ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಕರೋನಾ ವೈರಸ್ ಪ್ರಪಂಚದೆಲ್ಲೆಡೆ ವೇಗವಾಗಿ ಹರಡುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಕೋವಿಡ್ -19 ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಇದರ ಅಂಗವಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಗೊಳಿಸಿದೆ. ಜನರು ಅಗತ್ಯವಿಲ್ಲದೆ ಮನೆ ಬಿಟ್ಟು ಹೊರಗೆ ಬರುವುದನ್ನು ನಿರ್ಬಂಧಿಸಲಾಗಿದೆ. ಜನರು ಔಷಧಿಗಳಂತಹ ಅಗತ್ಯ ವಸ್ತುಗಳ ಖರೀದಿಗೆ ಹೊರ ಬರಬಹುದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಸ್, ರೈಲು ಹಾಗೂ ವಿಮಾನಗಳ ಸೇವೆಗಳನ್ನು ರದ್ದುಪಡಿಸಲಾಗಿದೆ. ಯಾವುದೇ ವಾಹನಗಳ ಓಡಾಟವಿಲ್ಲದ ಕಾರಣಕ್ಕೆ ರಸ್ತೆಗಳು ನಿರ್ಜನವಾಗಿವೆ.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಆದರೂ ಕೆಲ ಜನರು ಕಾರು, ಬೈಕುಗಳಲ್ಲಿ ಓಡಾಡುತ್ತಿದ್ದಾರೆ. ಇಂತಹವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯವಿಲ್ಲದೆ ಸಂಚರಿಸುವ ವಾಹನ ಚಾಲಕರಿಗೆ ದಂಡ ವಿಧಿಸುವುದರ ಜೊತೆಗೆ, ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಮುಂಬೈ ಪೊಲೀಸರು ಅಲ್ಲಿನ ಪ್ರಸಿದ್ಧ ಕೂಲರ್ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಿದ್ದಾರೆ. ಕೂಲರ್ ರೆಸ್ಟೋರೆಂಟ್ ಮಾಲೀಕರಾದ ಅಲಿ ಕೂಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಈ ವೀಡಿಯೊದಲ್ಲಿ ಅವರು ತಮ್ಮ ಕಾರಿನಲ್ಲಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಈ ಘಟನೆ ನಡೆದಿದೆ. ಅಲಿ ಕೂಲರ್ ತನ್ನ ಕಾರಿನಲ್ಲಿ ಪೊಲೀಸ್ ಸೈರನ್ ಬಳಸಿ ಸಾರ್ವಜನಿಕ ರಸ್ತೆಗಳಲ್ಲಿ ಸುತ್ತಾಡಿದ್ದಾನೆ.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಅಗತ್ಯವಿಲ್ಲದೆ ಯಾರೂ ಹೊರ ಬರಬಾರದು ಎಂದು ಸರ್ಕಾರ ಎಚ್ಚರಿಸಿದ್ದರೂ ರೆಸ್ಟೋರೆಂಟ್ ಮಾಲೀಕ ಇವುಗಳನ್ನು ಉಲ್ಲಂಘಿಸಿ ಹೊರಬರುವುದರ ಜೊತೆಗೆ ಕರೋನಾ, ಕರೋನಾ ಎಂದು ನಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಅಲಿ ಕೂಲರ್ ಎಷ್ಟು ದಿನ ಕಾರಿನಿಂದ ಈ ರೀತಿ ಹೊರಬಂದಿದ್ದರೂ ಎಂದು ತಿಳಿದು ಬಂದಿಲ್ಲ. ಈ ಘಟನೆಗೆ ಅಲಿ ಕೂಲರ್ ಕ್ಷಮೆಯಾಚಿಸಿದ್ದಾರೆ.

ಮತ್ತೊಂದು ವೀಡಿಯೊದಲ್ಲಿ ಮಾತನಾಡಿರುವ ಅವರು, ಲಾಕ್ ಡೌನ್ ಗೆ ಎಲ್ಲರೂ ಬದ್ಧರಾಗಿರಬೇಕು. ಪ್ರತಿಯೊಬ್ಬರೂ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ. ಕ್ಷಮೆಯಾಚಿಸಿದ ನಂತರವೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಸೈರನ್ ಬಳಸಿ ಸಿಕ್ಕಿ ಬಿದ್ದ ರೆಸ್ಟೋರೆಂಟ್ ಮಾಲೀಕ

ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ಭಾರತದಲ್ಲಿ ಕೋವಿಡ್ -19 ವೈರಸ್ ವೇಗವಾಗಿ ಹರಡುವ ಸಾಧ್ಯತೆಗಳಿರುವುದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಈ ಕಾರಣಕ್ಕೆ ಪೊಲೀಸರು ಜನರು ಹೊರ ಬರದಂತೆ ಒತ್ತಾಯಿಸುತ್ತಿದ್ದಾರೆ. ಹಾಗಿದ್ದರೂ ಕೆಲವರು ಈ ರೀತಿಯಾಗಿ ವರ್ತಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

Most Read Articles

Kannada
English summary
Mumbai Police arrests restaurant owner for using Police Siren. Read in Kannada.
Story first published: Wednesday, April 1, 2020, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X