ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಕರೋನಾ ವೈರಸ್'ನಿಂದಾಗಿ ಹಲವಾರು ಜನರು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಜನ ಜೀವನ ಕಳೆದ ಒಂದೂವರೆ ವರ್ಷದಿಂದ ಕರೋನಾ ವೈರಸ್ ಕಾರಣಕ್ಕೆ ತತ್ತರಿಸಿ ಹೋಗಿದೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗಿದ್ದವರು ಯಾವುದೇ ಕೆಲಸವಿಲ್ಲದೆ ಭಾರತಕ್ಕೆ ಹಿಂತಿರುಗಿದರು. ಇನ್ನೇನು ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಷ್ಟರಲ್ಲಿಯೇ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯಿತು.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಕರೋನಾ ವೈರಸ್ ಕಾರಣಕ್ಕೆ ಹಲವಾರು ಜನರು ಉದ್ಯೋಗ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಾತ್ರವಲ್ಲದೇಪದವೀಧರರು ಸಹ ಉಳಿವಿಗಾಗಿ ಲಭ್ಯವಿರುವ ಉದ್ಯೋಗಗಳನ್ನು ಮಾಡುತ್ತಿದ್ದಾರೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಈ ಲೇಖನದಲ್ಲಿ ತಮ್ಮ ಬುದ್ದಿವಂತಿಕೆಯಿಂದ ವಿಭಿನ್ನ ಸಾಹಸಕ್ಕೆ ಕೈ ಹಾಕಿರುವ ಯುವಕನ ಬಗೆಗಿನ ಸುದ್ದಿಯನ್ನು ನೋಡೋಣ. ಚಿಕ್ಕಮಗಳೂರಿನ 32 ವರ್ಷದ ಶಿವಪ್ಪ ಎಂಬ ಈ ಯುವಕ ಮೊಬೈಲ್ ಸಲೂನ್ ತೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಕಳೆದ ವರ್ಷ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿದ ಕಾರಣಕ್ಕೆ ದಿನ ನಿತ್ಯದ ದುಡಿಮೆಯನ್ನು ನಂಬಿಕೊಂಡಿದ್ದವರು ಕೆಲಸ ಕಳೆದುಕೊಂಡರು. ಅಂತಹ ಜನರಲ್ಲಿ ಶಿವಪ್ಪ ಸಹ ಒಬ್ಬರು. ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ರಾಯಚೂರಿನಿಂದ ಚಿಕ್ಕಮಗಳೂರಿಗೆ ಬಂದು ನೆಲೆಸಿದರು.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಅವರು ಕ್ಷೌರ ವೃತ್ತಿಯನ್ನು ಶುರು ಮಾಡಿದ್ದರು. ಲಾಕ್‌ಡೌನ್ ನಂತರ ಏನು ಮಾಡಬೇಕೆಂದು ತೋಚದೇ ಗೊಂದಲದಲ್ಲಿದ್ದ ಶಿವಪ್ಪನವರಲ್ಲಿ ಹೊಸ ಆಲೋಚನೆ ಹುಟ್ಟಿದೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಮೊಬೈಲ್ ತರಕಾರಿ ಅಂಗಡಿಗಳಂತೆಯೇ ಮೊಬೈಲ್ ಹೇರ್ ಸಲೂನ್ ಏಕೆ ಆರಂಭಿಸಬಾರದು ಎಂಬ ಆಲೋಚನೆ ಅವರಲ್ಲಿ ಮೂಡಿದೆ. ನಂತರ ಅವರು ಸಣ್ಣ ಗೂಡ್ಸ್ ಆಟೋವನ್ನು ಖರೀದಿಸಿ ಅದನ್ನು ಮೊಬೈಲ್ ಸಲೂನ್ ಆಗಿ ಬದಲಿಸಿದ್ದಾರೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಈಗ ಅವರು ತಾವು ವಾಸಿಸುವ ಪ್ರದೇಶದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ತೆರಳಿ ಸೇವೆ ನೀಡುತ್ತಿದ್ದಾರೆ. ಫೇಸ್‌ಬುಕ್'ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಸಲೂನ್ ಮುಂದೆ ನಿಂತು ಪೋಸ್ ನೀಡುತ್ತಿದ್ದಿದ್ದು ಅವರಲ್ಲಿ ಹೊಸ ಆಲೋಚನೆ ಮೂಡುವಂತೆ ಮಾಡಿದೆ.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ತಮ್ಮ ಮೊಬೈಲ್ ಸಲೂನ್ ಬಗ್ಗೆ ಮಾತನಾಡಿರುವ ಶಿವಪ್ಪ ನಾನು ಮೊದಲು ತಿಂಗಳಿಗೆ ರೂ.10,000 ದುಡಿಯುತ್ತಿದ್ದೆ. ಆದರೆ ಈಗ ಮೊಬೈಲ್ ಸಲೂನ್ ಮೂಲಕ ದಿನಕ್ಕೆ ರೂ.1,500ದಿಂದ ರೂ.2,000 ಗಳಿಸುತ್ತಿರುವುದಾಗಿ ತಿಳಿಸಿದರು.

ಮೊಬೈಲ್ ಸಲೂನ್ ಮೂಲಕ ಹೊಸ ಕ್ರಾಂತಿಯನ್ನುಂಟು ಮಾಡಿದ ಚಿಕ್ಕಮಗಳೂರಿನ ಯುವಕ

ಶಿವಪ್ಪ ತನ್ನ ವಾಹನದಲ್ಲಿ ಚಿಕ್ಕಮಗಳೂರಿನ ಸುತ್ತ ಮುತ್ತಲಿರುವ ಜನರಲ್ಲಿ ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಶಿವಪ್ಪನವರು ತಮ್ಮ ಮೊಬೈಲ್ಸಲೂನ್'ಗೆ ಸಂಚಾರಿ ಹೆಬ್ಬುಲಿ ಹೇರ್ ಡ್ರೆಸರ್ ಎಂಬ ಹೆಸರನ್ನಿಟ್ಟಿದ್ದಾರೆ.

ಚಿತ್ರ ಕೃಪೆ: ಮೊದಲ ಚಿತ್ರವನ್ನು ನ್ಯೂಸ್ 18ನಿಂದ ಪಡೆಯಲಾಗಿದ್ದು, ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Chikkamagalur man starts a mobile saloon after lockdown. Read in Kannada.
Story first published: Wednesday, June 23, 2021, 21:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X