ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಯಾವುದೇ ವಸ್ತುಗಳನ್ನು ನಕಲು ಮಾಡಿ ತಯಾರಿಸುವುದರಲ್ಲಿ ಚೀನಾ ಕಂಪನಿಗಳನ್ನು ಮೀರಿಸುವವರಿಲ್ಲ. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವಂತೆ ಚೀನಾ ಕಂಪನಿಗಳು ಸಹ ನಕಲು ಮಾಡುತ್ತವೆ. ಚೀನಾದ ಕೆಲವು ಕಂಪನಿಗಳು ನಕಲು ಮಾಡಲು ಕುಖ್ಯಾತಿಯನ್ನು ಪಡೆದಿವೆ.

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಚೀನಾದ ಕಾಪಿಕ್ಯಾಟ್ ಕಂಪನಿಗಳ ಬಗ್ಗೆ ಈ ಹಿಂದೆಯೇ ವರದಿಗಳಾಗಿದ್ದವು. ತಮ್ಮ ಕುತಂತ್ರಿ ಬುದ್ದಿಯನ್ನು ಬಿಡದ ಚೀನಾ ಕಂಪನಿಗಳು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿವೆ. ಈ ಬಾರಿ ಅಮೆರಿಕಾ ಮೂಲದ ಜನಪ್ರಿಯ ಜೀಪ್ ಕಂಪನಿಯ ಕಾರನ್ನು ನಕಲು ಮಾಡಲಾಗಿದೆ. ವರದಿಗಳ ಪ್ರಕಾರ ಚೀನಾದ ಕಂಪನಿಯೊಂದು ಈ ಕಾರನ್ನು ಡೂಪ್ಲಿಕೇಟ್ ಮಾಡಿ ಪಾಕಿಸ್ತಾನದಲ್ಲಿ ಮಾರಾಟ ಮಾಡಲು ಮುಂದಾಗಿದೆ.

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಚೀನಾದ ಬಿಎಐಸಿ ಕಂಪನಿಯು ಜೀಪ್ ಕಂಪಾಸ್ ಎಸ್‌ಯುವಿಯ ಡೂಪ್ಲಿಕೇಟ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ. ಪಿಜೆ 40 ಪ್ಲಸ್ ಎಂದು ಹೆಸರಿಸಲಾದ ಈ ಕಾರು ಜೀಪ್ ಕಂಪಾಸ್ ಮಾದರಿಯನ್ನು ಹೋಲುತ್ತದೆ. ಕಾರಿನಲ್ಲಿರುವ ಪ್ರತಿಯೊಂದು ಭಾಗವು ಕಂಪಾಸ್ ಎಸ್‌ಯುವಿಯಂತೆ ಕಾಣುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಇದರ ವೀಡಿಯೊವನ್ನು ಪಾಕ್ ವ್ಹೀಲ್ಸ್ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. ಕಂಪಾಸ್ ಎಸ್‌ಯುವಿ ಅಮೆರಿಕಾ ಮೂಲದ ಜೀಪ್ ಕಂಪನಿಯ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ಅಮೆರಿಕಾ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಜೀಪ್ ಕಂಪಾಸ್ ನಲ್ಲಿರುವ ಶೈಲಿ ಹಾಗೂ ಐಷಾರಾಮಿ ಫೀಚರ್ ಗಳು ಈ ಎಸ್‌ಯುವಿಯನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಿವೆ. ಭಾರತದಲ್ಲಿ ಹಲವು ಚಿತ್ರ ನಟರು ಹಾಗೂ ಉದ್ಯಮಿಗಳು ಜೀಪ್ ಕಂಪಾಸ್ ಎಸ್‌ಯುವಿಯನ್ನು ಹೊಂದಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಚೀನಾದ ಕಂಪನಿ ಈ ಎಸ್‌ಯುವಿಯ ನಕಲನ್ನು ತಯಾರಿಸಿರುವುದು ಜೀಪ್‌ನ ಗ್ರಾಹಕರು ಹಾಗೂ ಅಭಿಮಾನಿಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ. ಚೀನಾ ದೇಶವು ತಮ್ಮ ದೇಶದ ಉತ್ಪನ್ನವನ್ನು ನಕಲು ಮಾಡಿರುವುದನ್ನು ಅಮೆರಿಕನ್ನರು ತೀವ್ರವಾಗಿ ಖಂಡಿಸಿದ್ದಾರೆ.

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಬಿಎಐಸಿ ಪಿಜೆ 40 ಪ್ಲಸ್ ಎಸ್‌ಯುವಿಯ ಆಕಾರ, ಶೈಲಿ, ಗ್ರೌಂಡ್ ಕ್ಲಿಯರೆನ್ಸ್, ಎತ್ತರ, ಅಗಲಗಳೆಲ್ಲವೂ ಜೀಪ್ ಕಂಪಾಸ್ ಎಸ್‌ಯುವಿಯನ್ನೇ ಹೋಲುತ್ತವೆ. ಅದರಲ್ಲೂ ಕಾರಿನ ಮುಂಭಾಗದಲ್ಲಿರುವ ಗ್ರಿಲ್, ಬಂಪರ್, ಲೈಟ್ ಗಳನ್ನು ಸಹ ಕಂಪಾಸ್ ರೀತಿಯಲ್ಲಿಯೇ ಅಳವಡಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಇವುಗಳು ಮಾತ್ರವಲ್ಲದೇ ವ್ಹೀಲ್ ಆರ್ಕ್, ಒಆರ್‌ವಿಎಂ, ಟಯರ್ ಹಾಗೂ ಸ್ಪೋರ್ಟಿ ಅಲಾಯ್ ವ್ಹೀಲ್ ಗಳು ಸಹ ಜೀಪ್ ಕಾರಿನಂತಿವೆ. ಎರಡೂ ಕಾರುಗಳನ್ನು ಅಕ್ಕ ಪಕ್ಕದಲ್ಲಿ ನಿಲ್ಲಿಸಿದರೆ ಅವು ಅವಳಿಗಳಂತೆ ಕಾಣುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ವ್ಯತ್ಯಾಸವಿರುವ ಒಂದೇ ಒಂದು ಸಂಗತಿಯೆಂದರೆ ಈ ಡೂಪ್ಲಿಕೇಟ್ ಕಾರಿನಲ್ಲಿರುವ ಲೋಗೋ. ಜೀಪ್ ಲೋಗೋ ಬದಲು ಈ ಡೂಪ್ಲಿಕೇಟ್ ಕಾರಿನಲ್ಲಿ ಬಿಎಐಸಿ ಎಂದು ಅಂಟಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಇದರ ಹೊರತು ಈ ಕಾರಿನಲ್ಲಿ ಬೇರೆ ಯಾವುದೇ ವ್ಯತ್ಯಾಸಗಳಿಲ್ಲ. ಈ ಕಾರಿನಲ್ಲಿಯೂ ಕಂಪಾಸ್ ಕಾರಿನಲ್ಲಿರುವಂತಹ ಐದು ಡೋರು, ವಿಂಡೋ, ಡೋರ್ ಹ್ಯಾಂಡಲ್ ಗಳನ್ನು ಅಳವಡಿಸಲಾಗಿದೆ.

ಈ ಡೂಪ್ಲಿಕೇಟ್ ಆಫ್-ರೋಡ್ ಕಾರನ್ನು ಬಿಎಐಸಿ ಕಂಪನಿಯು 2.0-ಲೀಟರಿನ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹಾಗೂ 2.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಡೂಪ್ಲಿಕೇಟ್ ಕಾರನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ ಕುತಂತ್ರಿ ಚೀನಾ

ಈ ಎಂಜಿನ್ ಗಳು ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್ ಮಿಷನ್ ಗಳನ್ನು ಹೊಂದಿವೆ ಎಂದು ಹೇಳಲಾಗಿದೆ. ಈ ವೀಡಿಯೊ ಪ್ರಕಾರ ಮೊದಲು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Chinese company selling duplicate Jeep compass suv in pakistan. Read in Kannada.
Story first published: Saturday, September 26, 2020, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X