Ford Ecosport ಕಾರಿನ ಡಿಸೈನ್ ನಕಲು ಮಾಡಿದ ಚೀನಾ ಕಂಪನಿ

ಚೀನಾ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ನಕಲಿ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ನಕಲಿ ಮಾಡಿ ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ನಕಲಿ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾದ ಬಿವೈಡಿ ಎಂಬ ತಯಾರಕರು ಈಗ ಫೋರ್ಡ್ ಇಕೋಸ್ಪೋರ್ಟ್ ವಿನ್ಯಾಸವನ್ನು ಕಾಪಿ ಮಾಡಿದ್ದಾರೆ. ಆದರೆ ಇವರು ಮಾರಾಟ ಮಾಡುತ್ತಿರುವ ವಾಹನವು ಎಲೆಕ್ಟ್ರಿಕ್ ವಾಹನವಾಗಿದೆ ಮತ್ತು ಅದಕ್ಕೆ ಯುವಾನ್ ಪ್ರೊ ಎಂಬ ಹೆಸರನ್ನು ನೀಡಲಾಗಿದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಯುವಾನ್ ಪ್ರೊ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಜನರನ್ನು ಆಕರ್ಷಿಸಲು ಇದನ್ನು ತಯಾರಿಸಲಾಗಿದೆ. ಬಿವೈಡಿ ತಮ್ಮ ವಿನ್ಯಾಸ ಭಾಷೆಯನ್ನು "ಡ್ರ್ಯಾಗನ್ ಫೇಸ್ 3.0" ಎಂದು ಕರೆಯುತ್ತದೆ. ಕುತೂಹಲಕಾರಿಯಾಗಿ, ಫೋರ್ಡ್ ಸ್ವತಃ ತಮ್ಮ ಪೆಟ್ರೋಲ್ ಎಂಜಿನ್ ಡ್ರ್ಯಾಗನ್ ಎಂದು ಕರೆಯುತ್ತದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಕಾರಿನ ಸೈಡ್ ಪ್ರೊಫೈಲ್ ಮತ್ತು ಯುವಾನ್ ಪ್ರೊನ ಹಿಂಭಾಗವು ಇಕೋಸ್ಪೋರ್ಟ್ ಅನ್ನು ಹೋಲುತ್ತದೆ. ಇದು ಅದೇ ನಿಲುವು ಮತ್ತು ಟೈಲ್‌ಗೇಟ್-ಮೌಂಟಡ್ ಸ್ಪೇರ್ ವ್ಹೀಲ್ ಅನ್ನು ಪಡೆಯುತ್ತದೆ. ಈ ಕಾರಿನ ಮುಂಭಾಗ ಕೂಡ ಸಾಕಷ್ಟು ಹೋಲುತ್ತದೆ ಆದರೆ ಹೆಡ್‌ಲೈಟ್ ವಿನ್ಯಾಸ ಮತ್ತು ಗ್ರಿಲ್‌ನಲ್ಲಿ ವ್ಯತ್ಯಾಸವಿದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇದು ಎಲೆಕ್ಟ್ರಿಕ್ ಆಗಿರುವುದರಿಂದ ಮುಂಭಾಗದ ಗ್ರಿಲ್ ಇಲ್ಲ. ಆದರೆ ವಾಹನದ ಉಳಿದ ಭಾಗವು ಅನೇಕ ಇಕೋಸ್ಪೋರ್ಟ್ ಅಂಶಗಳನ್ನು ಹೊಂದಿದೆ. ಯುವಾನ್ ಪ್ರೊನ ಒಳಭಾಗವು ಇಕೋಸ್ಪೋರ್ಟ್ಗಿಂತ ಸ್ವಲ್ಪ ಭಿನ್ನವಾಗಿದೆ ಏಕೆಂದರೆ ಇದು ಹೆಚ್ಚು ತಂತ್ರಜ್ಞಾನವನ್ನು ಹೊಂದಿದೆ .

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಆದರೆ ಪೋರ್ಡ್ ಇಕೋಸ್ಪೋರ್ಟ್ ಸ್ವಲ್ಪ ಹಿಂದುಳಿದಿದೆ. ಯುವಾನ್ ಪ್ರೊ ಎಲೆಕ್ಟ್ರಿಕ್ ಕಾರು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 8 ಇಂಚು ಅಳತೆಯ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹೊಂದಿದೆ. ಇದನ್ನು ಹೋಲಿಸಿದಾಗ ಇಕೋಸ್ಪೋರ್ಟ್ ಮಲ್ಟಿ-ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಅನಲಾಗ್ ಇನ್ಸ್ ಟ್ರೂಮಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಸ್ಟೀಯರಿಂಗ್ ವೀಲ್ ಮತ್ತು ಎಸಿ ವೆಂಟ್ಸ್ ವಿನ್ಯಾಸ ಕೂಡ ವಿಭಿನ್ನವಾಗಿದೆ. ಆದ್ದರಿಂದ, ಒಳಾಂಗಣದ ವಿಷಯದಲ್ಲಿ ಯುವಾನ್ ಪ್ರೊ ಖಂಡಿತವಾಗಿಯೂ ಇಕೋಸ್ಪೋರ್ಟ್ಗಿಂತ ಉತ್ತಮವಾಗಿ ಕಾಣುತ್ತದೆ ಮತ್ತು ಹೆಚ್ಚು ಅತ್ಯಾಧುನಿಕವಾಗಿದೆ,

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಯುವಾನ್ ಪ್ರೊ ಇಕೋಸ್ಪೋರ್ಟ್ ಗಿಂತ ಉದ್ದವಾಗಿದೆ ಮತ್ತು ವ್ಹೀಲ್ ಬೇಸ್ ಹೊಂದಿದೆ. ಇದು 4.37 ಮೀಟರ್ ಅಳತೆ ಮತ್ತು 2,535 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಇದರರ್ಥ ಎಸ್‍ಯುವಿ ಪ್ರಯಾಣಿಕರಿಗೆ ಉತ್ತಮ ಕ್ಯಾಬಿನ್ ಜಾಗವನ್ನು ನೀಡಬೇಕು. ಪ್ರಮುಖ ವ್ಯತ್ಯಾಸವೆಂದರೆ ಪವರ್‌ಟ್ರೇನ್ ಆಗಿದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಬಿವೈಡಿ ಯುವಾನ್ ಪ್ರೊನೊಂದಿಗೆ ಮೂರು ರೂಪಾಂತರಗಳು ಮತ್ತು 2 ಬ್ಯಾಟರಿ ಸಾಮರ್ಥ್ಯಗಳನ್ನು ನೀಡುತ್ತದೆ. ಮೂಲ ರೂಪಾಂತರವು 38.9 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಸುಮಾರು 300 ಕಿಮೀಗಳಷ್ಟು ರೇಂಜ್ ಅನ್ನು ಹೊಂದಿದೆ. ದೊಡ್ಡ ಬ್ಯಾಟರಿ ಪ್ಯಾಕ್ 50.1 ಕಿ.ವ್ಯಾಟ್ ಸಾಮರ್ಥ್ಯ ಹೊಂದಿದೆ ಮತ್ತು ಇದು 400 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಬಿವೈಡಿ ಹೊಸ ರೀತಿಯ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತಿದ್ದು ಇದನ್ನು "ಬ್ಲೇಡ್" ಎಂದು ಕರೆಯಲಾಗುತ್ತದೆ. ಎಲೆಕ್ಟ್ರಿಕ್ ಮೋಟಾರ್‌ಗಳು 136 ಬಿಎಚ್‌ಪಿ ಪವರ್ ಪವರ್ ಔಟ್‌ಪುಟ್ ಮತ್ತು 210 ಎನ್ಎಂ ಟಾರ್ಕ್ ಔಟ್ ಪುಟ್ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಪವರ್ ಫಿಗರ್ಸ್ ಇಕೋಸ್ಪೋರ್ಟ್ಗಿಂತ ಉತ್ತಮವಾಗಿದೆ ಮತ್ತು ಇದು ಎಲೆಕ್ಟ್ರಿಕ್ ಆಗಿರುವುದರಿಂದ ಉತ್ತಮ ರೆಸ್ಪಾನ್ಸ್ ಅನ್ನು ಹೊಂದಿದೆ,

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಬಿವೈಡಿ ಯುವಾನ್ ಪ್ರೊ ಎಲೆಕ್ಟ್ರಿಕ್ ಕಾರಿನಲ್ಲಿ ಸಾಕಷ್ಟು ಸುರಕ್ಷತಾ ತಂತ್ರಜ್ಞಾನದ ಆಫರ್ ಕೂಡ ಇದೆ. ಇದು ಬ್ರೇಕ್ ಅಸಿಸ್ಟ್, ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಇಂಡಿಯನ್ ಸ್ಪೆಕ್ ಫೋರ್ಡ್ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ, ಇದು ಬಿಎಸ್ 6 ಪ್ರೇರಿತ 1.5-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 149 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ನವೀಕರಿಸಿದ 1.5-ಲೀಟರ್ ಡೀಸೆಲ್ ಎಂಜಿನ್ 99 ಬಿಎಚ್‌ಪಿ ಮತ್ತು 215 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

Ford Ecosport ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿರುವ ಟೈಟಾನಿಯಂ ಪ್ಲಸ್ ಮಾದರಿಯಲ್ಲಿ ಮಾತ್ರವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Most Read Articles

Kannada
English summary
Chinese manufacturer copied ford ecosport into an electric suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X