ಫೇಮಸ್ ಐಷಾರಾಮಿ ಕಾರುಗಳ ಡಿಸೈನ್ ನಕಲು ಮಾಡಿ ತಯಾರಿಸಲಾದ ಚೈನಾ ಕಾರುಗಳಿವು..!

By Manoj B.k

ಚೀನಾ ಎಂದ ತಕ್ಷಣವೇ ನೆನಪಿಗೆ ಬರೋದು ಅವರು ಇನ್ನಿತರೆ ಹೆಸರಾಂತ ಕಂಪನಿಗಳ ವಸ್ತುಗಳನ್ನು ನಕಲು ಮಾಡುವುದು ಮತ್ತು ಅವರ ಶೈಲಿಯನ್ನೇ ಹೋಲುವ ಉತ್ಪನ್ನಗಳನ್ನು ಸಿದ್ದಪಡಿಸುವುದರಲ್ಲಿ ಎತ್ತಿದ ಕೈ. ಹೀಗಾಗಿ ಅವರು ನಕಲು ಮಾಡದ ವಸ್ತುಗಳೇ ಇಲ್ಲ ಎಂದ್ರೆ ತಪ್ಪಾಗುವುದಿಲ್ಲ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಚೀನಾದಲ್ಲಿ ಕಳೆದ ಅನೇಕ ವರ್ಷಗಳಿಂದ ನಕಲು ವಸ್ತುಗಳ ಉತ್ಪಾದನೆ ಮತ್ತು ಮಾರಾಟವೇ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಇವರು ಕೇವಲ ಸಣ್ಣ ಪುಟ್ಟ ವಸ್ತುಗಳನ್ನು ಮಾತ್ರವಲ್ಲದೆ ಅಲ್ಲಿನ ವಾಹನ ತಯಾರಕರು ಕೂಡಾ ನಕಲು ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಕೆಲವು ಐಷಾರಾಮಿ ಕಾರುಗಳ ಡಿಸೈನ್‌ಗಳನ್ನೇ ಕದ್ದು ಯಥಾವತ್ತಾಗಿ ನಕಲಿ ಕಾರುಗಳನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದಾರೆ. ಹಾಗಾದ್ರೆ ಈ ಕಾರುಗಳು ಯಾವವು? ಇಲ್ಲಿದೆ ನೋಡಿ ನಕಲಿ ಕಾರುಗಳ ಅಸಲಿಯತ್ತು.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಜೆಎಸಿ ಎ6 - ಆಡಿ ಎ6

ಜೆಎಸಿ ಕೇವಲ ಆಡಿ ಎ6 ಕಾರಿನ ವಿನ್ಯಾಸವನ್ನು ನಕಲು ಮಾಡುವುದಲ್ಲದೇ ಕಾರಿನ ಹೆಸರನ್ನು ಸಹ ಕಾಪಿ ಮಾಡಿದ್ದಾರೆ. ಈ ಹೆಸರು ಏನು ಹೆಸರಿಗೆ ತಕ್ಕ ಹಾಗೆ ಆಡಿ ಸಂಸ್ಥೆಯಲ್ಲಿನ ಐಷಾರಾಮಿ ಮಿಡ್-ಸೈಜ್ ಸೆಡಾನ್ ಕಾರಾದ ಎ6 ಕಾರಿನಿಂದ ಸ್ಪೂರ್ತಿ ಪಡೆದಿದ್ದೇವೆ ಎಂದು ಹೇಳಲಾಗಿದ್ದು, ಚೀನಾ ಮೂಲದ ಸಂಸ್ಥೆಯು ಅಸಲಿ ಆಡಿ ಎ6 ಕಾರಿನ ಹೊರ ವಿನ್ಯಾಸ ಮತ್ತು ಒಳ ವಿನ್ಯಾಸವನ್ನು ಸಹ ಕಾಪಿ ಮಾಡಲಾಗಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ವಿನ್ಯಾಸದ ಬಗ್ಗೆ ಹೇಳುವುದಾದ್ರೆ ಆಡಿ ಎ6 ಕಾರಿನಲ್ಲಿ ಕಾಣಬಹುದಾದ ರೆಡಾನ್ ಕ್ಸೆನಾನ್ ಹೆಡ್‍ಲೈಟ್ಸ್ ಮತ್ತು ಹೆಕ್ಸಾಗನಲ್ ಫ್ರಂಟ್ ಕ್ರೋಮ್ ಗ್ರಿಲ್ ಅನ್ನು ಜೆಎಸಿ ಎ6 ಕಾರಿನಲ್ಲಿ ಕಾಣಬಹುದಾಗಿದೆ. ಇನ್ನು ಕಾರಿನ ಒಳಭಾಗದಲ್ಲಿ 2000ರ ದಶಕದಲ್ಲಿನ ಎ6 ಕಾರಿನಲ್ಲಿ ಕಾಣಬಹುದಾದ ವಿನ್ಯಾಸವನ್ನು ಮಾಡಲಾಗಿದೆ. ಚೀನಾ ಮಾದರಿಯ ಎ6 ಕಾರು 1.5 ಟರ್ಬೋ ಪೆಟ್ರೋಲ್ ಎಂಜಿನ್ ಸಹಾಯದಿಂದ 170 ಬಿಹೆಚ್‍ಪಿ ಮತ್ತು 250ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಸುಝೌ ಈಗಲ್ ಕರ್ರೀ - ಫೆರಾರಿ ಕ್ಯಾಲಿಫೋರ್ನಿಯಾ ಟಿ ಮತ್ತು ಪೊರ್ಷೆ 718 ಕೆಯ್‍ಮನ್

ನೀವು ಎಂದಾದರು ಹೆಸರಾಂತ ಎರದು ವಾಹನ ತಯಾಕರಾದ ಫೆರಾರಿ ಮತ್ತು ಪೊರ್ಷೆ ಸಂಸ್ಥೆಗಳ ಕಾರಿನಲ್ಲಿ ಪ್ರಯಾಣಿಸಲು ಬಯಸಿದ್ದೀರಾ.? ಈ ಅವಕಾಶವನ್ನು ಚೀನಾದ ಗ್ರಾಹಕರಿಗೆ ಸುಝೌ ತಮ್ಮ ಈಗಲ್ ಕಾರ್ರೀ ಎಂಬ ಕಾರಿನಲ್ಲಿ ನೀಡಲಾಗಿದೆ. ಏಕೆಂದರೆ ಸುಝೌ ಈಗರ್ ಕಾರ್ರೀ ಎಂಬ ಕಾರು ಫೆರಾರಿ ಕ್ಯಾಲಿಫೋರ್ನಿಯಾ ಟಿ ಮತ್ತು ಪೊರ್ಷೆ 718 ಕೆಯ್‍ಮನ್ ಎಂಬ ಎರಡೂ ಕಾರುಗಳ ವಿನ್ಯಾಸವನ್ನು ಹೋಲುತ್ತದೆ.

ಸುಝೌ ಈಗರ್ ಕಾರ್ರೀ ಕಾರಿನ ಸೈಡ್ ಪ್ರೊಫೈಲ್ ಸಂಪೂರ್ಣವಾಗಿ ಪೊರ್ಷೆ 718 ಕೆಯ್‍ಮನ್ ಕಾರಿನ ವಿನ್ಯಾಸವನ್ನು ಕಾಪಿ ಮಾಡಲಾಗಿದ್ದು, ಮುಂಭಾಗದಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರಿನ ವಿನ್ಯಾಸವನ್ನು ನಕಲು ಮಾಡಲಾಗಿದೆ. ಇಷ್ಟೆ ಅಲ್ಲದೆಯೆ ಸುಝೌ ಸಂಸ್ಥೆಯು ಲೋಗೊವನ್ನು ಸಹ ಪೊರ್ಷೆ ಸಂಸ್ಥೆಯ ಲೋಗೊವನ್ನು ಕಾಪಿ ಮಾಡಲಾಗಿದೆ. ಈ ಕಾರು ಒಂದು ಸ್ಪೋರ್ಟ್ಸ್ ಕಾರು ಮಾದರಿಯಾಗಿದ್ದು, ಇದು 4.2 ಸೆಕೆಂಡಿನಲ್ಲಿ 0 ಇಂದ 100 ಕಿಲೋಮೀಟರ್‍‍ನಷ್ಟು ಆಕ್ಸಿಲರೇಷನ್ ಅನ್ನು ಸಹ ನೀಡುತ್ತದೆ ಎಂದು ಹೇಳಲಾಗಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಡಿಝೌ ವೀಕರ್‍‍ಯುಯ್ ವಿ7 - ಫೋಕ್ಸ್‌ವ್ಯಾಗನ್ ಅಪ್

ನಕಲು ಮಾಡುವಲ್ಲು ಡಿಝೌ ಸಂಸ್ಥೆಯು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಫೋಕ್ಸ್‌ವ್ಯಾಗನ್ ಅಪ್ ಕಾರಿನ ನಕಲು ತಯಾರು ಮಾಡುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಹಕ್ಕುಸ್ವಾಮ್ಯ ಮತ್ತು ಕಾನೂನುಗಳಾನ್ನು ಉಲ್ಲಂಘಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋಕ್ಸ್‌ವ್ಯಾಗನ್ ಅಪ್ ಕಾರಿನ ನಕಲನ್ನು ತಯಾರು ಮಾಡಿದ್ದಾರೆ. ಫೋಕ್ಸ್‌ವ್ಯಾಗನ್ ಅಪ್ ಕಾರಿನ ವಿನ್ಯಾಸವನ್ನು ನಕಲು ಮಾದುವಲ್ಲಿ ಡಿಝೌ ಸಂಸ್ಥೆಯು ಹೆಚ್ಚು ಶ್ರಮ ತೆಗೆದುಕೊಂಡಿಲ್ಲ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ತಮ್ಮ ವೀಕರ್‍‍ಯುಯ್ ವಿ7 ಕಾರಿಗೆ ನೀಡಲಾದ ವಿನ್ಯಾಸವು ಥೇಟ್ ಫೋಕ್ಸ್‌ವ್ಯಾಗನ್ ಅಪ್ ಕಾರನ್ನೆ ಹೋಲುತ್ತದೆ. ಆಸಲಿಗೆ ಕಾರಿನ ಉದ್ದಳತೆಯು ಕೂಡಾ ಫೋಕ್ಸ್‌ವ್ಯಾಗನ್ ಅಪ್ ಕಾರನ್ನೆ ಹೋಲುತ್ತದೆ ಎಂದರೆ ನೀವು ನಂಬಲಾರರು. ಇನ್ನು ಕಾರಿನ ಒಳ ವಿನ್ಯಾಸದಲ್ಲಿ ನೀಡಲಾದ ಡ್ಯಾಶ್‍ಬೋರ್ಡ್ ಲೇಯೌಟ್, ಕಲರ್ ಸ್ಕೀಮ್ಸ್ ಎಲ್ಲವನ್ನು ಗಮನಿಸಿದ್ದಲ್ಲಿ, ಡಿಝೌ ವೀಕರ್‍‍ಯುಯ್ ವಿ7 ಕಾರು ಫೋಕ್ಸ್‌ವ್ಯಾಗನ್ ಅಪ್ ಕಾರಿಗಿಂತಲೂ ವಿಭಿನ್ನವಾಗಿದೆ ಅಂತಾನೇ ಹೇಳ್ಬೋದು. ಡಿಝೌ ವೀಕರ್‍‍ಯುಯ್ ವಿ7 ಕಾರು ನಾನ್-ಗ್ಯಾಸೋಲಿನ್ ಎಂಬ ಮಾದರಿಗಳಲ್ಲಿ ಮಾರಾಟವಾಗುತ್ತಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಯೊಗೊಮೊ 330 - ಕಿಯಾ ಪಿಕಾಂಟೊ

ಫೋಕ್ಸ್‌ವ್ಯಾಗನ್ ಆಯ್ತು ಇದೀಗ ಕಿಯಾ ಸಂಸ್ಥೆಯಲ್ಲಿನ ಅರ್ಬನ್ ಕಾರು ಮಾದರಿಯಾದ ಪಿಕಾಂಟೊ ವಿನ್ಯಾಸವನ್ನು ಕೂಡಾ ನಕಲು ಮಾಡಿ ಯೊಗೊಮೊ 330 ಎಂಬ ಹೆಸರನ್ನು ನೀಡಲಾಗಿದೆ. ಇದು ಎಷ್ಟರ ಮಟ್ಟಿಗೆ ನಕಲು ಮಾಡಲಾಗಿದೆ ಎಂದರೆ ಕಿಯಾ ಸಂಸ್ಥೆಯವರೇ ಈ ಕಾರಿನ ಮತ್ತೊಂದು ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದ್ದಾರೆಯೆ ಎಂದು ಸಂದೇಶ ಬರುವ ಹಾಗೆ ನಕಲು ಮಾಡಲಾಗಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಸ್ವಲ್ಪ ಅಂತರದಿಂದ ಗಮನಿಸಿದ್ದಲ್ಲಿ, ಈ ಕಾರುಗಳು ಕೊಂಚ ಬದಲಾವಣೆಗಳನ್ನು ಪಡೆದಿರುವ ಹಾಗೆ ಕಾಣಿಸುತ್ತದೆ. ಪಿಕಾಂಟೊ ಕಾರಿನಲ್ಲಿ ನೀಡಲಾಗಿದೆ ಟೈಗರ್-ನೋಸ್ ವಿನ್ಯಾಸವನ್ನು ಜೊಗೊಮೊ ಕಾರಿನಲ್ಲಿ ವೃತ್ತಾಕಾರದಲ್ಲಿ ನೀಡಲಾಗಿದೆ. ಕಾರಿನ ಬಾಗಿಲುಗಳಲ್ಲಿಯು ಸಹ ಕೊಂಚ ಬದಲಾವಣೆಗಳನ್ನು ಮಾಡಲಾಗಿದೆ. ಒಳಭಾಗದಲಿಯು ಸಹ ಭಾಗಶಃ ಪಿಕಾಂಟೊ ಕಾರಿನಲ್ಲಿ ವಿನ್ಯಾಸವನ್ನು ಕಾಪಿ ಮಾಡಲಾಗಿದೆ. ಯೊಗೊಮೊ 330 ಕಾರು ಗ್ಯಾಸೋಲಿನ್ ಮೋಟಾರ್ ಅನ್ನು ಹೊಂದಿದ್ದು, ಕಾರಿನ ಅಡಿಯಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಯೂಕ್ಸಿಯಾ ರೇಂಜರ್ ಎಕ್ಸ್ - ಟೆಸ್ಲಾ ಮಾಡಲ್ ಎಸ್

ಭವಿಷ್ಯದ ಚಲನಶೀಲತೆ ಹೇಗೆ ಕಾಣುತ್ತದೆ ಎಂಬುದನ್ನು ಪೂರ್ವವೀಕ್ಷಣೆ ಮಾಡಿದ ಕಾರುಗಳಲ್ಲಿ ಮಾಡೆಲ್ ಎಸ್ ಕೂಡ ಒಂದು. ಆದಾಗ್ಯೂ, ಚೀನಾದ ಸ್ಟಾರ್ಟ್-ಅಪ್ ಯೂಕ್ಸಿಯಾ ಈ ಎಲ್ಲಾ ಎಲೆಕ್ಟ್ರಿಕ್ ಸೆಡಾನ್ ವಿನ್ಯಾಸವನ್ನು ಸಹ ನಕಲು ಮಾಡಲಾಗಿದ್ದು, ತಮ್ಮ ರೇಂಜರ್ ಎಕ್ಸ್ ರೂಪದಲ್ಲಿ ತನ್ನದೇ ಆದ ಆವೃತ್ತಿಯನ್ನು ತಯಾರಿಸಲು ಮುಂದಾಗಿದೆ. ಈ ನಾಲ್ಕು ಬಾಗಿಲಿನ ಕಾರು ಸೆಡಾನ್ ಮಾದರಿಯ ಪ್ರೊಫೈಲ್ ಅನ್ನು ಪಡೆದುಕೊಂಡಿದೆ ಮತ್ತು ಮುಂಭಾಗ ಮತ್ತು ಹಿಂಭಾಗದ ತುದಿಗಳು ಟೆಸ್ಲಾ ಮಾಡೆಲ್ ಎಸ್ ಕಾರನ್ನು ಹೋಲುತ್ತವೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಆದರೂ, ಮುಂಭಾಗದ ಗ್ರಿಲ್ ಮತ್ತು ಟೈಲ್ ಲ್ಯಾಂಪ್ ವಿನ್ಯಾಸದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಗ್ರಿಲ್ ಅನ್ನು ಹೊಲೊಗ್ರಾಫಿಕ್ ಡಿಸ್ಪ್ಲೇಯಿಂದ ಬದಲಾಯಿಸಲಾಗಿದೆ, ಇದು ಬ್ರಾಂಡ್ನ ಹೆಸರು ಮತ್ತು ಲೋಗೊವನ್ನು ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಆಗಿ ತೋರಿಸುತ್ತದೆ. ವೈ-ಆಕಾರದ ಲೋಗೊ ಕೂಡ ಟೆಸ್ಲಾದ ಟಿ-ಆಕಾರದ ಲೊಗೊವನ್ನು ಹೋಲುತ್ತದೆ. ರೇಂಜರ್ ಎಕ್ಸ್ ಆಲ್-ಎಲೆಕ್ಟ್ರಿಕ್ ಮೋಟರ್‍‍ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಒಂದು ಬಾರಿಯ ವಾರ್ಜ್‍ಗೆ ಸುಮಾರು 285 ಕಿಲೋಮೀಟರ್ ರೇಂಜ್ ನೀಡಬಲ್ಲದು ಎಂದು ಸಂಸ್ಥೆಯು ಹೇಳಿಕೊಂಡಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಕೈಲೀ ಜಿ v/s ರೋಲ್ಸ್ ರಾಯ್ಸ್ ಪ್ಯಾಂಥಮ್

ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಐಷಾರಾಮಿ ಕಾರುಗಳಿಂದಲೇ ಪ್ರಸಿದ್ಧವಾದ ರೋಲ್ಸ್ ರಾಯ್ಸ್ ಸಂಸ್ಥೆಯ ಪ್ಯಾಂಥಮ್ ಕಾರನ್ನು ಚೀನಾದವರು ನಕಲು ಮಾಡಿ ಮಾರುಕಟ್ಟೆಯಲ್ಲಿ ಕೈಲೀ ಜಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಈ ಕಾರಿನಲ್ಲಿ ರೋಲ್ಸ್ ರಾಯ್ಸ್ ನ ವಿಶೀಷ ವಿನ್ಯಾಸ, ಹೋಂ ಪೇಜ್ ಗ್ರಿಲ್, ಹೆಡ್‍‍ಲೈಟ್ ಅಷ್ಟೆ ಏಕೆ ಫ್ರಂಟ್ ಪೇಜ್ ಹೂಡ್ ಆರ್ನೆಟ್ ಅನ್ನು ಕೂಡ ನಕಲು ಮಾಡಿದ್ದಾರೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ರೋಲ್ಸ್ ರಾಯ್ಸ್ ಪ್ಯಾಂಥಮ್ ಕಾರು 6.75 ಲೀಟರ್ ವಿ12 ಎಂಜಿನ್ ಅನ್ನು ಅಳವಡಿಸಲಾಗಿದ್ದು, ನಕಲು ಮಾಡಿದ ಪ್ಯಾಂಥಮ್ ಕಾರಿನಲ್ಲಿ (ಕೈಲೀ ಜಿ) 3.5 ಲೀಟರ್ ವಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಯೆಮಾ ಬಿ11 v/s ಬಿಎಂಡಬ್ಯೂ ಐ3

ಚೀನಾ ದೇಶವರು ಹೆಸರಾಂತ ಬಿಎಂಡಬ್ಯೂ ಸಂಸ್ಥೆಯ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್ ಕಾರಾದ ಐ3 ಅನ್ನು ನಕಲು ಮಾಡಿ ಯೆಮಾ ಬಿ11 ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಯೆಮಾ ಬಿ11 ಕಾರು ಬಿಎಂಡಬ್ಲ್ಯೂ ಐ3 ಕಾರಿನಂತೆ ಕಾಣುತ್ತದೆಯಾದರೂ ಐ3 ಕಾರು ಎಲೆಕ್ಟ್ರಾನಿಕ್ ಪವರ್‍‍ಟ್ರೈನ್ ಅನ್ನು ಹೊಂದಿದ್ದರೆ, ಬಿ11 ಕಾರು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿಕ್ ಹೈಬ್ರೀಡ್ ಪವರ್‍‍ಟ್ರೈನ್ ಅನ್ನು ಹೊಂಡಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಚಂಗನ್ ಲಿಂಗ್ಸುವಾನ್ v/s ಟೊಯೊಟಾ ಇನೊವಾ ಕ್ರಿಸ್ಟಾ

ಕೆಲದಿನಗಳ ಹಿಂದಷ್ಟೆ ಬಿಡುಗಡೆಗೊಂಡ ಮಾರುತಿ ಸುಜುಕಿ ಎರ್ಟಿಗಾ ಕಾರು ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನಂತೆಯೆ ಕಾಣುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಚೀನಾದಲ್ಲಿನ ಚಂಗನ್ ಲಿಂಗ್ಸುವಾನ್ ಕಾರನ್ನು ನೋಡಿದರೆ ಏನನ್ನುತ್ತರೊ..? ಟೊಯೊಟಾ ಇನೊವಾ ಕ್ರಿಸ್ಟಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಮ್‍‍ಪಿವಿ ಕಾರು.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಆದ್ದರಿಂದ ಚೀನದವರೂ ಈ ಕಾರನ್ನು ಚೀನಾದ ಮಾರುಕಟ್ಟಯಲ್ಲಿ ಚಂಗನ್ ಲಿಂಗ್ಸುವಾನ್ ಎಂಬ ಹೆಸರಿನಲ್ಲಿ ನಕಲು ಮಾಡಿ ಮಾರಾಟ ಮಾಡುತ್ತಿದ್ದಾರೆ. ಚಂಗನ್ ಲಿಂಗ್ಸುವಾನ್ ಕಾರು ಬಹುತೇಕ ನೋಡಲು ಇನೊವಾ ಕ್ರಿಸ್ಟಾ ಕಾರಿನಂತೆಯೆ ಇದ್ದು, ಸೈಡ್ ಪ್ರೊಫೈಲ್ ಮತ್ತು ಪ್ರಂಟ್ ಎಂಡ್ ಕೂಡ ನೋಡಲು ಒಂದೇ ರೀತಿಯಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಜಿಯಾಂಗ್ನಾನ್ ಟಿಟಿ v/s ಮಾರುತಿ 800

ದೇಶದ ಸಣ್ಣ ಕಾರು ಮಾರುತಿ 800 ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗೊಂಡ ಕಾರು. ಈ ಕಾರನ್ನು ಚೀನಾದ ಕಾರು ತಯಾರಕ ಸಂಸ್ಥೆಯಾದ ಝೋಟೈ ನಕಲು ಮಾಡಿದೆ. ಮಾರುತಿ 800 ಕಾರನ್ನು ಮಾತ್ರವಲ್ಲದೆ ಇನ್ನು ಹಲವಾರು ಕಾರುಗಳನ್ನು ಈ ಸಂಸ್ಥೆಯು ನಕಲು ಮಾಡಿವೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ವಿಶೇಷವೇನೆಂದರೆ ಝೋಟೈ ಸಂಸ್ಥೆಯು ಮಾರುತಿ 800 ಕಾರಿನ ನಕಲನ್ನು ತಯಾರಿಸಲು ಸುಜುಕಿ ಸಂಸ್ಥೆಯಿಂದ ಅಧಿಕೃತವಾಗಿ ಅನುಮತಿಯನ್ನು ಪಡೆದಿದೆ. ಆದರೆ ಪ್ರಸ್ಥುತ ಹಲಾವಾರು ದೇಶದಲ್ಲಿ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಚೀನಾದಲ್ಲಿ ಮಾತ್ರ ಇನ್ನು ಜಿಯಾಂಗ್ನಾನ್ ಟಿಟಿ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಗೀಲಿ ಮೆರ್ರಿ 300 v/s ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್

ಗೀಲಿ ಹಿಂದಿನ ತಲೆಮಾರಿನ ಮರ್ಸಿಡಿಸ್ ಬೆಂಜ್ ಕಾರನ್ನು ನಕಲು ಮಾಡಿದ್ದು, ಗೀಲಿ ಮೆರ್ರಿ 300 ಎಂಬ ಹೆಸರನ್ನು ನೀಡಿದೆ. ಗೀಲಿ ಮೆರ್ರಿ 300 ಕಾರು ಚೀನಾದ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಕಾರಿಗಿಂತಲೂ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಡಯಾಬ್ಲೊ ವಿಟಿ v/s ಲ್ಯಾಂಬೋರ್ಗಿನಿ ಡಯಾಬ್ಲೊ

ಚೀನಾದ ಉತ್ಪಾದಕರು ಪ್ರಪಂಚದ ಜನಪ್ರಿಯ ಸೂಪರ್ ಮಾಡಲ್ ಕಾರು ಲ್ಯಾಂಬೋರ್ಗಿನಿ ಡಯಾಬ್ಲೊ ಕಾರಿನ ವಿನ್ಯಾಸವನ್ನು ಕಾಪಿ ಮಾಡುವುದಲ್ಲದೆ, ಕಾರಿನ ಹೆಸರನ್ನು ಕೂಡ ನಕಲು ಮಾಡಿದೆ. ಡಯಾಬ್ಲೊ ವಿಟಿ ಕಾರು ನೋಡಲು ಹೆಚ್ಚುವರಿ ಲ್ಯಾಂಬೋರ್ಗಿನಿ ಡಯಾಬ್ಲೊ ಕಾರನ್ನೆ ಹೋಲುತ್ತದೆ. ಡಯಾಬ್ಲೊ ವಿಟಿ ಕಾರು ಟೊಯೊಟಾ ಸಂಸ್ಥೆಯ ವಿ8 ಎಂಜಿನ್ ಅನ್ನು ಪಡೆದಿದ್ದು 450 ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ವಿಕ್ಟರಿ ಎಸ್10 v/s ಕ್ಯಾಡಿಲಾಕ್ ಎಸ್ಕಲೇಟ್

ಕ್ಯಾಡಿಲಾಕ್ ಎಸ್ಕಲೇಟ್ ಎಸ್‍ಯುವಿ ಕಾರು ಅಮೆರಿಕಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಆದರೆ ಚೀನಾದ ಕಾರು ತಯಾರಕರು ಈ ಕಾರಿನ ಎಲ್ಲವನ್ನು ನಕಲು ಮಾಡಿ ವಿಕ್ಟರಿ ಎಸ್10 ಎಂಬ ಹೆಸರನ್ನು ನೀಡಿದ್ದು, ಇದರಲ್ಲಿನ 2.0 ಲೀಟರ್ ಎಂಜಿನ್ 116 ಬಿಹೆಚ್‍‍ಪಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಹುವಾಂಗ್ಹ ಅರೋರಾ v/s ಸ್ಯಾಂಗ್ಯಾಂಗ್ ರೆಕ್ಸ್ಟನ್

ಕೊರಿಯಾದ ಕಾರ್ ಉತ್ಪಾದಕರಿಂದ ದೇಶದಲ್ಲಿ ಮಾರಾಟವಾಗುವ ಏಕೈಕ ಉತ್ಪನ್ನವೆಂದರೆ ಕೊನೆಯ ತಲೆಮಾರಿನ ಸ್ಯಾಂಗ್ಯಾಂಗ್ ರೆಕ್ಸ್ಟನ್. ವಾಸ್ತವವಾಗಿ, ಮಹೀಂದ್ರಾ ಆಂಡ್ ಮಹೀಂದ್ರಾ ಕೊರಿಯನ್ ಬ್ರಾಂಡ್ ಖರೀದಿಸಿದ ನಂತರ ರೆಕ್ಸ್ಟನ್ ಭಾರತಕ್ಕೆ ಈ ಕಾರನ್ನು ತಯಾರು ಮಾಡಿತ್ತು.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ರೆಕ್ಸಾನ್ ಅನ್ನು ಚೀನಾದ ಕಾರು ತಯಾರಕ ಹುವಾಂಗ್ಹ ಎಂಬಾತನಿಂದ ನಕಲು ಮಾಡಲಾಗಿದೆ. ಹುವಾಂಗ್ಹ ಅರೋರಾ ಎಂದು ಹೆಸರಿಸಲ್ಪಟ್ಟ ಈ ಎಸ್ಯುವಿ ರೆಕ್ಸ್ಟನ್ ನಂತೆ ಕಾಣುತ್ತದೆ.

ಫೇಮಸ್ ಐಷಾರಾಮಿ ಕಾರುಗಳನ್ನ ಕಾಪಿ ಮಾಡಿದ ಚೀನಾದ ಡೂಪ್ಲಿಕೇಟ್ ಕಾರುಗಳಿವು

ಹುವಾಂಗ್ಹ ಸಿಯುವಿ v/s ಹ್ಯುಂಡೈ ಸ್ಯಾಂಟಾ ಎಫ್ಇ

ಹುವಾಂಗ್ಹ ಸಂಸ್ಥೆಯು ರೆಕ್ಸ್ಟನ್ ಕಾರು ಮಾತ್ರವಲ್ಲದೆ ಹ್ಯುಂಡೈ ಸಂಸ್ಥೆಯ ಎಸ್‍‍ಯುವಿ ಕಾರಾದ ಸ್ಯಾಂಟಾ ಎಫ್‍ಇ ಕಾರನ್ನು ನಕಲು ಮಾಡಿ ಹುವಾಂಗ್ಹ ಸಿಯುವಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಹೆಚ್ಚುಬರೀ ನೋಡಲು ಸ್ಯಾಂಟಾ ಎಫ್‍ಇ ಕಾರಿನ ವಿನ್ಯಾಸವನ್ನೆ ಹೋಲುತ್ತದೆ.

Most Read Articles

Kannada
English summary
China Copies 15 Global Brand Desings From Kia To Ferrari, Porsche, Tesla And More. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X