ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿನ ಕಾರನ್ನು ಖರೀದಿ ಮಾಡಲೇಬೇಕೆಂಬ ಮಹಾದಾಸೆ ಇದ್ದೇ ಇರುತ್ತೆ. ಹೀಗಾಗಿ ಈ ಮಹಿಳೆ ಕೂಡಾ ತನ್ನ ಕನಸಿನ ಕಾರನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಖರೀದಿಸಿದ್ದಳು. ಆದ್ರೆ ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಕಾರಿನ ಅಸಲಿಯತ್ತು ಕಂಡು ಆ ಮಹಿಳೆಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಒಂದು ಕನಸಿನ ಕಾರನ್ನು ಖರೀದಿಸಲು ಅದಕ್ಕಾಗಿ ಎಷ್ಟು ಕಷ್ಟಪಟ್ಟಿರುತ್ತೇವೆ ಎನ್ನುವುದನ್ನು ಪ್ರತಿ ತಿಂಗಳು ಇಎಂಐ ಕಟ್ಟುವ ಮಾಲೀಕರಿಗೆ ಚೆನ್ನಾಗಿ ಗೊತ್ತಿರುತ್ತೆ. ಆದರೂ ಪರವಾಗಿಲ್ಲ, ಕಷ್ಟಪಟ್ಟು ಖರೀದಿಸುವ ಕಾರು ನಮಗೆ ಖುಷಿ ನೀಡಿದ್ದಲ್ಲಿ ಅದು ಯಾವುದು ಕೂಡಾ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಆದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಖರೀದಿಸಿದ ಕಾರು ಕೆಲವೇ ದಿನಗಳಲ್ಲಿ ಕೆಟ್ಟು ನಿಂತಾಗ ಹೇಗಿರುತ್ತೆ ಹೇಳಿ. ಇಲ್ಲೂ ಕೂಡಾ ಆಗಿದ್ದು ಅದೇ ಕಥೆ ವ್ಯಥೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಹೌದು, ಮರ್ಸಿಡಿಸ್ ಬೆಂಝ್ ಎಸ್‌ಯುವಿ ಕಾರು ಒಂದನ್ನು ಖರೀದಿಸಿದ್ದ ಮಹಿಳೆಯೊಬ್ಬರು ಡೀಲರ್ಸ್ ವಿರುದ್ಧ ತಿರುಗಿ ಬಿದ್ದಿದ್ದಲ್ಲದೇ ಡೀಲರ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಅಂದಹಾಗೆ ಈ ಘಟನೆ ಚೀನಾದ ಬಿಜಿಂಗ್ ನಗರದಲ್ಲಿ ನಡೆದಿದ್ದು, ಕಾರು ಖರೀದಿ ವೇಳೆ ಡೀಲರ್ಸ್ ಮಾಡಿದ ಮೋಸದ ವ್ಯವಹಾರ ವಿರುದ್ದ ಮಹಿಳಾ ಗ್ರಾಹಕಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ತನ್ನ ಸಮಸ್ಯೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿಗೆ ಸರಿಯಾಗಿ ಚಳಿಬಿಡಿಸಿದ್ದಾಳೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಸುಮಾರು 70 ಲಕ್ಷ ಕೊಟ್ಟು ಖರೀದಿ ಮಾಡಲಾಗಿದ್ದ ಮರ್ಸಿಡಿಸ್ ಬೆಂಝ್ ಎಸ್‌ಯುವಿಯೊಂದು ಖರೀದಿಸಿ ಕೆಲವೇ ದಿನಗಳಲ್ಲಿ ರೀಪೇರಿಗೆ ಬಂದಿದ್ದು, ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಆಯಿಲ್ ಲೀಕ್ ಸಮಸ್ಯೆಯು ಮಹಿಳೆಯನ್ನು ಕೆರಳಿಸಿದೆ. ಆದರೂ ಈ ಬಗ್ಗೆ ಡೀಲರ್ಸ್ ಗಮನಕ್ಕೂ ತಂದರೂ ಯಾವುದೇ ಪರಿಹಾರ ಸಿಗದೆ ಇದ್ದಾಗ ಆ ಮಹಿಳೆಯು ತನ್ನ ವಿರಾಟರೂಪ ತೋರಿದ್ದಾಳೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಹೊಸ ಕಾರಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ಸಮಸ್ಯೆಗೆ ಡೀಲರ್ಸ್ ಸರಿಯಾಗಿ ಸ್ಪಂದನೆ ಮಾಡದ್ದಿದ್ದಾಗ ಕೆರಳಿದ ಮಹಿಳೆಯು ಶೋರೂಂನಲ್ಲಿ ಪ್ರದರ್ಶನಕ್ಕೆ ಇಡಲಾದ ಹೊಸ ಕಾರಿನ ಬ್ಯಾನೆಟ್ ಮೇಲೆ ಹತ್ತಿಕುಳಿತಿದ್ದಲ್ಲದೇ ಈ ತಕ್ಷಣವೇ ತನಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾಳೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಹಾಗೆಯೇ ತಾನು ಡೀಲರ್ಸ್ ಬಳಿ ಬಂದಾಗ ಪರಿಹಾರ ಸೂಚಿಸದೇ ಸತಾಯಿಸುತ್ತಿರುವ ಬಗ್ಗೆ ತನ್ನ ಅಳಲು ತೊಡಿಕೊಂಡ ಮಹಿಳೆಯು ಮರ್ಸಿಡಿಸ್ ಬೆಂಝ್ ಶೋರೂಂ ಸಿಬ್ಬಂದಿಗೆ ಸರಿಯಾಗಿಯೇ ಚಳಿಬಿಡಿಸಿದ್ದಾಳೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಡೀಲರ್ಸ್‌ಗೆ ಭೇಟಿ ನೀಡುವಾಗ ಜೊತೆಗೆ ತನ್ನ ತಂದೆಯನ್ನು ಸಹ ಕರೆದುಕೊಂಡ ಬಂದಿದ್ದ ಆ ಮಹಿಳೆಯು ಕಾರು ಖರೀದಿಯ ಹಿಂದಿನ ನೋವನ್ನು ಹಂಚಿಕೊಂಡಿದ್ದು, ಮಹಿಳೆ ಪ್ರತಿಭಟಿಸುತ್ತಿರುವುದನ್ನು ಆ ಮಹಿಳೆಯ ತಂದೆಯೇ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ವಿಶ್ವದಲ್ಲೇ ಪ್ರಸಿದ್ದವಾದ ಕಾರು ತಯಾಕ ಸಂಸ್ಥೆಯೊಂದರ ಹುಳುಕು ಹೇಗಿದೆ ನೋಡಿ ಎನ್ನುವ ರೀತಿಯಲ್ಲಿ ತಮ್ಮ ಮಗಳ ಕಾರು ಖರೀದಿ ಹಿಂದಿನ ನೋವನ್ನು ಹಂಚಿಕೊಳ್ಳಲಾಗಿದ್ದು, ಮರ್ಸಿಡಿಸ್ ಡೀಲರ್ಸ್ ಸಿಬ್ಬಂದಿಗೆ ಮಹಿಳೆಯು ಕ್ಲಾಸ್ ತೆಗೆದುಕೊಳ್ಳುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಇನ್ನು ಹೊಸ ವಾಹನ ಖರೀದಿ ವೇಳೆ ಕೆಲವು ಡೀಲರ್ಸ್‌ಗಳು ಹಣದಾಸೆಗೆ ತಾಂತ್ರಿಕ ದೋಷ ಹೊಂದಿರುವ ವಾಹನಗಳನ್ನು ಮಾರಾಟ ಮಾಡಿದ ಘಟನೆಗಳು ಬಗ್ಗೆ ನಾವು ಈಗಾಗಲೇ ಸಾಕಷ್ಟು ವರದಿಗಳನ್ನು ಪ್ರಕಟಿಸಿದ್ದು, ಯಾವುದೇ ಕಾರಣಕ್ಕೂ ಹೊಸ ವಾಹನಗಳನ್ನು ಕೂಲಂಕುಶವಾಗಿ ಪರೀಕ್ಷಿಸದೇ ಖರೀದಿ ಮಾಡಲೇಬೇಡಿ. ಇಲ್ಲವಾದ್ರೆ ಹೊಸ ವಾಹನ ಖರೀದಿ ಖುಷಿ ನೀಡುವ ಬದಲು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ನೂಕಬಹುದು.

Most Read Articles

Kannada
English summary
Mercedes-Benz Apologies To Chinese Woman Car Buyer: Here Is Why. Read in Kannada.
Story first published: Thursday, April 18, 2019, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X