ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಆಧುನಿಕ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ತಮ್ಮ ಸಾಧನೆಯ ಮೂಲಕ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ನಿರೂಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಯಮತ್ತೂರಿನ ಮಹಿಳೆಯೊಬ್ಬರು ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರವನ್ನು ಚಾಲನೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಈ ಮೂಲಕ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡಲು ಹಿಂಜರಿಯುವವರಿಗೆ ಅದರಲ್ಲೂ ಮಹಿಳೆಯರಿಗೆ ಆಕೆ ಮಾದರಿಯಾಗಿದ್ದಾರೆ. ಈ ಕೆಲಸದ ಮೂಲಕ ಅವರು ಹೆಚ್ಚು ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಅಂಗಲಾ ಈಶ್ವರಿ ಎಂಬುವವರೇ ಬೊಕ್ಲೈನ್ ಯಂತ್ರವನ್ನು ಚಾಲನೆ ಮಾಡುತ್ತಿರುವ ಮಹಿಳೆ. ಅವರು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಸೇರಿದವರು.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಅಂಗಲಾ ಈಶ್ವರಿಯವರ ಚಿತ್ರ

ಕೆಲವು ದಿನಗಳ ಹಿಂದೆ ಕೊಯಮತ್ತೂರಿನಲ್ಲಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧಿಕೃತ ವಿತರಕರಾದ ಚಾರು ಸಿಂಡಿಕೇಟ್ ಮಹೀಂದ್ರಾ, ಮಹಿಳೆಯರಿಗೆ ಬೊಕ್ಲೈನ್ ಯಂತ್ರವನ್ನು ನಿರ್ವಹಿಸಲು ತರಬೇತಿ ನೀಡಲು ನಿರ್ಧರಿಸಿತ್ತು.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಈ ತರಬೇತಿ ಕಾರ್ಯಾಗಾರದಲ್ಲಿ ಹಲವಾರು ಮಹಿಳೆಯರು ಪಾಲ್ಗೊಂಡಿದ್ದರು. ಅವರಲ್ಲಿ ಅಂಗಲಾ ಈಶ್ವರಿ ಸಹ ಒಬ್ಬರು. ಅವರು ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಈ ಕಾರ್ಯಾಗಾರದಲ್ಲಿ ಖಾಸಗಿ ಕಂಪನಿಗಳ ಬೊಕ್ಲೈನ್ ​​ಯಂತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸೂಚನೆಗಳನ್ನು ನೀಡಲಾಗಿತ್ತು. ಇದರ ಜೊತೆಗೆ ಬೊಕ್ಲೈನ್ ಯಂತ್ರವನ್ನು ನಿರ್ವಹಿಸಲು ಅನುಮತಿ ಪಡೆದ ಅವರು ಅದನ್ನು ಅಂಗಲಾ ಈಶ್ವರಿಗೆ ನೀಡಿದ್ದಾರೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಈ ಹಿನ್ನೆಲೆಯಲ್ಲಿ ಅಂಗಲಾ ಈಶ್ವರಿಯವರು ಈಗ ಕೊಯಮತ್ತೂರಿನಲ್ಲಿ ಬೊಕ್ಲೈನ್ ಯಂತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೆಲಸದ ಮೂಲಕ ಆದಾಯವನ್ನುಪಡೆಯುತ್ತಿರುವ ಅವರು ತಮಿಳುನಾಡಿನಲ್ಲಿ ಬೊಕ್ಲೈನ್ ಯಂತ್ರವನ್ನು ಚಾಲನೆ ಮಾಡುತ್ತಿರುವ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಇದು ಮಹಿಳೆಯರಿಗೆ ಹೆಚ್ಚು ಹೆಮ್ಮೆಯನ್ನು ನೀಡುತ್ತದೆ. ಇತ್ತೀಚೆಗಷ್ಟೇ ಕೇರಳದಲ್ಲಿ ಯುವತಿಯೊಬ್ಬಳು ಭಾರೀ ಗಾತ್ರದ ಟ್ರಕ್ ಚಾಲನೆ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಳು. ಈಗ ಅಂಗಲಾ ಈಶ್ವರಿಯವರು ಬೊಕ್ಲೈನ್ ಯಂತ್ರವನ್ನು ಚಾಲನೆ ಮಾಡುತ್ತಿರುವುದು ತಮಿಳುನಾಡಿನ ಜನರಿಗೆ ಅದರಲ್ಲೂ ಕೊಯಮತ್ತೂರಿನ ಜನರಿಗೆ ಹೆಮ್ಮೆ ತಂದಿದೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಸಾಮಾನ್ಯವಾಗಿ ಬೊಕ್ಲೈನ್ ಯಂತ್ರಗಳನ್ನು ಪುರುಷರೇ ಹೆಚ್ಚಾಗಿ ಚಾಲನೆ ಮಾಡುತ್ತಾರೆ. ಈಗ ಅಂಗಲಾ ಈಶ್ವರಿಯವರು ಬೊಕ್ಲೈನ್ ಯಂತ್ರವನ್ನು ಚಾಲನೆ ಮಾಡುವ ಮೂಲಕ ಮಹಿಳೆಯರು ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲವೆಂದು ಸಾಬೀತು ಪಡಿಸಿದ್ದಾರೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಈ ಹಿನ್ನೆಲೆಯಲ್ಲಿ ಮಹಿಳೆಯರ ಪ್ರಗತಿಗಾಗಿ ಹೋರಾಡುತ್ತಿರುವ ಮಹಿಳಾ ಸಂಘಟನೆಗಳು ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಕೊಯಮತ್ತೂರಿನ ಅಂಗಲಾ ಈಶ್ವರಿಯವರಿಗೆ ಅಭಿನಂದನೆ ಸಲ್ಲಿಸುತ್ತಿವೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಬೊಕ್ಲೈನ್ ಯಂತ್ರಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಅಪಾರ ಅನುಭವ ಹೊಂದಿರುವ ಪುರುಷ ಚಾಲಕರೇ ಬೊಕ್ಲೈನ್ ​​ಯಂತ್ರಗಳನ್ನು ಚಾಲನೆ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಇಂತಹ ಸನ್ನಿವೇಶದಲ್ಲಿ ಅಂಗಲಾ ಈಶ್ವರಿಯವರು ಧೈರ್ಯದಿಂದ ಬೊಕ್ಲೈನ್ ​​ಯಂತ್ರವನ್ನು ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅಂಗಲಾ ಈಶ್ವರಿಯವರು ಖಾಸಗಿ ಕಂಪನಿ ನೀಡಿದ ತರಬೇತಿಯ ಆಧಾರದ ಮೇಲೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪುರುಷರಿಗೆ ಸರಿ ಸಮಾನವಾಗಿ ಬೊಕ್ಲೈನ್ ಯಂತ್ರ ಚಾಲನೆ ಮಾಡುತ್ತಿರುವ ಮಹಿಳೆ

ಚಾರು ಸಿಂಡಿಕೇಟ್ ಹಾಗೂ ಮಹೀಂದ್ರಾ ಅಂಡ್ ಮಹೀಂದ್ರಾದಂತಹ ಕೆಲವು ಖಾಸಗಿ ಕಂಪನಿಗಳು ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಗಮನಾರ್ಹ. ಅಂಗಲಾ ಈಶ್ವರಿಯವರ ಸಾಧನೆಯ ಬಗ್ಗೆ ಪಾಲಿಮರ್ ನ್ಯೂಸ್ ವರದಿ ಮಾಡಿದೆ.

Most Read Articles

Kannada
English summary
Coimbatore lady becomes the first woman in tamil nadu to drive a bokline machine details
Story first published: Wednesday, August 4, 2021, 21:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X