ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಮಾತ್ರ ಕದಿಯುತ್ತಿದ್ದ ಮೂವರನ್ನು ಇತ್ತೀಚಿಗೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ ಅನ್ನು ಬಂಧಿಸಲು ಅಭಿರಾಮಪುರಂ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸರವಣಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಸರವಣಕುಮಾರ್ ಅಭಿರಾಮಪುರಂ ಪೊಲೀಸ್ ಠಾಣೆಗೆ ಕೆಲ ತಿಂಗಳ ಹಿಂದಷ್ಟೇ ವರ್ಗವಾಗಿ ಬಂದರು. ಅವರ ಸಹೋದ್ಯೋಗಿಯೊಬ್ಬರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್ ಕಳುವಾದ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸರವಣ ಕುಮಾರ್ ಹಳೆಯ ಅಪರಾಧಿಗಳು ಹಾಗೂ ಬೈಕ್ ಕಳ್ಳತನದ ಬಗ್ಗೆ ಮಾಹಿತಿ ಪಡೆಯಲು ಚೆನ್ನೈನ ವಿವಿಧ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದರು.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ತನಿಖೆ ವೇಳೆಯಲ್ಲಿ ಚೆನ್ನೈನ 24 ಪೊಲೀಸ್ ಠಾಣೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕಳವು ಮಾಡಿರುವ ಬಗ್ಗೆ ದೂರುಗಳು ದಾಖಲಾಗಿರುವ ಬಗ್ಗೆ ತಿಳಿದು ಬಂದಿದೆ. ದುಬಾರಿ ಬೆಲೆಯೆಂಬ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕಳವು ಮಾಡಲಾಗಿದೆ ಎಂಬ ಅನುಮಾನ ಅವರಿಗೆ ಮೂಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಪ್ರಕರಣದ ವಿಚಾರಣೆಯ ಭಾಗವಾಗಿ ಬೈಕುಗಳು ಕಳುವಾದ ಸ್ಥಳಗಳಿಗೆ ತೆರಳಿ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆದರೆ ಕಳ್ಳರು ಸಿಸಿಟಿವಿ ಕ್ಯಾಮೆರಾಗಳಿಲ್ಲದ ಸ್ಥಳಗಳಲ್ಲಿ ಮಾತ್ರ ಕಳುವು ಮಾಡಿರುವುದು ಕಂಡು ಬಂದಿದೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಇದರಿಂದಾಗಿ ಸರವಣಕುಮಾರ್ ರವರಿಗೆ ಕಳ್ಳರನ್ನು ಪತ್ತೆ ಹಚ್ಚಲು ಕಷ್ಟವಾಗಿದೆ. ಸುಮಾರು 56 ದಿನಗಳವರೆಗೆ ತನಿಖೆ ನಡೆಸಿದರೂ ಯಾವುದೇ ಸುಳಿವು ದೊರೆಯಲಿಲ್ಲ. ಆದರೂ ಸರವಣಕುಮಾರ್ ತನಿಖೆಯಿಂದ ಹಿಂದೆ ಸರಿದಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಸತತ ಪ್ರಯತ್ನದ ಫಲವಾಗಿ ಮೊದಲ ಆರೋಪಿಯ ಬಗ್ಗೆ ಆಗಸ್ಟ್ 6ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸುಳಿವು ದೊರೆತಿದೆ. ಈ ಸುಳಿವಿನ ಆಧಾರದ ಮೇಲೆ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಆತ ನೀಡಿದ ಮಾಹಿತಿಯ ಮೇರೆಗೆ ಈ ಬೈಕುಗಳ ಕಳ್ಳತನದಲ್ಲಿ ಭಾಗಿಯಾಗಿದ್ದ ಉಳಿದವರನ್ನು ಬಂಧಿಸಲಾಗಿದೆ. ಯಾರೂ ಪತ್ತೆ ಹಚ್ಚ ಬಾರದು ಎಂಬ ಕಾರಣಕ್ಕೆ ಕಳುವು ಮಾಡಿದ ಬೈಕುಗಳನ್ನು ಈ ಆರೋಪಿಗಳು ಜನ ಸಂದಣಿ ಇರುವ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಒಂದೆರಡು ದಿನಗಳ ನಂತರ ಈ ಗ್ಯಾಂಗ್‌ನ ಸದಸ್ಯರು ಆ ಬೈಕ್‌ ಅನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದರು. ಈ ರೀತಿ ವಿವಿಧ ಪ್ರದೇಶಗಳಲ್ಲಿ ನಿಲ್ಲಿಸುವ ಮೂಲಕ ಬೇರೆ ಜಿಲ್ಲೆಗಳಿಗೆ ಕಳ್ಳಸಾಗಣೆ ಮಾಡಿರುವುದು ತಿಳಿದು ಬಂದಿದೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಈ ಬಗ್ಗೆ ಮಾತನಾಡಿರುವ ಹೆಡ್ ಕಾನ್‌ಸ್ಟೆಬಲ್ ಸರವಣಕುಮಾರ್, ವಾಹನಗಳ್ಳರು ಈ ತಂತ್ರವನ್ನು ಬಳಸಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಇದಕ್ಕಾಗಿ ಈ ಗ್ಯಾಂಗ್ ನೊಚಿಕುಪ್ಪಂ, ಡುಮಿಲ್ಕುಪ್ಪಂ, ಪಟ್ಟಿನಪಕ್ಕಂ ಹಾಗೂ ಸಂತೋಮ್ ಸೇರಿದಂತೆ ಇತರ ಪ್ರದೇಶಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಮೊದಲು ಮೂರು ಆರೋಪಿಗಳನ್ನು ಬಂಧಿಸಲಾಯಿತು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಇನ್ನೂ ಹಲವರನ್ನು ಬಂಧಿಸಲಾಗಿದೆ. ಈವರೆಗೆ ಒಟ್ಟು ಹತ್ತು ಜನರನ್ನು ಬಂಧಿಸಲಾಗಿದೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಈ ಪೈಕಿ ಹಲವರು ವಿದೇಶಗಳಿಂದ ಬಂದವರು ಎಂದು ತಿಳಿದುಬಂದಿದೆ. ಸದ್ಯಕ್ಕೆ 26 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಬೈಕುಗಳನ್ನು ಅವುಗಳ ಮಾಲೀಕರಿಗೆ ತಲುಪಿಸಲು ಉದ್ದೇಶಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಮಾರುಕಟ್ಟೆಯಲ್ಲಿ ರೂ.2.5 ಲಕ್ಷಗಳವರೆಗೆ ಮಾರಾಟವಾಗುವ ಬೈಕ್‌ಗಳನ್ನು ಈ ಗ್ಯಾಂಗ್ ರೂ.30 ಸಾವಿರದಿಂದ ರೂ.40,000ಗಳಿಗೆ ಮಾರಾಟ ಮಾಡಿದೆ ಎಂಬುದು ಪೊಲೀಸರ ತನಿಖೆ ವೇಳೆಯಲ್ಲಿ ಕಂಡು ಬಂದಿದೆ.

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಕದ್ದ ಬೈಕುಗಳನ್ನು ಮಾರಾಟ ಮಾಡುವುದಕ್ಕಾಗಿ ಈ ಗ್ಯಾಂಗ್ ವಾಟ್ಸಾಪ್ ಹಾಗೂ ಫೇಸ್‌ಬುಕ್ ನಲ್ಲಿ ಗ್ರೂಪ್ ಗಳನ್ನು ರಚಿಸಿತ್ತು. ಹೆಡ್ ಕಾನ್‌ಸ್ಟೆಬಲ್ ಸರವಣಕುಮಾರ್ ಅವರ ಕಠಿಣ ಪರಿಶ್ರಮದಿಂದ ಈ ಎಲ್ಲ ಮಾಹಿತಿಗಳು ಹೊರ ಬಂದಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೆಡ್ ಕಾನ್‌ಸ್ಟೆಬಲ್ ಪರಿಶ್ರಮದಿಂದ ಹೊರ ಬಂತು ಬೈಕ್ ಕಳ್ಳತನದ ರಹಸ್ಯ

ಸರವಣಕುಮಾರ್ ಅವರನ್ನು ತಮಿಳುನಾಡು ಪೊಲೀಸ್ ಇಲಾಖೆ ಶ್ಲಾಘಿಸಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ಆರ್ ಸುಧಾಕರ್ ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಟಿಎನ್‌ಎಂ ವರದಿ ಮಾಡಿದೆ.

Most Read Articles

Kannada
English summary
Chennai cop finds out secret behind royal enfield bike theft. Read in Kannada.
Story first published: Tuesday, October 20, 2020, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X