ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಪ್ರಪಂಚದಾದ್ಯಂತ ದಿನಕ್ಕೆ ಸಾವಿರಾರು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ಸಂಭವಿತ ಕಾರಣಗಳಿಂದ ಉಂಟಾದ ಅಪಘಾತಗಳಾದರೆ ಇನ್ನು ಕೆಲವು ಚಾಲಕರ ಬೇಜವಾಬ್ದಾರಿತನದಿಂದ ಸಂಭವಿಸುತ್ತದೆ. ಈ ಲೇಖದನದಲ್ಲಿ ನಾವು ಹೇಳಲು ಹೊರಟಿರುವ ಘಟನೆ ಕೂಡಾ ಅಂತದ್ದೆ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಏಕೆಂದರೆ ಇಲ್ಲಿ ಚಾಲನೆಯಲ್ಲಿರುವ ಕಾರಿನಿಂದ ಮಗುವೊಂದು ಹತಾಟ್ಟನೆ ಕಾರಿನಿಂದ ಕೆಳಗೆ ಬಿದ್ದಿದ್ದು, ಇದರಿಂದ ಸೀಟ್ ಬೆಲ್ಟ್ ಪ್ರಾಮುಖ್ಯತೆ ಮತ್ತು ಚಾಲಕರ ನಿರ್ಲಕ್ಷತೆಯನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಕಾರಿನ ಡ್ಯಾಶ್‍ಬೋರ್ಡ್ ಮೇಲೆ ಅಳವಡಿಸಲಾದ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾಗಿದೆ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ವೈರಲ್ ಆದ ವಿಡಿಯೋನಲ್ಲಿ ಗಮನಿಸುವುದಾದರೆ ನಿರಂತರವಾಗಿ ಚಲಿಸುತ್ತಿರುವ ವಾಹನಗಳಿಂದ ತುಂಬಿದ ರಸ್ತೆಯಲ್ಲಿ, ಕಾರೊಂದರಿಂದ ಮಗುವು ಹೊರ ಬಿದ್ದಿರುವ ದೃಶ್ಯವನ್ನ ಕಾಣಬಹುದಾಗಿದೆ. ಇದನ್ನು ಕಂಡು ಹಿಂದೆ ಬಂದ ಕಾರೊಂದು ತಕ್ಷಣವೇ ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಲಾಗಿದೆ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಕ್ಯಾಮೆರಾದಿಂದ ನಡೆದ ಘಟನೆಯನ್ನು ರೆಕಾರ್ಡ್ ಮಾಡಿಕೊಂಡು ಬಂದತಹ ಕಾರು ಬ್ರೇಕ್ ಹಾಕಿತ್ತು. ಆದರೆ ಮಗು ಯಾವ ಕಾರಿನಿಂದ ಕೆಳಕ್ಕೆ ಬಿತ್ತೋ ಆ ಕಾರು ಚಾಲಕನು ಮಾತ್ರ ಏನು ಆಗಲೇ ಇಲ್ಲ ಎಂಬ ರೀತಿ ಮುಂದಕ್ಕೆ ಸಾಗುತ್ತಲೇ ಇದ್ದ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಎಸ್‍ಯುವಿ ಕಾರಿನಿಂದ ಹೊರ ಬಂದ ಚಾಲಕನು ತಕ್ಷಣವೆ ಮಗುವನ್ನು ಕೈಗೆತ್ತಿಕೊಂಡು ಆ ಅಂಬೆಗಾಲಿಡುವ ಮಗುವನ್ನು ರಕ್ಷಿಸಲು ಬೇರೆ ಮಾರ್ಗವು ತೋಚದೆಯೆ ಆತನ ಕಾರಿಗೆ ಕರೆದೊಯ್ಯುತ್ತಾರೆ. ಮಗುವನ್ನು ತನ್ನ ಕಾರಿನಲ್ಲಿ ಕುರಿಸಿಕೊಂಡು ಸುತ್ತಮುತ್ತಲಿನ ರಸ್ತೆಯಲ್ಲಿ ಸಂಚರಿಸಿ ಮಗುವು ಕೆಳಕ್ಕೆ ಬಿದ್ದ ಕಾರಿಗಾಗಿ ಹುಡುಕುತ್ತಾನೆ. ಆ ಕಾರು ಸಿಗದ ಕಾರಣ ಘತನೆ ಸಂಭವಿಸಿದ ಜಾಗಕ್ಕೆ ಬಂದು ಕಾಯುತ್ತಿದ್ದರು.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ವಿಡಿಯೋನಲ್ಲಿ ರೆಕಾರ್ಡ್ ಆಗದಿರುವ ವಿಚಾರ ಏನೆಂದರೆ, ಮಗುವನ್ನು ಬೀಳಿಸಿಕೊಂಡು ಮುಂದೇ ಹೋದ ತಾಯಿ ಕೆಲವು ಸಮಯದ ನಂತರ ಮಗುವನ್ನು ಹುಡುಕಲು ಬಂದರು. ನಿಜವಾಗಿಯು ಈ ಘಟನೆ ಸಂಭವಿಸಿದೆಯೊ ಇಲ್ಲವೋ ಎಂಬ ಕಾರಣಗಳು ಸರಿಯಾಗಿ ಆ ಸಮಯದಲ್ಲಿ ತಿಳಿದಿಲ್ಲವಾದರೂ, ನಾವು ಊಹಿಸಿಕೊಳ್ಳಬಹುದಾಗಿದೆ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಆದರೆ ಘಟನೆಯ ದೃಶ್ಯವನ್ನು ಗಮನಿಸಿದರೆ ಮಗುವನ್ನು ಚೈಲ್ಡ್ ಸೇಫ್ಟಿ ಸೀಟ್‍‍ನಲ್ಲಿ ಕೂರಿಸಲಾಗಿತ್ತು ಮತ್ತು ಪೋಷಕರ ನಿರ್ಲಕ್ಷ್ಯದ ಕಾರಣ ಅದನ್ನು ಗಟ್ಟಿಯಾಗಿ ಬಿಗಿಸಲಿಲ್ಲ ಹಾಗು ಕಾರಿನ ಬಾಗಿಲನ್ನು ಸಹ ಸರಿಯಾಗಿ ಮುಚ್ಚಿರಲಿಲ್ಲ ಎಂಬುದು ಖಚಿತವಾಗುತ್ತದೆ.

ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು

ಕಾರು ಚಲಾಯಿಸುತ್ತಿದ್ದ ಆ ತಾಯಿ ಎಷ್ಟು ಹೊತ್ತಿನಿಂದ ಡ್ರೈವಿಂಗ್ ಮಾಡುತ್ತಿದ್ದರೊ ಗೊತ್ತಿಲ್ಲವಾದರೂ, ಅದೃಷ್ಟವಷಾತ್ ಆ ಮಗುವು ಯಾವುದೋ ಒಂದು ಹೆದ್ದಾರಿಯಲ್ಲಿ ಬೀಳಲಿಲ್ಲ. ಅತಿಯಾದ ಟ್ರಾಫಿಕ್ ಮತ್ತು ಹೆಚ್ಚು ವೇಗದಲ್ಲಿ ವಾಹನಗಳು ಸಂಚರಿಸುವ ಆ ಹೆದ್ದಾರಿಯಲ್ಲಿ ಮಗುವು ಬಿದ್ದಿದ್ದರೆ ಕಾಪಾಡುವು ಕಷ್ಟವಾಗುತ್ತಿತ್ತು.

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ನೀವು ಪ್ರಯಾಣಿಕರ ಸ್ಥಾನದಲ್ಲಿ ಅಥವಾ ನೀವೇ ಚಾಲಕರ ಸ್ಥಾನದಲ್ಲಿದ್ದರೂ, ನಿಮ್ಮ ಸಹ ಪ್ರಯಾಣಿಕರು ಸೀಟ್‍‍ಬೆಲ್ಟ್ ಹಾಕಿದ್ದಾರೆಯೆ ಹಾಗು ಬಾಗಿಲುಗಳು ಸರಿಯಾಗಿ ಮುಚ್ಚಲಾಗಿದೆಯೊ ಇಲ್ಲವೋ ಎಂಬುದನ್ನು ಪದೇ ಪದೇ ಖಚಿತಪಡಿಸಿಕೊಳ್ಳಿ. ವಾಹನ ಚಾಲನೆ ಮಾಡುವಾಗ ನೆಮ್ಮದಿಯಾದ ಮನಸ್ಸಿನಿಂದ ಚಲಿಸಿ, ಎಕೆಂದರೆ ನೀವು ನಿಯಂತ್ರಣ ತಪ್ಪಿದರೆ ನಿಮಗಲ್ಲದೆಯೆ ಬೇರೆ ವಾಹನಕ್ಕು ಮತ್ತು ಅದರಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೂ ಸಹ ಗಾಯಗಳಾಗಬಹುದು.

ದಯವಿಟ್ಟು ಮದ್ಯ ಸೇವಿಸಿ ವಾಹನ ಚಾಲನೆ ಮಾಡಬೇಡಿ.

Most Read Articles

Kannada
English summary
Child Falls Out Of Moving Car — Emphasizes On Importance Of Seatbelts Again. Read In Kannada
Story first published: Wednesday, January 16, 2019, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more