ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಚೀನಾದ ವುಹಾನ್‌ ನಗರದಿಂದ ಹರಡಿದ ದ ಕೋವಿಡ್ -19 ವೈರಸ್ ಪ್ರಪಂಚವನ್ನೇ ಬೆಚ್ಚಿಬೀಳಿಸಿದೆ. ಕೋವಿಡ್ -19 ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 70 ಸಾವಿರ ಮುಟ್ಟಿತ್ತಿದೆ. ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಕೋವಿಡ್ -19 ವೈರಸ್ ಹರಡದಂತೆ ತಡೆಯಲು ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಭಾರತದಲ್ಲಿಯೂ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಬಸ್, ರೈಲು, ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಅನಗತ್ಯವಾಗಿ ಹೊರಬರುವ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಇಲ್ಲದಿರುವ ಕಾರಣಕ್ಕೆ ತುರ್ತು ಪರಿಸ್ಥಿತಿಗಳಲ್ಲಿ ಹೊರಗೆ ಹೋಗಬೇಕಾದವರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಇದೇ ರೀತಿ ರಾಜಸ್ಥಾನದ ಜೈಪುರದಲ್ಲಿ ಸಿಲುಕಿದ್ದ 4 ವಿದೇಶಿಯರಿಗೆ ದೆಹಲಿಯ ಓಲಾ ಕಂಪನಿ ಸಹಾಯಹಸ್ತವನ್ನು ಚಾಚಿದೆ. ಈ ನಾಲ್ವರೂ ಆಸ್ಟ್ರೇಲಿಯಾಕ್ಕೆ ಸೇರಿದವರು, ಇವರಲ್ಲಿ ಇಬ್ಬರು ಮಹಿಳೆಯರಿದ್ದರು. ಈ ನಾಲ್ವರೂ ಶನಿವಾರ ಮಧ್ಯಾಹ್ನ ದೆಹಲಿ ತಲುಪಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಈ ನಾಲ್ವರೂ ಜೈಪುರದಲ್ಲಿದ್ದರು. ಬಸ್, ರೈಲು, ವಿಮಾನ ವಾಯು ಸೇವೆಗಳನ್ನು ರದ್ದುಪಡಿಸಿದ ಕಾರಣಕ್ಕೆ ಅವರಿಗೆ ಜೈಪುರದಿಂದ ಹೊರ ಬರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನ್ನರ ಸಹಾಯ ಕೋರಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಪರವಾನಗಿ ಹಾಗೂ ಪಾಸ್‌ಗಳನ್ನು ಪಡೆದ ನಂತರ ಓಲಾ ಕಂಪನಿಯು ಈ ನಾಲ್ವರನ್ನು ದೆಹಲಿಗೆ ಕರೆದೊಯ್ದಿದೆ. ಈ ನಾಲ್ವರನ್ನು ದೆಹಲಿಗೆ ಕರೆತರಲು ಓಲಾ ಕಂಪನಿಯು ಅನುಭವಿ ಡ್ರೈವರ್ ಜೊತೆಗೆ ಸೋಂಕು ನಿವಾರಕ ಕಾರಿನ ವ್ಯವಸ್ಥೆಯನ್ನು ಮಾಡಿತ್ತು.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ದೆಹಲಿಗೆ ವಾಪಸಾಗುವ ಮುನ್ನ ಅವರನ್ನು ಜೈಪುರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಯಾರಿಗೂ ಕೋವಿಡ್ -19 ವೈರಸ್ ಸೋಂಕು ಇರಲಿಲ್ಲ. ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಓಲಾ ಕಂಪನಿಯು ಆಸ್ಟ್ರೇಲಿಯನ್ನರನ್ನು ದೆಹಲಿಗೆ ಕರೆತರಲು ಮುಂದಾಗಿದೆ.

ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ

ಓಲಾ ಕಂಪನಿಯು ಕರ್ನಾಟಕದಲ್ಲಿ ಕರೋನಾ ಮಹಾಮಾರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗಳಿಗೆ ಅನುಕೂಲವಾಗುವ ಉದ್ದೇಶದಿಂದ 500 ವಾಹನಗಳನ್ನು ಕರ್ನಾಟಕ ಸರ್ಕಾರಕ್ಕೆ ಪೂರೈಸಲು ಮುಂದಾಗಿದೆ. ಈ ವಾಹನಗಳನ್ನು ಕೋವಿಡ್ -19 ಸಂಬಂಧಿತ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಕರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಓಲಾ ಕಂಪನಿಯ ಕ್ರಮ ಶ್ಲಾಘನೀಯ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Coronavirus Lockdown Ola helps four Australians stranded in Rajasthan to reach Delhi. Read in Kannada.
Story first published: Monday, April 6, 2020, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X