ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕ್ಕಿಬಿದ್ದಿದ್ದು ಹೀಗೆ...

ಸಾವಿರಾರು ರುಪಾಯಿ ಹಣ ಕೂಡಿಟ್ಟು ಕೊಂಡ ವಾಹನವು ಕಳುವಾದರೆ ಆ ನೋವನ್ನು ಹೇಳಲು ಸಾಧ್ಯವಾಗುವುದಿಲ್ಲ. ವಾಹನ ಕಳುವಾದುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕೆಲವೊಮ್ಮೆ ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲಿಯು ಬೈಕ್ ಅನ್ನು ಟ್ರ್ಯಾಕ್ ಮದುವುದು ಒಂದು ದೊಡ್ಡ ತಲೆ ನೋವು ಎನ್ನಬಹುದು. ಆದರೆ ನಿಮ್ಮ ಬೈಕಿನಲ್ಲಿ ಕೇವಲ ರೂ.1500 ಕೊಟ್ಟು ಈ ಡಿವೈಸ್ ಹಾಕಿಕೊಂಡರೆ ನಿಮ್ಮ ಕಳುವಾದ ಬೈಕ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಇದಕ್ಕೆ ಸಂಭಂದಿಸಿದ ಘಟನೆಯೊಂದು ಚೆನ್ನೈ ನಗರದಲ್ಲಿ ನಡೆದಿದ್ದು, ಬಜಾಜ್ ಪಲ್ಸರ್ ಎನ್ಎಸ್200 ಮಾಲೀಕನೊಬ್ಬ ತನ್ನ ಬೈಕಿಗೆ ರೂ. 1500 ನೀಡಿ ಜಿಪಿಎಸ್ ಟ್ರಾಕರ್ ಹಾಕಿಸಿಕೊಂಡಿದ್ದ, ಆತನ ಬೈಕ್ ಕಳ್ಳರು ಕದ್ದಾಗ ಈ ಜಿಪಿಎಸ್ ಟ್ರ್ಯಾಕರ್ ಅತನ ಬೈಕ್ ಅನ್ನು ಕೇವಲ ನಿಮಿಷಗಳಲ್ಲಿ ಪತ್ತೆಹಚ್ಚಲು ಸಹಕಾರಿಯಾಗಿದ್ದು, ಇದೀಗ ಬೈಕ್ ಅನ್ನು ಕದ್ದ ಖದೀಮರು ಪೊಲೀಸರ ವಿಚಾರಣೆಯಲ್ಲಿದ್ದಾರೆ.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಬೈಕ್ ಕಳುವಾಗಿದ್ದು ಮತ್ತು ದೊರಕಿದ್ದು ಹೀಗೆ

19 ವರ್ಷದ ಪುಷ್ಪರಾಜ್ ಈ ಮಧ್ಯಯೆ ಹೊಸ ಬಜಾಜ್ ಪಲ್ಸರ್ ಎನ್ಎನ್200 ಬೈಕ್ ಅನ್ನು ಖರೀದಿ ಮಾಡಿದ್ದ. ಈಗಿನ ಯುವಕರಿಗೆ ಟೆಕ್ನಾಲಜಿ ಬಗ್ಗೆ ಹೇಳಿಕೊಡಬೇಕೆ.? ಪುಷ್ಪರಾಜ್ ತನ್ನ ಬುದ್ಧಿ ಉಪಯೋಗಿಸಿ ಬೈಕ್ ಖರೀದಿಸಿದ ತಕ್ಷಣವೇ ಅದಕ್ಕೆ ಜಿಪಿಎಸ್ ಟ್ರಾಕರ್ ಅನ್ನು ಹಾಕಿಸಿದ್ದ. ಕಳೆದ ಶನಿವಾರ (16-02-2019) ರಂದು ತನ್ನ ಮನೆಯ ಹೊರಗೆಯೆ ಪಾರ್ಕ್ ಮಾಡಿದ್ದ ಬೈಕ್ ಕಾಣದಾಯಿತು.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ತಕ್ಷಣವೇ ಕಳುವಾದ ಮಾಹಿತಿಯನ್ನು ಮನೆಯ ಓನರ್‍‍ಗೆ ತಿಳಿಹೇಳಿ. ಆತನ ಮತ್ತೊಬ್ಬ ಸ್ನೇಹಿತನನ್ನು ಕರೆಸಿಕೊಂಡರು. ಆತನಿಗೆ ಜಿಪಿಎಸ್ ಟ್ರ್ಯಾಕರ್ ಅನ್ನು ಹೇಗೆ ಬಳಸುವುದು ಎಂದು ಕೇಳಿ, ಬೈಕ್ ಅನ್ನು ಪತ್ತೆ ಹಚ್ಚಲು ಶುರು ಮಾಡಿದರು. ಆದರೆ ಆಗಲೇ ಕಳುವಾದ ಜಾಗದಿಂದ ಬಹಳಷ್ಟು ದೂರ ಬೈಕ್ ಅನ್ನು ಕೊಂಡೊಯ್ಯಲಾಗಿತ್ತು.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಯುವಕರಿಗೆ ತಕ್ಷಣವೇ ಸಹಕರಿಸಿದ ಪೊಲೀಸರು

ಬೈಕ್ ಕಳುವಾದ ತಕ್ಷಣವೇ ಪುಷ್ಪರಾಜ್ ಮತ್ತು ಆತನ ಸ್ನೇಹಿತ ಸೆಕ್ರಟೇರಿಯಟ್ ಕಾಲನಿ ಪೊಲೀಸ್ ಠಾಣೆಯಲ್ಲಿದ್ದ ಇನ್ಸ್ಪೆಕ್ಟರ್ ಇ.ರಾಜೇಶ್ವರಿಯವರಿಗೆ ದೂರು ನೀಡಿದರು. ಮಹಿಳಾ ಇನ್ಸ್ಪೆಕ್ಟರ್ ಅದೇ ಠಾಣೆಯಲಿದ್ದ ಸಬ್-ಇನ್ಸ್ಪೆಕ್ಟರ್ ಶಣ್ಮುಗಸುಂದರಂ ಅವರನ್ನು ಬೈಕ್ ಮಾಲೀಕರ ಜೊತೆಗೆ ಆಟೋನಲ್ಲಿ ಕಳುಹಿಸಲಾಯಿತು.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಪುಷ್ಪರಾಜ್ ಮತ್ತು ಆತನ ಸ್ನೇಹಿತ ಜಿಪಿಎಸ್ ಟ್ರ್ಯಾಕರ್ ಅನ್ನು ಫಾಲೋ ಮಾಡಿಕೊಂಡು ಆಟೋದಲ್ಲಿಯೆ ಪೊಲೀಸ್‍‍ನೊಂದಿಗೆ ತೆರಳಿದರು. ಈಸ್ಟ್ ಕೋಸ್ಟ್ ರೋಡ್ ಹತ್ತಿರ ಇರುವ ತಿರುವಣ್ಮಾಯುರ್ ರಸ್ತೆಯಲ್ಲಿ ಕಳುವಾದ ಬೈಕ್ ಸಂಚರಿಸುವುದನ್ನು ಪತ್ತೆ ಹಚ್ಚಿದರು.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಬೈಕ್ ಕಳ್ಳತನ ಮಾಡಿದ್ದು ಆತನ ಸ್ನೇಹಿತನೆ.

ಹಲವಾರು ಕಡೆ ಸ್ಟಾಪ್ ಮಾಡಿಕೊಂಡು ಕೊನೆಗೆ ಕೂವತ್ತೂರ್ ಬಸ್ ಸ್ಟ್ಯಾಂಡ್ ಹತ್ತಿರ ವಿಶ್ರಾಂತಿ ಪಡೆಯುತ್ತಿದ್ದ ಖದೀಮರನ್ನು ಮಾಲೀಕ ಮತ್ತು ಪೊಲೀಸರು ಪತ್ತೆ ಹಚ್ಚಲಾಗಿತ್ತು. ದೂರದಿಂದ ಎಲ್ಲವನ್ನು ಗಮನಿಸುತ್ತಿದ್ದ ಸಬ್-ಇನ್ಸ್ಪೆಕ್ಟರ್ ಮಾಲೀಕರನ್ನು ಖದೀಮನ ಹತ್ತಿರ ಕಳುಹಿಸಲಾಗಿತು. ಆದರೆ ಬೈಕ್ ಮಾಲೀಕ ಪುಷ್ಪರಾಜ್‍‍ಗೆ ಅಲ್ಲಿ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ಆ ಬೈಕ್ ಕದ್ದದ್ದು ಆತನ ಹಳೆಯ ಕ್ಲಾಸ್‍ಮೇಟ್ ಮೆಗಾಸೂರ್ಯ.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ಕಳ್ಳರು ಈಗ ಪೊಲೀಸರ ಕೈಯಲ್ಲಿ

ಖದೀಮರಾದ ಮೆಗಾಸೂರ್ಯ ಮತ್ತು ಆತನ ಸ್ನೇಹಿತ ವಿನೋದ್ ಕುಮಾರ್. ಬೈಕ್ ಕಳ್ಳತನದ ಕೇಸ್‍ನಲ್ಲಿ ಸಿಕ್ಕಿಕೊಂಡಿದ್ದು, ಇದೀಗ ಪೊಲೀಸರ ವಿಚಾರಣೆಯಲ್ಲಿದ್ದು, ಮುಂದೆ ರಿಮ್ಯಾಂಡ್ ರೂಂಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಹಳೆಯ ಕ್ಲಾಸ್‍ಮೇಟ್‍ನ ಬೈಕ್ ಕದ್ದ ಯುವಕ ಸಿಕಿಬಿದ್ದದ್ದು ಹೀಗೆ...

ನಿಮ್ಮ ಆಪ್ತ ಜಿಪಿಎಸ್ ಟ್ರ್ಯಾಕರ್

ಹೊಸ ಬೈಕ್ ಖರೀದಿಸಿದ್ದ ಸಮಯದಲ್ಲಿ ತಕ್ಷಣವೇ ಅದಕ್ಕೆ ಜಿಪಿಎಸ್ ಟ್ರ್ಯಾಕರ್ ಅನ್ನು ಅಳವಡಿಸಿಕೊಳ್ಳಿ. ನಿಮ್ಮ ಬೈಕಿನ ಸೈಡ್ ಲಾಕ್, ಗೇರ್ ಲಾಕ್ ಮತ್ತು ವ್ಹೀಲ್ ಲಾಕ್ ಅನ್ನು ಬ್ರೇಕ್ ಮಾಡಿಯೂ ಕೂಡಾ ನಿಮ್ಮ ಬೈಕ್ ಕಾಣೆಯಾದಲ್ಲಿ ರೂ. 1500ದ ಜಿಪಿಎಸ್ ಟ್ರ್ಯಾಕರ್ ನಿಮ್ಮ ಬೈಕ್ ಅನ್ನು ಹುಡುಕುವುದರಲ್ಲಿ ಬಹಳ ಸಹಾಯಕವಾಗಲಿದೆ.

Source:Times Of India

Most Read Articles

Kannada
English summary
Chennai Youth Found His Stolen Bajaj Pulsar NS200 Baike With The Help Of GPS Tracker. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X