ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಥಾಣೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ಖ್ಯಾತ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಡೀಲರ್ ಗಳಿಗೆ ಸರಿಯಾದ ಸೇವೆ ನೀಡಿಲ್ಲವೆಂಬ ಕಾರಣಕ್ಕೆ ರೂ.6 ಲಕ್ಷಗಳ ದಂಡ ವಿಧಿಸಿದೆ.

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ತಾವು ಖರೀದಿಸಿದ ಸ್ಕೋಡಾ ಕಾರು ಸತತವಾಗಿ ತೊಂದರೆಯನ್ನು ಅನುಭವಿಸಿದರೂ ಕಂಪನಿಯು ಸರಿಪಡಿಸದೇ ಇದ್ದ ಕಾರಣಕ್ಕೆ ಗ್ರಾಹಕರೊಬ್ಬರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಪಾಲ್ಘರ್ ನಿವಾಸಿ ಧನೇಶ್ ಮೋಥೆ ಎಂಬುವವರು 2014ರಲ್ಲಿ ಜೆಎಂಡಿ ಆಟೋದಿಂದ ರೂ.8 ಲಕ್ಷ ಮೌಲ್ಯದ ಕಾರನ್ನು ಖರೀದಿಸಿದ್ದರು. ಕಾರು ಖರೀದಿಸಿದ ಕೆಲವು ದಿನಗಳಲ್ಲಿ ಬ್ರೇಕ್, ಪವರ್ ವಿಂಡೋಸ್, ಸಸ್ಪೆಂಷನ್ ಹಾಗೂ ಎಂಜಿನ್‌ಗಳಲ್ಲಿ ಸಮಸ್ಯೆಗಳು ಕಂಡು ಬಂದವು.

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಧನೇಶ್ ಮೋಥೆ ಈ ಸಮಸ್ಯೆಯನ್ನು ಮಾರಾಟಗಾರರ ಗಮನಕ್ಕೆ ತಂದರೂ ಅವರು ತೊಂದರೆಯನ್ನು ಸರಿಪಡಿಸಲಿಲ್ಲ. ನಂತರ ಈ ಬಗ್ಗೆ ಅವರು ಸ್ಕೋಡಾ ಕಂಪನಿಗೆ ದೂರು ನೀಡಿದ್ದರು. ಸ್ಕೋಡಾ ಕಂಪನಿಯಿಂದಲೂ ಯಾವುದೇ ನೆರವು ದೊರೆಯಲಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಮಾರಾಟಗಾರರಿಂದ ಹಾಗೂ ಕಂಪನಿಯಿಂದ ಯಾವುದೇ ನೆರವು ದೊರೆಯದ ಕಾರಣ ಧನೇಶ್ ಮೋಥೆ ಥಾಣೆಯ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯವು ಈ ದೂರಿನ ಕುರಿತು ವಿಚಾರಣೆಯನ್ನು ಆರಂಭಿಸಿತು.

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಗ್ರಾಹಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆಯಲ್ಲಿ ಕಾರು ಮಾರಾಟಗಾರರು ಹಾಗೂ ಕಂಪನಿ ಕಾರಿನ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದು, ತಪ್ಪು ಎಸಗಿರುವುದು ಕಂಡು ಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಇದರ ಜೊತೆಗೆ ಕೆಟ್ಟು ಹೋದ ಕಾರು ಇನ್ನೂ ವಾರಂಟಿಯಲ್ಲಿದ್ದ ಸಂಗತಿ ಕಂಡು ಬಂದಿದೆ. ಇದನ್ನು ಗಮನಿಸಿದ ಗ್ರಾಹಕ ನ್ಯಾಯಾಲಯವು ಮಾರಾಟಗಾರರು ಗ್ರಾಹಕರಿಗೆ ಮೋಸವೆಸಗಿರುವುದು ಕಂಡು ಬಂದಿದೆ ಎಂದು ತಿಳಿಸಿದೆ.

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಈಗ ಕಾರಿನ ಮೇಲೆ ನೀಡಲಾಗಿದ್ದ ವಾರಂಟಿ ಅವಧಿ ಮುಗಿದಿದ್ದು ಕಾರನ್ನು ಹಿಂತಿರುಗಿಸಲು ಸಾಧ್ಯವಾಗದೇ ಇರುವ ಕಾರಣ ಕಾರಿನ ಒಟ್ಟು ಬೆಲೆಯ 75%ನಷ್ಟು ಹಣವನ್ನು ಗ್ರಾಹಕರಿಗೆ ನೀಡುವಂತೆ ಮಾರಾಟಗಾರರಿಗೆ ಆದೇಶ ನೀಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸೇವೆ ನೀಡಲು ವಿಫಲವಾದ ಕಾರು ಕಂಪನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಗ್ರಾಹಕರಿಗೆ ತಕ್ಷಣಕ್ಕೆ ರೂ.6,10,078 ನೀಡಲು ಆದೇಶಿಸಿದೆ. ಇದರ ಜೊತೆಗೆ ದೂರು ನೀಡಿದ ದಿನದಿಂದ ಈ ಮೊತ್ತದ ಮೇಲೆ 10%ನಷ್ಟು ಬಡ್ಡಿ ಹಾಗೂ ಗ್ರಾಹಕರ ನ್ಯಾಯಾಲಯದ ವೆಚ್ಚವೆಂದು ರೂ.10,000 ಹೆಚ್ಚುವರಿಯಾಗಿ ಪಾವತಿಸುವಂತೆ ಆದೇಶ ನೀಡಿದೆ.

Most Read Articles

Kannada
English summary
Consumer court orders Skoda dealer to pay Rs 6 Lakhs as compensation. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X