ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ತಮ್ಮ ಬೈಕ್ ಅಥವಾ ಕಾರಿನೊಳಗೆ ದೊಡ್ಡ ಹಾವು ಸೇರಿಕೊಂಡು, ವಾಹನ ಚಲಾಯಿಸುವಾಗ ಏಕಾ‍ಏಕಿ ಕಾಣಿಸಿಕೊಂಡರೆ ಹೇಗಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಈ ಹಿಂದೆ ಹಾವುಗಳು ಕಾರುಗಳ ಎಂಜಿನ್ ಒಳಗೆ ಹಾಗೂ ಡಿಕ್ಕಿಯೊಳಗೆ ಸೇರಿಕೊಂಡಿರುವುದನ್ನು ನೋಡಿದ್ದೇವೆ.

ಹಾಗೆಯೇ ದ್ವಿಚಕ್ರ ವಾಹನಗಳೊಳಗೆ ಸೇರಿಕೊಂಡಿರುವುದನ್ನೂ ನೋಡಿದ್ದೇವೆ. ಈ ವೀಡಿಯೊದಲ್ಲಿರುವ ಘಟನೆಯು ತಮಿಳುನಾಡಿನಲ್ಲಿರುವ ನೆಲ್ಲೈನಲ್ಲಿ ನಡೆದಿದೆ. ಹೋಂಡಾ ಆಕ್ಟಿವಾ-ಐ ಸ್ಕೂಟರಿನಲ್ಲಿ ಹೋಗುತ್ತಿರುವಾಗ ತನ್ನ ಸ್ಕೂಟರಿನಲ್ಲಿ ನಾಗರಹಾವೊಂದು ಮಲಗಿರುವುದನ್ನು ಅದರ ಚಾಲಕನು ಗಮನಿಸಿದ್ದಾನೆ. ತಕ್ಷಣವೇ ಸ್ಕೂಟರ್ ಅನ್ನು ನಿಲ್ಲಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಸಹಾಯಕ್ಕೆ ಧಾವಿಸಿರುವ ಬಹಳಷ್ಟು ಜನರು ದೊಣ್ಣೆಗಳನ್ನು ಹಿಡಿದು, ಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಇವರ ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯೂ ಸಹ ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದು ಹಾವನ್ನು ಹುಡುಕುತ್ತಿದ್ದಾರೆ. ಸ್ಕೂಟರ್‍‍ನಲ್ಲಿ ಸಾಕಷ್ಟು ಸ್ಥಳಾವಕಾಶವಿರುವುದರಿಂದಾಗಿ ಹಾವುಗಳು ಬಂದು ಸೇರಿಕೊಳ್ಳುತ್ತವೆ. ಆದರೆ ಅವುಗಳನ್ನು ಹೊರಗೆಳೆಯುವುದೇ ಕಷ್ಟದ ಕೆಲಸ.

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಈ ವೀಡಿಯೊದಲ್ಲಿ ನಾಗರೀಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾವನ್ನು ಹೊರಗೆಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸುಮಾರು ಐದು ಜನರು ಹಾವನ್ನು ಹೊರಗೆಳೆಯಲು ಪ್ರಯತ್ನಿಸುತ್ತಿದ್ದು, ಹಾವು ತಪ್ಪಿಸಿಕೊಂಡು ಹೋಗುತ್ತದೆ.

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಕಡೆಗೆ ಸ್ಕೂಟರ್ ಅನ್ನು ಕೆಳಗೆ ಹಾಕಿ ಅಡಗಿರುವ ಹಾವನ್ನು ಹೊರಗೆಳೆಯಲು ಯಶಸ್ವಿಯಾಗುತ್ತಾರೆ. ಇದೊಂದು ದೊಡ್ಡ ಗಾತ್ರದ ಹಾವಾಗಿದ್ದು, ಸುಮಾರು 4 ರಿಂದ 5 ಅಡಿಗಳಷ್ಟು ಉದ್ದವಿದೆ. ಈ ಹಾವನ್ನು ಹಿಡಿಯುವ ಯುವಕನೊಬ್ಬ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಳೆಗಾಲವಾದ್ದರಿಂದ ಬಿಲಗಳಲ್ಲಿ ನೀರು ಉಕ್ಕಿ ಹರಿಯುವುದರಿಂದ ಹಾವುಗಳು ಹೊರಬರುತ್ತವೆ. ಹಾವುಗಳು ಶೀತ ಜಾತಿಗೆ ಸೇರಿರುವ ಕಾರಣ ಬೆಚ್ಚಗಿನ ಜಾಗವನ್ನು ಹುಡುಕುತ್ತವೆ.

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಎಂಜಿನ್‍‍ಗಳನ್ನು ಆಫ್ ಮಾಡಿದ ನಂತರವೂ, ವಾಹನಗಳು ಹೆಚ್ಚು ಸಮಯದವರೆಗೆ ಬೆಚ್ಚಗಿರುವ ಕಾರಣಕ್ಕೆ ಹಾವುಗಳು ವಾಹನಗಳಲ್ಲಿ ಅಡಗಿಕೊಳ್ಳುತ್ತವೆ. ಈ ರೀತಿಯ ಘಟನೆಗಳು ಮಳೆಗಾಲದಲ್ಲಿ ಹೆಚ್ಚು ನಡೆಯುತ್ತವೆ. ಆದ ಕಾರಣ ವಾಹನಗಳನ್ನು ಚಲಾಯಿಸುವ ಮುನ್ನ ಪರೀಕ್ಷಿಸಿಕೊಳ್ಳುವುದು ಒಳಿತು.

MOST READ: ಮಾರಾಟದಲ್ಲಿ ಹಾರ್ಲೆ ಡೇವಿಡ್‍‍ಸನ್ ಹಿಂದಿಕ್ಕಿದ ಕೆ‍‍ಟಿ‍ಎಂ

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಎಲ್ಲಾ ಹಾವುಗಳು ವಿಷಕಾರಿಯಾಗಿರುವುದಿಲ್ಲವಾದರೂ, ಕೆಲವು ಹಾವುಗಳು ವಿಷಕಾರಿಯಾಗಿರುತ್ತವೆ. ಬಹಳಷ್ಟು ಜನ ಹಾವನ್ನು ನೋಡಿದ ತಕ್ಷಣ ಭಯ ಪಡುತ್ತಾರೆ, ಇದರಿಂದಾಗಿ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟವಾಗುತ್ತದೆ. ಅದರಲ್ಲೂ ವಾಹನಗಳು ಹೆಚ್ಚಿನ ವೇಗದಲ್ಲಿರುವಾಗ ತುಂಬಾ ಕಷ್ಟವಾಗುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ತಮ್ಮ ಗಾಡಿಗಳಲ್ಲಿ ಹಠತ್ತಾಗಿ ಹಾವನ್ನು ನೋಡಿದಾಗ ಎಂತಹವರಿಗೆ ಆದರೂ ಭಯವಾಗುತ್ತದೆ. ಆದರೆ ಭಯ ಪಡುವ ಅವಶ್ಯಕತೆಯಿಲ್ಲ. ಬಹುತೇಕ ಪ್ರಾಣಿಗಳು ಅವುಗಳಿಗೆ ತೊಂದರೆ ನೀಡುವವರೆಗೆ ಯಾವುದೇ ತೊಂದರೆಯನ್ನು ಮಾಡುವುದಿಲ್ಲ. ನೀವು ಅವುಗಳನ್ನು ನಿಮ್ಮ ವಾಹನದಿಂದ ಓಡಿಸಲು ಪ್ರಯತ್ನಿಸಿದ ತಕ್ಷಣ ಅವುಗಳು ಹೋಗುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರವೆಂದರೆ ಸ್ವಲ್ಪ ತಾಳ್ಮೆ ವಹಿಸಿ, ಹಾವುಗಳನ್ನು ಹಿಡಿಯುವ ವೃತ್ತಿಪರರನ್ನು ಕರೆಸಿ ಪರಿಸ್ಥಿತಿಯನ್ನು ನಿಭಾಯಿಸಿದರೆ ಒಳ್ಳೆಯದು.

MOST READ: ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಇಂಥಹ ಸಂದರ್ಭಗಳಲ್ಲಿ ಈ ಕೆಳಗಿನಂತೆ ನಡೆದುಕೊಳ್ಳಿ.

ಒಂದು ವೇಳೆ ವಾಹನ ಚಲಾಯಿಸುವಾಗ ಹಾವುಗಳು ಕಾಣಿಸಿಕೊಂಡರೆ, ಭಯಪಡದೇ ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿ. ಈ ಮುಂಚೆ ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಿರುವ ವ್ಯಕ್ತಿಯ ಸಹಾಯವನ್ನು ಪಡೆದುಕೊಳ್ಳಿ.

ನಿಮ್ಮ ವಾಹನಗಳನ್ನು ಪೊದೆಗಳ ಬಳಿ, ಬಿಲಗಳಿರುವ ಸ್ಥಳಗಳಲ್ಲಿ ಪಾರ್ಕ್ ಮಾಡದಿರಿ. ಹಾವುಗಳು ಪೊದೆಗಳ ಸಹಾಯದಿಂದ ವಾಹನಗಳನ್ನು ಸುಲಭವಾಗಿ ಹತ್ತುತ್ತವೆ.

ನಿಮ್ಮ ಪ್ರದೇಶದಲ್ಲಿ ಹಾವುಗಳು ಹರಿದಾಡುವುದು ಸಾಮಾನ್ಯವಾದರೆ, ವಾಹನವೇರುವ ಮೊದಲು ಪರೀಕ್ಷಿಸಿಕೊಳ್ಳಿ. ಇದರಿಂದಾಗಿ ನೀವು ವಾಹನ ಚಲಾಯಿಸುವಾಗ ಎದುರಾಗುವ ಅನಿರೀಕ್ಷಿತ ಘಟನೆಗಳಿಂದ ಪಾರಾಗಬಹುದು.

Source: Polimer News/YouTube

Most Read Articles

Kannada
English summary
Cobra in a Honda Activa-i - Read in kannada
Story first published: Monday, June 17, 2019, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more