ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಬೊಬ್ಡೆರವರು ಇತ್ತೀಚೆಗೆ ಹಾರ್ಲೆ ಡೇವಿಡ್ಸನ್ ಐಷಾರಾಮಿ ಬೈಕಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಿಜೆಐರವರು ಈ ಬೈಕಿನ ಮೇಲಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಅಂದ ಹಾಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರು ಇದೇ ಮೊದಲ ಬಾರಿಗೆ ಬೈಕ್‌ ಸವಾರಿ ಮಾಡಿದ್ದಾರೆ. ವರದಿಗಳ ಪ್ರಕಾರ, ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆರವರು ನಾಗ್ಪುರದಲ್ಲಿರುವ ತಮ್ಮ ನಿವಾಸದಲ್ಲಿದ್ದಾರೆ. ಈ ಬೈಕ್ ಬೇರೊಬ್ಬರಿಗೆ ಸೇರಿದ್ದು ಎಂದು ಹೇಳಲಾಗಿದೆ.

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ವೈರಲ್ ಆಗಿರುವ ಚಿತ್ರಗಳಲ್ಲಿ, ಶರದ್ ಬೊಬ್ಡೆರವರು ಹೊಸ ಹಾರ್ಲೆ ಡೇವಿಡ್ಸನ್ ಲಿಮಿಟೆಡ್ ಎಡಿಷನ್ ಸಿವಿಒ ಬೈಕಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಶರದ್ ಬೊಬ್ಡೆರವರು ಬೈಕ್‌ಗಳೆಡೆಗೆ ಒಲವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಅವರು ತಮ್ಮ ಬಳಕೆಗಾಗಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಖರೀದಿಸಿದ್ದಾರೆ. ಈ ಬುಲೆಟ್ ಬೈಕ್ ಚಾಲನೆ ಮಾಡುವಾಗ ಅವರ ಮೊಣಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಈ ಚಿತ್ರಗಳು ವೈರಲ್ ಆದ ನಂತರ ಅನೇಕ ಜನರು ಟ್ವೀಟ್ ಮಾಡಿ ಬೈಕ್‌ ಚಾಲನೆ ಮಾಡಿ ಉತ್ಸಾಹ ತೋರಿದ್ದಕ್ಕೆ ಸಿಜೆಐರವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸರಿ ಸುಮಾರು 65ನೇ ವಯಸ್ಸಿನಲ್ಲೂ ಉತ್ಸಾಹ ಕುಂದಿಲ್ಲವೆಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಇನ್ನು ಹಾರ್ಲೆ ಡೇವಿಡ್ಸನ್ ಸಿವಿಒ 2020 ಬೈಕಿನ ಬಗ್ಗೆ ಹೇಳುವುದಾದರೆ, ಈ ಬಲಿಷ್ಠ ಕ್ರೂಸರ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.51 ಲಕ್ಷಗಳಾಗಿದೆ. ಈ ಬೈಕಿನಲ್ಲಿ 2000 ಸಿಸಿ ವಿ ಟ್ವಿನ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಈ ಎಂಜಿನ್ 3,500 ಆರ್ ಪಿಎಂನಲ್ಲಿ 166 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿರುವ ಎಂಜಿನ್ ಕಾರಿನಲ್ಲಿರುವ ಎಂಜಿನ್‌ನಷ್ಟೇ ಪವರ್ ಉತ್ಪಾದಿಸುತ್ತದೆ. ಈ ಬೈಕ್ ಅನ್ನು ಬ್ಲೂ, ಗ್ರೇ ಹಾಗೂ ಸ್ಯಾಂಡ್ ಡ್ಯೂನ್ಸ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಐಷಾರಾಮಿ ಬೈಕಿನಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದ ಸಿಜೆಐ

ಈ ಬೈಕಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗಿದೆ. ಈ ಬೈಕ್‌ ಜಿಟಿಎಸ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಲರ್ ಟಿಎಫ್‌ಟಿ ಟಚ್‌ಸ್ಕ್ರೀನ್ ಹಾಗೂ ಬ್ಲೂಟೂತ್ ಮೊಬೈಲ್ ಕನೆಕ್ಟಿವಿಟಿಗಳನ್ನು ಹೊಂದಿದೆ.

Most Read Articles

Kannada
English summary
CJI SA Bobde seen on Harley Davidson bike. Read in Kannada.
Story first published: Monday, June 29, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X