ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಚೀನಾ ಮೂಲದ ಕಾರು ತಯಾರಕ ಕಂಪನಿಗಳು ಪ್ರಪಂಚದ ಜನಪ್ರಿಯ ಕಾರುಗಳನ್ನು ನಕಲು ಮಾಡುತ್ತವೆ. ನಕಲು ಮಾಡಲಾದ ಕಾರುಗಳನ್ನು ಚೀನಾ ಮಾರುಕಟ್ಟೆಯಲ್ಲಿ ಬಹಿರಂಗವಾಗಿಯೇ ಮಾರಾಟ ಮಾಡಲಾಗುತ್ತದೆ.

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಜನಪ್ರಿಯ ಕಂಪನಿಗಳ ಸೆಡಾನ್, ಎಸ್ ಯುವಿ, ಹ್ಯಾಚ್‌ಬ್ಯಾಕ್ ಹಾಗೂ ಟ್ರಕ್‌ಗಳನ್ನು ಕಾಲಕಾಲಕ್ಕೆ ನಕಲು ಮಾಡಲಾಗುತ್ತದೆ. ಚೀನಾದ ಬೀಜಿಂಗ್ ನಲ್ಲಿ ಈ ತಿಂಗಳ 26ರಿಂದ ಮೋಟಾರ್ ಶೋ ನಡೆಯಲಿದೆ. ಇದೇ ವೇಳೆ ಫೋಟಾನ್ ಮೋಟಾರ್ ಕಂಪನಿಯು ತನ್ನ ಡಾ ಜಿಂಗ್ ಜುನ್ ಅಂದರೆ ಬಿಗ್ ಜನರಲ್ ವಾಹನವನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ವಾಹನವನ್ನು ಫೋರ್ಡ್ ಎಫ್ -150 ಟ್ರಕ್‌ ಅನ್ನು ನಕಲು ಮಾಡಿ ತಯಾರಿಸಲಾಗಿದೆ.

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಫೋರ್ಡ್ ಎಫ್ -150 ಟ್ರಕ್‌ ಹಾಗೂ ಬಿಗ್ ಜನರಲ್ ವಾಹನಗಳ ವಿನ್ಯಾಸ ಒಂದೇ ರೀತಿಯಲ್ಲಿದೆ. ಈ ಬಿಗ್ ಜನರಲ್ ವಾಹನದ ಗಾತ್ರವು ಫೋರ್ಡ್ ಟ್ರಕ್ ನಂತೆಯೇ ಇದೆ. ಇದರ ಜೊತೆಗೆ ಮುಂಭಾಗದ ಹೆಡ್ ಲೈಟ್ ಹಾಗೂ ಸೈಡ್ ಪ್ರೊಫೈಲ್ ಗಳು ಸಹ ಒಂದೇ ರೀತಿಯಲ್ಲಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಈ ಎರಡೂ ವಾಹನಗಳ ನಡುವಿನ ಸಾಮ್ಯತೆಯನ್ನು ಗುರುತಿಸಿರುವ ಜನರು ಚೀನಾದ ಈ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಫೋರ್ಡ್ ಕಂಪನಿಯನ್ನು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಫೋರ್ಡ್ ಕಂಪನಿಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಚೀನಾದ ಈ ಕಂಪನಿಯು ಕಾರುಗಳನ್ನು ನಕಲು ಮಾಡಲು ಕುಖ್ಯಾತಿಯನ್ನು ಹೊಂದಿದೆ.

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಫೋರ್ಡ್ ಎಫ್ -150 ಟ್ರಕ್ 3.5-ಲೀಟರ್ ವಿ 6 ಎಂಜಿನ್ ಹೊಂದಿದ್ದರೆ, ಚೀನಾದ ಈ ಡೂಪ್ಲಿಕೇಟ್ ಟ್ರಕ್ 2.0-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 2.0-ಲೀಟರಿನ ಡೀಸೆಲ್ ಹಾಗೂ 2.5-ಲೀಟರಿನ ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಈ ವಾಹನವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ ನಂತರ ಫೋಟಾನ್ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಫೋಟಾನ್ ಕಂಪನಿಯು ಈ ಟ್ರಕ್ ಅನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗಿದೆ.

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಫೋರ್ಡ್ ಕಂಪನಿಯ ಟ್ರಕ್‌ಗಳು ಅನೇಕ ದೇಶಗಳಲ್ಲಿ ಜನಪ್ರಿಯವಾಗಿವೆ. ಈ ಟ್ರಕ್ ಗಳು ಬಲಶಾಲಿಯಾದ ಬಾಡಿ ಹಾಗೂ ಎಂಜಿನ್ ಹೊಂದಿವೆ. ಈ ಟ್ರಕ್ ಹೆಚ್ಚು ಜನಪ್ರಿಯವಾಗಿರುವ ಕಾರಣಕ್ಕೆ ಚೀನೀ ಕಂಪನಿಯು ಈ ವಾಹನವನ್ನು ನಕಲು ಮಾಡಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಫೋರ್ಡ್ ಕಂಪನಿಯ ಡೂಪ್ಲಿಕೇಟ್ ಕಾರು ತಯಾರಿಸಿದ ಚೀನಾ ಕಂಪನಿ

ಭಾರತದಲ್ಲಿ ಈ ರೀತಿಯ ಟ್ರಕ್‌ಗಳಿಗೆ ಬೇಡಿಕೆಯಿಲ್ಲ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲಿ ಈ ಮಾದರಿಯ ವಾಹನಗಳನ್ನು ಬಿಡುಗಡೆಗೊಳಿಸುವುದಿಲ್ಲ. ಇನ್ನೂ ಚೀನಾ ಕಂಪನಿಗಳು ಟಾಟಾ ನೆಕ್ಸಾನ್ ಸೇರಿದಂತೆ ಭಾರತದ ಕಂಪನಿಗಳ ಅನೇಕ ಕಾರುಗಳನ್ನು ಸಹ ನಕಲು ಮಾಡಿವೆ.

Most Read Articles

Kannada
English summary
Chinese car company manufactures duplicate Ford F150 Truck. Read in Kannada.
Story first published: Friday, September 25, 2020, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X