600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಹೈಸ್ಪೀಡ್ ರೈಲು ಸೇವೆಯಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸುವ ಮೂಲಕ ಚೀನಾ ದೇಶವು ಹೊಸ ಮೈಲಿಗಲ್ಲು ಸಾಧಿಸಿದೆ. ಚೀನಾದಲ್ಲಿ ಮ್ಯಾಗ್ಲೆವ್ ಎಂಬ ಹೊಸ ಹೈಸ್ಪೀಡ್ ರೈಲು ಆರಂಭವಾಗಲಿದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಈ ರೈಲು ಪ್ರತಿ ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಅಂದರೆ ಈ ವೇಗದಲ್ಲಿ ಸಾಗುವ ರೈಲಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸಬಹುದು. ಈ ಹೈಸ್ಪೀಡ್ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲನ್ನು ಚೀನಾ ನಿನ್ನೆ ಅನಾವರಣಗೊಳಿಸಿದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಈ ರೈಲು ಭೂಮಿಯ ಮೇಲೆ ಚಲಿಸುವ ವಿಶ್ವದ ಅತಿ ವೇಗದ ವಾಹನವಾಗಿದೆ. ಸಾಂಪ್ರದಾಯಿಕ ರೈಲುಗಳಿಗಿಂತ ಭಿನ್ನವಾಗಿ ಈ ರೈಲು ಮ್ಯಾಗ್ನೆಟಿಕ್ ಫೀಲ್ಡ್'ನಿಂದ ಚಲಿಸುತ್ತದೆ. ಈ ಕಾರಣದಿಂದಾಗಿ ಮ್ಯಾಗ್ಲೆವ್ ರೈಲು ಇತರ ರೈಲುಗಳಿಗಿಂತ ವೇಗವಾಗಿ ಚಲಿಸುತ್ತದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಮ್ಯಾಗ್ಲೆವ್ ರೈಲಿನಲ್ಲಿ ಬಳಸುವ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಫೋರ್ಸ್ ರೈಲುಗಳನ್ನು ಹಳಿಗಳಿಂದ ಕೆಲವು ಮೀಟರ್ ಮೇಲಕ್ಕೆತ್ತುತ್ತದೆ. ಇದರಿಂದ ಮ್ಯಾಗ್ಲೆವ್ ರೈಲು ಹಾಗೂ ಸಾಮಾನ್ಯ ರೈಲುಗಳ ನಡುವೆ ಯಾವುದೇ ಸಂಬಂಧವಿಲ್ಲ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಮ್ಯಾಗ್ಲೆವ್ ರೈಲು ಸಾಂಪ್ರದಾಯಿಕ ರೈಲುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮ್ಯಾಗ್ಲೆವ್ ರೈಲು ಅತ್ಯುತ್ತಮ ಬ್ರೇಕಿಂಗ್ ಹೊಂದಿದ್ದು,ಘರ್ಷಣೆಯಿಲ್ಲದ ಚಲನೆಯನ್ನು ಹೊಂದಿದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಈ ರೀತಿ ಸಾಮರ್ಥ್ಯವನ್ನು ಹೊಂದಿರುವ ರೈಲುಗಳನ್ನು ವಿಶ್ವದ ಕೆಲವು ದೇಶಗಳಲ್ಲಿ ಮಾತ್ರ ಬಳಸಲಾಗುತ್ತದೆ. ಎಲೆಕ್ಟ್ರೋ ಮ್ಯಾಗ್ನೆಟಿಕ್ ರೈಲುಗಳನ್ನು ಜಪಾನ್, ಫ್ರಾನ್ಸ್, ಸ್ಪೇನ್, ದಕ್ಷಿಣ ಕೊರಿಯಾ ಹಾಗೂ ಚೀನಾ ದೇಶಗಳಲ್ಲಿ ಮಾತ್ರ ಬಳಸಲಾಗುತ್ತದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಸಾರಿಗೆ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಲು ಚೀನಾ ಮ್ಯಾಗ್ಲೆವ್ ರೈಲನ್ನು ಅಭಿವೃದ್ಧಿಪಡಿಸಿದೆ. ಹೊಸ ಮ್ಯಾಗ್ಲೆವ್ ರೈಲನ್ನು ಚೀನಾ ದೇಶದ ಕರಾವಳಿ ನಗರವಾದ ಕಿಂಗ್ಡಾವೊದಲ್ಲಿ ನಿರ್ಮಿಸಲಾಗಿದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಚೀನಾ ದೇಶವು ಕಳೆದ ಎರಡು ದಶಕಗಳಿಂದ ಈ ತಂತ್ರಜ್ಞಾನವನ್ನು ಬಳಸುತ್ತಿದೆ. ಆದರೆ ಈ ತಂತ್ರಜ್ಞಾನವನ್ನು ಚೀನಾದ ಕೆಲವು ಪ್ರಮುಖ ನಗರಗಳಲ್ಲಿ ಬಳಸಲಾಗುತ್ತದೆ ಎಂಬುದು ಗಮನಾರ್ಹ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲು ಮಾತ್ರ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೈಲುಗಳನ್ನು ಬಳಸಲಾಗುತ್ತದೆ. ಈ ರೈಲುಗಳನ್ನು ಇಂಟರ್ ಸಿಟಿ ಅಥವಾ ಎರಡು ಪ್ರಾಂತ್ಯಗಳನ್ನು ಸಂಪರ್ಕಿಸಲು ಬಳಸುವುದಿಲ್ಲ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಎರಡು ನಗರಗಳನ್ನು ಸಂಪರ್ಕಿಸಲು ಎಲೆಕ್ಟ್ರೋ ಮ್ಯಾಗ್ನೆಟಿಕ್ ಮ್ಯಾಗ್ಲೆವ್ ರೈಲುಗಳನ್ನು ಬಳಸಲು ಚೀನಾ ಸರ್ಕಾರ ನಿರ್ಧರಿಸಿದೆ. ಶಾಂಘೈ ಹಾಗೂ ಚೆಂಗ್ಡು ನಗರಗಳ ನಡುವೆ ಸಂಚಾರವನ್ನು ಆರಂಭಿಸಲು ಅಧ್ಯಯನ ನಡೆಸಲಾಗುತ್ತಿದೆ.

600 ಕಿ.ಮೀ ವೇಗದಲ್ಲಿ ಚಲಿಸುವ ವಿಶ್ವದ ಅತಿ ವೇಗದ ರೈಲನ್ನು ಅನಾವರಣಗೊಳಿಸಿದ ಚೀನಾ

ಚೀನಾದ ಎರಡು ನಗರಗಳನ್ನು ಸಂಪರ್ಕಿಸಲು ಮ್ಯಾಗ್ಲೆವ್ ಹೈಸ್ಪೀಡ್ ರೈಲು ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಗಳಿವೆ. ಈ ರೈಲಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವೈರ್‌ಲೆಸ್ ಚಾರ್ಜರ್, ವೈ-ಫೈ ಇಂಟರ್ ನೆಟ್ ಸೌಲಭ್ಯವನ್ನು ನೀಡುವ ಸಾಧ್ಯತೆಗಳಿವೆ.

ಚಿತ್ರ ಕೃಪೆ: ಚೀನಾ ಕ್ಸಿನ್ಹುವಾ ನ್ಯೂಸ್ ಹಾಗೂ ಚೀನಾ ನ್ಯೂಸ್

Most Read Articles

Kannada
English summary
China unveils world's fastest train which travels at 600 kmph speed. Read in Kannada.
Story first published: Wednesday, July 21, 2021, 20:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X