ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರು ಯಾವುದು ಗೊತ್ತಾ?

By Manoj B.k

ಬ್ರಿಟಿಷ್ ಆಡಳಿತದ ವಿರುದ್ದ ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅದಮ್ಯ ಚೇತನ ಮಹಾತ್ಮ ಗಾಂಧೀಜಿಯವರ ನಮ್ಮದೊಂದಿಗೆ ಇಲ್ಲವಾದ್ರು ಅವರ ಅಹಿಂಸಾ ತತ್ವ, ರಾಮರಾಜ್ಯದ ಕನಸು ಮತ್ತು ಅವರ ಬುದುಕಿನ ನೀತಿಪಾಠಗಳು ಇಂದಿಗೂ ಪ್ರಸ್ತುತ. ಐಷಾರಾಮಿ ಬದುಕನ್ನು ತ್ಯಜಿಸಿದ್ದ ಬಾಪು ಒಂದು ಧೋತಿ ತೊಟ್ಟುಕೊಂಡು ಕೈಯಲ್ಲೊಂದು ಕೋಲು ಹಿಡಿದು ನಡೆಯುವ ಚಿತ್ರವಷ್ಟೇ ಹಲವರ ನೆನಪಲ್ಲಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಗಾಂಧಿ ಕಾರಿನಲ್ಲೂ ಸಂಚರಿಸಿದ ನಿದರ್ಶನಗಳಿವೆ.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಮೂಲೆ ಮೂಲೆಗೂ ಸಂಚರಿಸುವ ಮೂಲಕ ಬ್ರಿಟಿಷರ ಆಡಳಿತದ ವಿರುದ್ಧ ಬಹುದೊಡ್ಡ ಅಹಿಂಸಾ ಕ್ರಾಂತಿಯನ್ನೇ ಸೃಷ್ಠಿಮಾಡಿದ್ದರು. ಅವರು ಮನಸ್ಸು ಮಾಡಿದ್ದರೆ ಐಷಾರಾಮಿ ಜೀವನವನ್ನೇ ನಡೆಸಬಹುದಿತ್ತು. ಆದ್ರೆ ಸರಳವಾದ ಜೀವನ ಶೈಲಿಯ ಮೂಲಕವೇ ಖುಷಿಯ ಬದುಕು ಕಂಡಿದ್ದ ಗಾಂಧೀಜಿಯವರಿಗೆ ಅಹಿಂಸಾ ಮಾರ್ಗದ ಮೂಲಕವೇ ಸ್ವಾತಂತ್ರ್ಯ ಪಡೆಯುವುದು ಹೆಬ್ಬಯಕೆ ಆಗಿತ್ತು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಹೀಗಾಗಿ ದೇಶಾದ್ಯಂತ ಸಂಚರಿಸುವ ಮೂಲಕ ವಿವಿಧ ಸತ್ಯಾಗ್ರಹಗಳು, ಆಂದೋಲನಗಳನ್ನು ನಡೆಸಿದ್ದ ಗಾಂಧೀಜಿಯವರು ತಮ್ಮ ನೆಚ್ಚಿನ ಕಾರುಗಳಾದ ಫೋರ್ಡ್ ಮಾಡೆಲ್ ಟಿ ಮತ್ತು ಸ್ಟುಡ್‌ಬೇಕರ್ 120 ಕಾರುಗಳಲ್ಲಿ ಪ್ರಯಾಣಿಸುವುದು ಅಂದ್ರೆ ಅವರಿಗೆ ಎಲ್ಲಿಲ್ಲದ ಖುಷಿ.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಆಗಿನ ಕಾಲದಲ್ಲಿ ಕಾರುಗಳ ಐಷಾರಾಮಿತನದ ಬಗ್ಗೆ ಅಷ್ಟಾಗಿ ಯಾರೊಬ್ಬರು ತಲೆಕೆಡಿಸಿಕೊಳ್ಳುತ್ತಿದ್ದಿಲ್ಲವಾದರೂ ನೀರ್ದಿಷ್ಟ ಮಾರ್ಗಗಳನ್ನು ತುಲುಪಲು ಸಹಕಾರಿಯಾಗುತ್ತಿದ್ದ ಕಾರುಗಳ ಬಗ್ಗೆ ಆಸಕ್ತಿ ಹೊಂದಿದ್ದ ಬಹುತೇಕ ಕಾರು ಪ್ರೇಮಿಗಳು ಫೋರ್ಡ್ ಕಾರುಗಳನ್ನು ಹೊಂದಿದ್ದರು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಅಂದಿನ ಮಟ್ಟಿಗೆ ಫೋರ್ಡ್ ಮಾಡೆಲ್ ಟಿ ಕಾರುಗಳು ಒಂದು ರೀತಿಯಲ್ಲಿ ಟ್ರೆಂಡ್ ಹುಟ್ಟುಹಾಕಿದ್ದಲ್ಲದೇ ವಿಶ್ವದ ಪ್ರಮುಖ ಗಣ್ಯರ ಬಳಿ ಸ್ಥಾನ ಪಡೆದಿದ್ದವು. ಗಾಂಧೀಜಿಯವರು ಕೂಡಾ ತಮ್ಮ ಧೀರ್ಘಾವಧಿಯ ಪ್ರಯಾಣಕ್ಕಾಗಿ ಮಾಡೆಲ್ ಟಿ ಕಾರುನ್ನು ಆಯ್ಕೆ ಮಾಡಿದ್ದರು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ವಿಶ್ವ ಆಟೋ ಉದ್ಯಮಕ್ಕೆ ತನ್ನದೇ ವಿಶಿಷ್ಟ ವಾಹನ ಉತ್ಪನ್ನಗಳನ್ನು ನೀಡಿರುವ ಫೋರ್ಡ್ ಕಂಪನಿಯು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವುದರ ಹಿಂದೆ ಹತ್ತಾರು ಇಂಟ್ರಸ್ಟಿಂಗ್ ಮಾಹಿತಿಗಳಿವೆ. ಅದರಲ್ಲೂ ಫೋರ್ಡ್ ನಿರ್ಮಾಣ ಮಾಡುತ್ತಿದ್ದ ಮಾಡೆಲ್ ಟಿ ಕಾರು ಅಂದ್ರೆ ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಒಂದು ರೀತಿಯ ಕ್ರೇಜ್ ಹುಟ್ಟುಹಾಕಿತ್ತು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಇದೇ ಕಾರಣಕ್ಕೆ ಏನೋ ಗೊತ್ತಿಲ್ಲ, ಗಾಂಧೀಜಿಯವರನ್ನು ಸಹ ಸೆಳೆದಿದ್ದ ಮಾಡೆಲ್ ಟಿ ಕಾರುಗಳು ಅಂದಿನ ಕಾಲದಲ್ಲೂ ಅಷ್ಟು ಜನಪ್ರಿಯತೆಯೊಂದಿಗೆ ಭಾರತೀಯ ಸ್ವಾತಂತ್ರ್ಯ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದೆ.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

1908ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್ ಮಾಡೆಲ್ ಟಿ(ಟಿನ್ ಲೀಜಿ) ಕಾರುಗಳು ಸುಮಾರು 18 ವರ್ಷಗಳ ಕಾಲ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಲ್ಲೇ ಕೇವಲ ಕಪ್ಪು ಬಣ್ಣ ಹೊಂದುವ ಮೂಲಕ ಹಲವು ವಿಶೇಷತೆಗಳಿಗೆ ಕಾರಣವಾಗಿತ್ತು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಗಾಂಧೀಜಿಯವರನ್ನು ಸೆಳೆಯುವಲ್ಲಿ ಯಶಸ್ವಿಯಾದ ಮತ್ತೊಂದು ಕಾರು ಮಾದರಿ ಅಂದ್ರೆ ಅದು ಮರ್ಸಿಡಿಸ್ ಬೆಂಝ್ ನಿರ್ಮಾಣದ ಬಿಳಿ ಬಣ್ಣದ ಸ್ಟುಡ್‌ಬೇಕರ್ 120. ಗಾಂಧೀಜಿಯವರು ತಮ್ಮ ದೂರದ ಪ್ರಯಾಣಗಳಿಗೆ ಹೆಚ್ಚಿನ ಸಮಯದಲ್ಲಿ ಇದನ್ನೇ ಬಳಕೆ ಮಾಡುತ್ತಿದ್ದರಲ್ಲದೇ ಈ ಕಾರು ದೆಹಲಿಯ ನೋಂದಣಿ ಹೊಂದಿತ್ತು.

ಅ. 2ರ ವಿಶೇಷ: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಕಾರುಗಳು ಯಾವುದು ಗೊತ್ತಾ?

ಸದ್ಯ ದೆಹಲಿ ಮೂಲದ ಉದ್ಯಮಿಯೊಬ್ಬರ ವಿಟೆಂಜ್ ಕಾರು ಕಲೆಕ್ಷನ್‌ನಲ್ಲಿ ಈ ಕಾರು ಇರುವ ಬಗ್ಗೆ ಮಾಹಿತಿಗಳಿದ್ದು, ಫೋರ್ಡ್ ಮಾಡೆಲ್ ಟಿ ಕಾರನ್ನು ಸಾಬರಮತಿ ಆಶ್ರಮದಲ್ಲಿ ಇಂದಿಗೂ ನೋಡಬಹುದಾಗಿದೆ. ಆದ್ರೆ ಅದೇನೆ ಇರಲಿ ಅವರ ಸ್ವಾತಂತ್ರ್ಯಕ್ಕಾಗಿ ಶ್ರಮಸಿದ ಪರಿಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

Most Read Articles

Kannada
English summary
Cars Used By Mahatma Gandhi In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X