ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಭಾರತದಲ್ಲಿ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಸಾಮಾನ್ಯ ಸಂಗತಿ. ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳ ಮೇಲೆ ತಮ್ಮ ನೆಚ್ಚಿನ ವ್ಯಕ್ತಿಯ ಅಥವಾ ಇಷ್ಟದ ದೇವರುಗಳ ಫೋಟೋಗಳನ್ನು ಅಂಟಿಸುತ್ತಾರೆ. ಇನ್ನೂ ಕೆಲವರು ತಮ್ಮ ಜಾತಿ ಸೂಚಕ ಸ್ಟಿಕ್ಕರ್'ಗಳನ್ನು ಅಂಟಿಸಿರುತ್ತಾರೆ.

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಕೆಲ ಯುವಕರು ಈ ವಾಹನವು ನನ್ನ ತಂದೆಯ ಉಡುಗೊರೆ, ನನ್ನ ತಾಯಿಯ ಉಡುಗೊರೆ, ಅಜ್ಜಿಯ ಉಡುಗೊರೆ ಎಂಬ ಸ್ಟಿಕ್ಕರ್'ಗಳನ್ನು ಅಂಟಿಸಿರುತ್ತಾರೆ. ಆಗಾಗ ಮಕ್ಕಳೂ ಸಹ ತಮ್ಮ ತಂದೆ, ತಾಯಿಯರಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈಗ ಮಗ ಹಾಗೂ ಮಗಳು ಸೇರಿಕೊಂಡು ತಮ್ಮ ತಂದೆ, ತಾಯಿಯ 25ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಅಕ್ಕ ಹಾಗೂ ತಮ್ಮ ಸೇರಿ ತಮ್ಮ ತಂದೆ ತಾಯಿಗೆ ಉಡುಗೊರೆ ನೀಡುತ್ತಿರುವ ವೀಡಿಯೊವನ್ನು ಠಾಕೂರ್ ಮೋಹನ್ ದೀಪ್ ಸಿಂಗ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಈ ವೀಡಿಯೊದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯನ್ನು ಹೊರ ಕರೆದೊಯ್ದು ಸರ್ಪ್ರೈಸ್ ಗಿಫ್ಟ್ ನೀಡುವುದನ್ನು ಕಾಣಬಹುದು. ಈ ವೇಳೆ ಅವರ ಸಂಬಂಧಿಕರೂ ಸಹ ಅಲ್ಲಿ ನೆರೆದಿದ್ದರು. ಈ ವೀಡಿಯೊದಲ್ಲಿ ಮಕ್ಕಳು ತಾಯಿ ಹಾಗೂ ತಂದೆ ಇಬ್ಬರನ್ನೂ ಕಣ್ಣುಮುಚ್ಚಿ ಶೋರೂಂಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು.

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ನಂತರ ಅವರ ಕಣ್ಣು ತೆರೆದು ಕಾರ್ ಅನ್ನು ತೋರಿಸುವ ಮಕ್ಕಳು ತಮ್ಮ ತಾಯಿ, ತಂದೆಯನ್ನು ಆಶ್ಚರ್ಯಚಕಿತರಾಗಿಸುತ್ತಾರೆ. ಈ ಎಲ್ಲಾ ಕ್ಷಣಗಳನ್ನು ಅವರ ಸ್ನೇಹಿತ ರೆಕಾರ್ಡ್ ಮಾಡಿ ಈ ಸಂತಸದ ಕ್ಷಣಗಳನ್ನು ಸ್ಮರಣೀಯವಾಗಿಸಿದ್ದಾನೆ. ಚಿತ್ರಕೃಪೆ: ಠಾಕೂರ್ ಮೋಹನ್ ದೀಪ್ ಸಿಂಗ್

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಅಂದ ಹಾಗೆ ಕಿಯಾ ಸೊನೆಟ್ ಭಾರತದಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಮಾರುತಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಮಕ್ಕಳು ತಮ್ಮ ಹೆತ್ತವರಿಗಾಗಿ ಸೊನೆಟ್ ಎಸ್‌ಯುವಿಯ ಜಿಟಿ ಲೈನ್ ಮಾದರಿಯನ್ನು ಖರೀದಿಸಿದ್ದಾರೆ. ಈ ಮಾದರಿಯು ಸೊನೆಟ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯಾಗಿದೆ. ಈ ಮಾದರಿಯು ಐಷಾರಾಮಿ ಫೀಚರ್'ಗಳ ಜೊತೆಗೆ ಸುರಕ್ಷತೆಗಾಗಿಯೂ ಹೆಚ್ಚಿನ ಫೀಚರ್'ಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ಈ ಎಸ್‌ಯುವಿಯಲ್ಲಿ ವೆಂಟೆಡ್ ಸೀಟ್, ಎಲೆಕ್ಟ್ರಿಕ್ ಸನ್‌ರೂಫ್, ಎಲ್‌ಇಡಿ ಹೆಡ್‌ಲೈಟ್‌, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಬೋಸ್ ಸ್ಪೀಕರ್ ಸಿಸ್ಟಂ, ರೇರ್ ಎಸಿ ವೆಂಟ್ಸ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಕಿಯಾ ಸೊನೆಟ್ ಜಿಟಿ ಲೈನ್ ಮಾದರಿಯನ್ನು 1.0-ಲೀಟರ್, ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು

ವೀಡಿಯೊದಲ್ಲಿರುವ ಮಕ್ಕಳು ತಮ್ಮ ತಂದೆ, ತಾಯಿಗೆ ಉಡುಗೊರೆ ನೀಡಿದ ಕಾರು ಯಾವ ಎಂಜಿನ್ ಹೊಂದಿದೆ ಎಂಬುದು ತಿಳಿದು ಬಂದಿಲ್ಲ. ಈ ಕಾರಿನ ಬೆಲೆ ರೂ.6.79 ಲಕ್ಷಗಳಿಂದ ರೂ.11.99 ಲಕ್ಷಗಳಾಗಿದೆ.

Most Read Articles

Kannada
English summary
Children gifts new Kia Sonet SUV to their parents. Read in Kannada.
Story first published: Monday, March 8, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X