ್ಲವಾದ್ರೆ ಯಾರೋ ಮಾಡುವ ತಪ್ಪುಗಳು ನಿಮ್ಮ ತಲೆಗೆ ಬರಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಬೇರೆಯವರ ಕೈಗೆ ನಿಮ್ಮ ವಾಹನ ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹೌದು, ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಅಪಘಾತಗಳ ಸಂಖ್ಯೆಯು ಸಹ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ರಸ್ತೆ ನಿಮಯ ಉಲ್ಲಂಘನೆಯಿಂದಾಗಿ ಪ್ರತಿ ವರ್ಷ ಸಾವಿರಾರು ವಾಹನ ಸವಾರರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಿರ್ಲಕ್ಷ್ಯದ ವಾಹನ ಸವಾರಿ ಅಂದ್ರೆ ತಪ್ಪಾಗುವುದಿಲ್ಲ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹೀಗಾಗಿಯೇ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದ್ದು, ಮೂರನೇ ವ್ಯಕ್ತಿಯಿಂದಾಗುವ ವಾಹನ ಹಾನಿಗೆ ಥರ್ಡ್ ಪಾರ್ಟಿ ವಿಮೆ ಸಾಧ್ಯವಿಲ್ಲ ಎಂಬ ಆದೇಶ ನೀಡಿದೆ. ಹೀಗಾಗಿ ವಾಹನ ಮಾಲೀಕರು ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳೀತು.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹೈಕೋರ್ಟ್ ತೀರ್ಪಿನ ಪ್ರಕಾರ, ನಿಮ್ಮ ಬೈಕ್ ಅಥವಾ ಕಾರುನ್ನು ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಯೋ ಹೊರಗೆ ತೆಗೆದುಕೊಂಡು ಹೋದ ವೇಳೆ ನಿರ್ಲಕ್ಷ್ಯದಿಂದ ಆಗುವ ದುರಂತಗಳಿಗೆ ವಿಮಾ ಸಂಸ್ಥೆಯು ಜವಾಬ್ದಾರಿಯಾಗಿರುವುದಿಲ್ಲ ಎಂದಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಅಂದ್ರೆ, ಮೂರನೇ ವ್ಯಕ್ತಿಯು ನಿಮ್ಮ ವಾಹನಗಳನ್ನು ವಾಹನವನ್ನು ತೆಗೆದುಕೊಂಡು ಹೋಗಿದ್ದಾಗ ಮತ್ತೊಂದು ವಾಹನಕ್ಕೆ ತಗುಲಿ ಆಗುವ ದುರಂತಗಳಿಗೆ ಮಾತ್ರವೇ ವಿಮೆ ಸಂಸ್ಥೆಯು ನಷ್ಟ ಭರಿಸಲಿದೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಇದರಿಂದ ಮೂರನೇ ವ್ಯಕ್ತಿಯ ಕೈಯಲ್ಲಿ ಇದ್ದಾಗ ನಿಮ್ಮ ವಾಹನಗಳು ನಿಯಂತ್ರಣ ತಪ್ಪಿ ಉರುಳಿಬಿದ್ದು, ಇಲ್ಲವೇ ಮರಗಳಿಗೆ ಡಿಕ್ಕಿ ಹೊಡೆದು, ಇಲ್ಲವೇ ಸ್ಕೀಡ್ ಆಗಿ ಆದ ಅನಾಹುತಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದಕ್ಕೆಲ್ಲಾ ವಾಹನ ಮಾಲೀಕನೇ ಜವಾಬ್ದಾರಿಯಾಗಿಬೇಕು ಎಂದಿದೆ.

MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಬೆಂಗಳೂರಿನಲ್ಲಿ ನಡೆದ ಘಟನೆಯೊಂದರ ಪರಿಹಾರ ಕೋರಿ ಥರ್ಡ್ ಪಾರ್ಟಿ ವಿಮೆಗಾಗಿ ಅರ್ಜಿ ಸಲ್ಲಿಸಿದ್ದಾಗ ವಿಮಾ ಸಂಸ್ಥೆಯು ಅರ್ಜಿದಾರರ ಬೇಡಿಕೆಯನ್ನು ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟೇರಿದ್ದ ಅರ್ಜಿದಾರನ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಈ ರೀತಿಯಾಗಿ ಆದೇಶ ನೀಡಿದೆ.

ಕಾರಿನ ಮೇಲೆ ಉಗ್ರ ಬಿನ್ ಲಾಡೆನ್ ಸ್ಟಿಕರ್- ಪೊಲೀಸರ ಕೈಗೆ ತಗ್ಲಾಕಿಕೊಂಡ ವಿದ್ಯಾರ್ಥಿ..!

ಹೀಗಾಗಿ ವಾಹನ ಮಾಲೀಕರು ಬೇರೆಯವರ ಕೈಗೆ ವಾಹನ ನೀಡುವುದಕ್ಕೂ ಮುನ್ನ ಈ ಬಗ್ಗೆ ಯೋಚನೆ ಮಾಡಿಬೇಕಾದ ಅವಶ್ಯಕತೆಯಿದ್ದು, ಒಂದು ವೇಳೆ ಬೇರೆಯವರ ಕೈಗೆ ವಾಹನ ನೀಡಿದರೂ ಅದರಿಂದಾಗುವ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತೆ.

Source: Manoramaonline

Most Read Articles

Kannada
English summary
Car With Bin Laden Sticker Seized In Kerala. Read in Kannada.
Story first published: Saturday, May 4, 2019, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X