ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಚೆನ್ನೈ ಭಾರತದ ಪ್ರಮುಖ ನಗರಗಳಲ್ಲಿ ಒಂದು. ಈ ಕಾರಣಕ್ಕಾಗಿಯೇ ಚೆನ್ನೈನಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದೆ. ಇದರಿಂದಾಗಿ ಚೆನ್ನೈ ನಗರದ ವಿವಿಧ ರಸ್ತೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನ ದಟ್ಟಣೆ ಉಂಟಾಗಿರುತ್ತದೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈಗ ಚೆನ್ನೈನ ಪ್ರಮುಖ ಭಾಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಾಗುವುದು ಎಂದು ವರದಿಯಾಗಿದೆ. ಈ ಬಗ್ಗೆ ತಮಿಳುನಾಡು ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.

ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಶೀಘ್ರದಲ್ಲೇ ಈ ಫ್ಲೈ ಓವರ್ ನಿರ್ಮಾಣ ಕಾರ್ಯವು ಆರಂಭವಾಗಲಿದೆ. ರೂ.5 ಸಾವಿರ ಕೋಟಿ ವೆಚ್ಚದಲ್ಲಿ ಈ ಫ್ಲೈ ಓವರ್ ನಿರ್ಮಿಸಲಾಗುವುದು.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ದಕ್ಷಿಣ ಚೆನ್ನೈನ ಜನನಿಬಿಡ ರಸ್ತೆಯಾದ ವೇಲಾಚೇರಿಯ ವಿಜಯನಗರ ಜಂಕ್ಷನ್‌ನಲ್ಲಿ ನಿರ್ಮಿಸಲಾಗುವುದು. ಈ ಪ್ರದೇಶವು ತಂಬರಂ, ಕಿಂಡಿ ಹಾಗೂ ಹಲವು ಐಟಿ ಕಂಪನಿಗಳಿರುವ ರಸ್ತೆಗಳನ್ನು ಸಂಪರ್ಕಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಡಬಲ್ ಡೆಕ್ಕರ್ ಫ್ಲೈಓವರ್ ಎರಡು ಪಥಗಳನ್ನು ಹೊಂದಿರಲಿದೆ. ಮೂಲಗಳ ಪ್ರಕಾರ 640 ಮೀಟರ್ ಉದ್ದದ ಈ ಫ್ಲೈಓವರ್ ವೇಲಾಚೇರಿ ಬೈಪಾಸ್ ರಸ್ತೆಯಿಂದ ಪ್ರಾರಂಭವಾಗಿ ತಂಬರಂಗೆ ಸಾಗಲಿದೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಒಂದು ಕಿಲೋಮೀಟರ್ ಗಿಂತ ಹೆಚ್ಚು ಉದ್ದವಾಗಿರುವ ಈ ಫ್ಲೈ ಓವರ್ 15 ಮೀಟರ್ ಎತ್ತರವನ್ನು ಹೊಂದಿರಲಿದೆ. ಈ ಫ್ಲೈ ಓವರ್ ತಾರಮಣಿ ಹಾಗೂ ವೇಲಾಚೇರಿ ಬೈಪಾಸ್ ರಸ್ತೆಗಳನ್ನು ಸಂಪರ್ಕಿಸಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಪಾದಚಾರಿ ಪಥ ಹಾಗೂ ಮಳೆನೀರಿನ ಒಳಚರಂಡಿಗಳನ್ನು ಹೊಂದಿರಲಿದೆ. ಈ ಹಿಂದೆ ಸಿಂಗಲ್ ಲೇಯರ್ ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈಗ ಯೋಜನೆಯನ್ನು ಬದಲಿಸಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ನಿರ್ಧರಿಸಲಾಗಿದೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸಾಮಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ನಡುವೆ ಇತ್ತೀಚೆಗೆ ನಡೆದ ಮಾತುಕತೆಯ ಬಳಿಕ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗುವುದು ದೃಢಪಟ್ಟಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ತಯಾರಾಗುವ ಈ ಫ್ಲೈ ಓವರ್ ಕಾಮಗಾರಿ ನಿರ್ಮಾಣಗೊಳ್ಳಲು 5 ರಿಂದ 6 ವರ್ಷಗಳು ಬೇಕಾಗುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಡಬಲ್ ಡೆಕ್ಕರ್ ಫ್ಲೈಓವರ್ ದಕ್ಷಿಣ ಚೆನ್ನೈನಲ್ಲಿನ ಸಂಚಾರ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದರು.

ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಡಬಲ್ ಡೆಕ್ಕರ್ ಫ್ಲೈಓವರ್ ದಕ್ಷಿಣ ಚೆನ್ನೈನಲ್ಲಿನ ಸಂಚಾರ ಸಮಸ್ಯೆಯನ್ನು ಪರಿಹರಿಸಲಿದ್ದು, ಪ್ರಮುಖ ನಗರದಲ್ಲಿನ ಟ್ರಾಫಿಕ್ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಲಿದೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಹಿಂದೆ ಯೋಜಿಸಲಾಗಿದ್ದ ಸಿಂಗಲ್ ಫ್ಲೈಓವರ್‌ಗೆ ಕಾಮಗಾರಿಗೆ ರೂ.3,100 ಕೋಟಿ ವೆಚ್ಚವಾಗುವುದೆಂದು ಹೇಳಲಾಗಿತ್ತು. ಈಗ ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಿಂದಾಗಿ ಇದರ ವೆಚ್ಚ ರೂ.5,000 ಕೋಟಿಗಳಾಗಲಿದೆ. ಈ ಫ್ಲೈ ಓವರ್ ದೇಶದ ಮೂರನೇ ಹಾಗೂ ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ಆಗಿರಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಮುಂಬೈನಲ್ಲಿ ಈಗಾಗಲೇ ಈ ರೀತಿಯ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಾಗಿದೆ. 2014ರಲ್ಲಿ ನಿರ್ಮಾಣಗೊಂಡ ಈ ಫ್ಲೈ ಓವರ್ ದೇಶದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಫ್ಲೈ ಓವರ್ ದೇಶದ ಮೂರನೇ ಹಾಗೂ ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ಆಗಿರಲಿದ್ದು, ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ಡಬಲ್ ಡೆಕ್ಕರ್ ಫ್ಲೈ ಓವರ್ ಕಾರ್ಯನಿರ್ವಹಿಸುತ್ತಿವೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಸುಮಾರು 1.8 ಕಿ.ಮೀ ಉದ್ದವಿರುವ ಈ ಫ್ಲೈ ಓವರ್ ಮುಂಬೈನ ಸಾಂತಕ್ರೂಜ್ ಹಾಗೂ ಸೆಂಪೂರ್ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ರೂ.450 ಕೋಟಿ ವೆಚ್ಚದಲ್ಲಿ ಈ ಫ್ಲೈಓವರ್ ಅನ್ನು ನಿರ್ಮಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ದೇಶದ ಎರಡನೇಯ ಹಾಗೂ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಈ ಫ್ಲೈ ಓವರ್ ರಾಗಿಗುಡ್ಡ ಹಾಗೂ ಸಿಲ್ಕ್ ಬೋರ್ಡ್ ನಡುವೆ ಸಂಪರ್ಕ ಕಲ್ಪಿಸುತ್ತದೆ.

ದಕ್ಷಿಣ ಭಾರತದ ಎರಡನೇ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ಈ ಫ್ಲೈಓವರ್‌ನ ಕಾಮಗಾರಿಗಳು ಮುಂದಿನ ವರ್ಷದ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. ಈ ಫ್ಲೈಓವರ್‌ಗಳಿಗಿಂತ ಹೆಚ್ಚಿನ ವೆಚ್ಚದಲ್ಲಿ ಚೆನ್ನೈನಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಾಗುವುದು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Central government gives nod for Chennai double decker flyover project. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X