ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸಾರ್ವಜನಿಕವಾಗಿ ಬೈಕ್ ಸ್ಟಂಟ್ ಮಾಡುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಈ ಹಿಂದೆ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿ ಅವರ ವಾಹನಗಳನ್ನು ಸೀಜ್ ಮಾಡಿರುವ ಘಟನೆಯ ಬಗ್ಗೆ ನಾವೀಗಾಗಲೆ ಸಾಕಷ್ಟು ತಿಳಿದಿದ್ದೇವೆ. ಆದರೆ ಇಲ್ಲಿನ ಪೊಲೀಸ್ ಒಬ್ಬರು ರಸ್ತೆಯ ಮೇಲೆ ಸ್ಟಂಟ್ ಮಾಡುತ್ತಿದ್ದವರನ್ನು ಸ್ಥಳದಲ್ಲಿಯೆ ಥಳಿಸಿದ ವಿಡಿಯೋ ಒಂದು ವೈರಲ್ ಆಗಿದೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಹೌದು, ಗುಜರಾತ್ ರಾಜ್ಯದಲ್ಲಿನ ರಾಜ್‍ಕೋಟ್ ಪ್ರದೇಶದಲ್ಲಿ ಹಾಡುಹಗಲೆ ಗುಂಪೊಂದು ನಡುರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದ ದೃಶ್ಯವನ್ನು ಕಂಡ ಪೊಲೀಸ್ ಪೇದೆ ಒಬ್ಬರು ಅದೇ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದವರನ್ನು ತನ್ನ ಕೈನಲಿದ್ದ ಲಾಠಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸಾರ್ವಜನಿಕ ರಸ್ತೆಯಲ್ಲಿ ಯುವಕರ ಗುಂಪೊಂದು ಬೈಕ್ ಸ್ಟಂಟ್ ಅನ್ನು ಮಾಡುತ್ತಿದ್ದು, ಅವರ ಈ ಸ್ಟಂಟ್‍ಗಳನ್ನು ನೋಡುತ್ತಾ ಅಲ್ಲಿ ಹಲವಾರು ಮಂದಿ ಬಂದು ಸೇರಿದ್ದರು. ಸ್ಟಂಟ್ ಮಾಡುವಾಗ ಹೆಲ್ಮೆಟ್ ಅಥವಾ ಬೇರಾವ ಸುರಕ್ಷಾ ಕವಚಗಳನ್ನು ಧರಿಸಲಿಲ್ಲವೆಂದು ತಿಳಿದುಬರುತ್ತದೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸ್ಟಂಟ್ ಮಾಡುತ್ತಿದ್ದ ಆ ಗುಂಪು ಮೊದಲ ಬಾರಿಗೆ ಸ್ಟಂಟ್ ಮಾಡುತ್ತಿದ್ದ ಮತ್ತು ಅವರಿಂದಲೇ ಆ ಬೈಕ್‍ಗಳನ್ನು ನಿಯಂತ್ರಣ ಮಾಡಲಾಗದ ದೃಶ್ಯಗಳನ್ನು ನೀವು ವಿಡಿಯೋನಲ್ಲಿ ಕಾಣಬಹುದಾಗಿದ್ದು, ಕೆಲ ಕ್ಷಣಗಳ ನಂತರ ಸ್ಥಳಕ್ಕೆ ಬಂದ ಸಿವಿಲ್ ಪೊಲೀಸರು ಮತ್ತು ಟ್ರಾಪಿಕ್ ಪೊಲೀಸರು ತಮ್ಮ ಕೈನಲ್ಲಿದ್ದ ಲಾಠಿಯಿಂದ ಯುವಕರನ್ನು ಹಿಗ್ಗಾಮಗ್ಗಾ ತಳಿಸಿದ್ದಾರೆ.

ವಿಡಿಯೋವನು ಗಮನಿಸಿದ್ದೆ ಆದರೆ ಸ್ಥಳದಲ್ಲಿ ಸ್ಟಂಟ್‍ಗಳನ್ನು ನೋಡಲು ನಿಂತಿದ್ದ ಜನರಲ್ಲಿ ಇಬ್ಬರು ಸಿವಿಲ್ ಉಡುಪುಗಳನ್ನು ತೊಟ್ಟ ಪೊಲೀಸರು ಹಾಜರಾಗಿದ್ದು, ಸ್ಟಂಟ್ ಮಾದುತ್ತಿದ್ದವರಲ್ಲಿ ಒಬ್ಬ ಯುವಕನನ್ನು ಹಿಡಿದು ಆತನಿಗೆ ಹೊಡೆಯುತ್ತಿರುವ ದೃಶ್ಯ ಕೂಡಾ ಈ ವಿಡಿಯೋನಲ್ಲಿದೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸುಮಾರು ಒಂದು ನಿಮಿಷದ ವಿಡಿಯೋನಲ್ಲಿ ಸ್ಟಂಟ್ ಮಾಡಲು ಬಂದ ಹಲವಾರು ಯುವಕರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದು, ಹಾದುಹಗಲು ನಡುರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದ ಯುವಕರ ಮೇಲೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಅಥವಾ ವಾರ್ನ್ ಮಾಡಿ ಸ್ಥಳದಲ್ಲಿಯೆ ಬಿಟ್ಟಿದ್ದಾರೆಯೆ ಎಂಬುದು ಇನ್ನು ತಿಳಿದು ಬಂದಿಲ್ಲ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮಾಡುತ್ತಿರುವವರ ಸಂಖ್ಯೆಯು ಹೆಚ್ಚಿತ್ತಿದ್ದು, ಇಂತವರಿಗೆ ಪಾಠಕಲಿಸಲು ಪೊಲೀಸರು ಅಪರಾಧಿಗಳಿಗೆ ರಸ್ತೆಯಲ್ಲಿ ಸರ್ಪ್ರೈಸ್ ಚೆಕ್ ಅಭಿಯಾನವನ್ನು ಕೂಡಾ ಮಾಡಲಾಗುತ್ತಿದೆ. ಈಗಾಗಲೆ ಈ ಕಾರ್ಯವನ್ನು ಕೇರಳ ಮತ್ತು ಕರ್ನಾಟಕದ ಪೊಲೀಸರು ಮಾಡುತ್ತಿದ್ದು, ಹಲವಾರು ಬೈಕ್‍ಗಳನ್ನು ಸೀಜ್ ಕೂಡಾ ಮಾಡಲಾಗಿದೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಸವಾರಿ ಮಾಡುವುದು ಅನೇಕ ರೀತಿಯಲ್ಲಿ ಹಾದಿ ತಪ್ಪಿಸಬಹುದು. ಸ್ಟಂಟ್ ಸವಾರಿ ಅತ್ಯಂತ ಅನಿರೀಕ್ಷಿತವಾಗಿದೆ ಮತ್ತು ರೈಡರ್ ವಾಹನದ ನಿಯಂತ್ರಣವನ್ನು ಕಳೆದುಕೊಳ್ಳಬಹುದಾಗಿದ್ದು ಇದರಿಂದ ರಸ್ತೆಯಲ್ಲಿನ ಇತರೆ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಹಾನಿಯನ್ನುಂಟು ಮಾಡಬಹುದು.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ನಿಮ್ಮ ಜೀವನವನ್ನಲ್ಲದೇ ಬೇರೆಯವರ ಜೀವಕ್ಕೂ ಪರೋಕ್ಷವಾಗಿ ಹಾನಿಯನ್ನುಂಟು ಮಾಡಬಲ್ಲ ಬೈಕ್ ಸ್ಟಂಟ್‍ಗಳನ್ನು ಮಾಡುವುದರಿಂದ ಅಂತವರಿಗೆ ಕಾನೂನಿನ ಪ್ರಕಾರ ಶಿಕ್ಷೆಯನ್ನು ನೀಡಲಾಗುತ್ತದೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಸ್ಥಳದಲ್ಲಿ ಪೊಲೀಸರು ನಿಮ್ಮನು ಅರೆಸ್ಟ್ ಮಾಡಿ ಮತ್ತು ನಿಮ್ಮ ವಾಹನವನ್ನು ಸೀಜ್ ಮಾಡಿದರೂ, ಅವರಿಗೆ ನಿಮ್ಮನ್ನು ಹೊಡೆಯುವ ಯಾವುದೇ ಹಕ್ಕಿಲ್ಲ. ಇಲ್ಲಿ ಪೊಲೀಸ್ ಮಾಡಿದ ಕೆಲಸ ತಪ್ಪಾಗಿದ್ದರೂ ಟ್ರಾಫಿಕ್ ರೂಲ್ಸ್ ಅನ್ನು ಅನುಸರಿಸಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಭಾರತದಲ್ಲಿ ಸ್ಟಂಟ್ ರೈಡ್

ಸ್ಟಂಡ್ ಚಾಲನವು ಭಾರತದಲ್ಲಿ ಅಧಿಕವಾಗುತ್ತಿದ್ದು, ದುರದೃಷ್ಟವಶಾತ್ ಇಲ್ಲಿ ಸುರಕ್ಷಾ ಮಾರ್ಗದಲ್ಲಿ ಸ್ಟಂಟ್ ಅನ್ನು ಕಲಿಸಬಲ್ಲ ಟ್ರೈನರ್‍‍ಗಳಾಗಲಿ ಅಥವಾ ಟ್ರೈನಿಂಗ್ ಸೆಂಟರ್‍‍ಗಳಾಗಲಿ ಇಲ್ಲ. ಅದಾಗ್ಯು ನೀವು ಸ್ಟಂಟ್ ಮಾಡಲು ಬಯಸಿದರೆ ಸಾರ್ವಜನಿಕ ರಸ್ತೆಗಳಲ್ಲಿ ಮಾಡುವುದು ಬಿಟ್ಟು ಆವರಿಸಿದ ಪ್ರದೇಶದಲ್ಲಿ ಮಾಡುವುದಾಗಿ ನಮ್ಮ ಸಲಹೆ.

Most Read Articles

Kannada
English summary
Cop bashes up bikers for stunting on public roads.
Story first published: Tuesday, October 23, 2018, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X