ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ. ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದ ಕಾರಣಕ್ಕೆ ಜನರು ತಮ್ಮದೇ ಆದ ಸಾರಿಗೆ ವ್ಯವಸ್ಥೆಗಳ ಮೂಲಕ ಊರುಗಳಿಗೆ ತೆರಳುತ್ತಿದ್ದಾರೆ.

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ದೇಶಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕರೆತರಲು ವಿಶೇಷ ರೈಲು ಹಾಗೂ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಈ ಸೌಲಭ್ಯ ಸಿಗುತ್ತಿಲ್ಲ. ಈ ಸೌಲಭ್ಯ ಸಿಗದ ಬಡ ವಲಸೆ ಕಾರ್ಮಿಕರು ತಾವೇ ಸ್ವತಃ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಇದೇ ರೀತಿ 15 ವರ್ಷದ ಬಿಹಾರ ಮೂಲದ ಬಾಲಕಿಯೊಬ್ಬಳು ಅನಾರೋಗ್ಯಕ್ಕೀಡಾಗಿದ್ದ ತನ್ನ ತಂದೆಯನ್ನು ದೆಹಲಿಯಿಂದ ದರ್ಭಂಗಕ್ಕೆ ಕರೆತಂದಿದ್ದಾಳೆ. ಕೋವಿಡ್ -19 ವೈರಸ್ ಆಕೆಯ ತಂದೆಯ ಜೀವನೋಪಾಯವನ್ನು ಕಸಿದುಕೊಂಡಿದೆ. ಆಕೆಯ ತಂದೆಯ ಕಾಲಿಗೆ ಗಾಯವಾಗಿದ್ದು, ನಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಆಕೆ ಸೈಕಲ್‌ನಲ್ಲಿ ತನ್ನ ತಂದೆಯನ್ನು ಕರೆತಂದಿದ್ದಾಳೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಜ್ಯೋತಿ ಎಂಬ 15 ವರ್ಷದ ಬಾಲಕಿಯೇ ತಂದೆಯನ್ನು ಸೈಕಲ್‌ನಲ್ಲಿ ಊರಿಗೆ ಮರಳಿ ಕರೆತಂದ ದಿಟ್ಟ ಹುಡುಗಿ. ತಂದೆ-ಮಗಳು ಮೇ 10ರಂದು ದೆಹಲಿಯಿಂದ ದರ್ಭಂಗಕ್ಕೆ ಹೊರಟರು. ಮೊದಲಿಗೆ ಅವರು ಬಸ್‌ನಲ್ಲಿ ಮನೆಗೆ ಹೋಗಬೇಕೆಂದು ನಿರ್ಧರಿಸಿ, ಬಸ್ ನಿಲ್ದಾಣವನ್ನು ತಲುಪಿದರು. ಆದರೆ ಬಸ್ ಪ್ರಯಾಣ ದರವಾದ ರೂ.6000ಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ.

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಕೊನೆಗೆ ಜ್ಯೋತಿ ರೂ.500 ಮೌಲ್ಯದ ಸೈಕಲ್ ಖರೀದಿಸಿದಳು. ನಂತರ ಆಕೆಯ ಬಳಿ ಕೇವಲ 100 ರೂಪಾಯಿ ಮಾತ್ರ ಉಳಿದಿತ್ತು. ಈ ಹಣವನ್ನು ಆಕೆ ಮುಂದಿನ ಪ್ರಯಾಣಕ್ಕಾಗಿ ಉಳಿಸಿದ್ದಳು. ಆಕೆ ಮತ್ತು ಆಕೆಯ ತಂದೆ ಹೆದ್ದಾರಿಯಲ್ಲಿ ಹಗಲು ರಾತ್ರಿ ಪ್ರಯಾಣಿಸಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಈ ಬಗ್ಗೆ ಮಾತನಾಡಿದ ಜ್ಯೋತಿ, ನೂರಾರು ಕಾರ್ಮಿಕರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರಣ ರಾತ್ರಿ ವೇಳೆ ಸೈಕಲ್ ತುಳಿಯಲು ಭಯವಾಗಲಿಲ್ಲ ಎಂದು ಹೇಳಿದಳು. ಈ ಪ್ರಯಾಣದ ವೇಳೆಯಲ್ಲಿ ಅವರು 2 - 3 ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದರು.

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಪೆಟ್ರೋಲ್ ಬಂಕ್‌ಗಳಲ್ಲಿ 2-3 ಗಂಟೆಗಳ ಕಾಲ ವಿಶ್ರಾಂತಿ ಪಡೆದು ನಂತರ ಪ್ರಯಾಣ ಮಾಡುತ್ತಿದ್ದರು. ದಾರಿಯಲ್ಲಿ ಪರಿಹಾರ ಶಿಬಿರದಲ್ಲಿ ನೀಡುತ್ತಿದ್ದ ಆಹಾರವನ್ನು ಸೇವಿಸುತ್ತಿದ್ದರು. ತಂದೆ ಮಗಳ ಈ ಪ್ರಯಾಣದ ಬಗ್ಗೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಈಗ ಈ ಹುಡುಗಿಗೆ ನೆರವಾಗಲು ಹಲವಾರು ಜನರು ಮುಂದಾಗಿದ್ದಾರೆ. ಸೈಕ್ಲಿಂಗ್ ಫೆಡರೇಶನ್ ಸಹ ಆಕೆಯ ಸಹಾಯಕ್ಕೆ ಮುಂದಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೇ ರೀತಿಯ ಅನೇಕ ಘಟನೆಗಳು ನಡೆದಿವೆ. ವಿಶೇಷ ಚೇತನ ತಾಯಿಯೊಬ್ಬರು ತಮ್ಮ ಮಗನನ್ನು ಕರೆ ತರಲು 1,400 ಕಿ.ಮೀ ಸ್ಕೂಟರ್‌ ಚಾಲನೆ ಮಾಡಿದ್ದರು.

Most Read Articles

Kannada
English summary
15 year old girl brings injured father on cycle from Delhi to Bihar. Read in Kannada.
Story first published: Thursday, May 21, 2020, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X