Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಕಿಯಲ್ಲಿ ಸುಟ್ಟು ಕರಕಲಾದವು ಸಾವಿರಾರು ಕೋಟಿ ಮೌಲ್ಯದ 2 ಸಾವಿರ ಐಷಾರಾಮಿ ಕಾರುಗಳು
ಸರಕು ಸಾಗಾಣಿಕೆಯ ಹಡಗುವೊಂದಲ್ಲಿ ಬೆಂಕಿ ದುರಂತ ಸಂಭವಿಸಿದ ಪರಿಣಾಮ ಸುಮಾರು 2 ಸಾವಿರ ಐಷಾರಾಮಿ ಕಾರುಗಳು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ನಾವಿಕರು ಸೇರಿದಂತೆ ಹಡಗಿನಲ್ಲಿದ್ದ 27 ಜನ ಸಿಬ್ಬಂದಿಯು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಟಾಲಿ ಮೂಲದ ಗ್ರ್ಯಾಂಡೆ ಅಮೆರಿಕ ಎನ್ನುವ ಸರಕು ಸಾಗಾಣಿಕ ಹಡಗು ಅಟ್ಲಾಂಟಿಕ್ ಮಾಹಾಸಾಗರದಲ್ಲಿ ಅಗ್ನಿ ದುರಂತಕ್ಕಿಡಾಗಿದ್ದು, ಹಡಗಿನಲ್ಲಿದ್ದ ಸಾಗಿಸಲಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಸುಮಾರು 2 ಕಾರುಗಳು ಸುಟ್ಟು ಭಸ್ಮವಾಗಿವೆ. ಜರ್ಮನಿಯ ಹ್ಯಾಂಬರ್ಗ್ನಿಂದ ಬ್ರೆಜಿಲ್ನತ್ತ ಸಾಗುತ್ತಿದ್ದಾಗ ಈ ದುರಂತ ನಡೆದಿದ್ದು, ದುಬಾರಿ ಬೆಲೆಯ 911 ಜಿಟಿಆರ್ ಆರ್ಎಸ್ ಸೇರಿದಂತೆ ಪೋರ್ಷೆ ನಿರ್ಮಾಣದ ಒಟ್ಟು 37 ಸೂಪರ್ ಕಾರುಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ.

ಜರ್ಮನ್ ಬ್ರಾಂಡ್ ಪೋರ್ಷೆ ಕಾರುಗಳನ್ನು ಹೊತ್ತು ಸಾಗುತ್ತಿದ್ದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು 2 ದಿನಗಳ ಕಾಲ ಸಾಗರದ ಮಧ್ಯದಲ್ಲೇ ಹಡಗಿನಲ್ಲಿದ್ದ ಸರಕು ದಾಸ್ತಾನು ಹೊತ್ತಿ ಉರಿದಿದೆ.

ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಧಾವಿಸಿದ ಬ್ರಿಟಿಷ್ ನೌಕಾ ದಳವು ತೀವ್ರಗತಿಯ ಕಾರ್ಯಾಚರಣೆಯ ಪರಿಣಾಮ ಹಡಗಿನಲ್ಲಿದ್ದ ನಾವಿಕರು ಮತ್ತು 27 ಜನ ಸಿಬ್ಬಂದಿಯು ಲೈಫ್ ಬೋಟ್ ಮೂಲಕ ಬೆಂಕಿಯಿಂದ ಪಾರಾಗಿದ್ದು, ಮಾರ್ಚ್ 11, 2019ರಂದೇ ಈ ಘಟನೆ ನಡೆದಿದೆ.

ಸದ್ಯ ಬೆಂಕಿಯ ಕೆನ್ನಾಲಿಗೆ ತುತ್ತಾಗಿರುವ ಹಡಗು ಸಾಗರದ ತಳದಲ್ಲಿದ್ದು, ಘಟನೆಗೆ ನಿಖರ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಹರಡಿಕೊಂಡಿದ್ದ ಪರಿಣಾಮ ಹಡಗಿನ ಬಹುತೇಕ ಭಾಗ ಸುಟ್ಟು ಕರಲಾಗಿದ್ದು, ಜರ್ಮನ್ ಬ್ರಾಂಡ್ ಪೋರ್ಷೆ ಸಂಸ್ಥೆಗೆ ಸೇರಿದ 37 ಸೂಪರ್ ಕಾರುಗಳು ಸೇರಿ ವಿವಿಧ ಆಟೋ ಉತ್ಪಾದನಾ ಸಂಸ್ಥೆಗಳ ಸುಮಾರು 2 ಸಾವಿರ ವಿವಿಧ ಬ್ರಾಂಡ್ ಕಾರುಗಳು ಸಂಪೂರ್ಣವಾಗಿ ಕರಕಲಾಗಿವೆ.
MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಜರ್ಮನಿಯ ಹ್ಯಾಂಬರ್ಗ್ನಿಂದ ವಿದೇಶಿ ಮಾರುಕಟ್ಟೆಗಳಿಗೆ ಸಾಗಿಸಲಾಗುವ ಐಷಾರಾಮಿ ಕಾರುಗಳನ್ನು ತುಂಬಿದ್ದ ಹಡಗು ತದನಂತರ ಮೊರೊಕ್ಕಾದ ಕ್ಯಾಸಬ್ಲಾಂಕಾ ಮಾರ್ಗವಾಗಿ ಬ್ರೆಜಿಲ್ ನತ್ತ ಸಾಗುವ ಯೋಜನೆಯಲ್ಲಿತ್ತು. ಆದ್ರೆ ಹಡುಗಿನ ಆನ್ ಬೋರ್ಡ್ನಲ್ಲಿ ಕಾಣಿಸಿಕೊಂಡ ಒಂದು ಸಣ್ಣ ಬೆಂಕಿಯ ಕಿಡಿ ಇಡಿ ಹಡಗನ್ನೇ ಸುಟ್ಟುಹಾಕಿತು.
ಕೆಲವು ಮೂಲಗಳ ಪ್ರಕಾರ, ಕೇವಲ ಕಾರುಗಳು ಮಾತ್ರವಲ್ಲದೇ ಸಾವಿರಾರು ಟನ್ಗಳಷ್ಟು ಸಲ್ಪಲಿಕ್ ಆ್ಯಸಿಡ್ ಮತ್ತು ಹೈಡ್ರೊಕ್ಲೊಲಿಕ್ ಆ್ಯಸಿಡ್ ಅನ್ನು ಸಾಗಿಸುತ್ತಿದ್ದ ಪರಿಣಾಮ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹೊತ್ತಿಕೊಳ್ಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದು, ಪೂರ್ಣ ತನಿಖೆಯ ನಂತರವಷ್ಟೇ ಘಟನೆಗೆ ನಿಖರ ಕಾರಣ ತಿಳಿದುಬರಲಿದೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಇನ್ನು ಪೋರ್ಷೆ ಕಾರು ಸೇರಿದಂತೆ ನೂರಾರು ಕಾರು ಬ್ರಾಂಡ್ ಖರೀದಿಗಾಗಿ ಕಾಯ್ದು ಕುಳಿತಿದ್ದ ಸಾವಿರಾರು ಗ್ರಾಹಕರಿಗೆ ಬೆಂಕಿ ಅವಘಡವು ಶಾಕ್ ನೀಡಿದ್ದು, ತನ್ನ ಗ್ರಾಹಕರಿಗೆ ಈ ಸಂಬಂಧ ಪತ್ರ ಬರೆದಿರುವ ಪೋರ್ಷೆ ಸಂಸ್ಥೆಯು ಸದ್ಯದಲ್ಲೇ ಗ್ರಾಹಕರ ಬೇಡಿಕೆಯ ಕಾರುಗಳನ್ನು ಮರು ಉತ್ಪಾದನೆ ಮಾಡಿಕೊಡುವುದಾಗಿ ಭರವಸೆ ನೀಡಿದೆ.
Source: Daily Mail